ದೀಪಕ್ ಪಾಲಡ್ಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೭ ನೇ ಸಾಲು:
==ಜನನ, ಆರಂಭಿಕ ಜೀವನ ಮತ್ತು ಶಿಕ್ಷಣ==
ದೀಪಕ್ ಪಾಲಡ್ಕ ಇವರು ಜಾರ್ಜ್ ಡಿ'ಸಿಲ್ವಾ (ತಂದೆ) ಮತ್ತು ಫಿಲೊಮೆನಾ (ತಾಯಿ) ದಂಪತಿಗೆ ೧೧ [[ಏಪ್ರಿಲ್]] ೧೯೭೪ ರಂದು ಮೂಡುಬಿದಿರೆಯ ಪಾಲಡ್ಕದಲ್ಲಿ ಜನಿಸಿದರು. ಇವರು ತಮ್ಮ ಪ್ರೌಢ ಶಿಕ್ಷಣವನ್ನು ಮೂಡುಬಿದಿರೆಯ ಜೈನ ಪ್ರೌಢ ಶಾಲೆಯಲ್ಲಿ ಪಡೆದು ಅಲ್ಲಿನ ಮಹಾವೀರ ಕಾಲೇಜಿನಲ್ಲಿ ಪಿಯು ಶಿಕ್ಷಣವನ್ನು ಪಡೆದರು. ನಂತರ ಮುಂಬೈನ ಕೈಝನ್ ಸ್ಕೂಲ್ ಆಫ್ ಬಿಸಿನೆಸ್ ಮ್ಯಾನೇಜ್ಮೆಂಟ್ ನಲ್ಲಿ ಸ್ನಾತ್ತಕೋತ್ತರ ಪದವಿ(ಎಂ.ಬಿ.ಎ) ಪೂರ್ಣಗೊಳಿಸಿದರು.
==ಆರಂಭಿಕ ಜೀವನ==
ರಂಗನಟನಾಗಿ, ಇವರು ಸುಮಾರು ೧೫-೨೦ [[ಕೊಂಕಣಿ]], [[ತುಳು]] ಹಾಗೂ ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವರು 105.4 ರೇಡಿಯೊ ಮಸಾಲೆ ದುಬೈ ಮತ್ತು 93.5 ರೆಡ್ ಎಫ್‌ಎಂ ನಲ್ಲಿ ರೇಡಿಯೊದಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದಾರೆ.<ref>{{cite news |title=Deepak Paladka, Tulunadu's comedian making passion a profession |url=https://www.newskarnataka.com/features/deepak-paladka-tulunadus-comedian-making-passion-a-profession |accessdate=3 July 2020 |work=NewsKarnataka |language=en}}</ref>
 
===ವೃತ್ತಿಜೀವನ===
ಸ್ಟೇಜ್ ಶೋಗಳಲ್ಲಿ ಮತ್ತು ರೇಡಿಯೊದಲ್ಲಿ ಕಾಣಿಸಿಕೊಂಡ ನಂತರ ದೀಪಕ್ ಪಾಲಡ್ಕ ಮೊದಲಿಗೆ ಅಂತರರಾಷ್ಟ್ರೀಯ ತುಳು ಚಿತ್ರ ''ನಿರೆಲ್'' ನಲ್ಲಿ ಪ್ರಮುಖ ಹಾಸ್ಯ ನಟನಾಗಿ ಪಾದಾರ್ಪಣೆ ಮಾಡಿದರು. ಇದನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಚಿತ್ರೀಕರಿಸಲಾಯಿತು. ನಂತರ ''ದಂಡ್'' ಸಿನಿಮಾದಲ್ಲಿ [[ಅರ್ಜುನ್ ಕಾಪಿಕಾಡ್]]ರ ಜೊತೆ ಹಾಸ್ಯ ನಟನಾಗಿ ಕಾಣಿಸಿಕೊಂಡರು.ಇದು [[ಆಸ್ಟ್ರೇಲಿಯಾ]] ಮತ್ತು ಯು.ಕೆ ಗಳಲ್ಲಿ ಬಿಡುಗಡೆಯಾದ ಮೊದಲ ತುಳು ಭಾಷೆಯ ಚಲನಚಿತ್ರವಾಗಿದೆ. ದೀಪಕ್ ಪಾಲಡ್ಕ ರವರ [[ಕೊಂಕಣಿ]] ಚಿತ್ರ ''ಏಕ್ ಅಸ್ಲ್ಯಾರ್ ಏಕ್ ನಾ'', ''ಸವೋಯ್ ನಂಬರ್ ೧'' (೨೦೧೮), ''ಬೆಂಡ್ಕಾರ್'' (೨೦೧೯) ಎಂಬ ಚಿತ್ರಗಳು ಯು.ಎ.ಇ, [[ಇಸ್ರೇಲ್]], [[ಕುವೈಟ್]] ಮತ್ತು [[ಭಾರತ]]ದಲ್ಲಿ ಬಿಡುಗಡೆಯಾಗಿದೆ. ಇವರು [[ಕನ್ನಡ]] ಸಿನಿಮಾ ''ಅಸತೋಮ ಸದ್ಗಮಯ'' ದಲ್ಲೂ ನಟಿಸಿದ್ದಾರೆ.<ref>https://m.youtube.com/watch?v=dzWAkXTHzxE&list=PLZO1neg5mknatFDYfNU7DL2CXIwBadrDl&index=2&t=0s</ref><ref>{{cite web |title=Bengaluru: First look of Rajesh Venoor's 'Asathoma Sadgamaya' Kannada movie released |url=http://www.daijiworld.com/news/newsDisplay.aspx?newsID=471286 |website=www.daijiworld.com |accessdate=3 July 2020}}</ref>
"https://kn.wikipedia.org/wiki/ದೀಪಕ್_ಪಾಲಡ್ಕ" ಇಂದ ಪಡೆಯಲ್ಪಟ್ಟಿದೆ