ಚಿಂತಾಮಣಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೯ ನೇ ಸಾಲು:
 
==ಕೈವಾರ==
ಮಹಾಭಾರತದ ಕಾಲದಲ್ಲಿ ಏಕಚಕ್ರಪುರವೆಂದು ಕರೆಯಲಾಗುತ್ತಿದ್ದ ಕೈವಾರ, ಅರಗಿನ ಮನೆಯಿಂದ ತಪ್ಪಿಸಿಕೊಂಡು ಪಾಂಡವರು ಸ್ವಲ್ಪಕಾಲ ಇಲ್ಲಿ ತಂಗಿದ್ದರೆಂದು ಹೇಳಲಾಗಿದೆ. ಈ ಗ್ರಾಮದ ಹತ್ತಿರವಿರುವ 'ಚಿದಂಬಗಿರಿ ಬೆಟ್ಟ' ದ ಮೇಲೆ ವಾಸವಾಗಿದ್ದ ಬಕಾಸುರನನ್ನು ಭೀಮಸೇನನು ಕೊಂದು, ಅವನ ಶವವನ್ನು ಬೆಟ್ಟದ ಗುಹೆಯೊಂದರಲ್ಲಿ ಮುಚ್ಚಿಟ್ಟಿದ್ದನೆಂಬ ಪ್ರತೀತಿಯಿದೆ. ಈ ಮೇಲೆ ಒಸರುವ ಮಣ್ಣಿನ ರಾಡಿಯನ್ನು ಬಕಾಸುರನ ಕೀವು-ರಕ್ತವೆಂಉ ಸ್ಥಳೀಯ ಜನ ಭಾವಿಸುತ್ತಾರೆ. ಕೈವಾರ ಕ್ಷೇತ್ರದಲ್ಲಿ ಅಮರ ನಾರಾಯಣ, ಧರ್ಮರಾಯ, ಭೀಮೇಶ್ವರ,ಅರ್ಜುನೇಶ್ವರ, ನಕುಲೇಶ್ವರ, ಸಹದೇವೇಶ್ವರ ದೆವಾಲಯಗಳಿವೆ. ಕೈವಾರದ ನಾರಾಯಣೇಶ್ವರ ದೇವಾಲಯ ಈಗಿನ ಪ್ರಮುಖ ಆಕರ್ಷಣೆಯ ಕೇಂದ್ರ. ವಿಜಯನಗರ ಕಾಲದ ಹಲವಾರು ದೇವಾಲಯಗಳು ಕೈವಾರದ ಸುತ್ತಮುತ್ತ, ಇವೆ. ’ಕಾಲಜ್ಞಾನ ಬರೆದ,ಯೋಗಿನಾರೇಯಣ, ತೆಲುಗು ಕನ್ನಡ ಕವಿಸಂತರು, ಈಗ್ರಾಮದಲಿ ನೆಲೆಸಿದ್ದಾರೆಗ್ರಾಮದಲ್ಲಿ ನೆಲೆಸಿದ್ದರು.
 
==’[[ಮಹಾ ಕೈಲಾಸಗಿರಿ]]’==
ಚಿಂತಾಮಣಿಯಿಂದ ೬ ಕಿ. ಮೀ ದೂರದಲ್ಲಿರುವ ಒಂದು ಗುಹಾಂತರ್ದೇವಾಲಯಗಳಲ್ಲೊಂದು. ’ಅಂಬಾಜಿದುರ್ಗ ಪರ್ವತ ಶ್ರೇಣಿ’ ಯ ಒಂದು ಬೆಟ್ಟವನ್ನು ಕೊರೆದು, ’ಕೈಲಾಸಗಿರಿ ಗುಹಾಲಯ ದೇವಸ್ಥಾನ’ ವನ್ನು ನಿರ್ಮಿಸಲಾಗುತ್ತಿದೆ. ಇಲ್ಲಿ ’ಚತುರ್ಮುಖ ಶಿವ’, ’ಪಾರ್ವತಿ’ ಮತ್ತು ’ಗಣೇಶ’ ನ ದೇವಸ್ಥಾನಗಳಿವೆ. ಬೆಟ್ಟದಲ್ಲಿಯೇ ಬೃಹತ್ ಗಾತ್ರದ ’ಜಟಾಧಾರಿ ಶಿವನ ವಿಗ್ರಹ’ ಕೆತ್ತುವ ಕಾರ್ಯ, ಮಾಜೀ ಸಚಿವ, ’ಚೌಡರೆಡ್ಡಿ ಕುಟುಂಬ’ ದವರ ಮೇಲ್ವಿಚಾರಣೆಯೊಡನೆ, ಭರದಿಂದ ಸಾಗಿದೆ. ಧಾರ್ಮಿಕ ಹಾಗೂ ಸಾಹಸ ಪ್ರವೃತ್ತಿಯ ಜನರಿಗೆ ಕೈಲಾಸಗಿರಿ ಒಂದು ಹೇಳಿಮಾಡಿಸಿದ ತಾಣ.
"https://kn.wikipedia.org/wiki/ಚಿಂತಾಮಣಿ" ಇಂದ ಪಡೆಯಲ್ಪಟ್ಟಿದೆ