ಬೆನಿಟೋ ಮುಸೊಲಿನಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೧೪ ನೇ ಸಾಲು:
[[File:Mussd.jpg|thumb|left|ಮುಸೊಲಿನಿ ಮತ್ತು ಫ್ಯಾಸಿಸ್ಟ್ ಬ್ಲ್ಯಾಕ್‍ಶರ್ಟ್ಸ್ 1922ರಲ್ಲಿ ರೋಮ್‌ನ ಮೇಲಿನ ದಂಡಯಾತ್ರೆಯ ವೇಳೆಯಲ್ಲಿ.]]
 
[[ಪ್ರಧಾನಮಂತ್ರಿ]]ಯಾಗಿ ಕಾರ್ಯನಿರ್ವಹಿಸುತ್ತಿದ್ದ ಮುಸೊಲಿನಿಯ ಮೊದಲ ವರ್ಷಗಳ ಆಳ್ವಿಕೆಯು ಫ್ಯಾಸಿಸ್ಟರು, ರಾಷ್ಟ್ರೀಯತಾವಾದಿಗಳು, ಲಿಬರಲ್‌ಗಳು ಮುಂತಾದ ಹಲವು ಪಕ್ಷಗಳು ಮತ್ತು [[ಪಾಪ್ಯುಲರ್ ಪಾರ್ಟಿ]]ಯ ಎರಡು ಕ್ಯಾಥೊಲಿಕ್ ಮಂತ್ರಿಗಳನ್ನೂ ಕೂಡ ಒಳಗೊಂಡ ಬಲಪಂಥೀಯ ಸಮ್ಮಿಶ್ರ ಸರ್ಕಾರವಾಗಿತ್ತು. ಆತನ ಮೂಲ ಸರ್ಕಾರಗಳಲ್ಲಿ ಫ್ಯಾಸಿಸ್ಟರು ಅಲ್ಪಸಂಖ್ಯಾತರಾಗಿದ್ದರು. ಮುಸೊಲಿನಿಯ ದೇಶೀಯ ಗುರಿಯು ಅಂತಿಮವಾಗಿ [[ನಿರಂಕುಶ]] ಪ್ರಭುತ್ವವನ್ನು ಸ್ಥಾಪಿಸಿ ಅದರಲ್ಲಿ ತಾನು ಸರ್ವೋಚ್ಛ ನಾಯಕ (''[[ಇಲ್ ಡೂಶೆ]]'' )ನಾಗುವುದಾಗಿತ್ತು ಮತ್ತು ಈ ಸಂದೇಶವನ್ನು ಮುಸೊಲಿನಿಯ ತಮ್ಮ ಅರ್ನಾಲ್ಡೋ ಸಂಪಾದಕತ್ವದ ಫ್ಯಾಸಿಸ್ಟ್ ಪತ್ರಿಕೆಯಾದ ''Il Popolo'' ದಲ್ಲಿ ತಿಳಿಯಪಡಿಸಿದನು. ಇದನ್ನು ಸಾಧಿಸಲು ಮುಸೊಲಿನಿಯು ಶಾಸಕಾಂಗದಿಂದ ಒಂದು ವರ್ಷದ ಅವಧಿಯವರೆಗೆ ಸರ್ವಾಧಿಕಾರಿಯ ಅಧಿಕಾರಗಳನ್ನು ಪಡೆದುಕೊಂಡನು (ಆಗಿನ ಕಾನೂನಿನ ಪ್ರಕಾರ ಸಿಂಧುವಾಗಿದ್ದುದು). ಆತ ರಾಜ್ಯದ ನಿರಂಕುಶ ಅಧಿಕಾರವನ್ನು ಮರಳಿ ಸ್ಥಾಪಿಸುವುದನ್ನು ಬೆಂಬಲಿಸಿದನು ಮತ್ತು ಇದನ್ನು ಸಾಧಿಸಲು ''Fasci di Combattimento'' ವನ್ನು ಮತ್ತು ಶಸ್ತ್ರಸಜ್ಜಿತ ಸೇನೆಯೊಡನೆ ಸೇರಿಸುವುದು (ಜನವರಿ 1923ರಂದು ''Milizia Volontaria per la Sicurezza Nazionale'' ಗೆ ತಳಹದಿ ಹಾಕಲಾಯಿತು) ಮತ್ತು ಪಕ್ಷವು ರಾಜ್ಯದೊಡನೆ ಪ್ರಗತಿಶೀಲವಾಗಿ ಗುರುತಿಸಿಕೊಳ್ಳುವುದರ ಪರವಾಗಿದ್ದನು. ರಾಜಕೀಯ ಮತ್ತು ಸಾಮಾಜಿಕ ಆರ್ಥಿಕ ವ್ಯವಸ್ಥೆಯಲ್ಲಿ, ಆತನು ಶ್ರೀಮಂತ ಔದ್ಯಮಿಕ ಮತ್ತು ಕೃಷಿಕ ವರ್ಗಗಳಿಗೆ ಅನುಕೂಲಕರ ಕಾನೂನೊಂದನ್ನು ಜಾರಿಗೆ ತಂದನು (ಖಾಸಗೀಕರಣಗಳು, ಬಾಡಿಗೆ ಕಾನೂನುಗಳ ಉದಾರೀಕರಣಗಳು ಮತ್ತು ಸಂಘಸಂಸ್ಥೆಗಳ ವಿಸರ್ಜನೆ).<ref name="Living History 2" />
 
1923ರಲ್ಲಿ ಮುಸೊಲಿನಿ "[[ಕೋರ್ಫು ಘಟನೆ]]ಯ ಸಂದರ್ಭದಲ್ಲಿ[[ಕೋರ್ಫು]]ವಿನ ಮೇಲೆ ಆಕ್ರಮಣ ಮಾಡಲು ಇಟಾಲಿಯನ್ ಸೇನಾಬಲವನ್ನು ಕಳುಹಿಸಿದನು." ಕೊನೆಗೆ, [[ಲೀಗ್ ಆಫ್ ನೇಶನ್ಸ್]] ಬಲಹೀನವೆಂದು ಸಾಬೀತಾಯಿತು ಮತ್ತು ಗ್ರೀಸ್ ಇಟಾಲಿಯನ್ ಬೇಡಿಕೆಗಳಿಗೆ ಮಣಿಯಬೇಕಾಗಿ ಬಂದಿತು.
 
===ಏಸರ್ಬೋ ಕಾನೂನು===
೧೨೨ ನೇ ಸಾಲು:
 
===ಸ್ಕ್ವಾಡ್ರಿಸ್ಟಿ ಹಿಂಸಾಚಾರ===
ನಿಯಮಗಳ ಉಲ್ಲಂಘನೆಯಾಗಿದೆಯೆಂಬ ಕಾರಣ ನೀಡಿ ಮತದಾನ ಪ್ರಕ್ರಿಯೆಯನ್ನು [[ರದ್ದು]]ಮಾಡಬೇಕೆಂದು ವಿನಂತಿಸಿದ ಸಮಾಜವಾದಿ ಪ್ರತಿನಿಧಿ [[ಜಿಯಾಕೊಮೊ ಮ್ಯಾಟಿಯೊಟಿ]]ಯ [[ಹತ್ಯೆ]]ಯು ಮುಸೊಲಿನಿ ಸರ್ಕಾರದಲ್ಲಿ ತಾತ್ಕಾಲಿಕವಾದ ಬಿಕ್ಕಟ್ಟನ್ನುಂಟುಮಾಡಿತು. ಕೊಲೆಗಾರನಾಗಿದ್ದ [[ಅಮೆರಿಗೋ ಡುಮಿನಿ]] ಎಂಬ ಹೆಸರಿನ ಸ್ಕ್ವಾಡ್ರಿಸ್ಟಾ ಕೊಲೆ ಮಾಡಿದ ನಂತರ ಮುಸೊಲಿನಿಗೆ ವರದಿಯೊಪ್ಪಿಸಿದನು. ಮುಸೊಲಿನಿ ಇದನ್ನು ಮುಚ್ಚಿಹಾಕಲು ಆದೇಶ ನೀಡಿದನು, ಆದರೆ ಸಾಕ್ಷಿಗಳು ಮ್ಯಾಟಿಯೊಟಿಯ ದೇಹವನ್ನು ಸಾಗಿಸಲು ಉಪಯೋಗಿಸಲಾದ ಕಾರು ಮ್ಯಾಟಿಯೊಟಿಯ ಮನೆಯ ಮುಂದೆ ನಿಂತಿರುವುದನ್ನು ನೋಡಿದ್ದರು ಮತ್ತು ಇದು ಡುಮಿನಿಯನ್ನು ಕೊಲೆಯೊಂದಿಗೆ ಜೋಡಿಸಿತು. ಮ್ಯಾಟಿಯೊಟಿ ಬಿಕ್ಕಟ್ಟು ಫ್ಯಾಸಿಸ್ಟ್ ಹಿಂಸಾಚಾರದ ವಿರುದ್ಧ ದನಿಯೆತ್ತಿದ ವಿಮರ್ಶಕನೊಬ್ಬನ ಕೊಲೆಯ ವಿರುದ್ಧವಾಗಿ ನ್ಯಾಯ ಒದಗಿಸಲು ದನಿಗಳು ಏಳುವಂತೆ ಮಾಡಿತು. ಸರ್ಕಾರವು ಕೆಲದಿನಗಳವರೆಗೆ ಸ್ತಂಭನಕ್ಕೊಳಗಾಗಿ ನಿಷ್ಕ್ರಿಯವಾಗಿತ್ತು, ಹಾಗೂ ಮುಸೊಲಿನಿ ನಂತರದಲ್ಲಿ ಕೆಲವು ದೃಢಕಲ್ಪವುಳ್ಳ ವ್ಯಕ್ತಿಗಳು ಈ ಸಮಯದಲ್ಲಿ ಸಾರ್ವಜನಿಕ ಅಭಿಪ್ರಾಯಕ್ಕೆ ಎಚ್ಚರ ನೀಡಿ [[ವಿಪ್ಲವ]]ವೊಂದನ್ನು ಆರಂಭಿಸಿ ಫ್ಯಾಸಿಸಮ್ ಅನ್ನು ಮುರುಟಿಬಿಡಬಹುದಾಗಿತ್ತು ಎಂದು ಒಪ್ಪಿಕೊಂಡನು. ಡುಮಿನಿಯನ್ನು ಎರಡು ವರ್ಷಗಳ ಕಾಲ ಸೆರೆಯಲ್ಲಿಡಲಾಯಿತು. ಬಿಡುಗಡೆಯಾದ ನಂತರ ಆತನು ಇತರರಿಗೆ ಇದಕ್ಕೆ ಮುಸೊಲಿನಿ ಹೊಣೆಗಾರನೆಂದು ಹೇಳಿದನು ಮತ್ತು ಇದರಿಂದಾಗಿ ಆತ ಅನ್ನೂ ಹೆಚ್ಚುಕಾಲ ಸೆರೆವಾಸ ಅನುಭವಿಸುವಂತಾಯಿತು. ಮುಂದಿನ 15 ವರ್ಷಗಳವರೆಗೆ ಡುಮಿನಿಯು ಮುಸೊಲಿನಿ, ಫ್ಯಾಸಿಸ್ಟ್ ಪಕ್ಷ ಮತ್ತು ಇತರ ಮೂಲಗಳಿಂದ ನಿಯಮಿತವಾಗಿ ಹಣ ಸ್ವೀಕರಿಸಿದನು.
[[File:Benito Mussolini Face.jpg|thumb|upright|ತರುಣ ಮುಸೊಲಿನಿ, ಅಧಿಕಾರದ ಮೊದಮೊದಲ ದಿನಗಳಲ್ಲಿ]]
 
ವಿರುದ್ಧ ಪಕ್ಷಗಳ ಪ್ರತಿಕ್ರಿಯೆ ದುರ್ಬಲವಾಗಿತ್ತು ಅಥವಾ ಅವು ಸಾಧಾರಣವಾಗಿ ಪ್ರತಿಕ್ರಿಯೆಯನ್ನೆ ನೀಡುತ್ತಿರಲಿಲ್ಲ. ವಿಕ್ಟರ್ ಎಮ್ಯಾನುಯೆಲ್ ಮೇಲೆ ಮುಸೊಲಿನಿಯನ್ನು ವಜಾಮಾಡಲು ಒತ್ತಡ ಹೇರುವ ಆಶೆಯಿಂದ ಹಲವಾರು ಸಮಾಜವಾದಿಗಳು, [[ಲಿಬರಲ್‌ಗಳು]] ಮತ್ತು [[ಮಾಡರೇಟ್‌]]ಗಳು [[ಅವೆಂಟೈನ್ ವಿಯೋಜನೆ]]ಯ ಮೂಲಕ ಸಂಸತ್ತನ್ನು ಬಹಿಷ್ಕರಿಸಿದರು. [[ಆಂತೋನಿಯೋ ಗ್ರಾಮ್‌ಶಿ]]ಯಂತಹ ಕಮ್ಯುನಿಸ್ಟರು, [[ಪಿಯೆತ್ರೋ ನೆನ್ನಿ]]ಯಂತಹ ಸಮಾಜವಾದಿಗಳು ಹಾಗೂ [[ಪಿಯೆರೋ ಗೊಬೆಟ್ಟಿ]] ಮತ್ತು [[ಜಿಯೋವಾನ್ನಿ ಅಮೆಂದೊಲಾ]]ರಂತಹ ಲಿಬರಲ್‌ಗಳು ನೇತಾರರಾಗಿದ್ದಾಗ್ಯೂ, ಒಂದು ಸಾಮೂಹಿಕವಾದ [[ಫ್ಯಾಸಿಸ್ಟ್ ವಿರೋಧಿ]] ಆಂದೋಲನವು ಹೊರಹೊಮ್ಮಲು ಸಾಧ್ಯವಾಗಲಿಲ್ಲ. ಫ್ಯಾಸಿಸ್ಟ್ ಸ್ಕ್ವಾಡ್ರಿಸ್ಟಿಯ ಹಿಂಸಾಚಾರಕ್ಕೆ ಭಯಪಟ್ಟುಕೊಂಡು ಮಹಾರಾಜನೂ ಕೂಡ ಮುಸೊಲಿನಿಯನ್ನು ಅಧಿಕಾರದಲ್ಲಿ ಮುಂದುವರೆಸಿದನು. ಸಂಸತ್ತನ್ನು ಇತರ ಪಕ್ಷಗಳು ಬಹಿಷ್ಕರಿಸಿದ್ದರಿಮ್ದ ಮುಸೊಲಿನಿ ಯಾವುದೇ ಕಾನೂನನ್ನಾದರೂ ವಿರೋಧವಿಲ್ಲದೆ ಜಾರಿಗೊಳಿಸುವುದು ಸಾಧ್ಯವಾಯಿತು. ಸ್ಕ್ವಾಡ್ರಿಸ್ಟಿಯ ರಾಜಕೀಯ ಹಿಂಸಾಚಾರವು ಫಲ ನೀಡಿತು ಮತ್ತು ಮ್ಯಾಟಿಯೊಟಿಯ ಕೊಲೆಯ ಬಗ್ಗೆ ಯಾವುದೇ ಜನಜನಿತವಾದ ಪ್ರದರ್ಶನ ನಡೆಯಲಿಲ್ಲ.
 
ಈ ಸಂದಿಗ್ಧ ಸಮಯದಲ್ಲಿ ಕೆಲವು ವಾರಗಳವರೆಗೆ ಮುಸೊಲಿನಿ ಪಕ್ಷದೊಳಡೆಯಿಂದ ಸಂಶಯ ಮತ್ತು ವೈಮನಸ್ಯವನ್ನು ಎದುರಿಸಬೇಕಾಯಿತು.
 
31 ಡಿಸೆಂಬರ್r 1924ರಂದು ಮುಸೊಲಿನಿಯನ್ನು ಭೇಟಿಮಾಡಿದ [[MVSN]] ನಿಯೋಗಿಗಳು ಆತನಿಗೆ ಕೊನೆಯ ಎಚ್ಚರಿಕೆಯೊಂದನ್ನು ನೀಡಿದರು - ವಿರೋಧವನ್ನು ಬಗ್ಗುಬಡಿಯಬೇಕು ಇಲ್ಲವೇ ತಾವು ಆ ಕೆಲಸವನ್ನು ಮುಸೊಲಿನಿಯಿಲ್ಲದೆಯೆ ಮಾಡಬೇಕಾಗುವುದು. ತನ್ನವರೇ ಆದ ತೀವ್ರವಾದಿಗಳಿಂದ ಉಂಟಾಗಬಹುದಾದ ಬಂಡಾಯದ ಭಯದಿಂದ ಮುಸೊಲಿನಿಯು ಗಣತಂತ್ರದ ಎಲ್ಲ ತೋರಿಕೆಗಳನ್ನು ತ್ಯಜಿಸಲು ನಿರ್ಧರಿಸಿದನು.<ref name="Paxton">{{cite book |title=The Anatomy of Fascism |last=Paxton |first=Robert |authorlink=Robert Paxton |coauthors= |year=2004 |publisher=[[Alfred A. Knopf]] |location=New York City |isbn=1-4000-4094-9}}</ref> 3 ಜನವರಿ 1925ರಂದು ಮುಸೊಲಿನಿಯು ಚೇಂಬರ್‌ನೆದುರಿಗೆ ಒಂದು ಬಿರುಸಾದ ಭಾಷಣವನ್ನು ಮಾಡುತ್ತ ಅದರಲ್ಲಿ ಸ್ಕ್ವಾಡ್ರಿಸ್ಟಿ ಹಿಂಸಾಚಾರಕ್ಕೆ ಜವಾಬ್ದಾರಿ ವಹಿಸಿಕೊಂಡನು (ಆದರೆ ಆತ ಮ್ಯಾಟಿಯೊಟಿಯ ಕೊಲೆಯ ಬಗ್ಗೆ ಏನನ್ನೂ ಹೇಳಲಿಲ್ಲ). ಜತೆಗೇ ಆತನು ಭಿನ್ನಾಭಿಪ್ರಾಯಗಳನ್ನು ಬಗ್ಗುಬಡಿಯುವುದಾಗಿ ವಾಗ್ದಾನ ಮಾಡಿದನು. ಆತನ ಭಾಷಣಕ್ಕೆ ಮೊದಲು MVSN ದಳಗಳು ವಿರೋಧಪಕ್ಷದವರ ಮೇಲೆ ದೈಹಿಕ ಹಲ್ಲೆಯನ್ನು ಮಾಡಿ ವಿರೋಧಪಕ್ಷಗಳ ಪತ್ರಿಕೆಗಳು ಈ ಸುದ್ದಿಯನ್ನು ಪ್ರಕಟಿಸುವುದನ್ನು ತಡೆದರು. ಮುಸೊಲಿನಿ ಭವಿಷ್ಯ ನುಡಿದಂತೆಯೆ ಆಯಿತು ಮತ್ತು ಸಾರ್ವಜನಿಕ ಅಭಿಮತಕ್ಕೆ ಆತನು ಸ್ಥಿರವಾಗಿ ನಿಯಂತ್ರಣವನ್ನು ತೆಗೆದುಕೊಂಡಿರುವನೆಂಬುದು ಅರಿವಾಗುತ್ತಿದ್ದಂತೆಯೆ "ತಟಸ್ಥ ನೀತಿಯವರು", ಮೌನವಾಗಿರುವ ಬಹುಸಂಖ್ಯಾತರು ಮತ್ತು "ಜಾಗದ ಹವಣಿಕೆಯಲ್ಲಿರುವವರು" ಎಲ್ಲರೂ ಆತನ ಬೆನ್ನಹಿಂದಿರುವರೆಂದು ಆತ ತಿಳಿಸಿದಂತೆಯೆ ನಡೆಯಿತು. ಇದನ್ನು ಮುಸೊಲಿನಿಯ ಸರ್ವಾಧಿಕಾರಿತ್ವದ ಆರಂಭವೆಂದು ಪರಿಗಣಿಸಲಾಗುತ್ತದೆ.
 
ಒಂದು ಸುಸಂಬದ್ಧವಾದ ಕಾರ್ಯಕ್ರಮದ ರೂಪರೇಖೆಗಳನ್ನು ನೀಡುವಲ್ಲಿ ವಿಫಲವಾದ ಫ್ಯಾಸಿಸಮ್ [[ಸರ್ವಾಧಿಕಾರಿಶಾಹಿ ಪದ್ಧತಿ]], [[ರಾಷ್ಟ್ರೀಯತಾವಾದ]], [[ಕಮ್ಯುನಿಸ್ಟ್-ವಿರೋಧ]], [[ಬಂಡವಾಳಶಾಹೀ ವಿರೋಧ]] ಮತ್ತು ಉದಾರವಾದಿತ್ವ ವಿರೋಧಗಳನ್ನು ಒಂದುಗೂಡಿಸಿಕೊಂಡ ಒಂದು ಹೊಸ ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಯ ರಾಜ್ಯವಾಗಿ ಹೊರಹೊಮ್ಮಿತು ಮತ್ತು ಇದು ಎಲ್ಲಾ ವರ್ಗಗಳನ್ನು ಒಂದು [[ಕಾರ್ಪೊರೇಟಿಸ್ಟ್]] ವ್ಯವಸ್ಥೆಯಡಿ ಒಗ್ಗೂಡಿಸಲು ವಿನ್ಯಾಸಗೊಳಿಸಿದ್ದಾಗಿತ್ತು ("ಮೂರನೇ ಹಾದಿ"). ಈ ನೂತನ ವ್ಯವಸ್ಥೆಯಲ್ಲಿ ರಾಜ್ಯವು ಅದರ ಪ್ರಮುಖ ಉದ್ದಿಮೆಗಳ ವ್ಯವಸ್ಥೆಯನ್ನು ತನ್ನ ವಶಕ್ಕೆ ತೆಗೆದುಕೊಳ್ಳುವುದಾಗಿತ್ತು. ರಾಷ್ಟ್ರೀಯತಾವಾದ ಮತ್ತು ರಾಜ್ಯ ಅಧಿಕಾರದ ಪತಾಕೆಗಳಡಿ ಫ್ಯಾಸಿಸಮ್ ಅಮೋಘವಾದ [[ರೋಮನ್ ಹಿನ್ನೆಲೆ]] ಮತ್ತು ನವ್ಯವಾದ [[ಉಟೋಪಿಯಾ]]ಗಳೆರಡನ್ನೂ ಸಮನ್ವಯಗೊಳಿಸಿದಂತೆ ಕಂಡುಬರುತ್ತದೆ.
"https://kn.wikipedia.org/wiki/ಬೆನಿಟೋ_ಮುಸೊಲಿನಿ" ಇಂದ ಪಡೆಯಲ್ಪಟ್ಟಿದೆ