ಗುರುತ್ವ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩ ನೇ ಸಾಲು:
'''ಗುರುತ್ವ''' - ಎಲ್ಲಾ ವಸ್ತುಗಳೂ ಒಂದನ್ನೊಂದು ಆಕರ್ಷಿಸಲು ಕಾರಣವಾದ [[ಬಲ]]. ಆಧುನಿಕ [[ಭೌತಶಾಸ್ತ್ರ]]ವು [[:en:general theory of relativity|ಸಾಮಾನ್ಯ ಸಾಪೇಕ್ಷತಾ ವಾದ]]ದಿಂದ ಗುರುತ್ವವನ್ನು ವಿವರಿಸುತ್ತಾದರೂ, ಹೆಚ್ಚು ಸರಳವಾದ [[:en:Newton's law of universal gravitation|ನ್ಯೂಟನ್ನನ ಗುರುತ್ವ ನಿಯಮ]]ವು ಹಲವು ಸನ್ನಿವೇಶಗಳಲ್ಲಿ ಅತ್ಯುತ್ತಮ ಅಂದಾಜು ಪ್ರಮಾಣಗಳನ್ನು ಸೂಚಿಸುತ್ತದೆ. [[ಭೂಮಿ]], [[ಸೂರ್ಯ]] ಮತ್ತಿತರ ಆಕಾಶಕಾಯಗಳ ಅಸ್ತಿತ್ವಕ್ಕೆ ಗುರುತ್ವವೇ ಕಾರಣ. ಗುರುತ್ವವಿಲ್ಲದೆ ಪದಾರ್ಥವು ಈ ಕಾಯಗಳಾಗಿ ಒಂದುಗೂಡುತ್ತಿರಲಿಲ್ಲ ಮತ್ತು ನಮಗೆ ಈಗ ತಿಳಿದಿರುವಂತಹ ಜೀವವು ಅಸ್ತಿತ್ವದಲ್ಲೇ ಇರುತ್ತಿರಲಿಲ್ಲ. [[ಗ್ರಹ]]ಗಳು ಸೂರ್ಯನ ಸುತ್ತ ಪರಿಭ್ರಮಿಸುವುದಕ್ಕೆ, [[ಚಂದ್ರ]]ನು ಭೂಮಿಯ ಸುತ್ತ ಪರಿಭ್ರಮಿಸುವುದಕ್ಕೆ, ಮತ್ತು ನಮಗೆ ಕಾಣುವ ಇನ್ನಿತರ ವಿವಿಧ ನೈಸರ್ಗಿಕ ಪ್ರಕ್ರಿಯಗಳಿಗೂ ಗುರುತ್ವವು ಕಾರಣ.
 
== ಇತಿಹಾಸ==
ಗುರುತ್ವಾಕರ್ಷಣ ಸಿದ್ಧಾಂತದ ಬೆಳವಣಿಗೆ [[ಗೆಲಿಲಿಯೊ ಗೆಲಿಲಿ]]ಯ ಪ್ರಯೋಗಗಳಿಂದ ಬಲ ಪಡೆದುಕೊಂಡಿತು. ಗೆಲಿಲಿಯೊ ಇಟಲಿಯ [[ಪೀಸಾ]] ಗೋಪುರದಲ್ಲಿ ನಡೆಸಿದ ಪ್ರಯೋಗದಲ್ಲಿ ಗುರತ್ವ ಬಲವು ಬೇರೆ ಬೇರೆ ಬಾರವಿರುವ ವಸ್ತುಗಳಲ್ಲಿ ಒಂದೇ ಸಮನಾದ [[ವೇಗೋತ್ಕರ್ಷ]]ವನ್ನು ಉಂಟುಮಾಡುತ್ತದೆ ಎಂಬುದು ತಿಳಿಯಿತು. ಉದಹರಣೆಗೆ ಒಂದು ಇರುವೆ ಹಾಗೂ ಒಂದು ಆನೆಯನ್ನು ಒಂದೇ ಕ್ಷಣದಲ್ಲಿ ಹಾಗೂ ಒಂದೇ ಎತ್ತರದಿಂದ ಬಿಟ್ಟದ್ದೆ ಆದರೆ ಎರಡು ವಸ್ತುಗಳು ಕೂಡಾ(ಇರುವೆ ಮತ್ತು ಆನೆ) ಒಟ್ಟಿಗೆ ನೆಲ ಸ್ಪರ್ಷಿಸುತ್ತವೆ. ಆದರೆ ಈ ಹೇಳಿಕೆ ನಿಜವಾಗವುದು ನಿರ್ವಾತ ಪ್ರದೇಶದಲ್ಲಿ ಮಾತ್ರ. ಭೂ ವಾತಾವರಣದಲ್ಲಿ ಇರುವ ಗಾಳಿಯ ಒತ್ತಡ ಒಂದು ಇರುವೆ ಹಾಗೂ ಒಂದು ಆನೆ ಒಂದೇ ಸಮಯದಲ್ಲಿ ನೆಲ ಸ್ಪರ್ಷಿಸುವುದನ್ನು ತಡೆಯುತ್ತದೆ ಎಂದು ಗೆಲಿಲಿಯೊನ ಪ್ರಯೋಗಳಿಂದ ತಿಳಿದು ಬಂತು.
 
{{ಚುಟುಕು}}
 
<!--interwiki-->
 
"https://kn.wikipedia.org/wiki/ಗುರುತ್ವ" ಇಂದ ಪಡೆಯಲ್ಪಟ್ಟಿದೆ