ಸಿ. ರಾಜಗೋಪಾಲಚಾರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
links added
೨೫ ನೇ ಸಾಲು:
 
ರಾಜಾಜಿ ತನ್ನ ಸ್ವಂತ ಲೇಖನಗಳೊಂದಿಗೇ , ಅನೇಕ ಮುಖ್ಯ ಭಾರತೀಯ ಹಾಗೂ ಹಿಂದೂ ಧಾರ್ಮಿಕ ಕೃತಿಗಳ ಆಂಗ್ಲ ಭಾಷೆಯ ಭಾಷಾಂತರವನ್ನೂ ಮಾಡಿದ್ದಾರೆ. [[ರಾಮಾಯಣ]], [[ಮಹಾಭಾರತ]], [[ಭಗವದ್ಗೀತೆ]], [[ಉಪನಿಷತ್ತುಗಳು]] ಹಾಗೂ [[ಶಂಕರಾಚಾರ್ಯ]]ರ ಭಜ ಗೋವಿಂದಂ ಇವುಗಳ ಭಾಷಾಂತರಗಳು ಇಂದಿಗೂ ಬಳಕೆಯಲ್ಲಿವೆ. ಅವರು ರಾಮಾಯಣವನ್ನು ತಮಿಳಿಗೂ ತರ್ಜುಮೆ ಮಾಡಿದರು.
[[ಕರ್ನಾಟಕ ಸಂಗೀತ]]ದ ದೊಡ್ಡ ಪ್ರತಿಭೆ, [[ಎಂ.ಎಮ್ ಎಸ್. ಸುಬ್ಬುಲಕ್ಷ್ಮಿ]] ರಾಜಾಜಿ ರವರ ಕೆಲವು ಕವಿತೆಗಳನ್ನು ಸಂಗೀತಕ್ಕೆ ಅಳವಡಿಸಿ ಅನೇಕ ಮುಖ್ಯ ಕಾರ್ಯಕ್ರಮಗಳಲ್ಲಿ, ಅವುಗಳಲ್ಲಿ ಒಂದು ಸಂಯುಕ್ತ ರಾಷ್ಡ್ರ ಸಂಘದಲ್ಲಿ , ಹಾಡಿದ್ದಾರೆ. ಕುರೈ ಒನ್ರುಮ್ ಇಲ್ಲೈ (ಭಗವಂತಾ, ನನಗಿನ್ನೇನೂ ಅಪೇಕ್ಷೆ ಉಳಿದಿಲ್ಲ....) ಎಂಬ ಅರೆ-ಶಾಸ್ತ್ರೀಯ ಮಟ್ಟಿನಲ್ಲಿ ರಾಜಾಜಿ ಬರೆದ ಹಾಡು ಬಹಳ ಜನಪ್ರಿಯವಾಗಿದೆ. ಇದರ ಒಂದು ಹೃದಯಸ್ಪರ್ಶಿ ಆವೃತ್ತಿಯನ್ನು [[ಎಂ.ಎಮ್ ಎಸ್. ಸುಬ್ಬುಲಕ್ಷ್ಮಿ]] ಹಾಡಿದ್ದಾರೆ. ರಾಜಾಜಿ ಬರೆದ "Here under this Uniting Roof" ಸ್ತುತಿಯನ್ನು 1966ರಲ್ಲಿ [[ಎಂ.ಎಮ್ ಎಸ್. ಸುಬ್ಬುಲಕ್ಷ್ಮಿ]] ಸಂಯುಕ್ತ ರಾಷ್ಡ್ರ ಸಂಘದಲ್ಲಿ ಹಾಡಿದ್ದರು.
ರಾಜಾಜಿಯವರನ್ನು ಬಹಳಷ್ಟು ಜನ ಧಾರ್ಮಿಕ ಹಾಗೂ ಆಧ್ಯಾತ್ಮಿಕ ರಂಗಗಳಲ್ಲಿ ಆಳವಾದ, ಸ್ವಂತಿಕೆಯ ಚಿಂತಕರೆಂದು ಪರಿಗಣಿಸುತ್ತಾರೆ. ರಾಜಾಜಿಯವರ ವಿದ್ಯಾರ್ಥಿ ಜೀವನದಲ್ಲಿ ನಡೆಯಿತೆನ್ನಲಾದ ಒಂದು ಘಟನೆ ಜನಪ್ರಿಯವಾಗಿದೆ. ಒಮ್ಮೆ [[ಸ್ವಾಮಿ ವಿವೇಕಾನಂದ]]ರು ಅವರ ವಿದ್ಯಾರ್ಥಿ ನಿಲಯಕ್ಕೆ ಬಂದಿದ್ದರಂತೆ. ಅಲ್ಲಿ ಗೋಡೆಯ ಮೇಲಿನ ವಿಷ್ಣುವಿನ ಚಿತ್ರ ನೋಡಿ , ವಿದ್ಯಾರ್ಥಿಗಳಿಗೆ ವಿಷ್ಣುವಿನ ಎಲ್ಲಾ ಚಿತ್ರಗಳಲ್ಲೂ ಮೈ ಬಣ್ಣ ನೀಲಿ ಯಾಕಿರುತ್ತದೆ ಎಂದು ಕೇಳಿದರಂತೆ. ವಿಷ್ಣು ನೀಲಿ ಆಕಾಶದಂತೆ, ನೀಲ ಸಮುದ್ರದಂತೆ ಅನಂತ. ಆದ್ದರಿಂದಲೇ ಅವನ ಮೈ ಬಣ್ಣ ನೀಲಿ ಎಂದು ರಾಜಾಜಿ ಉತ್ತರ ಕೊಟ್ಟರಂತೆ. ವಿವೇಕಾನಂದರು ಈ ಉತ್ತರ ಕೇಳಿ ಬಹಳ ಸಂತೋಷ ಪಟ್ಟರಂತೆ.
"https://kn.wikipedia.org/wiki/ಸಿ._ರಾಜಗೋಪಾಲಚಾರಿ" ಇಂದ ಪಡೆಯಲ್ಪಟ್ಟಿದೆ