ತಾಳ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪ ನೇ ಸಾಲು:
 
=='ಐತಿಹಾಸಿಕ ಊರು', 'ನಂದನ ಹೊಸೂರು',ಪ್ರಾಚೀನ ದೇವಸ್ಥಾನಗಳಿಗೆ ಹೆಸರು ವಾಸಿಯಾಗಿದೆ.==
ಹೊರಕೆರೆದೇವರಪುರದ ಸಮೀಪದ ಇನ್ನೊಂದು ಐತಿಹಾಸಿಕ ಊರು, ನಂದನ ಹೊಸೂರು. ಇಲ್ಲಿ ಪ್ರಾಚೀನ ಕಾಲದ ದೇವಸ್ಥಾನಗಳಿವೆ .ಇಲ್ಲಿನ ಸ್ಥಳ ಮಹಾತ್ಮೆಯ ಬಗ್ಗೆ ತುಂಬಾ ಜಾನಪದೀಯ ಅಂಶಗಳನ್ನೊಳಗೊಂಡ ಕಥಾನಕಗಳು ಚಾಲ್ತಿಯಲ್ಲಿವೆ. ಅದರಲ್ಲಿ ನಂದನಹೊಸೂರು ಒಂದು ಪಾಳೆಯ ಪಟ್ಟಾಗಿತ್ತೆಂದೂ ,ಅದರ ಆಡಳಿತಗಾರನಾದ ನಂದರಾಯನೆಂಬುವನು ಇಲ್ಲಿನ ಹೊರಕೇರಿದೇವರಪುರದ ರಂಗನಾಥಸ್ವಾಮಿಯ ಭಕ್ತನಾದ ದಾಸಯ್ಯನಿಗೆ ಅವಮಾನ ಮಾಡಿದನೆಂದೂ, ಇದರಿಂದ ಕ್ರೋಧಗೊಂಡ ಸ್ವಾಮಿಯು, ನಂದರಾಯನ ಪಟ್ಟಣವನ್ನು ತನ್ನ ಉರಿ ನೇತ್ರದಿಂದ ಭಸ್ಮವಾಗುವಂತೆ ಮಾಡಿದನೆಂದೂ ,ಆಗ ಜನರ ಹಾಹಾಕಾರ ಕಂಡು ಕಡು ನೊಂದ ,ನಂದನಹೊಸೂರಿನ ಬಾಸಿಂಗದವರೆಂಬ ಮನೆಯವರ ಹಸಿ ಬಾಣಂತಿಯೋರ್ವಳು, ತನ್ನ ಹಸುಗೂಸನ್ನು ಸುಟ್ಟು ಊರನ್ನು ಉಳಿಸಲು ರಂಗನಾಥ ಸ್ವಾಮಿಯನ್ನು ಪ್ರಾರ್ಥಿಸಿದಳೆಂದೂ ,ಈ ಹೆಣ್ಣುಮಗಳ ತ್ಯಾಗಕ್ಕೆ ಮನಸೋತ ಸ್ವಾಮಿಯು ,ಆಕೆಯನ್ನೂ ಆಕೆಯ ಕಂದನನ್ನೂ ಹರಸಿ ಶಾಂತನಾದನೆಂದೂ ,ಊರು ಉಳಿಯಿತೆಂದೂ ಸ್ಥಳೀಯವಾಗಿ ತುಂಬಾ ಪ್ರಸಿದ್ದಿಯಲ್ಲಿರುವ ಜಾನಪದ ಕತೆ ಇದೆ .ಈ ಊರಿನ ಗೌಡರ ಮನೆಯಲ್ಲಿ ಇರುವಂತಹ ತಾಮ್ರದ ಪತ್ರದಲ್ಲಿ ಕುಂಚಿಟಿಗ ಜನಾಂಗದ ಬಗ್ಗೆ ತಿಳಿಸಲಾಗಿದೆ
 
 
"https://kn.wikipedia.org/wiki/ತಾಳ್ಯ" ಇಂದ ಪಡೆಯಲ್ಪಟ್ಟಿದೆ