ಲ್ಯೂ ಜಿಯಾಒಬೊ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩ ನೇ ಸಾಲು:
=='ಲ್ಯೂ ಜಿಯಾಒಬೊ' ರವರ ಹೋರಾಟದ ಪರಿಚಯ==
'ಲ್ಯೂ ಜಿಯಾಒಬೊ'ರವರು, ಸಧ್ಯದಲ್ಲಿ ಕಾರಾಗೃಹದಲ್ಲಿ ಬಂದಿಯಾಗಿದ್ದಾರೆ. ಚೀನಾದೇಶ, ಕಮ್ಯುನಿಸ್ಟ್ ಸಂಕೋಲೆಯಿಂದ ಪಾರಾಗಿ, ಸ್ವಾತಂತ್ರ್ಯಗಳಿಸುವ ದಿಶೆಯಲ್ಲಿ ಮತ್ತು ಅಲ್ಲಿನ ನಾಗರಿಕರ ಮಾನವಹಕ್ಕುಗಳಿಗಾಗಿನ ಹೋರಾಟದ ಸಂಕೇತವಾಗಿದ್ದಾರೆ. ವಿಶ್ವದ ಅತಿದೊಡ್ಡ ದೇಶವಾದ ಚೈನಾ, ಆರ್ಥಿಕವಾಗಿಯೂ ರಾಜಕೀಯವಾಗಿಯೂ ಅತಿ ದೊಡ್ಡ ಶಕ್ತಿಯೆಂದು ಮಂಚೂಣಿಯಲ್ಲಿರುವ ರಾಷ್ಟ್ರ. ಇಂತಹ ಶಕ್ತಿ ಟೀಕಾದಾಳಿಗೆ ಗುರಿಯಾದ ಸಮಯದಲ್ಲಿ ಬಂಡಾಯವೆದ್ದ ಚೀನೀ ಸಮುದಾಯದ 'ಮೊದಲ ನೋಬೆಲ್ ಪ್ರಶಸ್ತಿ'ಯಾಗಿದೆ. ಇದಾದ ಬಳಿಕ ನಾಯಕತ್ವದಲ್ಲಿ ಸಕಾರಾತ್ಮಕ ಸುಧಾರಣೆಯ ಅಗತ್ಯವನ್ನು ಕುರಿತು ಚೈನಾ ಸರಕಾರದ ಒಳ ವಲಯಗಳಲ್ಲಿ ಒಳೊಳಗೇ ಚರ್ಚೆಗಳು ವಿಚಾರವಿನಿಮಯಗಳೂ ನಡೆಯಲು ಆರಂಭವಾಗಿವೆ. ಈ ತರಹದ ಬದಲಾವಣೆಯ ಸಮರ್ಥಕರಲ್ಲಿ ಹಲವಾರು ಮಂದಿ ಉಗ್ರರಿದ್ದಾರೆ ; ಹಾಗೂ ಅವರ ಕ್ರಾಂತಿಕಾರಿ ರೀತಿಯಲ್ಲಿ ಸಾಗಿದೆ. ಆದರೆ, ೫೪ ವರ್ಷ ಹರೆಯದ 'ಲ್ಯೂ ಜಿಯಾಒಬೊ' ರವರು, ಚೀನಾದಲ್ಲಿ ಸರಕಾರದ ಜೊತೆ ಹಿಂಸಾತ್ಮಕ ಸಂಘರ್ಷಕ್ಕಿಂತಾ ಶಾಂತಿಯುತ ಹಾಗೂ ಅರ್ಥಪೂರ್ಣ ರಾಜಕೀಯ ಪರಿಹಾರದ ಬದಲಾವಣೆಗಳ ಅಗತ್ಯದ ಪ್ರಬಲ ಪ್ರತಿಪಾದಕರಾಗಿದ್ದಾರೆ.
==’ಚಾರ್ಟರ್’[[ಚಾರ್ಟರ್ ೮೦]]'==
’[[ಚಾರ್ಟರ್ ೮೦]], ಎಂಬ ವಿಧೇಯಕದಲ್ಲಿ ದಾಖಲಾಗಿರುವ ಕಮ್ಯುನಿಸ್ಟ್ ಪಕ್ಷದ ರಾಜಕೀಯ ಪ್ರಭುತ್ವ ಕೊನೆಗೊಳ್ಳಲು ಹಾಗೂ ಸಂಪೂರ್ಣ ಸ್ವಾತಂತ್ರ್ಯವನ್ನು ಗಳಿಸಲು ಕರೆಕೊಟ್ಟಿದ್ದಾರೆ. ಈ ಪ್ರತಿಯನ್ನು ಹೊರತರುವಲ್ಲಿ 'ಲ್ಯೂ ಜಿಯಾಒಬೊ' ರವರೂ ಪ್ರಮುಖರು. ವಿಶ್ವದ ಪ್ರಬಲ ಕಮ್ಮ್ಯುನಿಸ್ಟ್ ರಾಷ್ಟ್ರಗಳೆಲ್ಲಾ ಒಂದೊಂದಾಗಿ ಬದಲಾವಣೆಗೆ ಒತ್ತುಕೊಟ್ಟು ಪ್ರಯತ್ನಿಸುತ್ತಿರುವಾಗ ಚೀನಾ ಇನ್ನೂ ಹಳೆಯ ಜಾಡನ್ನು ಬದಲಾಯಿಸಲು ಇಚ್ಛಿಸುತ್ತಿಲ್ಲ. ದೀರ್ಘಕಾಲದಿಂದ ಬಾಕಿಯಿರುವ ಬಗ್ಗೆ ಪ್ರಸ್ತಾಪಿಸುತ್ತದೆ. ಈ ಕರೆಗೆ ಸಾವಿರಾರು ಚೈನಿಯರು ಸಹಿಹಾಕಿ ತಮ್ಮ ಸಮ್ಮತಿಯನ್ನು ಕೊಟ್ಟಿದ್ದಾರೆ. ಇದು ಚೀನಾದ ಕಮ್ಯುನಿಸ್ಟ್ ಪಕ್ಷದ ಸರ್ಕಾರಕ್ಕೆ ಒಂದು ಸವಾಲಾಗಿದೆ. ೨೦೦೮ ರಲ್ಲಿ ಡಿಸೆಂಬರ್ ನಲ್ಲಿ ದಾಖಲೆ ಬಿಡುಗಡೆ ಗೊಳ್ಳುವ ಮೊದಲೆ ಪೋಲೀಸರು ಅವರನ್ನು ಬಂಧಿಸಿ ೨೦೦೯ ರ ಡಿಸೆಂಬರ್, ೨೫ ರಂದು, (ಕ್ರಿಸ್ಮಸ್ ದಿನದಂದು) ೧೧ ವರ್ಷಗಳ ಕಾರಾಗೃಹ ವಾಸದ ಸಜೆಯನ್ನು ವಿಧಿಸಿತ್ತು.
==ಸನ್ ೨೦೧೦ ರ ಶಾಂತಿ ನೋಬೆಲ್ ಪ್ರಶಸ್ತಿಗೆ ಬಂದ ಅರ್ಜಿಗಳ ಮೊತ್ತ==
ಸನ್, ೨೦೧೦ ರ ನೋಬೆಲ್ ಪ್ರಶಸ್ತಿಗಾಗಿ ಬಂದ ೨೩೭ ದಾಖಲೆ ಉಮೇದುವಾರರಲ್ಲಿ ಲಿಯೋಪರ ಹೆಚ್ಚು ಒಲವು ವ್ಯಕ್ತವಾಗಿದೆ. ಹೋರಾಟದ ದ್ಯೋತಕ: ‘ಲಿಯು ಅವರು ಚೀನಾದಲ್ಲಿನ ಮಾನವ ಹಕ್ಕು ಹೋರಾಟದ ದ್ಯೋತಕ’ ಎಂದು ನೊಬೆಲ್ ಸಮಿತಿಯ ಅಧ್ಯಕ್ಷರಾದ ನಾರ್ವೆಯ 'ಥೋರ್ಬ್‌ಜೋರ್ನ್ ಜಗ್‌ಲ್ಯಾಂಡ್' ಅಭಿಪ್ರಾಯಪಟ್ಟಿದ್ದಾರೆ. ’ಟಿನ್ನಮೆನ್ ಸ್ಕೇರ್’ ನಲ್ಲಿ ನಡೆದ ಆಂದೋಳನದಲ್ಲಿ ಪ್ರಜಾಪ್ರಭುತ್ವ ಸಮರ್ಥಕ ವಿಧ್ಯಾರ್ಥಿಗಳು ಮತ್ತು ಚೈನದ ಯುದ್ಧ ಸೈನಿಕರ ನಡುವೆ ೧೯೮೯ ರಲ್ಲಿ ಸಮರ್ಥಕರಲ್ಲಿ ಆರ್ಚ್ ಬಿಶಪ್ ಡೆಸ್ಮಂಡ್ ಟೂಟೊ ಟಿಬೆಟ್ಟಿನ ಧಾರ್ಮಿಕ ಗುರು, ದಲೈ ಲಾಮಾ ಮತ್ತಿತರು, ಧಾರ್ಮಿಕ ಶ್ರದ್ಧಾಳುಗಳು ಸೇರಿದ್ದಾರೆ. ಬಹುಸಂಖ್ಯಾತ, 'ಹ್ಯಾನ್ ಸಮುದಾಯದ ಪ್ರತಿನಿಧಿ,' 'ಲ್ಯೂ ಜಿಯಾಒಬೊ' ಆಗಿದ್ದಾರೆ. ಇದು, ಚೀನದ ಅಂತಾರಾಷ್ಟ್ರೀಯ ವರ್ಚಸ್ಸಿನಮೇಲೆ ಪರಿಣಾಮಬೀರುತ್ತದೆ. ಅಮೆರಿಕದ ಅಧ್ಯಕ್ಷ ಒಬಾಮರವರೇ ಹೆಚ್ಚು ಒತ್ತಡವನ್ನು ಸೂಚಿಸುತ್ತಿದ್ದಾರೆ. ಪ್ರಥಮಬಾರಿಗೆ ಚೈನದ ನಾಗರಿಕನಿಗೆ ಕೊಡಲ್ಪಟ್ಟಿದೆ. ಈಗಿನ್ ಚೈನ ಸರಕಾರದ ನಾಯಕರಿಗೆ ಒಂದು ಭಾರಿ ತಲೆನೋವಿನ ಸವಾಲಾಗಿ ಪರಿಣಮಿಸಿದೆ.
=='ಜೆಕೋಸ್ಲೊವೇಕಿಯಾ ದೇಶ'ದಲ್ಲಿ ನಡೆದ ("'ವೆಲ್ವೆಟ್ ಕ್ರಾಂತಿ"'),ಪ್ರಸಿದ್ಧ 'ಚಾರ್ಟರ್-೭೭' ರ ಮಾದರಿಯ ಸಂಘರ್ಷ==
ತಮಗೆ ಸಂಪೂರ್ಣ ಸ್ವಾತಂತ್ರ್ಯ, ಪ್ರಜಾಪ್ರಭುತ್ವದ ಮಾನವ ಅಧಿಕಾರದ ಸುಧಾರಣೆಗಳು ಹಾಗೂ ಕಮ್ಯುನಿಸ್ಟ್ ಪಕ್ಷದ ರಾಜಕೀಯ ಪ್ರಾಬಲ್ಯ ಕೊನೆಗಾಣಿಸುವ ಕರೆಯೊಂದಿಗೆ ಸನ್, ೨೦೦೮ ರಲ್ಲಿ ಲಿಯು ಅವರು ಚಾರ್ಟರ್-೦೮ ಹೆಸರಿನ ಸಹಿ ಸಂಗ್ರಹ ಆಂದೋಲನ ನಡೆಸಿದ್ದರು. ೧೯೮೯ ರಲ್ಲಿ ಜೆಕೋಸ್ಲೊವೇಕಿಯಾದಲ್ಲಿ ಮಾನವ ಹಕ್ಕುಗಳ ಕರೆಯೊಂದಿಗೆ ನಡೆದ "ವೆಲ್ವೆಟ್ ಕ್ರಾಂತಿ", ಆ ಮೂಲಕ ಕಮ್ಯುನಿಸ್ಟ್ ಆಡಳಿತವನ್ನು ಕಿತ್ತೊಗೆದ ಪ್ರಸಿದ್ಧ ಚಾರ್ಟರ್- ೭೭ ಆಂದೋಲನದ ಮಾದರಿಯಲ್ಲೇ ಸಾಗಿತ್ತು.
ಮೂರು ದಶಕಗಳ ಹಿಂದೆ ಚಸಿನಾ ದೇಶದ ಕಮ್ಯುನಿಸ್ಟ್ ನಾಯಕತ್ವವು ಆರ್ಥಿಕ ಸುಧಾರಣೆಗಳನ್ನಷ್ಟೇ ಜಾರಿಗೊಳಿಸಿ ರಾಜಕೀಯ ಸುಧಾರಣೆಗಳಿಗೆ ವಿಮುಖವಾದ ಸಂದರ್ಭದಲ್ಲಿ, 'ಲ್ಯೂ ಜಿಯಾಒಬೊ' ನೇತೃತ್ವದ ಭಿನ್ನಮತೀಯ ಸಮುದಾಯ ಜಾಗೃತಗೊಂಡಿತ್ತು. ಇದೀಗ ಈ ಸಮುದಾಯಕ್ಕೆ ಇದೇ ಮೊದಲ ಬಾರಿಗೆ ಪ್ರತಿಷ್ಠಿತ ಪ್ರಶಸ್ತಿ ಲಭ್ಯವಾಗಿದೆ.
"https://kn.wikipedia.org/wiki/ಲ್ಯೂ_ಜಿಯಾಒಬೊ" ಇಂದ ಪಡೆಯಲ್ಪಟ್ಟಿದೆ