ಆಮ್ನಿಯೋಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಬೋಟ್: ಸ್ಥಿರೀಕರಿಸುವ ಪುನರ್ನಿರ್ದೇಶನಗಳು
Rescuing 1 sources and tagging 0 as dead.) #IABot (v2.0.8
೪ ನೇ ಸಾಲು:
ಅಮ್ನಿಯೋಟದ ಮುಖ್ಯ ಲಕ್ಷಣವೆಂದರೆ ಬೆಳವಣಿಗೆಯ ಕಾಲದಲ್ಲಿ ಭ್ರೂಣದ ಸುತ್ತಲೂ ಅಮ್ನಿಯಾನ್ ಎಂಬ ಪಟಲಸಂಚಿ ಬೆಳೆಯುತ್ತದೆ. ಇದರಿಂದಾಗಿ ಈ ಪಟಲಸಂಚಿ ಬೆಳೆಯುವ ಪ್ರಾಣಿಗಳೆಲ್ಲವೂ ಆಮ್ನಿಯೋಟ ಗುಂಪಿಗೆ ಸೇರುತ್ತವೆ. ಪಟಲಸಂಚಿ ಭ್ರೂಣವನ್ನು ಸಂಪೂರ್ಣವಾಗಿ ಆವರಿಸಿಕೊಳ್ಳುತ್ತದೆ. ಇದರಲ್ಲಿ ಆಮ್ನಿಯಾಟಿಕ್ [[ದ್ರವ]]ವೂ ಇರುತ್ತದೆ. ಇದರಿಂದ ಬೆಳೆಯುತ್ತಿರುವ ಭ್ರೂಣಕ್ಕೆ ಹೊರಗಿನ ಒತ್ತಡಗಳಿಂದ ರಕ್ಷಣೆ ಒದಗುತ್ತದೆ. ಅನಾಮ್ನಿಯೋಟಗಳು ಪೂರ್ಣ ಜಲವಾಸಿಗಳಾಗಿರಲಿ, ಇಲ್ಲದಿರಲಿ, ಬೆಳವಣಿಗೆಯ ಕಾಲದಲ್ಲಿಯಾದರೂ ನೀರಿನಲ್ಲಿರುತ್ತವೆ. ಆದುದರಿಂದ ನೀರೇ ಇವುಗಳು ಎದುರಿಸಬೇಕಾಗಬಹುದಾದ ಒತ್ತಡದ ಹೊಡೆತಗಳನ್ನು ನಿವಾರಿಸಿ [[ಅಂಡ|ಮೊಟ್ಟೆ]]ಗಳನ್ನು ರಕ್ಷಿಸುತ್ತದೆ. ಆದರೆ ಅಮ್ನಿಯೋಟಗಳಲ್ಲಿ ಭ್ರೂಣದ ಬೆಳವಣಿಗೆ ನೀರಿನಿಂದ ಹೊರಗೆ, ತತ್ತಿಯ ಚಿಪ್ಪಿನೊಳಗೆ (ಸರೀಸೃಪಗಳು ಮತ್ತು ಪಕ್ಷಿಗಳಲ್ಲಿ) ಅಥವಾ ತಾಯಿಯ ದೇಹದೊಳಗೆ (ಸ್ತನಿಗಳಲ್ಲಿ) ನಡೆಯುತ್ತದೆ. ಆದ್ದರಿಂದ ಅಮ್ನಿಯಾನ್ ಸುತ್ತಲೂ ಇರುವ ದ್ರವಾವರಣ ಭ್ರೂಣವನ್ನು ರಕ್ಷಿಸುತ್ತದೆ. ಈ ಅಮ್ನಿಯಾನ್ ಹೊರಗೆ ನಡುಮೂಲ ಕುಡಿಪದರ (ಮೀಸೊಡರ್ಮ್) ಮತ್ತು ಒಳಗೆ ಹೊರಮೂಲ ಕುಡಿಪದರ (ಎಕ್ಟೊಡರ್ಮ್) ಕುಂದಾಗುತ್ತದೆ. ಈ ಗುಂಪಿನ ಪ್ರಾಣಿಗಳ ಬೆಳವಣಿಗೆಯಲ್ಲಿ ಇದೊಂದೇ ಅಲ್ಲದೆ ಭ್ರೂಣದ ಹೊರ ಪೊರೆಯೂ ಅಲ್ಲಂಟಾಯಿಸ್ ಮತ್ತು ಭಂಡಾರ ಸಂಚಿ ಎಂಬ ಪಟಲಗಳೂ ಬೆಳೆಯುತ್ತವೆ. ಅಮ್ನಿಯಾನನ್ನು ಕೆಲವು ಸಾರಿ ಭ್ರೂಣದ ಸ್ವಂತ ಈಜುಕೊಳ ಎಂದು ವಿವರಿಸುವುದೂ ಉಂಟು.
<ref>https://www.mun.ca/biology/scarr/Phylogeny_of_Amniota2.html</ref>
<ref>{{Cite web |url=https://www.geol.umd.edu/~jmerck/honr219d/notes/16.html |title=ಆರ್ಕೈವ್ ನಕಲು |access-date=2016-10-21 |archive-date=2016-07-10 |archive-url=https://web.archive.org/web/20160710062503/http://www.geol.umd.edu/~jmerck/honr219d/notes/16.html |url-status=dead }}</ref>
<ref>animaldiversity.org/accounts/Amniota/classification/</ref>
"https://kn.wikipedia.org/wiki/ಆಮ್ನಿಯೋಟ" ಇಂದ ಪಡೆಯಲ್ಪಟ್ಟಿದೆ