ತೆಲುಗು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೨೭ ನೇ ಸಾಲು:
 
==ವ್ಯಾಕರಣ==
ತಮಿಳು ಮತ್ತು ಇತರ ದ್ರಾವಿಡ ಭಾಷೆಗಳಲ್ಲಿರುವಂತೆ ತೆಲುಗು ಸಹ ಬಹುವಚನ ದ್ವಿಲಿಂಗ ಪ್ರತ್ಯಯ [ರ(ಉ)] ವನ್ನು ಉಳಿಸಿಕೊಂಡಿದೆ. ಉದಾರಣೆಗೆ, ವಾರು (ಅವರು), ವೀರು (ಇವರು), ಎವರು (ಯಾರು?), ಮೀರು (ನೀವು), ಆದರೆ ಸರ್ವತ್ರ ಹರಡಿರುವ ಲು ವಿನ ಪ್ರಭಾವ ಎಷ್ಟೆಂದರೆ, ಅದಿಲ್ಲದಿದ್ದರೆ ಬಹುವಚನದ ಭಾವ ಸಮಗ್ರವಾಗಿ ಮನಸ್ಸಿಗೆ ತಟ್ಟುವುದಿಲ್ಲ. ಆದುದರಿಂದ ಕಾಲಕ್ರಮದಲ್ಲಿ ವಾರಲು, ವೀರಲು, ಮೀರಲು, ಮುಂತಾದವುಗಳು ಬೆಳೆದವು. ಇವು ಇಂಗ್ಲೀಷಿನಲ್ಲಿ ಚಿಲ್ರನ್ಸ್, ಮೆನ್ಸ್, ಡೇಟಾಸ್, ಎಂಬ ಹಾಗಿವೆ. ಕೆಲವು ಸಂದರ್ಭಗಳಲ್ಲಿ ದ್ವಿಲಿಂಗೀ ಬಹುವಚನ ಪ್ರತ್ಯಯದ ಸ್ಥಾನವನ್ನು ಸಹ ಲು ಆಕ್ರಮಿಸುತ್ತದೆ. ಉದಾಹರಣೆಗೆ, ವಾಂಡ್ಲು; ವಾಳ್ಳು (ಅವರು); ಕೂತುಂಡ್ಳು, ಕೂತೂಳ್ಳುಕೂತುಳ್ಳು, (ಹೆಣ್ಣು ಮಕ್ಕಳು) ಇತ್ಯಾದಿ. ಅನೇಕಾಕ್ಷರ ರೂಪಗಳನ್ನು ಮೊಟಕುಗೊಳಿಸಿದ ರೂಪಗಳು ನನ್ನಯ್ಯನನನ್ನಯನ ಕಾಲದಷ್ಟು ಮುಂಚಿನಿಂದಲೇ ತಲೆದೋರುತ್ತದೆ. ಉದಾಹರಣೆಗೆ ಪೂಜಿಂಚಿತೇ? ಎಂಬ ನನ್ನಯ್ಯನ ಪ್ರಯೋಗ ಪೂಜಿಂಚಿತಿವೇ? (ಪೂಜಿಸಿದೆಯಾ) ಎಂಬುದರಿಂದ ಹುಟ್ಟಿದೆ. ಪೂಜಿಂಚಿತಿವೇನಿನ್ (ಪೂಜಿಸಿದ್ದೇ ಆದರೆ) ಎಂಬ ದೀರ್ಘರೂಪ ಕ್ರಮೇಣ ಪೂಜಿಂಚಿತಿವೇನಿ ಎಂದಾಗಿ, ಬಳಿಕ ವೇನ್-ವೇ; ತೇನ್-ತೇ ಮುಂತಾದ್ದಾಗಿ ಈಗಿನ ಪೂಜಿಸ್ತೇ ಎಂಬ ರೂಪಕ್ಕಿಳಿದಿದೆ. ಪೂಜಿಂಚಿತೇನ್ ಎಂಬುದಕ್ಕಿಂತ ಹಿಂದಿನ ಶಬ್ದರೂಪಗಳಲ್ಲಿ `ವಿ ಎಂಬುದಿದ್ದು ಮಧ್ಯಮ ಪುರುಷದ ಏಕವಚನವನ್ನು ನಿರ್ದೇಶಿಸುತ್ತಿತ್ತು. ಆದರೆ ಆ ತರುವಾಯದ ರೂಪಗಳಲ್ಲಿ ವಿ ಅಳಿದುಹೋಗಿ ಆ ರೂಪ ಎಲ್ಲ ಜನಕ್ಕೂ ಏಕವಚನ ಬಹುವಚನಗಳೆರಡಲ್ಲೂ ಪ್ರಯುಕ್ತವಾಗತೊಡಗಿತು. ಹೀಗೆ ಮಟ್ಟ ಸಮ ಮಾಡುವ ಪ್ರವೃತ್ತಿ ಈ ಮಾತುಗಳಲ್ಲಿ ಕಂಡು ಬರುತ್ತದೆ. ಅಂಟಿವೇನಿನ್ ಎಂಬುದರಿಂದ ಅನ್‍ಟೆ (ನೀನು ಹೇಳಿದರೆ); ಐತಿವೇನಿನ್ ಎಂಬುದರಿಂದ ಐತೆ (ನೀನು ಹೀಗಾಗುವುದಾದರೆ) ಇತ್ಯಾದಿ. ಕವಿಗಳು ಈ ಎಲ್ಲ ರೂಪಗಳನ್ನೂ ಛಂದಸ್ಸಿನ ಸೌಕರ್ಯಕ್ಕಾಗಿ ಉಪಯೋಗಿಸುತ್ತಾರೆ. ಕಾವ್ಯಗಳಲ್ಲೂ ಅವುಗಳನ್ನು ಅನುಸರಿಸಿ ಬರೆದ ವ್ಯಾಕರಣಗಳಲ್ಲೂ ಜನರಾಡುವ ಮಾತಿನಲ್ಲಿ ತೋರಿ ಬರುವತೋರಿಬರುವ ಬದಲಾವಣೆಗಳು ಕಂಡುಬರುವುದಿಲ್ಲ. ಏಕೆಂದರೆ ಬಹು ಹಿಂದಣ ಕವಿಗಳು ಅನಿವಾರ್ಯವಾಗಿ ತಾವಾಡುತ್ತಿದ್ದ ಭಾಷೆಯನ್ನೇ ತಮ್ಮ ಕಾವ್ಯಗಳಲ್ಲಿ ಬಳಸುತ್ತಿದ್ದರೂ ಮುಂದೆ ಬಂದ ಕವಿಗಳು ಹಿಂದಿನ ಕವಿಗಳ ಭಾಷೆಗೆ ತಮ್ಮ ಕಾಲದ ಆಡುಮಾತಿಗಿಂತಲೂ ಹೆಚ್ಚಿನ ಗಮನವನ್ನು ಕೊಡುತ್ತಿದ್ದರು; ವೈಯಾಕರಣರು ಭಾಷೆ ಒಂದೇ ಸಲಕ್ಕೆ ಸ್ಥಿರರೂಪವನ್ನು ಪಡೆದುಬಿಟ್ಟಿರುವಂತೆ ಭಾವಿಸಿ ಪ್ರಾಚೀನ ಕವಿಗಳ ಪ್ರಯೋಗಗಳನ್ನೇ ಅವಲಂಬಿಸಿ ವ್ಯಾಕರಣ ಸೂತ್ರಗಳನ್ನು ರಚಿಸಿದರು. ಆದರೆ ಕವಿಗಳು ತಿಳಿದೋ ತಿಳಿಯದೆಯೋ ವ್ಯಾಕರಣ ಸೂತ್ರಗಳನ್ನು ಮುರಿಯುತ್ತಿದ್ದರು. ಎಷ್ಟು ಪ್ರಾಚೀನವಾದರೆ ಅಷ್ಟು ಶ್ರೇಷ್ಠ ಎಂಬ ಸೂತ್ರವನ್ನು ಸಂಪ್ರದಾಯ ನಿಷ್ಠ ಕವಿಗಳೂ ವೈಯಾಕರಣರೂ ಭಾಷಾಕ್ಷೇತ್ರದಲ್ಲೂ ಎತ್ತಿ ಹಿಡಿದಿದ್ದರು. ಆದರೆ ಕವಿಗಳು ಹಳೆಯ ವ್ಯಾಕರಣಸೂತ್ರಗಳನ್ನು ಬದಿಗೊತ್ತಿ ಜೀವಂತವಾಗಿರುವ ಆಡುಮಾತನ್ನೇ ಬಳಸಲು ಹಿಂಜರಿಯಲಿಲ್ಲ. ಏಕೆಂದರೆ ಅವು ಅವರ ಭಾವಗಳನ್ನು ಪ್ರಕಟಿಸಲು ಹೆಚ್ಚು ಪರಿಣಾಮಕಾರಿಯಾಗಿದ್ದುವಲ್ಲದೆ ಪ್ರಾಚೀನ ಶಬ್ದಗಳಿಗಿಂತಲೂ ಸುಲಭವಾಗಿ ಅರ್ಥವಾಗುತ್ತಿದ್ದವು. ಆದರೆ ಇಂಥ ಕವಿಗಳು ಬಹು ವಿರಳ. ಅವರು ಆಡುಮಾತುಗಳನ್ನು ಎಚ್ಚರದಿಂದಲೂ ಅಂಜಿಕೆಯಿಂದಲೂ ಪ್ರಯೋಗಿಸುತ್ತಿದ್ದರು. ಶಾಸನಗಳು, ಹಾಡುಗಳು, ಶತಕಗಳು ಮತ್ತು ತಮ್ಮ ತತ್ತ್ವಗಳು ಜನಕ್ಕೆ ತಿಳಿದು ಅವು ಅವರಲ್ಲಿ ಹರಡಬೇಕೆಂಬ ಆಸೆಯುಳ್ಳ ಶೈವ ಕವಿಗಳ ದ್ವೀಪದ ಕಾವ್ಯಗಳು ಆಡುಮಾತುಗಳನ್ನು ಅವುಗಳ ರೂಢಿಯ ಅರ್ಥದಲ್ಲೇ ಹೆಚ್ಚಾಗಿ ಬಳಸುತ್ತಿದ್ದರು. 1700-1850 ರಲ್ಲಿ ಬೆಳೆದ ಗದ್ಯ ಪ್ರಕಾರ ಕಥೆ, ಪ್ರಬಂಧ, ವ್ಯಾಖ್ಯಾನ, ಕಾಗದಗಳು ಮುಂತಾದ ಎಲ್ಲ ಪ್ರಕಾರಗಳ ಲೇಖನಗಳಿಗೂ ಒದಗಿ ಬಂತು. ಈ ಗದ್ಯ ಲೇಖನಗಳ ಬಹುಭಾಗವನ್ನು ಪ್ರಚಲಿತ ಭಾಷೆಯಲ್ಲೇ ಬರೆಯಲಾಗುತ್ತಿತ್ತು; ಅದು ತೆಲುಗು ಭಾಷಾ ಚರಿತ್ರೆಯನ್ನು ವ್ಯಾಸಂಗ ಮಾಡಲು ಬಯಸುವವರಿಗೆ ಆ ಭಾಷೆಯ ಬೆಳವಣಿಗೆಗಳನ್ನು ಗುರುತಿಸಲು ಕಾವ್ಯಗಳ ಭಾಷೆಗಿಂತ ಹೆಚ್ಚು ಸಹಕಾರಿಯಾಗಿದೆ. ಈ ಸಂಪ್ರದಾಯವನ್ನು ಸಿ. ಪಿ. ಬ್ರೌನ್ ಪ್ರೋತ್ಸಾಹಿಸಿದ. ತನ್ನ ಇಂಗ್ಲಿಷ್ ಶಬ್ದಕೋಶಗಳಲ್ಲಿ ಆತ ಪದಗಳ ಅರ್ಥವನ್ನು ವಿವರಿಸಲು ಪ್ರಚಲಿತ ಭಾಷೆಯನ್ನೇ ಉಪಯೋಗಿಸಿದ. ಆದರೆ ಕಾವ್ಯ ಭಾಷೆಯಲ್ಲಿಕಾವ್ಯಭಾಷೆಯಲ್ಲಿ ನೀತಿ ಚಂದ್ರಿಕೆ ಎಂಬುದನ್ನು ಬಾಲ ವ್ಯಾಕರಣ ಎಂಬ ವ್ಯಾಕರಣ ಗ್ರಂಥವನ್ನು ಬರೆದ ಪರವಸ್ತು ಚಿನ್ನಯ್ಯಸೂರಿ ಈ ಸಂಪ್ರದಾಯಕ್ಕೆ ತಡೆಹಾಕಿದ. ಆತನ ನೀತಿ ಚಂದ್ರಿಕೆ ಕೃತಕವಾದ ಭಾಷೆಯಲ್ಲಿ ರಚಿತವಾಗಿದೆ. ಬಳಕೆಯಲ್ಲಿಲ್ಲದ ಆಡಂಬರದ ಪದಗಳು, ಅಲಂಕಾರ ನಿಬಿಡದ ಶೈಲಿ, ನಯವಾದ ಬಳಸು ಮಾತಿನ ಸಂಸ್ಕೃತ ಪದಗಳ ಸಮಾಸ ಜಾಲಗಳು- ಇವು ಆ ಭಾಷೆಯ ಲಕ್ಷಣ. ಆತನ ವ್ಯಾಕರಣ ಅಸಮಗ್ರವಾಗಿ ಅಸಂಗತವಾಗಿ ಇದ್ದರೂ ಕಾವ್ಯಗಳ ಭಾಷೆಯನ್ನು ಅವಲಂಬಿಸಿ ರಚಿತವಾಗಿತ್ತು. ಆತನ ಕೃತಿಗಳ ಪರಿಣಾಮವಾಗಿ ತೆಲುಗಿನಲ್ಲಿ ಆರೋಗ್ಯಕರವಾದ ಗದ್ಯದ ಮುನ್ನಡೆ ನಿಂತುಹೋಯಿತು. ಸುಮಾರು ಅರುವತ್ತು ವರ್ಷಗಳವರೆಗೆ ಆತನ ಸಮಕಾಲೀನ ಮತ್ತು ತರುವಾಯ ಬಂದ ತೆಲುಗು ಗದ್ಯ ಲೇಖಕರು ಯಾರೂ ಆತನ ಕೃತಿಗಳ ಮಾದರಿಗೆ ಎದುರು ಮಾತನ್ನೆತ್ತದೆ ಅನುಸರಿಸಿದರು. ಹೀಗೆ ಈತನ ಶೈಲಿಯನ್ನು ಅನುಕರಿಸುವ ಉತ್ಸಾಹದಲ್ಲಿ ಇವರು ಸಾಮಾನ್ಯ ಪದಗಳನ್ನು ಬಿಟ್ಟು ಹಳೆಯ ಶಬ್ದಗಳನ್ನು ಸಂಸ್ಕೃತ ಸಮಾಸಗಳಿಂದ ತುಂಬಿರುವ ಪದಗಳನ್ನೂ ಉಪಯೋಗಿಸತೊಡಗಿದರು. ಚಿನ್ನಯ್ಯಸೂರಿಯ ನೀತಿಚಂದ್ರಿಕೆ ಅಥವಾ ಅಂಥ ಶೈಲಿಯಲ್ಲಿ ಬರೆದ ಇತರ ಗ್ರಂಥಗಳನ್ನು ಶಾಲಾ ಕೊಠಡಿಗಳಲ್ಲಿ ಮಾತ್ರ ಛಾಸರನ ಭಾಷೆಯಲ್ಲಿರುವ ಛಾಸರನ ಪದ್ಯಗಳನ್ನು ಹೇಗೋ ಹಾಗೆ, ಓದಲು ಏರ್ಪಡಿಸಿದ್ದರೆ, ತೆಲುಗು ವಿದ್ಯಾರ್ಥಿಗಳಿಗಾಗಲಿ ತೆಲುಗು ಬರಹಗಾರರಿಗಾಗಲಿ ಯಾವ ಕೆಡುಕೂ ಆಗುತ್ತಿರಲಿಲ್ಲ. ಆದರೆ ಪಂಡಿತರೂ ವಿದ್ಯಾ ಇಲಾಖೆ ಹಾಗೂ ವಿಶ್ವವಿದ್ಯಾನಿಲಯಗಳ ಅಧಿಕಾರಿಗಳೂ ಒಂದು ಹೆಜ್ಜೆ ಮುಂದೆ ಹೋದರು. ಶಾಲೆಗಳಲ್ಲೂ ಆಡುಮಾತನ್ನು ನಿಷೇಧಿಸಿದರು. ಆಡುಮಾತಿನಲ್ಲಿ ತಮ್ಮ ಮನೆಮಾತಿನಲ್ಲಿ ಪ್ರಬಂಧಗಳನ್ನು ಬರೆಯಲು ಮತ್ತು ಪರೀಕ್ಷೆಯ ಪ್ರಶ್ನೆಪತ್ರಿಕೆಗಳಿಗೆ ಉತ್ತರ ಬರೆಯಲು ಅವಕಾಶ ಕೊಡಲಿಲ್ಲ. ಸಾಮಾಜಿಕ ಬದಲಾವಣೆಗಳನ್ನೂ ದಲಿತರ ಉದ್ಧಾರವನ್ನು ಪ್ರತಿಪಾದಿಸುತ್ತಿದ್ದ ವೀರೇಶಲಿಂಗಂ ಪಂತುಲು ಕೂಡ ಮೊದಲು ಚಿನ್ನಯ್ಯಸೂರಿ ಹಾಕಿಕೊಟ್ಟ ಮೇಲು ಪಂಕ್ತಿಯನ್ನೇ ಅನುಸರಿಸಿದರು. ಆದರೆ ಇಂಥ ಮಾದರಿಯ ನಿರುಪಯೋಗಿತೆಯನ್ನು ಬೇಗನೆ ಅರಿತುಕೊಂಡು ವಿದ್ಯಾರ್ಥಿಗಳಿಗೂ ಸಾಮಾನ್ಯ ಓದುಗನಿಗೂ ತಿಳಿಯುವಂತೆ ತನ್ನ ಭಾಷೆಯನ್ನು ಸರಳ ಮಾಡಿಕೊಂಡ. ಜೀವಂತ ಭಾಷೆಯ ಸಾಮರ್ಥ್ಯವನ್ನು ಆತ ಗಮನಕ್ಕೆ ತಂದುಕೊಳ್ಳದಿರಲಿಲ್ಲ; ತನ್ನ ಬರೆಹಗಳು ಸ್ಕೂಲು ಕಾಲೇಜುಗಳಿಗಲ್ಲ ಎಂದುಕೊಂಡು ಆತ ತನ್ನ ಸಾಮಾಜಿಕ ನಾಟಕಗಳಲ್ಲೂ ಪ್ರಹಸನಗಳಲ್ಲೂ ಅದನ್ನು ಬಳಸಿದ. ಆದರೆ ಎರಡು ಅಂಶಗಳು ಆತನ ತಿಳಿವಳಿಕೆಗೆ ಬರಲಿಲ್ಲ; ಒಂದು-ಆಗ ಇದ್ದ ವ್ಯಾಕರಣಗಳು ಕಾವ್ಯದ ಭಾಷೆಗೆ ಮಾತ್ರ ಉಪಯುಕ್ತವಾದುವು ಮತ್ತು ಕಾಲಕಾಲಕ್ಕೆ ಮುಂದಿನ ಕವಿಗಳ ಪ್ರಯೋಗಗಳ ದೃಷ್ಟಿಯಿಂದ ಅವನ್ನು ತಿದ್ದಬೇಕು ಎಂಬಂಶ. ಎರಡು-ಜೀವಂತ ಭಾಷೆಗಳು ಯಾವಾಗಲೂ ಚಲಿಸುತ್ತಲೇ ಇವೆ, ಮುಂಬರಿಯುತ್ತಿವೆ, ಬದಲಾಯಿಸುತ್ತಿವೆ, ಅವನ್ನು ವ್ಯಾಕರಣದಿಂದ ಕಟ್ಟಿ ಹಾಕಲಾಗುವುದಿಲ್ಲ. ವ್ಯಾಕರಣಗಳೆಲ್ಲ ಅವನ್ನು ಹಿಂಬಾಲಿಸಬೇಕು ಎಂಬುದು ಮತ್ತೊಂದಂಶ. ತನ್ನ ಆತ್ಮಚರಿತ್ರೆಯಲ್ಲಿ ಹೇಳಿಕೊಳ್ಳುವಂತೆ ಆಧುನಿಕ ತೆಲುಗು ಚಳವಳಿ ಸಾಧುವೆಂಬುದನ್ನು ವೀರೇಶಲಿಂಗಂ ತುಂಬ ತಡವಾಗಿ ಅರಿತುಕೊಂಡ. ಗಿಡುಗು ರಾಮಮೂರ್ತಿ ಮತ್ತು ಗುರುಜಾಡ ಅಪ್ಪಾರಾವ್ ಎಂಬವರಿಂದ 1910ರಲ್ಲಿ ಪ್ರೇರಿತವಾದ ಈ ಚಳವಳಿ, ಚಿನ್ನಯ್ಯಸೂರಿ ತಡೆ ಹಾಕುವವರೆಗೂ ನಡೆದು ಬಂದಿದ್ದ ಆಡುಮಾತಿನಲ್ಲೇ ತೆಲುಗು ಗದ್ಯವನ್ನು ಬರೆಯಬೇಕೆಂಬ ಪಂಥದವರೊಡನೆ ರಾಮಮೂರ್ತಿ ಹಲವು ವರ್ಷಗಳ ಕಾಲ ಹೋರಾಡಬೇಕಾಯಿತು. 1920ರ ಹೊತ್ತಿಗೆ ಆತ ಜಯಶಾಲಿಯಾದ. ಪತ್ರಿಕಾಕರ್ತರು ಕ್ರಮೇಣ ಜೀವಂತ ಭಾಷೆಯನ್ನೇ ತಮ್ಮ ಸಂಪಾದಕೀಯಗಳಿಗೂ ಇತರ ಲೇಖನಗಳಿಗೂ ಬಳಸತೊಡಗಿದರು. ಸಾವಿರಗಟ್ಟಲೆ ಗ್ರಂಥಗಳು ಜೀವಂತಭಾಷೆಯಲ್ಲೇ 1930-60ರ ಅವಧಿಯಲ್ಲಿ ಪ್ರಕಟವಾಗಿವೆ. ಪದ್ಯದ ಬರವಣಿಗೆಯಲ್ಲಿ ಸಹ, ಆಧುನಿಕ ಕವಿಗಳು ಉಪಯೋಗಿಸುವ ಭಾಷೆಯಲ್ಲಿ ನಿರುಪಯುಕ್ತವಾದ ಹಳೆಯ ಶಬ್ದಗಳಿರುವುದಿಲ್ಲ ಮತ್ತು ಆಧುನಿಕ ಪದಪ್ರಯೋಗಗಳನ್ನೇ ಬಳಸುತ್ತಾರೆ. ಆದರೆ ಹಳೆಯ ಸಂಪ್ರದಾಯವನ್ನೂ ಅನುಸರಿಸುವ ಕವಿಗಳೂ ಇದ್ದಾರೆ. ಅವರು ಹಳೆಯ ವ್ಯಾಕರಣಗಳ ನಿಯಮಗಳಿಗೆ ಅನುಸಾರವಾಗಿ ಬರೆಯಲೂ ಯತ್ನಿಸುತ್ತಿದ್ದಾರೆ. ಆದರೆ ಹೀಗೆ ಬರೆಯುವುದರಲ್ಲಿ ಅವರು ದೋಷಗಳಿಗೆಡೆಗೊಡುವುದೂ ಅನಿವಾರ್ಯವಾಗಿಯೇ ಆಗುತ್ತಿದೆ. ಜಾಗವಿಲ್ಲದ್ದರಿಂದ, ನನ್ನಯ್ಯನನನ್ನಯನ ಕಾಲದಿಂದಲೂ ಭಾಷೆ ಹೇಗೆ ಬದಲಾಯಿಸುತ್ತ ಬಂದಿದೆ ಎಂಬುದಕ್ಕೆ ಕೆಲವು ಉದಾಹರಣೆಗಳನ್ನು ಮಾತ್ರ ಇಲ್ಲಿ ಕೊಡಲಾಗಿದೆ.
 
ತೆಲುಗಿನಲ್ಲಿ ಕೆಲವು ಸಂಸ್ಕೃತ ಶಬ್ದಗಳಿಗೆ ಬೇರೆ ಅರ್ಥಗಳು ಬಂದಿವೆ. ಉದಾಹರಣೆಗೆ, ಅಭ್ಯಂತರಂ ಎಂಬುದಕ್ಕೆ ಸಂಸ್ಕೃತದಲ್ಲಿ ಒಳಕೋಣೆ ಎಂದು ಅರ್ಥ; ತೆಲುಗಿನಲ್ಲಿ ಇದಕ್ಕೆ ಆಕ್ಷೇಪಣೆ ಎಂಬ ಅರ್ಥ ಬಂದಿದೆ. ಈ ಅರ್ಥದ ಬದಲಾವಣೆ ಹೇಗಾಯಿತೆಂದು ಈಗ ನೋಡೋಣ. ಯಾವನಾದರೊಬ್ಬ ಆಗಂತುಕ ರಹಸ್ಯವಾಗಿ ಮಾತಾಡಲು ಅಪೇಕ್ಷಿಸಿದಾಗ, ಮನೆಯ ಯಜಮಾನ ಆತನನ್ನು ಒಳಕೋಣೆಗೆ ಕರೆದುಕೊಂಡು ಹೋಗುತ್ತಾನೆ. ಮಾತಾಡಲು ಬಂದಾಗ ಯಜಮಾನ ಒಳಕೋಣೆಗೆ ಹೋಗೋಣವೇ ಎಂದು ಕೇಳುತ್ತಾನೆ. ಬಂದವನು, "ಏಕೆ, ಬೇಡ ಬೇಡ ಅದು ಅವಶ್ಯಕವಲ್ಲ ಈ ಮೊಗಸಾಲೆಯಲ್ಲೇ ಹೇಳಬೇಕಾದುದನ್ನು ಹೇಳುತ್ತೇನೆ." ಎನ್ನುತ್ತಾನೆ. ಮುಂದೆ ಇದು ಇಲ್ಲಿಯೇ ಹೇಳಲು ನನ್ನ ಆಕ್ಷೇಪಣೆಯೇನೂ ಇಲ್ಲ ಎಂಬರ್ಥಕ್ಕೆ ತಿರುಗಿತು. ಪ್ರಾಚೀನತಮ ಕವಿಗಳು ಪ್ರಯೋಗಿಸಿರುವ ಕೆಲವು ತೆಲುಗು ಶಬ್ದಗಳನ್ನು ಈಗಲೂ ಉಪಯೋಗಿಸುತ್ತಾರೆ. ಆದರೆ ಬೇರೆ ಅರ್ಥದಲ್ಲಿ. ಉದಾಹರಣೆಗೆ, ಕಂಪು ಎಂಬುದಕ್ಕೆ ಹಿಂದೆ ಯಾವ ಬಗೆಯ ವಾಸನೆಗಾದರೂ ಪ್ರಯುಕ್ತವಾಗುತ್ತಿತ್ತು, ಮುಂದೆ ಅದಕ್ಕೆ 'ನಾತ' ಎಂಬ ಅರ್ಥ ಬಂದಿದೆ.
 
ಚೀರೆಲು ಎಂಬುದನ್ನು ಹದಿಮೂರನೆಯ ಶತಮಾನದ ತಿಕ್ಕನ ರುಮಾಲಿನ ಬಟ್ಟೆ ಎಂಬರ್ಥದಲ್ಲಿ ಪ್ರಯೋಗಿಸಿಪ್ರಯೋಗಿಸಿದ್ದ. ಈಗದಕ್ಕೆ ಹೆಂಗಸರ ಸೀರೆ ಎಂಬರ್ಥ ಬಂದಿದೆ. ರೇಪು ಎಂಬುದಕ್ಕೆ ಮೊದಲು ಪ್ರಾತಃಕಾಲ ಎಂಬರ್ಥವಿದ್ದು ಈಗ ನಾಳೆ ಎಂಬರ್ಥ ಬಂದಿದೆ. ನಡುವಣ ಸ್ವರಗಳನ್ನೋ ಅಕ್ಷರಗಳನ್ನೋ ಬಿಟ್ಟು ಶಬ್ದಗಳನ್ನು ಸಂಕ್ಷೇಪಗೊಳಿಸಲಾಗಿದೆ.
 
ಉದಾಹರಣೆಗೆ, ಚಿಲುಕ>ಚಿಲ್ಕ [ಗಿಳಿ]; ಮೊಲಕ>ಮೊಲ್ಕ [ಚಿಗುರು]; ಕೊಲಂದಿ>ಕೊಲ (ಒ) ದಿ>ಕೊಲ್ಡ>ಕೊದ್ದಿ (ಕೆಲವು, ಸ್ವಲ್ಪ); ಚೇಸಿನದಿ>ಚೇಸಿಂದಿ (ಮಾಡಿದುದು); ಮೂಡ್-ಆಗು-ನಾಡು>ಮೂಡ್-ಅವು-ನಾಡು> ಮೂಡೋನಾಡು [ಮೂರನೆಯದಿನ]; ಇರುವಡಿ>ಇರುವೈ>ಇರವೈ [ಇಪ್ಪತ್ತು] ಅಂತಯುನು>ಅಂತಾನು>ಅಂತಾ(ಎಲ್ಲ); ಅಂತದನಿಕ [ಅಲ್ಲಿಯವರೆಗೆ]> ಅಂತದಾಕ>ಅಂದಾಕ; ವಲುವರು>ವಲುವದು>ವಲದು>ವಲ್‍ದು>ವದುಕ [ಬೇಕಾಗಿಲ್ಲ, ಬೇಡ] ವಚ್ಚುಚು>ವಸ್ತು[ಬರುವುದು].
"https://kn.wikipedia.org/wiki/ತೆಲುಗು" ಇಂದ ಪಡೆಯಲ್ಪಟ್ಟಿದೆ