ರಮಣ ಮಹರ್ಷಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೨ ನೇ ಸಾಲು:
|footnotes=
}}
'''ಶ್ರೀ ರಮಣ ಮಹರ್ಷಿ''' - (ಡಿಸೆಂಬರ್ ೩೦ ೧೮೭೯ - ಏಪ್ರಿಲ್ ೧೪ ೧೯೫೦) ಭಾರತದ ಹೆಸರಾಂತ ಆಧ್ಯಾತ್ಮ ಗುರುಗಳಲ್ಲೊಬ್ಬರು. ಅವರು ಸತ್ಯಆತ್ಮ ಪ್ರಾಪ್ತಿಗೆಜ್ಙಾನಪ್ರಾಪ್ತಿಗೆ 'ನಾನು ಯಾರು' ಎಂಬ ರೂಪದ ಆತ್ಮವಿಚಾರವೇ ಮುಖ್ಯ ಸಾಧನವೆಂದು ಬೋಧಿಸಿದರು. ಇದನ್ನೇ ಮುಂದೆ ವಿಸ್ತರಿಸಿ, ಆತ್ಮ ವಿಚಾರ ಅಥವಾ ಆತ್ಮ ಅವಧಾನ, ಮತ್ತು ಗುರುವಿಗೆ ಅಥವಾ ಇಷ್ಟ ದೇವತೆಗೆ ಶರಣಾಗತಿಯೂ ಸಾಧನಗಳಾಗಬಹುದೆಂದರು. ಹಾಗಿದ್ದರೂ, ಅವರು ಇತರ ವಿಧಾನಗಳನ್ನು ಅನುಸರಿಸುತ್ತಿದ್ದ ಸಾಧಕರಿಗೂ ಕೂಡ ಸಲಹೆ ಮತ್ತು ಮಾರ್ಗದರ್ಶನವನ್ನು ನೀಡುತ್ತಿದ್ದರು.
 
== '''ಜೀವನ''' ==
ಅವರ ಹುಟ್ಟು ಹೆಸರು ವೆಂಕಟ ರಮಣ ಅಯ್ಯರ್, ತಮಿಳುನಾಡಿನ ಮದುರೆಯ ಹತ್ತಿರದ ತಿರುಚುರಿ ಎಂಬ ಗ್ರಾಮದಲ್ಲಿ ಸುಬ್ರಮಣ್ಯ ಅಯ್ಯರ್ ಮತ್ತು ಅಳಗಮ್ಮಾಳ್ ಎಂಬ ದಂಪತಿಗಳಿಗೆ ಜನಿಸಿದರು. ಅವರ ಪರಿವಾರದ ನಾಲ್ಕು ಮಕ್ಕಳಲ್ಲಿ ಇವರು ಎರಡನೆಯವರು. ೧೮೯೬ರಲ್ಲಿ, ೧೬ನೆಯ ವಯಸ್ಸಿನಲ್ಲಾದ ಆತ್ಮ ಪ್ರಜ್ಙಾನುಭವದ ನಂತರ ಅವರು ಶಾಶ್ವತವಾಗಿ ಅರುಣಾಚಲಕ್ಕೆ (ತಿರುವಣ್ಣಾಮಲೆಗೆ) ಹೊರಟು ಬಂದರು ಮತ್ತು ಶೇಷಾಯುಷ್ಯವನ್ನು ಇಲ್ಲಿಯೇ ಕಳೆದರು.
 
೧೮೯೬ರಲ್ಲಾದ ತಮ್ಮ ಆತ್ಮಾನುಭವವನ್ನು ಅವರು ಈ ರೀತಿ ಬಣ್ಣಿಸುವರು:
"...ನನ್ನ ಸೋದರಮಾವನ ಮನೆಯ ಮೊದಲನೆಯ ಮಾಳಿಗೆಯ ಒಂದು ಕೋಣೆಯಲ್ಲಿ ಹಾಗೆಯೇ ಕುಳಿತಿದ್ದೆ. ನಾನು ಅಪರೂಪಕ್ಕೆಲ್ಲೋ ಜ್ವರಕ್ಕೀಡಾಗುತ್ತಿದ್ದೆ, ಅಂದಂತೂ ನನ್ನ ಆರೋಗ್ಯದಲ್ಲಿ ಏನೇನೂ ತೊಂದರೆಯಿರಲಿಲ್ಲ. ಆದರೆ ಹಟಾತ್ತನೆ ಸಾವಿನ ಭಯ ನನ್ನನ್ನಾವರಿಸಿತು. ನನ್ನ ಆರೋಗ್ಯದಲ್ಲಿ ಇದಕ್ಕಾಗಿ ಅದಾವುದೇ ಕಾರಣವಿರಲಿಲ್ಲ, ಅಲ್ಲದೆ ಭಯಗ್ರಸ್ತನಾಗಲು ಕಾರಣವೇನಾದರೂ ಇರಬಹುದೆ ಎಂದು ಪರೀಕ್ಷಿಸಲೂ ನನ್ನಲ್ಲಿ ಸಂಕಲ್ಪವೇಳಲಿಲ್ಲ. ನಾನು ಸಾವಿಗೀಡಾಗುತ್ತಿದ್ದೇನೆಂದು ಅನಿಸಿತು ಮತ್ತು ಅದರ ವಿಷಯವಾಗಿ ಏನು ಮಾಡಬೇಕೆಂದು ಆಲೋಚಿಸತೊಡಗಿದೆ ... ಮರಣ ಭೀತಿಯ ಅಘಾತ ನನ್ನ ಮನಸ್ಸನ್ನು ಅಂತರ್ಮುಖಿಯಾಗುವಂತೆ ಮಾಡಿತು. ಯಾವುದೇ ಪದಗಳನ್ನುಪಯೋಗಿಸದೆ ನನಗೇ ನಾನು ಮಾನಸಿಕವಾಗಿ ಈ ರೀತಿ ಹೇಳಿಕೊಂಡೆ: 'ಈಗ ಸಾವು ಬಂದಿದೆ. ಹಾಗೆಂದರೇನು? ಸಾಯುತ್ತಿರುವುದು ಯಾವುದು? ಈ ದೇಹ ಸಾಯುತ್ತದೆ'. ತತ್ ಕ್ಷಣವೇ ನಾವು ಸಾವಿನ ಆಗುವಿಕೆಯನ್ನು ನಟಿಸಿದೆ. ದೇಹವು ಸೆಟೆದು ಕೊಂಡಿದೆಯೋ ಎಂಬಂತೆ ನಾನು ನನ್ನ ಕಾಲುಗಳನ್ನು ಚಾಚಿ ಅಲುಗಾಡದಂತಿದ್ದೆ, ಈ ವಿಚಾರಕ್ಕೆ ಹೆಚ್ಚು ವಾಸ್ತವ್ಯವನ್ನು ಕೊಡಲು ಶವವನ್ನು ಅನುಕರಿಸಿದೆ. ನನ್ನ ಉಸಿರನ್ನು ಹಿಡಿದುಕೊಂಡೆ, ತುಟಿಗಳನ್ನು ಬಿಗಿಯಾಗಿ ಯಾವುದೇ ಸದ್ದು ಬಾರದಂತೆ, ಅದು 'ನಾನು' ಎಂಬುದಾಗಲೀ ಅಥವಾ ಇನ್ನಾವುದೋ ಶಬ್ಧ ಆಗಲಿ ಬಾರದಂತೆ ಮುಚ್ಚಿಕೊಂಡೆ. ಆಗ ನನಗೇ ಹೇಳಿಕೊಂಡೆ: 'ಸರಿ ಹಾಗಾದರೆ, ಈ ದೇಹ ಸತ್ತುಹೋಗಿದೆ. ಸೆಟೆದುಕೊಂಡ ಹಾಗೆಯೇ ಅದನ್ನು ಕೊಂಡೊಯ್ದು ಸುಟ್ಟು ಭಸ್ಮ ಮಾಡಿಬಿಡುತ್ತಾರೆ. ಆದರೆ ಈ ದೇಹದ ಸಾವಿನಿಂದ ನಾನು ಸತ್ತೆನೇ? ಈ ದೇಹ 'ನಾನು' ಎಂಬುದೇ? ಅದು ಮೌನ ಮತ್ತು ಜಡ, ಆದರೆ ನಾನು ನನ್ನ ವ್ಯಕ್ತಿತ್ವದ ಸಂಪೂರ್ಣ ಶಕ್ತಿಯನ್ನು ಮತ್ತು ನನ್ನಲ್ಲಿನ 'ನಾನು' ಎಂಬ ಸ್ವರವೂ ಕೂಡ ಇದರಿಂದ ಬೇರೆ ಎಂಬ ಅನುಭವವನ್ನು ಪಡೆಯುತ್ತಿದ್ದೇನೆ, ಆದ್ದರಿಂದ ಈ ದೇಹವನ್ನು ಮೀರಿದ ಚೇತನ ನಾನು. ದೇಹ ಸಾಯುತ್ತದೆ, ಆದರೆ ಅದನ್ನು ಮೀರಿಸಿದ ಚೇತನವನ್ನು ಸಾವು ಮುಟ್ಟಲಾರದು. ಹಾಗೆಂದರೆ, ನಾನು ಸಾವಿಲ್ಲದ ಚೇತನ'. ಇದೆಲ್ಲವೂ ಮಂದ ಆಲೋಚನೆಗಳಲ್ಲ. ಅದು ನನ್ನಲ್ಲಿ ಆಲೋಚನೆಗಳೇ ಇಲ್ಲವೇನೋ ಎಂಬಂತೆ ಜೀವಂತ ಸತ್ಯಗಳಂತೆ ನನ್ನಲ್ಲಿ ಸುಸ್ಪಷ್ಟವಾಗಿ ಮಿಂಚಿ ಹಾದುಹೋಯಿತು. ನಾನು ಸತ್ಯವಾದುದಾವುದೋ ಆಗಿದ್ದೆ, ನನ್ನ ಪ್ರಸ್ತುತ ಸ್ಥಿತಿಯಲ್ಲಿನ ಒಂದೇ ಸತ್ಯತೆ ಯಾಗಿದ್ದೆ. ಮತ್ತು ದೇಹದೊಡನೆ ಪ್ರಜ್ಙಾಪೂರ್ವಕವಾಗಿ ಜೋಡಣೆಗೊಂಡಿದ್ದೆಲ್ಲವೂ ಆ 'ನಾನು' ಎಂಬುದರ ಮೇಲೆಯೇ ಕೇಂದ್ರೀಕೃತವಾಗಿತ್ತು. ಆ ಕ್ಷಣದ ನಂತರ, 'ನಾನು' ಅಥವಾ ಆತ್ಮವು, ಈ ಪ್ರಬಲ ವಿಸ್ಮಿತತೆಯಿಂದ ತನ್ನ ಮೇಲೆಯೇ ಗಮನವನ್ನು ಕೇಂದ್ರೀಕರಿಸಿತು. ಸಾವಿನ ಭಯವು ಎಂದೆಂದಿಗೂ ಮಾಯವಾಗಿಹೋಯಿತು. ಅಹಂ ಎಂಬುದು ಆತ್ಮ ಪ್ರಜ್ಙೆಯ ಮಹಾಪೂರದಲ್ಲಿ ಕಳೆದುಹೋಯಿತು. ಆ ಸಮಯದಿಂದ ಆತ್ಮ ಲೀನತೆಯು ಲುಪ್ತಿಯಿಲ್ಲದೆ ಮುಂದುವರೆಯಿತು. ಬೇರೆ ಆಲೋಚನೆಗಳು ಸಂಗೀತದ ನಾದಗಳಂತೆ ಬಂದು ಹೋಗಬಹುದು, ಆದರೆ 'ನಾನು' ಎಂಬುದು ಮೂಲಭೂತ ಶೃತಿಯಂತೆ ಮುಂದುವರೆಯಿತು, ಉಳಿದೆಲ್ಲ ನಾದಗಳ ಪಾಯದಲ್ಲಿದ್ದು ಉಳಿದೆಲ್ಲ ನಾದಗಳನ್ನು ಮಿಶ್ರಿಸುವ ಶೃತಿ"
 
== '''ಬೋಧನೆ''' ==
ಶ್ರೀ ರಮಣರು ಆತ್ಮ ವಿಚಾರವನ್ನು, ಅಂದರೆ, 'ನಾನು ಯಾರು' ಎಂಬ ಆತ್ಮಾನ್ವೇಷಣಾ ವಿಧಾನವನ್ನು ಆತ್ಮ ಜ್ಙಾನ ಪ್ರಾಪ್ತಿಗೆ ಮುಖ್ಯ ಸಾಧನವೆಂದು ಬೋಧಿಸುವರು. ಅವರು ಸಾಧಕರಿಗೆ ಈ ವಿಧಾನವನ್ನು ತಮ್ಮ 'ಶ್ರೀ ರಮಣ ನುಟ್ರಿರಟ್ಟು' ಎಂಬ ಪ್ರಬಂಧದಲ್ಲಿ ವಿಸ್ತರಿಸಿರುವರು. ಶ್ರೀ ರಮಣರು ಈ ಆತ್ಮವಿಚಾರ ವಿಧಾನವನ್ನು ಬುಧ್ಯಾತ್ಮಕ ವ್ಯಾಯಾಮವೆಂದು ಅಪಾರ್ಥಮಾಡಬಾರದೆಂದು ಎಚ್ಚರಿಸುವರು. ಉಚಿತರೀತಿಯಲ್ಲಿ ಮಾಡಿದ್ದಲ್ಲಿ, ಈ ವಿಚಾರವು 'ನಾನು' ಎಂಬ ಸಂವೇದನೆಯ ಮೇಲೆ ಆಲೋಚನೆಗಳಿಲ್ಲದೆ ಸುಭದ್ರವಾಗಿ ಮತ್ತು ಪ್ರಖರವಾಗಿ ಕೇಂದ್ರೀಕರಿಸುವುದೇ ಆಗಿದೆ. ಶ್ರೀ ರಮಣರ ಸ್ವಂತ ಆತ್ಮವಿಚಾರವನ್ನು ಅವರು ಈ ರೀತಿ ಈ ರೀತಿ ಬಣ್ಣಿಸುವರು:
 
"...ನನ್ನ ಸೋದರಮಾವನ ಮನೆಯ ಮೊದಲನೆಯ ಮಾಳಿಗೆಯ ಒಂದು ಕೋಣೆಯಲ್ಲಿ ಹಾಗೆಯೇ ಕುಳಿತಿದ್ದೆ. ನಾನು ಅಪರೂಪಕ್ಕೆಲ್ಲೋ ಜ್ವರಕ್ಕೀಡಾಗುತ್ತಿದ್ದೆ, ಅಂದಂತೂ ನನ್ನ ಆರೋಗ್ಯದಲ್ಲಿ ಏನೇನೂ ತೊಂದರೆಯಿರಲಿಲ್ಲ. ಆದರೆ ಹಟಾತ್ತನೆ ಸಾವಿನ ಭಯ ನನ್ನನ್ನಾವರಿಸಿತು. ನನ್ನ ಆರೋಗ್ಯದಲ್ಲಿ ಇದಕ್ಕಾಗಿ ಅದಾವುದೇ ಕಾರಣವಿರಲಿಲ್ಲ, ಅಲ್ಲದೆ ಭಯಗ್ರಸ್ತನಾಗಲು ಕಾರಣವೇನಾದರೂ ಇರಬಹುದೆ ಎಂದು ಪರೀಕ್ಷಿಸಲೂ ನನ್ನಲ್ಲಿ ಸಂಕಲ್ಪವೇಳಲಿಲ್ಲ. ನಾನು ಸಾವಿಗೀಡಾಗುತ್ತಿದ್ದೇನೆಂದು ಅನಿಸಿತು ಮತ್ತು ಅದರ ವಿಷಯವಾಗಿ ಏನು ಮಾಡಬೇಕೆಂದು ಆಲೋಚಿಸತೊಡಗಿದೆ ... ಮರಣ ಭೀತಿಯ ಅಘಾತ ನನ್ನ ಮನಸ್ಸನ್ನು ಅಂತರ್ಮುಖಿಯಾಗುವಂತೆ ಮಾಡಿತು. ಯಾವುದೇ ಪದಗಳನ್ನುಪಯೋಗಿಸದೆ ನನಗೇ ನಾನು ಮಾನಸಿಕವಾಗಿ ಈ ರೀತಿ ಹೇಳಿಕೊಂಡೆ: 'ಈಗ ಸಾವು ಬಂದಿದೆ. ಹಾಗೆಂದರೇನು? ಸಾಯುತ್ತಿರುವುದು ಯಾವುದು? ಈ ದೇಹ ಸಾಯುತ್ತದೆ'. ತತ್ ಕ್ಷಣವೇ ನಾವು ಸಾವಿನ ಆಗುವಿಕೆಯನ್ನು ನಟಿಸಿದೆ. ದೇಹವು ಸೆಟೆದು ಕೊಂಡಿದೆಯೋ ಎಂಬಂತೆ ನಾನು ನನ್ನ ಕಾಲುಗಳನ್ನು ಚಾಚಿ ಅಲುಗಾಡದಂತಿದ್ದೆ, ಈ ವಿಚಾರಕ್ಕೆ ಹೆಚ್ಚು ವಾಸ್ತವ್ಯವನ್ನು ಕೊಡಲು ಶವವನ್ನು ಅನುಕರಿಸಿದೆ. ನನ್ನ ಉಸಿರನ್ನು ಹಿಡಿದುಕೊಂಡೆ, ತುಟಿಗಳನ್ನು ಬಿಗಿಯಾಗಿ ಯಾವುದೇ ಸದ್ದು ಬಾರದಂತೆ, ಅದು 'ನಾನು' ಎಂಬುದಾಗಲೀ ಅಥವಾ ಇನ್ನಾವುದೋ ಶಬ್ಧ ಆಗಲಿ ಬಾರದಂತೆ ಮುಚ್ಚಿಕೊಂಡೆ. ಆಗ ನನಗೇ ಹೇಳಿಕೊಂಡೆ: 'ಸರಿ ಹಾಗಾದರೆ, ಈ ದೇಹ ಸತ್ತುಹೋಗಿದೆ. ಸೆಟೆದುಕೊಂಡ ಹಾಗೆಯೇ ಅದನ್ನು ಕೊಂಡೊಯ್ದು ಸುಟ್ಟು ಭಸ್ಮ ಮಾಡಿಬಿಡುತ್ತಾರೆ. ಆದರೆ ಈ ದೇಹದ ಸಾವಿನಿಂದ ನಾನು ಸತ್ತೆನೇ? ಈ ದೇಹ 'ನಾನು' ಎಂಬುದೇ? ಅದು ಮೌನ ಮತ್ತು ಜಡ, ಆದರೆ ನಾನು ನನ್ನ ವ್ಯಕ್ತಿತ್ವದ ಸಂಪೂರ್ಣ ಶಕ್ತಿಯನ್ನು ಮತ್ತು ನನ್ನಲ್ಲಿನ 'ನಾನು' ಎಂಬ ಸ್ವರವೂ ಕೂಡ ಇದರಿಂದ ಬೇರೆ ಎಂಬ ಅನುಭವವನ್ನು ಪಡೆಯುತ್ತಿದ್ದೇನೆ, ಆದ್ದರಿಂದ ಈ ದೇಹವನ್ನು ಮೀರಿದ ಚೇತನ ನಾನು. ದೇಹ ಸಾಯುತ್ತದೆ, ಆದರೆ ಅದನ್ನು ಮೀರಿಸಿದ ಚೇತನವನ್ನು ಸಾವು ಮುಟ್ಟಲಾರದು. ಹಾಗೆಂದರೆ, ನಾನು ಸಾವಿಲ್ಲದ ಚೇತನ'. ಇದೆಲ್ಲವೂ ಮಂದ ಆಲೋಚನೆಗಳಲ್ಲ. ಅದು ನನ್ನಲ್ಲಿ ಆಲೋಚನೆಗಳೇ ಇಲ್ಲವೇನೋ ಎಂಬಂತೆ ಜೀವಂತ ಸತ್ಯಗಳಂತೆ ನನ್ನಲ್ಲಿ ಸುಸ್ಪಷ್ಟವಾಗಿ ಮಿಂಚಿ ಹಾದುಹೋಯಿತು. ನಾನು ಸತ್ಯವಾದುದಾವುದೋ ಆಗಿದ್ದೆ, ನನ್ನ ಪ್ರಸ್ತುತ ಸ್ಥಿತಿಯಲ್ಲಿನ ಒಂದೇ ಸತ್ಯತೆ ಯಾಗಿದ್ದೆ. ಮತ್ತು ದೇಹದೊಡನೆ ಪ್ರಜ್ಙಾಪೂರ್ವಕವಾಗಿ ಜೋಡಣೆಗೊಂಡಿದ್ದೆಲ್ಲವೂ ಆ 'ನಾನು' ಎಂಬುದರ ಮೇಲೆಯೇ ಕೇಂದ್ರೀಕೃತವಾಗಿತ್ತು. ಆ ಕ್ಷಣದ ನಂತರ, 'ನಾನು' ಅಥವಾ ಆತ್ಮವು, ಈ ಪ್ರಬಲ ವಿಸ್ಮಿತತೆಯಿಂದ ತನ್ನ ಮೇಲೆಯೇ ಗಮನವನ್ನು ಕೇಂದ್ರೀಕರಿಸಿತು. ಸಾವಿನ ಭಯವು ಎಂದೆಂದಿಗೂ ಮಾಯವಾಗಿಹೋಯಿತು. ಅಹಂ ಎಂಬುದು ಆತ್ಮ ಪ್ರಜ್ಙೆಯ ಮಹಾಪೂರದಲ್ಲಿ ಕಳೆದುಹೋಯಿತು. ಆ ಸಮಯದಿಂದ ಆತ್ಮ ಲೀನತೆಯು ಲುಪ್ತಿಯಿಲ್ಲದೆ ಮುಂದುವರೆಯಿತು. ಬೇರೆ ಆಲೋಚನೆಗಳು ಸಂಗೀತದ ನಾದಗಳಂತೆ ಬಂದು ಹೋಗಬಹುದು, ಆದರೆ 'ನಾನು' ಎಂಬುದು ಮೂಲಭೂತ ಶೃತಿಯಂತೆ ಮುಂದುವರೆಯಿತು, ಉಳಿದೆಲ್ಲ ನಾದಗಳ ಪಾಯದಲ್ಲಿದ್ದು ಉಳಿದೆಲ್ಲ ನಾದಗಳನ್ನು ಮಿಶ್ರಿಸುವ ಶೃತಿ"
 
== '''ಅದ್ವೈತ ಮತ್ತು ರಮಣರ ಬೋಧನೆ''' ==
ಶ್ರೀ ರಮಣರ ಮತ್ತು ಶ್ರೀ ಶಂಕರಾಚಾರ್ಯರಿಂದ ವಿಸ್ತೃತ ಅದ್ವೈತವಾದ ಸಿದ್ಧಾಂತಗಳಲ್ಲಿ ಸಾಕಷ್ಟು ಸಾದೃಶ್ಯವಿದ್ದರೂ ಕೆಲವು ಭೇದಗಳೂ ಇರುವುವು.
*ಅದ್ವೈತ ಸಿದ್ಧಾಂತವು ನಕಾರಾತ್ಮಕ 'ನೇತಿ ನೇತಿ' (ಇದಲ್ಲ, ಇದಲ್ಲ) ಎಂಬ ಮಾರ್ಗವನ್ನು ಸೂಚಿಸಿದರೆ, ಶ್ರೀ ರಮಣರು ಸಕಾರಾತ್ಮಕ 'ನಾನು ಯಾರು' ಎಂಬ ವಿಚಾರಮಾರ್ಗವನ್ನು ಸೂಚಿಸುವರು
*ಅದ್ವೈತ ಸಿದ್ಧಾಂತವು ಆತ್ಮವೊಂದು ಮಾತ್ರ ಶೇಷವಾಗುವಂತೆ ಆತ್ಮವಲ್ಲದ ಉಳಿದೆಲ್ಲ ಕೋಶಗಳನ್ನು (ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಙಾನಮಯ, ಆನಂದಮಯ) ತ್ಯಜಿಸಬೇಕೆಂದು ಬೋಧಿಸುವುದು. ರಮಣರು 'ನಾನು ಯಾರು' ಎಂಬರೂಪದ ವಿಚಾರವೊಂದೇ ಮುಖ್ಯ ಸಾಧನ. ಮನಸ್ಸನ್ನು ಶಮನಗೊಳಿಸಲು ಬೇರಾವುದೇ ಮಾರ್ಗವಿಲ್ಲ. ಉಳಿದ ಮಾರ್ಗಗಳಿಂದ ಹಿಡಿತ ಸಾಧಿಸಲು ಹೊರಟಲ್ಲಿ ಮನಸ್ಸು ಶಮನಗೊಂಡಿರುವಂತೆ ಕಂಡುಬಂದರೂ ಮತ್ತೊಮ್ಮೆ ಮೇಲೇಳುವುದು.
 
[[als:Ramana Maharshi]]
"https://kn.wikipedia.org/wiki/ರಮಣ_ಮಹರ್ಷಿ" ಇಂದ ಪಡೆಯಲ್ಪಟ್ಟಿದೆ