ಬಾಬಾ ಅಮ್ಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
49.207.205.65 (ಚರ್ಚೆ) ರ 1090640 ಪರಿಷ್ಕರಣೆಯನ್ನು ವಜಾ ಮಾಡಿ
ಟ್ಯಾಗ್: ರದ್ದುಗೊಳಿಸಿ
typos
 
೨೦ ನೇ ಸಾಲು:
==ಹುಟ್ಟು ಮತ್ತು ಬಾಲ್ಯ==
 
[[ಮಹಾರಾಷ್ಟ್ರ]]ದ ವಾರ್ಧಾ ಜಿಲ್ಲೆಯ ಹಿಂಗಣಘಾಟ್ ಎಂಬಲ್ಲಿಯ [[ಬ್ರಾಹ್ಮಣ]] ಜಮೀನುದಾರರ ಕುಟುಂಬದಲ್ಲಿ , ಹಿರಿಯ ಮಗನಾಗಿ ಜನನ. ಹೊರ ಜಗತ್ತಿನ ಪರಿಚಯವೇ ಆಗದಂತಹ ಪರಿಸರದಲ್ಲಿ ಬಾಲ್ಯ ಕಳೆಯಿತು. ೧೪ ವರ್ಷ ವಯಸ್ಸಿನಲ್ಲಿಯೇ ತನ್ನದೇ ಬಂದೂಕಿನಲ್ಲಿ ಅಕ್ಕಪಕ್ಕದ ಕಾಡುಗಳಲ್ಲಿ [[ಕಾಡುಹಂದಿ]] , [[ಜಿಂಕೆ]] ಹೊಡೆಯುವಂತಹ ಶ್ರೀಮಂತ ಜೀವನಮಟ್ಟ. ಮುಂದೆ [[ನಾಗಪುರ]]ದಲ್ಲಿ ಕಾಲೇಜು ವಿದ್ಯಾಭ್ಯಾಸದ ಸಮಯದಲ್ಲಿ ಸೀಟುಗಳಿಗೆ [[ಚಿರತೆ]]ಯ ಚರ್ಮ ಹೊಚ್ಚಿದ್ದ ಸಿಂಗರ್ ಸ್ಪೋರ್ಟ್ಸ್ ಕಾರಿನಲ್ಲಿ ಓಡಾಟ. ಸಿನೆಮಾ ಬಗ್ಗೆ ಬಹಳ ಹುಚ್ಚು. ಪತ್ರಿಕೆಗಳಲ್ಲಿ ಚಲನಚಿತ್ರಗಳ ವಿಮರ್ಶೆ ಬರೆಯುವ ಹವ್ಯಾಸ. ಸಿನೆಮಾ ನೋಡಲಿಕ್ಕೆ ಹೋದರೆ ಎರಡು ಟಿಕೀಟು ಕೊಳ್ಳುವುದು- ಒಂದು ಕೂರಲಿಕ್ಕೆ , ಇನ್ನೊಂದು ಕಾಲು ನೀಡಲಿಕ್ಕೆ !. ಅಂದಿನ ಖ್ಯಾತ ಹಾಲಿವುಡ್ ತಾರೆಗಳು [[ಗ್ರೇಟಾ ಗಾರ್ಬೋ]] ಮತ್ತು [[ನೋರ್ಮಾ ಶಿಯರರ್]] ರೊಂದಿಗೆ ಪತ್ರವ್ಯವಹಾರ.
 
==ಮನಃಪರಿವರ್ತನೆ==
೩೦ ನೇ ಸಾಲು:
==ಜನಸೇವೆ==
 
ಅಂದಿನ ಸಾಮಾಜಿಕ ಪರಿಸ್ಥಿತಿಗೆ ವ್ಯತಿರಿಕ್ತವಾಗಿ, ಹರಿಜನರೊಂದಿಗೆ, ತಮ್ಮದೇ ಜಮೀನಿನಲ್ಲಿ ಕಾರ್ಯ ಪ್ರಾರಂಭ ಮಾಡಿದರು. ಹಿಂದಿನ ಜನ್ಮದ ಪಾಪದ ಫಲ ಎಂದೇ ನಂಬಲಾಗುತ್ತಿದ್ದ ಕುಷ್ಟ ರೋಗದಿಂದ , ಪೀಡಿತರಾದವರನ್ನು ಸಮಾಜ ತಾತ್ಸಾರ ಮಾಡಿ ದೂರವಿಡುತ್ತಿದ್ದ ಆ ಕಾಲದಲ್ಲಿ, ಬಾಬಾ ಆರು ಜನ ಕುಷ್ಟ ರೋಗಿಗಳೊಂದಿಗೆ ಮಹಾರೋಗಿ ಸೇವಾ ಸಮಿತಿಯನ್ನು ೧೯೪೯ರಲ್ಲಿ ಸ್ಥಾಪಿಸಿದಾಗ ಅವರಲ್ಲಿದ್ದು ೧೪ ರೂಪಾಯಿ ಮತ್ತು ಒಂದು ಕುಂಟ ಗೋವು ಮಾತ್ರಾ ಇತುಇತ್ತು.
 
೧೯೪೦ರ ದಶಕದ ಮೂದಲಲ್ಲಿಮೊದಲಲ್ಲಿ ವರೋರಾ ಎಂಬಲ್ಲಿ ಆನಂದವನವನ್ನು ಸ್ಥಾಪಿಸಿದರು. ಇದು ಕುಷ್ಟ ರೋಗಿಗಳು ಮತ್ತು ಇತರ ಅಂಗವಿಕಲರ ಸರ್ವಾಂಗೀಣ ಅಭಿವೃದ್ಧಿಗಾಗಿ ಎಲ್ಲಾ ಸೌಲಭ್ಯಗಳನ್ನೂ ಹೊಂದಿದ್ದ ಮೊಟ್ಟಮೊದಲ ಪ್ರಯತ್ನವಾಗಿತ್ತು. ಇಂದು (೨೦೦೮) ೧೭೬ ಹೆಕ್ಟೇರಿನಲ್ಲಿ ಹಬ್ಬಿರುವ ಆನಂದ ವನದಲ್ಲಿ ೩೦೦೦ ನಿವಾಸಿಗಳಿದ್ದಾರೆ. ಈ ಮೂಲಕ ಬಾಬಾ ಅಂಗವಿಕಲರೂ , ಕುಷ್ಟ ರೋಗಿಗಳು ತಮ್ಮ ಕಾಲಮೇಲೆ ನಿಂತು ಸ್ವಾಭಿಮಾನದ ಬದುಕನ್ನು ಬಾಳಬಲ್ಲರು ಎಂದು ಸಿದ್ಧ ಮಾಡಿದರು.
 
ನಿವಾಸಿಗಳ ಅಗತ್ಯವನ್ನು ಸದಾ ಚಿಂತಿಸುತ್ತಿದ್ದ ಬಾಬಾ, ಆಶ್ರಮದ ಕುರುಡರು ಗುಲಾಬಿ ಹೂವು ಕೊಯ್ಯುವಾಗ ಮುಳ್ಳು ಚುಚ್ಚಬಾರದು ಎಂದು ಮುಳ್ಳಿಲ್ಲದ ಗುಲಾಬಿಯನ್ನು ಅಭಿವೃದ್ಧಿಪಡಿಸಿದರು. ಬಾಬಾ ಕಟ್ಟಿದ ಕುರುಡ, ಹೆಳವ, ಮೂಕ ಇತ್ಯಾದಿ ಅಂಗವಿಕಲ ೧೫೦ ನಿವಾಸಿಗಳ ಸಂಗೀತ ತಂಡವು, ತನ್ನ ಪ್ರತಿಭಾ ಪ್ರದರ್ಶನದಿಂದ ನೋಡುಗರನ್ನು ದಂಗುಬಡಿಸುತ್ತದೆ.
"https://kn.wikipedia.org/wiki/ಬಾಬಾ_ಅಮ್ಟೆ" ಇಂದ ಪಡೆಯಲ್ಪಟ್ಟಿದೆ