ಅಂತರರಾಷ್ಟ್ರೀಯ ಏಕಮಾನ ವ್ಯವಸ್ಥೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Clean up ; using AWB
ವ್ಯವಸ್ಥೆ
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
 
೧ ನೇ ಸಾಲು:
'''ಅಂತರರಾಷ್ಟ್ರೀಯ ಏಕಮಾನ ವ್ಯವಸ್ಥೆ''' – (ಇಂಗ್ಲೀಶ್ International System of Units ಅಥವಾ SI- ಎಸ್‌ಐ) ಒಂದು ಅಳೆಯುವ [[ಏಕಮಾನ ವ್ಯವಸ್ಥೆಗಳು|ಏಕಮಾನ ವ್ಯವಸ್ಥೆಯಾಗಿದ್ದು]] ಮೆಟ್ರಿಕ್ ವ್ಯವಸ್ಥೆಯ ಆಧುನಿಕ ರೂಪ. ಈ ವ್ಯವಸ್ಥೆಯಲ್ಲಿ ದಶಾಂಶಗಳನ್ನು ಅಥವಾ ಹತ್ತರ ಗುಣಕಗಳನ್ನು (ಮಲ್ಟಿಪಲ್‌) ಬಳಸಲಾಗಿದೆ ಮತ್ತು ಹತ್ತರ ಘಾತಗಳಲ್ಲಿ ಅಂದರೆ 10<sup>2</sup>, 10<sup>3</sup>, 10<sup>4</sup> ಮುಂತಾದ ಸಂಖ್ಯೆಗಳಿಂದ ಮೀಟರ್, ಗ್ರಾಂ ಮುಂತಾದ ಏಕಮಾನಕವನ್ನು ಗುಣಿಸಲಾಗುತ್ತದೆ ಅಥವಾ ವಿಭಜಿಸಲಾಗುತ್ತದೆ. ಈ ಮೂಲಕ ಈ ವ್ಯವಸ್ಥೆ ತೀರ ದೊಡ್ಡ ಅಥವಾ ತೀರ ಸಣ್ಣ ಸಂಖ್ಯೆಗಳನ್ನು ಸುಲಭವಾಗಿ ತೋರಿಸಲು ಅವಕಾಶ ಒದಗಿಸಿಕೊಡುತ್ತದೆ. ಇಲ್ಲಿ ಹತ್ತರ ಘಾತಗಳು 20 ಪೂರ್ವಪ್ರತ್ಯಗಳು (ಪ್ರಿಫಿಕ್ಸ್‌) ಮತ್ತು ಅವುಗಳ ಚಿಹ್ನೆಗಳು ಸೂಚಿತವಾಗಿದ್ದು ಇವನ್ನು ನಮೂದಿಸುವ ಮೂಲಕ ಗುಣಕಗಳನ್ನು ಸೂಚಿಸಬಹುದು. ಉದಾಹರಣೆಗೆ ಸಾವಿರ ಪ್ರಮಾಣವನ್ನು ಸೂಚಿಸಲು ಪೂರ್ವಪ್ರತ್ಯಯ ಕಿಲೋ ಅಥವಾ ಕಿ (k) ಹಾಗೆಯೇ ಸಾವಿರ ಭಾಗದ ಪ್ರಮಾಣ ಸೂಚಿಸಲು ಪೂರ್ವಪ್ರತ್ಯಯ ಮಿಲ್ಲಿ ಅಥವಾ ಮಿ (m) ಎಂದೂ ಬಳಸ ಬಹುದು. ಹೀಗೆ ಬಳಸಿದಾಗ 1000 ಮೀ -1 ಕಿಮೀ ಆದರೆ, 0.001 ಮೀ- 1 ಮಿಮೀ ಆಗುತ್ತದೆ.
 
ಅದಕ್ಕೂ ಮುಂಚೆ ಹಲವು ದೇಶಗಳಲ್ಲಿ ಅಥವಾ ಪ್ರದೇಶಗಳಲ್ಲಿ ಅವುಗಳದೇ ವಿಶಿಷ್ಟ ತೂಕ ಮತ್ತು ಅಳತೆಗಳನ್ನು ಬಳಸಲಾಗುತ್ತಿತ್ತು. ಭಾರತದಲ್ಲಿ ಇದ್ದ ಕೆಲವು ಅಳತೆಗಳ ಬಗೆಗೆ [[ಜನಪದ ಗಣಿತ|ಮಾಹಿತಿಯೂ]] ಲಭ್ಯವಿದೆ. ನಂತರದಲ್ಲಿ ಬ್ರಿಟನ್ನಿನ ಆಳ್ವಿಕೆಯ ದೇಶಗಳಲ್ಲಿ ಅಲ್ಲಿನದೇ ವ್ಯವಸ್ಥೆ [[ಇಂಪೀರಿಯಲ್ ವ್ಯವಸ್ಥೆ]] (ಬ್ರಿಟಿಶ್ ವ್ಯವಸ್ಥೆ) ಭಾರತವನ್ನೂ ಒಳಗೊಂಡು ಬ್ರಿಟಿಶ್ ಸಾಮ್ರಾಜ್ಯದಲ್ಲಿ ಜಾರಿಗೆ ಬಂತು. ಭಾರತ ಬ್ರಿಟನನ್ನೂ ಒಳಗೊಂಡು ಬಹುತೇಕ ಎಲ್ಲಾ ದೇಶಗಳೂ ಮೆಟ್ರಿಕ್ ವ್ಯವಸ್ಥೆಯನ್ನು ಒಪ್ಪಿಕೊಂಡಾಗಲೂ ಕೆಲವು ಬಳಕೆಗಳಿಗೆ ಇನ್ನೂ ಹಳೆಯ ಪದ್ಧತಿಯನ್ನು ಉಳಿಸಿಕೊಂಡಿವೆ. ನಾವು ಭಾರತದಲ್ಲಿ ಇನ್ನೂ ಬಳಸುವ ಅಡಿ, ಚದರ ಅಡಿ ಮತ್ತು [[ಎಕರೆ|ಎಕರೆಗಳು]] ಬ್ರಿಟಿಶ್ ವ್ಯವಸ್ಥೆಯ ಅಳತೆಗಳು. ಅದಕ್ಕೆ ಸಂವಾದಿ ಮೆಟ್ರಿಕ್ ಅಥವಾ ಅಂತರರಾಷ್ಟ್ರೀಯ ಏಕಮಾನಗಳು [[ಮೀಟರ್]], ಚದರ ಮೀಟರ್ ಮತ್ತು [[ಹೆಕ್ಟೇರ್|ಹೆಕ್ಟೇರ್‌ಗಳು]] (ಚದರ ಮೀಟರ್ ಏಕಮಾನವಾಗಿದ್ದಾಗ್ಯೂ ಹೆಕ್ಟೇರ್ ಬಳಕೆಯನ್ನು ಮುಂದುವರೆಸಲಾಗಿದೆ).