ಪ್ರತಿಭೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
 
೧೭ ನೇ ಸಾಲು:
 
== ಪ್ರತಿಭೆ ಬಗೆಗೆ ಪಾಶ್ಚಿಮಾತ್ಯರ ಚಿಂತನೆ ==
ಭಾರತೀಯರ ದೃಷ್ಟಿಯಲ್ಲಿ ಪ್ರತಿಯೊಂದು ನಿಗೂಢ ಅಲೌಕಿಕ ಶಕ್ತಿ ಜನ್ಮಾಂತರಗತ ಸಂಸ್ಕಾರ ವಿಶೇಷ. ಆದರೆ ಪಾಶ್ಚಾತ್ಯರು ಅದರಲ್ಲಿ ಅಲೌಕಿಕವಾದುದೇನೂ ಇಲ್ಲವೆಂದು ಭಾವಿಸುತ್ತಾರೆ. "ಪ್ರತಿಭೆಯಲ್ಲಿ ಅಂತಹ ವಿಲಕ್ಷಣ ರಹಸ್ಯತಮವಾದದ್ದೇನೂ ಇಲ್ಲ, ಮಾನವಮತೀಯ ಇತರ ವ್ಯಾಪಾರಗಳಿಗೆ ಇಲ್ಲದ ಅದ್ಭುತವೇನೊ ಅದಕ್ಕಿಲ್ಲ " ಎಂಬ ಐ.ಎ.ರಿಚರ್ಡ್‌ಸನ್ ಹೇಳಿಕೆಯನ್ನು ಗಮನಿಸಬಹುದು. ಪಾಶ್ಚಾತ್ಯರು ಪ್ರತಿಭಾ ಸ್ವರೂಪವನ್ನು ಮನೋವೈಜ್ಞಾನಿಕವಾಗಿ ವಿವರಿಸಲು ಯತ್ನಿಸಿದ್ದಾರೆ. ಪ್ರತಿಯೊಬ್ಬನಿಗೂ ಹೊಸ ಹೊಸ ಅರ್ಥಗಳನ್ನು ಕಾಣುವ, ನಿರ್ಮಾಣವಾಡುವ ಶಕ್ತಿಯುಂಟು; ಆದರೆ ಪ್ರತಿಭೆಯ ಬಾಗಿಲನ್ನು ತೆರೆಯುವ ಬೀಗದಕೈ ಮಾತ್ರ ಅವನಿಗೆ ವಶವಾಗಿರಬೇಕು. ಪ್ರತಿಭಾಶಾಲಿಯೆಂದು ಕರೆಯಿಸಿಕೊಳ್ಳುವ" ಕವಿಗೂ ಸಾಮಾನ್ಯ ಮನುಷ್ಯನಿಗೂ ಇಲ್ಲಿ ವ್ಯತ್ಯಾಸವಿದೆ. ಸಾಮಾನ್ಯ ವ್ಯಕ್ತಿ ತನ್ನ ಅನುಭವಗಳನ್ನೂ ವಿಚಾರ ಪರಂಪರೆಗಳನ್ನೂ ತೊಡಕಿಲ್ಲದಂತೆ ಸಮನ್ವಯಗೊಳಿಸಿ ಒಂದು ವ್ಯವಸ್ಥೆಗೆ ತರಲಾರನು ". ಕವಿಯ ಅನುಭವ ಆಲೋಚನೆ ಮೊದಲಾದವೆಲ್ಲ ಬಹುಮಟ್ಟಿಗೆ ಅವನ ಸುಪ್ತಪ್ರಜ್ಞೆಯಲ್ಲಿಯೇ ಸುಸಂಘಟಿತವಾಗಿ, ಕಾವ್ಯರೂಪದಲ್ಲಿ ನಿರರ್ಗಳವಾಗಿ ಹೊಮ್ಮುತ್ತವೆ ಎಂದು ಜಾನ್ ಡೌನಿ ಎಂಬ ವಿಮರ್ಶಕ ಹೇಳುತ್ತಾನೆ. ಹೀಗೆ ಅನುಭವಾಲೋಚನೆಗಳನ್ನು ವ್ಯವಸ್ಥೆಗೊಳಿಸತಕ್ಕದ್ದು ಪ್ರತಿಭಾವ್ಯಾಪಾರ; ಅದಕ್ಕೆ ಸ್ಮರಣಶಕ್ತಿ ಸಾಧನ. ಪ್ರತಿಭೆಯೆಂಬುದು ಸ್ಮರಣಾನುಭವಗಳನ್ನು ಸಂಯೋಜಿಸುವ ಕ್ರಿಯೆ ಎನ್ನುತ್ತಾನೆ ಸ್ಟೀಫನ್ ಸ್ಪೆಂಡರ್. ಅನ್ಯ ಮನೋಧರ್ಮಗಳನ್ನು ಸಹಾನುಭೂತಿಯಿಂದ ಒಳಹೊಕ್ಕು ನೋಡುವ ಮತ್ತು ವಿಶೇಷತಃ ಅಂತರನುಭವಗಳನ್ನು ಅಭಿವ್ಯಕ್ತಪಡಿಸುವ ಸಾಮಥ್ರ್ಯ ಎಂದು ಐ. ಎ. ರಿಚಡ್ರ್ಸ್ ಪ್ರತಿಭೆಯನ್ನು ವಿವರಿಸುತ್ತಾನೆ." ನೈತಿಕ ಒಳ್ಪಿನಶ್ರೇಯಸ್ಸಿನ ದೊಡ್ಡ ಉಪಕರಣವೇ ಮಹಾಸಾಧನವೆಂದರೆ ಪ್ರತಿಭೆ " ಎಂಬುದು ಷೆಲ್ಲಿ. ಪ್ರತಿಭೆಯನ್ನು ಕೋಲ್‍ರಿಜ್- ಪ್ರಾಥಮಿಕ ಮತ್ತು ದ್ವಿತೀಯ ಎಂದು ವರ್ಗೀಕರಿಸಿರುವುದು ಗಮನಾರ್ಹ. ಲೋಕವನ್ನು ನಾವು ಯಥಾವತ್ತಾಗಿ ಗ್ರಹಿಸುವ ಶಕ್ತಿ. ಅದು ಪ್ರಾಥಮಿಕ ಪ್ರತಿಭೆ;. ಆ ಲೋಕವನ್ನು ಪರಿವರ್ತಿಸಿ ಕಾಣುವ ಶಕ್ತಿ ದ್ವಿತೀಯ ಪ್ರತಿಭೆ ಅಥವಾ ಕವಿಪ್ರತಿಭೆ. ಪ್ರತಿಭೆಯ ಲಘುವಿಲಾಸವನ್ನು ಕಲ್ಪನೆ (fancy) ಎನ್ನಲಾಗಿದೆ.
 
ಒಟ್ಟಿನಲ್ಲಿ ಪ್ರತಿಯೊಂದು ಅಸಾಧಾರಣ ಶಕ್ತಿ; ಎಲ್ಲರಲ್ಲೂ ಇರುವಂಥದಲ್ಲ. ಕಲಾಪ್ರಪಂಚವೆಲ್ಲ ಪ್ರಾತಿಭ ಪ್ರಪಂಚ; ಪ್ರತಿಭಾತಾರತಮ್ಯದಿಂದ ಕಲಾವಿದರ ಪದವಿ ಬೇರೆ ಬೇರೆಯಾಗುತ್ತದೆ.
 
== ಭಾರತೀಯರ ಚರ್ಚೆ ==
"https://kn.wikipedia.org/wiki/ಪ್ರತಿಭೆ" ಇಂದ ಪಡೆಯಲ್ಪಟ್ಟಿದೆ