ಸಂಯುಕ್ತ ಕರ್ನಾಟಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೪೩ ನೇ ಸಾಲು:
===ಬದಲಾದ ಸಂಪಾದಕೀಯ ಮಂಡಳಿ===
 
[[Image:sk_logo.jpg|thumb|೧೯೭೪ರಲ್ಲಿ ಸಂಯುಕ್ತ ಕರ್ನಾಟಕ]] ಆ ಯಶಸ್ಸಿನ ಹಿನ್ನೆಲೆಯಲ್ಲಿ [[ಲೋಕ ಶಿಕ್ಷಣ ಟ್ರಸ್ಟ್]]ನ ಧರ್ಮದರ್ಶಿಯಾಗಿದ್ದ [[ರಂಗನಾಥ ದಿವಾಕರ]] ಅವರು ತಮ್ಮ ಮಗ [[ಅನಂತ ದಿವಾಕರ]] ಅವರಿಗೆ ಆಡಳಿತ ಚುಕ್ಕಾಣಿ ನೀಡಿದರು. ಖಾಸಗಿ ಆಸ್ತಿಯಂತೆ ಟ್ರಸ್ಟ್ ನ ಆಡಳಿತ ನಡೆಯಲಾರಂಭಿಸಿತು. ಆಡಳಿತದೊಂದಿಗೆ ಸಂಪಾದಕೀಯ ಮಂಡಳಿಯೊಂದಿಗಿನ ಸಾಮರಸ್ಯ ಕಡಿಮೆಯಾಗಲಾರಂಭಿಸಿತು. [[ಇಂಡಿಯನ್ ಎಕ್ಸ್‍ಪ್ರೆಸ್]] ಸಮೂಹದ [[ಕನ್ನಡಪ್ರಭ]] ದಿನಪತ್ರಿಕೆಯೂ [[ಪ್ರಜಾವಾಣಿ]]ಯೊಂದಿಗೆ [[ಸಂಯುಕ್ತ ಕರ್ನಾಟಕ]]ಕ್ಕೆ ತೀವ್ರ ಪೈಪೋಟಿ ನೀಡಲಾರಂಭಿಸಿತು. ನುರಿತ ಹಾಗೂ ಅನುಭವಿ ಪತ್ರಕರ್ತರು ‘ಸಂಕ’ ದಾಟಿ ಇತರ ಪತ್ರಿಕೆಗಳತ್ತ ದಾರಿ ಹುಡುಕಿಕೊಂಡರು. [[ರಂಗನಾಥ ದಿವಾಕರ]] ಅವರಿಗೆ ತಮ್ಮ ಕನಸು ಭಗ್ನವಾದಂತೆನಿಸಿ ಅಕ್ಟೋಬರ್ [[1974]]ರಲ್ಲಿ ಪತ್ರಿಕಾ ಸಮೂಹವನ್ನು ಮುಖ್ಯ ಮಂತ್ರಿ [[ಡಿ.ದೇವರಾಜ ಅರಸು]] ಅವರ ಆಪ್ತರಾಗಿದ್ದ ಸಚಿವ [[ಎಂ.ವೈ.ಘೋರ್ಪಡೆ]] ಅವರ [[ಕರ್ನಾಟಕ ಪತ್ರಿಕಾ ಪ್ರೈವೇಟ್ ಲಿಮಿಟೆಡ್]] ಸಂಸ್ಥೆಗೆ ಮಾರಾಟ ಮಾಡಿದರು. [[ಪ್ರಜಾವಾಣಿ]]ಗೆ ಹಿಂದಿರುಗಿ ಸುದ್ದಿ ಸಂಪಾದಕರಾಗಿದ್ದ [[ಖಾದ್ರಿ ಶಾಮಣ್ಣ]] ‘ಸಂಕ’ದ ಹೊಸ ಪ್ರಧಾನ ಸಂಪಾದಕರಾಗಿ ನಿಯುಕ್ತಿಗೊಂಡರು. ಜತೆಗೆ [[ಪ್ರಜಾವಾಣಿ]]ಯ ಪ್ರಧಾನ ವರದಿಗಾರರಾಗಿದ್ದ [[ಎಸ್.ವಿ.ಜಯಶೀಲರಾವ್]] ಸಹ ಸಂಪಾದಕರಾಗಿ ಸೇರ್ಪಡೆಯಾದರು. [[ಪ್ರಜಾವಾಣಿ]]ಯ ಹಿರಿಯ ವರದಿಗಾರರಾಗಿದ್ದ [[ಕೆ.ಜನಾರ್ದನ]] ಹುಬ್ಬಳ್ಳಿ ಆವೃತ್ತಿಯ ಸ್ಥಾನಿಕ ಸಂಪಾದಕರಾಗಿ ಜತೆಗೂಡಿದರು. ಸಹಾಯಕ ಸಂಪಾದಕ ಹಾಗೂ ಪ್ರಧಾನ ವರದಿಗಾರರಾಗಿದ್ದ [[ಕೆ.ಶಾಮರಾವ್]] ‘ಸಂಕ’ವನ್ನು ತೊರೆಯುವಂತಾಯಿತು. ಸಹಾಯಕ ಸಂಪಾದಕರಾಗಿದ್ದ [[ಸುರೇಂದ್ರ ದಾನಿ]] ಹುಬ್ಬಳ್ಳಿಗೆ ಮರಳಿದರು. [[ಹೆಚ್.ಆರ್.ನಾಗೇಶರಾವ್]] ಸುದ್ದಿ ಸಂಪಾದಕರ ಸ್ಥಾನದಲ್ಲಿಯೇ ಮುಂದುವರಿದರು.
 
ಟ್ರಸ್ಟ್‌ನ ಆಸ್ತಿಯನ್ನು ಖಾಸಗಿ ಸೊತ್ತಿನಂತೆ ಪರಭಾರೆ ಮಾಡಿದ್ದು ಸರಿಯಲ್ಲವೆಂದು [[ಕೆ.ಶಾಮರಾವ್]] ಧಾರವಾಡ ಜಿಲ್ಲಾ ನ್ಯಾಯಾಲಯದ ಮೊರೆ ಹೊಕ್ಕರು.
"https://kn.wikipedia.org/wiki/ಸಂಯುಕ್ತ_ಕರ್ನಾಟಕ" ಇಂದ ಪಡೆಯಲ್ಪಟ್ಟಿದೆ