==ಚಿಂತಾಮಣಿಯಲ್ಲಿ ಸಿಗುವ ಜೇಡಿಮಣ್ಣಿಗೆ ಬಹಳ ಬೇಡಿಕೆಯಿದೆ==
ಚಿಂತಾಮಣಿಯಲ್ಲಿ ದೊರೆಯುವ ಜೇಡಿಮಣು ಪಿಂಗಾಣಿ ಉಪಕರಣಗಳಿಗೆ ಹೇಳಿಮಾಡಿದ ಕಚ್ಚಾವಸ್ತು. ಕನ್ನಂಪಲ್ಲಿ ಕೆರೆಯಿಂದ ನಗರಕ್ಕೆ ನೀರು ಸರಬರಾಜಾಗುತದೆ. ಚಿಂತಾಮಣಿ ಚಿನ್ನ-ಬೆಳ್ಳಿ ಕಾರಿಗಾರಿ ಕೆಲಸಕ್ಕೆ ಹೆಸರುವಾಸಿಯಾಗಿದೆ. ನಗರದ ಹೊರವಲಯದಲ್ಲಿ ’ಬೂರಗಮಾಕಲಹಳ್ಳಿ’ ಯಲ್ಲಿ ’ದೊರಶೆಟ್ಟಿ ಎಕ್ಕೇರಿ ಆಂಜನೇಯಸ್ವಾಮಿ ದೇವಾಲಯ' ವಿದೆದೇವಾಲಯವಿದೆ. ನಗರದ ಹತ್ತಿರವಿರುವ ಅಂಜನಾದ್ರಿ ಬೆಟ್ಟದ ಮೇಲೆ ’ವರದಾಂಜನೇಯಸ್ವಾಮಿ ಗುಡಿ' ಯಿದೆ. ನಗರದೊಳಗೆ, ರಾಘವೇಂದ್ರ, ಹರಿಹರೇಶ್ವರ, ನಗರೇಶ್ವರ, ನಾಗನಾಥೇಶ್ವರ, ಸಹನೇಶ್ವರ, ಕನ್ನಿಕಾಪರಮೇಶ್ವರಿ, ಗಣಪತಿ, ಕಾಳಿಕಾಂಬ ದೇವಸ್ಥಾನಗಳಿವೆ. ’ಆಝಾದ್ ಚೌಕ' ದ ಹರಿಹರೇಶ್ವದ ದೇವಾಲಯದ ವಿಶಾಲ ಪ್ರಾಕಾರವನ್ನು ಹೊಂದಿದೆ. ಆಝಾದ್ ಚೌಕದಲ್ಲಿ ವಾರ್ಷಿಕ ಒಂದು ತಿಂಗಳುತಿಂಗಳ ಕಾಲ ನಡೆಯುವ ಸಾರ್ವಜನಿಕ-ಗಣೇಶೋತ್ಸವ, ಸುತ್ತಮುತ್ತಲ ಜಿಲ್ಲೆಯಲ್ಲೇ ಪ್ರಸಿದ್ಧವಾಗಿದೆ.