ಸಂಯುಕ್ತ ಕರ್ನಾಟಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೯ ನೇ ಸಾಲು:
'''ಸಂಯುಕ್ತ ಕರ್ನಾಟಕ''' [[ಹುಬ್ಬಳ್ಳಿ]] ಮತ್ತು ಬೆಂಗಳೂರಿನಿಂದ ಪ್ರಕಾಶಿತವಾಗುತ್ತಿರುವ ಪ್ರಮುಖ ಕನ್ನಡ ದಿನಪತ್ರಿಕೆ.
 
[[ಕರ್ಮವೀರ]] ನಡೆಸುತ್ತಿದ್ದ [[ರಂಗನಾಥ ದಿವಾಕರ]] ಮತ್ತು ಮಿತ್ರರಿಗೆ ದಿನಪತ್ರಿಕೆಯೊಂದನ್ನು ಆರಂಭಿಸುವ ಇಚ್ಛೆಯಿತ್ತು. [[ದತ್ತೋಪಂತ ಬೆಳವಿ]],[[ನಾರಾಯಣರಾವ್ ಜೋಷಿ]],[[ದಾತಾರ ಬಳವಂತರಾವ್]],[[ಗೋಖಲೆ ಕೇಶವರಾವ್]] ಮುಂತಾದ ಪ್ರಮುಖ ರಾಷ್ಟ್ರಾಭಿಮಾನಿಗಳು ದಿವಾಕರರೊಂದಿಗೆ ಸೇರಿ [[ಬಾಗಲಕೋಟೆ]]ಯ [[ಕನ್ನಡಿಗ]], [[ಬೆಳಗಾವಿ]]ಯ [[ಅರುಣೋದಯ]] ಮುಂತಾದ ಕೆಲವು ಪತ್ರಿಕೆಗಳನ್ನು ಒಗ್ಗೂಡಿಸಿ ೧೯೩೩ರಲ್ಲಿ ಸಂಯುಕ್ತ ಕರ್ನಾಟಕ ವಾರಪತ್ರಿಕೆಯನ್ನು ಬೆಳಗಾವಿಯಲ್ಲಿ ಆರಂಭಿಸಿದರು. ಕಾಂಗ್ರೆಸ್‌ನ ಬೆಳಗಾವಿ ಅಧಿವೇಶನದ ನಂತರ ಕೆಲದಿನಗಳಲ್ಲಿ [[ಹುಬ್ಬಳ್ಳಿ]]ಯಿಂದ [[ವಿ.ಬಿ.ಪುರಾಣಿಕ]]ರ ಸಂಪಾದಕತ್ವದಲ್ಲಿ ಆರಂಭವಾದ ಹೊಸ ರಾಷ್ಟ್ರೀಯ ದಿನಪತ್ರಿಕೆ [[ಲೋಕಮತ]]. [[ನಾರಾಯಣರಾವ್ ಕಲ್ಲೆ]], ಮಾಜಿ ಮಂತ್ರಿ [[ಕಲ್ಲನಗೌಡ ಪಾಟೀಲ]]ರು ಸಂಪಾದಕೀಯ ವರ್ಗದಲ್ಲಿದ್ದ ಪತ್ರಿಕೆ ಶೀಘ್ರವೇ ಜನಪ್ರಿಯತೆ ಗಳಿಸಿತು. ಇದನ್ನು ಕಂಡು [[ಬೆಳಗಾವಿ]]ಯಿಂದ ಪ್ರಕಟವಾಗುತ್ತಿದ್ದ [[ಸಂಯುಕ್ತ ಕರ್ನಾಟಕ]]ವು ಹುಬ್ಬಳ್ಳಿಗೆ ಬಂತು. [[ರಂಗನಾಥ ದಿವಾಕರ]] ಧರ್ಮದರ್ಶಿತ್ವದಲ್ಲಿ, [[ಮೊಹರೆ ಹಣಮಂತರಾಯ]]ರ ಸಂಪಾದಕತ್ವದಲ್ಲಿ ಪತ್ರಿಕೆ ಅಭಿವೃದ್ಧಿಯಾಯಿತು. ೧೯೩೪ರಿಂದ ಕಾಲು ಶತಮಾನ, ಅಂದರೆ ಪತ್ರಿಕೆಯನ್ನು "[[ಲೋಕ ಶಿಕ್ಷಣ ಟ್ರಸ್ಟ್]]" ವಹಿಸಿಕೊಂಡ ನಂತರವೂ ಸಂಪಾದಕರಾಗಿದ್ದು ಪತ್ರಿಕೆಯನ್ನು ಬೆಳೆಸಿಕೊಂಡು ಬಂದರು.ಸಂಯುಕ್ತ ಕರ್ನಾಟಕದ ಬೆಂಗಳೂರುಬಾಗಲಕೋಟೆಯ ಆವೃತ್ತಿಪುರೋಹಿತ ಬಂಧುಗಳು ರಂಗನಾಥ ೧೯೫೯ರದಿವಾಕರರಿಗೆ ಜನವರಿಯಲ್ಲಿಬೆಂಬಲವಾಗಿ ಪ್ರಾರಂಭವಾಯಿತುನಿಂತರು.ಇದಕ್ಕೂ ಮೊದಲೇ ರೋಟರೀಹಿರಿಯರಾದ ಮುದ್ರಣಯಂತ್ರವನ್ನುತಮ್ಮಣ್ಣಾಚಾರ್ಯ ಸ್ಥಾಪಿಸಿಪುರೋಹಿತರು ಕನ್ನಡಪತ್ರಿಕೆಯ ವ್ಯವಸ್ಥಾಪಕರಾದರು. ಕಿರಿಯರಾದ [[ಪತ್ರಿಕೋದ್ಯಮಹ.ರಾ.ಪುರೋಹಿತ]]ರು ಇತಿಹಾಸದಲ್ಲಿಸಂಪಾದಕೀಯ ತನ್ನಮಂಡಲಿಯ ಹೆಸರನ್ನುಹಿರಿಯ ಛಾಪಿಸಿತುಸದಸ್ಯರಾಗಿ ಸೇವೆ ಸಲ್ಲಿಸಿದರು. [[ನಾರಾಯಣರಾವ್ ಕಲ್ಲೆ]] ರಂಗನಾಥ ದಿವಾಕರರ ಆಪ್ತ ಸಂಪಾದಕೀಯ ಸಲಹೆಗಾರರಾಗಿ ಕೆಲ ವರ್ಷ ಕಾರ್ಯನಿರ್ವಹಿಸಿದರು.
 
ಕಾಂಗ್ರೆಸ್‌ನ ಬೆಳಗಾವಿ ಅಧಿವೇಶನದ ನಂತರ ಬೆಂಗಳೂರಿಗೆ ಬಂದ [[ದ.ಕೃ.ಭಾರದ್ವಾಜ]]ರು [[ರಂಗಭೂಮಿ]] ನಿಂತು ಹೋದ ಮೇಲೆ, ಕೆಲಕಾಲ ದಕ್ಷಿಣ ಕನ್ನಡ ಜಿಲ್ಲೆಯ ಪತ್ರಿಕೆಗಳಿಗೆ ವರದಿಗಳನ್ನು ಕಳುಹಿಸುತ್ತಿದ್ದ [[ನಾರಾಯಣರಾವ್ ಕಲ್ಲೆ]] ಅವರು [[ಹುಬ್ಬಳ್ಳಿ]]ಯಿಂದ [[ವಿ.ಬಿ.ಪುರಾಣಿಕ]]ರ ಸಂಪಾದಕತ್ವದಲ್ಲಿ ಆರಂಭವಾದ ಹೊಸ ರಾಷ್ಟ್ರೀಯ ದಿನಪತ್ರಿಕೆ [[ಲೋಕಮತ]]ಕ್ಕೆ ಸೇರಿದರು. ಸಂಪಾದಕೀಯ ವಿಭಾಗದಲ್ಲಿ ಕಲ್ಲೆಯವರ ಜತೆಯಾದವರು ಮಾಜಿ ಮಂತ್ರಿ [[ಕಲ್ಲನಗೌಡ ಪಾಟೀಲ]]ರು. [[ಲೋಕಮತ]]ದ ಜನಪ್ರಿಯತೆಯನ್ನು ಕಂಡು [[ಬೆಳಗಾವಿ]]ಯಿಂದ ಪ್ರಕಟವಾಗುತ್ತಿದ್ದ [[ಸಂಯುಕ್ತ ಕರ್ನಾಟಕ]]ವು ಹುಬ್ಬಳ್ಳಿಗೆ ಬಂತು.
 
`[[ಸಂಯುಕ್ತ ಕರ್ನಾಟಕ]]' ದಿನಪತ್ರಿಕೆಯ ಬೆಂಗಳೂರು ಆವೃತ್ತಿಯನ್ನು ೧೯೫೯ರ ಜನವರಿ ೨೬ರಂದು [[ಜಯಚಾಮರಾಜೆಂದ್ರ ಒಡೆಯರ್]] ಅವರು ಉದ್ಘಾಟಿಸಿದರು. ಆವೃತ್ತಿಯ ಆರಂಭಕ್ಕೂ ಮುನ್ನ ೧೯೫೮ರ ಸೆಪ್ಟಂಬರ್ ೧ರಿಂದಲೇ ನೇಮಕಗೊಂಡ ಹಿರಿಯ ಪತ್ರಕರ್ತರಲ್ಲಿ ಪ್ರಮುಖರಾದವರೆಂದರೆ ಹುಬ್ಬಳ್ಳಿ ಕಚೇರಿಯಿಂದ ವರ್ಗವಾದ [[ಕೆ.ಶಾಮರಾವ್]] ಹಾಗೂ [[ಸುರೇಂದ್ರ ಬಿ.ದಾನಿ]] ಮತ್ತು ‘[[ತಾಯಿನಾಡು]]’ ಪತ್ರಿಕೆಯಿಂದ ಬಂದ [[ಹೆಚ್.ಆರ್.ನಾಗೇಶರಾವ್]]. ಆವೃತ್ತಿಯ ಮುಖ್ಯಸ್ಥರಾಗಿ ಸಹಾಯಕ ಸಂಪಾದಕರ ಸ್ಥಾನದಲ್ಲಿದ್ದವರು ‘ಗ್ರಾಮಾಯಣ’ ಖ್ಯಾತಿಯ ಸಾಹಿತಿ [[ರಾವಬಹಾದ್ದೂರ]] (ಆರ್.ಬಿ.ಕುಲಕರ್ಣಿ). ‘[[ಪ್ರಜಾವಾಣಿ]]’ಯಿಂದ ಬಂದಿದ್ದ [[ಖಾದ್ರಿ ಶಾಮಣ್ಣ]] ಕೆಲಕಾಲ ಸುದ್ದಿ ಸಂಪಾದಕರಾಗಿದ್ದರು. ಇದೇ ಸಮಯದಲ್ಲಿ ‘ತಾಯಿನಾಡು’ ಪತ್ರಿಕೆಯ [[ಕೆ.ಅನಂತಸುಬ್ಬರಾವ್]] ಹಾಗೂ [[ಎಸ್.ವ್ಯಾಸರಾವ್]], ‘[[ಜನಪ್ರಗತಿ]]’ ಸಂಪಾದಕರಾಗಿದ್ದ [[ಬಿ.ಶ್ರೀನಿವಾಸಮೂರ್ತಿ]], ಕಥೆಗಾರ ‘[[ಭಾರತೀಪ್ರಿಯ]]’ (ಎಸ್.ವೆಂಕಟರಾವ್), ಕವಿ [[ಅರ್ಚಕ ವೆಂಕಟೇಶ]], ಯುವ ಬರಹಗಾರ [[ಮತ್ತೂರು ಕೃಷ್ಣಮೂರ್ತಿ]], ಅದೇ ತಾನೆ ವೃತ್ತಿಜೀವನ ಆರಂಭಿಸಿದ್ದ [[ನರಸಿಂಹ ಜೋಶಿ]] ಮತ್ತಿತರರು ‘[[ಸಂಯುಕ್ತ ಕರ್ನಾಟಕ]]’ದ ಬೆಂಗಳೂರು ಆವೃತ್ತಿಗೆ ಸೇರ್ಪಡೆಯಾಗಿ ಪತ್ರಿಕೆಯನ್ನು ಬೆಳೆಸಿದರು.
"https://kn.wikipedia.org/wiki/ಸಂಯುಕ್ತ_ಕರ್ನಾಟಕ" ಇಂದ ಪಡೆಯಲ್ಪಟ್ಟಿದೆ