ಅಜಂತಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
ಚು replaced [[Category: → [[ವರ್ಗ: , general fixes enabled
 
೧೨ ನೇ ಸಾಲು:
}}
[[Image:Ajantamural.jpg|thumbnail|ಅಜಂತಾ ಭಿತ್ತಿಚಿತ್ರದ ದೃಶ್ಯ]]
[[ಭಾರತ]]ದ [[ಸ್ವಾತಂತ್ರ್ಯ]] ಪೂರ್ವ ಕಾಲದಲ್ಲಿ [[ಹೈದರಾಬಾದ್]] ನ [[ನಿಜಾಮರು|ನಿಜಾಮರ]] ಕಾಲದಲ್ಲಿ ಹೈದರಾಬಾದ್ ಪ್ರಾಂತ್ಯದಲ್ಲಿದ್ದ '''ಅಜಂತಾ''' ಈಗ [[ಮಹಾರಾಷ್ಟ್ರ]]ದ [[ಔರಂಗಾಬಾದ್]] ಜಿಲ್ಲೆಯಲ್ಲಿದೆ. ಇಲ್ಲಿಯ [[ಬೌದ್ಧ ಧರ್ಮ|ಬೌಧ್]]ಧ ಚೈತ್ಯಗಳಿಗೆ ಮತ್ತು ಇಲ್ಲಿನ ಗೋಡೆಗಳಲ್ಲಿನ ಭಿತ್ತಿಚಿತ್ರಗಳಿಗಾಗಿ ಇದು ಅತ್ಯಂತ ಪ್ರಸಿಧ್ಧಿಯಾಗಿದೆ.
 
ಇದು ಮಲೆಸೀಮೆ, ಚಂದರ್, ಶತಮಾಲ, ವಿಂಧ್ಯಾದ್ರಿ, ಸಹ್ಯಾದ್ರಿ ಎಂದು ಕರೆಯಲ್ಪಡುವ ಪಶ್ಚಿಮಘಟ್ಟಗಳ ಬೆಟ್ಟಗಳು ಸುತ್ತಲೂ ಇವೆ. ಇವುಗಳ ಸರಾಸರಿ ಎತ್ತರ 4,000`. ಇವು ಮನಮಾಡದಿಂದ ಬೀರಾರಿನವರೆಗೆ ವಿಸ್ತರಿಸಿವೆ. ಅಲ್ಲಲ್ಲಿ ವ್ಯಾಪಾರಿಗಳ, ಸೈನ್ಯದ ಓಡಾಟ ಸಾಗಣೆಗಳಿಗನುಕೂಲವಾದ ಕಣಿವೆ ದಾರಿಗಳಿವೆ. ದಕ್ಷಿಣ ಪ್ರಸ್ಥಭೂಮಿಯ ಉತ್ತರಗಡಿಯಾದ ಈ ಶ್ರೇಣಿ ಬೀರಾರಿನಲ್ಲಿ 2,000` ಎತ್ತರವಾಗಿದೆ. ಮಾರ್ಕಿಂಡ (4,384`), ಸಪ್ತಶೃಂಗ (4,659`), ಧೊಡಕ್ (4,741`), ತುದ್ರೆ (4,526`) - ಇವು ಇಲ್ಲಿನ ಮುಖ್ಯ ಶಿಖರಗಳು.
೨೮ ನೇ ಸಾಲು:
ಅಜಂತದ ಗುಹಾಂತರ್ದೇವಾಲಯಗಳು ಜಗತ್ಪ್ರಸಿದ್ಧವಾಗಿವೆ. ಇದಕ್ಕೆ ಕಾರಣ ಅಲ್ಲಿನ ನೈಸರ್ಗಿಕ ಸೌಂದರ್ಯ, ಶಿಲ್ಪಕಲೆ, ಚಿತ್ರಕಲೆ, ಎದುರಿಗೆ ಸಮೀಪದಲ್ಲಿಯೇ ಜುಳು ಜುಳು ಎಂದು ಮಂಜುಳ ಧ್ವನಿಗೈಯುತ್ತ ಹರಿಯುವ ವಾಘೋರಾ ನದಿ ಚಿಕ್ಕ ಏಳು ಜಲಪಾತಗಳಿಂದ ಕೂಡಿಕೊಂಡು ರಮ್ಯವಾಗಿದೆ. ನದಿಯ ಕೊಳ್ಳ ಗಂಭೀರ ಶಾಂತತೆಯಿಂದ ಮೆರೆಯುತ್ತಿದೆ.
ಸುಮಾರು 200 ಬೌದ್ಧ ಭಿಕ್ಷುಗಳು ಇಲ್ಲಿನ ಗುಹೆಗಳಲ್ಲಿ ವಾಸಮಾಡಿಕೊಂಡಿದ್ದಿರಬೇಕು. ಅವರು ಸುತ್ತಮುತ್ತಲಿನ ನಿಸರ್ಗ ರಮಣೀಯತೆಯಲ್ಲಿ ತಮ್ಮ ಆಧ್ಯಾತ್ಮ ಸಾಧನೆಯನ್ನು ಮಾಡುತ್ತಿದ್ದರು. ಅವರ ದರ್ಶನ ಪಡೆದು ಅವರಿಗೆ ಅನ್ನ, ಬಟ್ಟೆಗಳನ್ನೊದಗಿಸಿ ಅವರಿಂದ ಆಶೀರ್ವಾದ ಪಡೆಯಲು ಜನರು ಇಲ್ಲಿಗೆ ಮೇಲಿಂದ ಮೇಲೆ ಬರುತ್ತಿದ್ದರು.
ಸುಮಾರು 3/4 ಮೈ. ಉದ್ದವಾದ ಕುದುರೆಲಾಳದ ಆಕಾರದ ಬೆಟ್ಟದ ನಿಡಿದಾದ ಓರೆಯಲ್ಲಿ ಈ ಗುಹಾಂತರ್ದೇವಾಲಯಗಳನ್ನು ಕೊರೆದಿದ್ದಾರೆ. ಇವು ಹೆಚ್ಚಾಗಿ ಬೌದ್ಧಮತಕ್ಕೆ ಸಂಬಂಧಿಸಿದುವು. ಸ್ಥೂಲವಾಗಿ ಹೀನಯಾನ ಮತ್ತು ಮಹಾಯಾನ ಎಂಬ ಎರಡು ಬೌದ್ಧಪಂಥಗಳಿಗೆ ಸಂಬಂಧಪಟ್ಟುವೆಂದು ಅವುಗಳಲ್ಲಿ ಕೆತ್ತಿದ ಬೌದ್ಧ ಮೂರ್ತಿಗಳು. ಬಣ್ಣದ ಚಿತ್ರಗಳು ಮತ್ತು ಕಂಬಗಳ ರಚನೆಯಿಂದ ವಿಂಗಡಿಸಬಹುದು. ಇವುಗಳ ರಚನೆ ಕ್ರಿ.ಪೂ. 2ನೆಯ ಶತಮಾನದಿಂದ ಆರಂಭವಾಗಿ ಕ್ರಿ.ಶ. 7ನೆಯ ಶತಮಾನದವರೆಗೂ ನಡೆಯಿತು.
 
ಅಜಂತದ ವಾಸ್ತುಶಿಲ್ಪ, ಮೂರ್ತಿಶಿಲ್ಪಗಳಲ್ಲಿನ ಕಲೆ ಸಾಕಷ್ಟು ಉತ್ತಮಮಟ್ಟದ್ದಾಗಿದ್ದು ವೈವಿಧ್ಯಮಯವಾಗಿದೆ. ಕಂಬಗಳ ಮಾಟ, ಅಲಂಕಾರ ಪದ್ಧತಿ, ಮೂರ್ತಿಗಳ ಮೈಕಟ್ಟು, ಪ್ರಮಾಣ, ಅಲಂಕಾರ ಕಲೆ ಮನ ಮೆಚ್ಚುವಂತಿವೆ. ನಿರ್ಮಾತೃಗಳಾದ ಸ್ಥಪತಿಗಳು ಒಳ್ಳೆ ದಕ್ಷತೆಯಿಂದ ಕೆಲಸ ಮಾಡಿ ಮೂರ್ತಿಗಳಲ್ಲಿ, ವರ್ಣಚಿತ್ರಗಳಲ್ಲಿ ಜೀವಕಳೆ ತುಂಬಿದ್ದಾರೆ.
೫೪ ನೇ ಸಾಲು:
ಪ್ರಾಚೀನ ಹೈಂದವ ಕಲಾಸಂಸ್ಕೃತಿಯಲ್ಲಿ ಬುದ್ಧನ ಮಹಾನಿರ್ಯಾಣದ (ಕ್ರಿ.ಪೂ. 480) ಹಿಂದೆ ಚಿತ್ರರಚನೆಯಲ್ಲಿ 3 ಶೈಲಿಗಳಿದ್ದವೆಂದೂ ಅವುಗಳ ಮೊದಲನೆಯದಾದ ದೇವಶೈಲಿ ದೇವತೆಗಳಿಗೆ ಸಂಬಂಧಿಸಿದ್ದು, ಆ ರೀತಿಯಲ್ಲಿ ಅಜಂತದ ಅತಿ ಪ್ರಾಚೀನವಾದ ಚಿತ್ರಗಳು ರಚಿತವಾದುವೆಂದೂ ಎರಡನೆಯದು ಯಕ್ಷರ ಶೈಲಿ ಪುಣ್ಯಯಾನರಿಗೆ (ಒಳ್ಳೆಜನ, ಶೀಲವಂತರು) ಸಂಬಂಧಿಸಿದ್ದು. ಅಶೋಕನ ಕಾಲದ ಚಿತ್ರಕಾರರು (ಕ್ರಿ.ಪೂ. 250) ಅದನ್ನು ಅನುಸರಿಸಿದರೆಂದೂ ಮೂರನೆಯ ನಾಗಾಶೈಲಿ ನಾಗಾರ್ಜುನರಿಂದ (ಕ್ರಿ.ಶ. 200) ಪೋಷಿತವಾಯಿತೆಂದೂ ಟಿಬೆಟ್ಟಿನ ಚರಿತ್ರಕಾರನಾದ ತಾರನಾಥ (ಕ್ರಿ.ಶ. 17 ಶ.) ತಿಳಿಸಿರುತ್ತಾನೆ. ದೇವಶೈಲಿಯನ್ನು ಮಗಧರಾಜನಾದ ಬುದ್ಧಪಕ್ಷನ ಕಾಲದಲ್ಲಿ (ಕ್ರಿ.ಶ. 5-6 ಶ.) ಶಿಲ್ಪಿ ಮತ್ತು ಚಿತ್ರಕಾರನಾದ ಬಿಂಬಸಾರ ಜೀರ್ಣೋದ್ಧಾರ ಮಾಡಿದನೆಂದೂ ಯಕ್ಷಶೈಲಿಯನ್ನು ಉದಯಪುರದ ರಾಜನಾದ ಶಿಲಾದಿತ್ಯಗಹಿಳನ ಕಾಲದಲ್ಲಿ (ಕ್ರಿ.ಶ. 7 ಶ.) ಶೃಂಗಧಾರನೆಂಬ ಚಿತ್ರಕಾರ ಜೀರ್ಣೋದ್ಧಾರ ಮಾಡಿದನೆಂದೂ ಮೂರನೆಯ ನಾಗಾಶೈಲಿಯನ್ನು ವಂಗದೇಶದ ರಾಜನಾದ ಧರ್ಮಪಾಲ, ಮಗ ದೇವಪಾಲರ ಕಾಲದಲ್ಲಿ (ಕ್ರಿ.ಶ. 9 ಶ.) ಚಿತ್ರಕಾರನಾದ ಧೀಮನ್, ಮಗ ಬಿತ್ತ್‍ಫಲೋ ಜೀರ್ಣೋದ್ಧಾರ ಮಾಡಿದರೆಂದೂ ತಾರನಾಥನ ಬರಹದಿಂದ ಗೊತ್ತಾಗುತ್ತದೆ. ಅಜಂತದ ಭಿತ್ತಿಚಿತ್ರಗಳಲ್ಲಿ ಈ ಮೂರು ಶೈಲಿಗಳು ಅಲ್ಲಲ್ಲಿ ಕಂಡುಬರುತ್ತವೆ.
ಅಜಂತ ಚಿತ್ರಗಳನ್ನು ಸ್ಥೂಲವಾಗಿ 3 ಪಂಗಡಗಳಾಗಿ ವಿಂಗಡಿಸಬಹುದು: 1. ಅಶುದ್ಧಾಲಂಕಾರದವು; 2 ಶುದ್ಧರೂಪಾತ್ಮಕವಾದವು; 3 ಕಥನಾತ್ಮಕವಾದವು. 3ನೆಯ ಪಂಗಡದಲ್ಲಿ ಮತ್ತೂ 3 ಭಾಗಗಳಿವೆ. i ಸಮಕಾಲೀನ ಚರಿತ್ರಾತ್ಮಕ ಕಥನ; ii ಗೌತಮನ ಸಂಸಾರತ್ಯಾಗ, ಬುದ್ಧತ್ವ ಸಂಪಾದನೆ ಮತ್ತು ಮಹಾನಿರ್ಣಯಗಳ ಕಥನ ; iii ಆರ್ಯದೇವ (ಆರ್ಯಸೂರ್ಯ ಕ್ರಿ.ಶ. 3 ಶ.) ಜಾತಕಮಾಲೆಯಲ್ಲಿ ಅಶ್ವಘೋಷ, ಬುದ್ಧಚರಿತ್ರ, ಸೌಂದರಾನಂದ, ಸಾರಿಪುತ್ರ ಪ್ರಕರಣಗಳಲ್ಲಿ ಬೌದ್ಧರ ದಿವ್ಯಾವಧಾನ ಮುಂತಾದುವುಗಳಲ್ಲಿ ವರ್ಣಿಸಿದ ಚರಿತ್ರೆ - ಇವೆಲ್ಲವೂ ಸೇರಿರುತ್ತವೆ.
ಶುದ್ಧಾಲಂಕಾರಕ್ಕೆ, ಅತಿ ಸಹಜವಾಗಿ, ಚಿತ್ರವಿಚಿತ್ರವಾಗಿ, ಅಸಂಖ್ಯಾತವಾಗಿ, ಮನೋಹರವಾಗಿ, ಆಕರ್ಷಕವಾಗಿ ರಚಿತವಾದ ಕಿನ್ನರ ಕಿಂಪುರುಷ ಮಾನವ ಪಶುಪಕ್ಷಿ ಪರ್ಣ ಲತಾಸಮುದಾಯಗಳನ್ನೊಳಗೊಂಡ ನಕ್ಷೆಗಳ ಸುರುಳಿಗಳು ಸೇರಿರುತ್ತವೆ. ಇವುಗಳಲ್ಲಿ ಗಮನಿಸಬೇಕಾದ್ದು ಚಿತ್ರಕಾರನ ದಯಾದ್ರ್ರಹೃದಯ ಮತ್ತು ಜೀವಕೋಟೆಯಲ್ಲಿನ ಸೂಕ್ಷ್ಮಪರಿಚಯ (1, 2ನೆಯ ಗುಹೆಗಳ ಒಳಮಾಳಿಗೆಯ ಮತ್ತು 17ನೆಯದಲ್ಲಿರುವ ವಿಜಯನ ಸಿಂಹಳವಿಜಯದ ಅಂಚುಗಳ ಶೃಂಗಾರ) ಇವುಗಳಲ್ಲಿ ಅತಿ ಉತ್ಕøಷ್ಟವಾದದ್ದು ಈ ಅಂಚುಗಳು (ಗುಹೆ 17). ಖಗವರ್ಗಕ್ಕೆ ಸೇರಿದ ಹಂಸ, ಕೊಕ್ಕರೆ, ಬಾತು, ಕಲಹಂಸ-ಇವುಗಳ ಜಲಕ್ರೀಡೆಯ ದೃಶ್ಯಗಳು ಅಸಂಖ್ಯಾತ ಮಾದರಿಗಳಲ್ಲಿವೆ. ಶುದ್ಧರೂಪಾತ್ಮಕ ಪಂಗಡಕ್ಕೆ ಸೇರಿದವು; ಅತ್ಯುತ್ತಮವಾದ ಪ್ರಣಯದಂಪತಿಗಳು (ಗುಹೆ 17) ಬೆನ್ನು ತಿರುಗಿಸಿ ಕುಳಿತ ಬಾಲೆ (ಗುಹೆ 17). ಕಮಲಪುಷ್ಪ ಹಿಡಿದ ಆಪ್ತಸಖಿಯೊಡನಿರುವ ಕಪ್ಪು ಛಾಯದ ಯುವರಾಣಿ (ಗುಹೆ 17). ನಾಟ್ಯದ ಅನಂತರ ವಿಶ್ರಾಂತಿಗಾಗಿ ಕಂಬಕ್ಕೆ ಒರಗಿದ ಅಪ್ಸರೆ (ಗುಹೆ 2). ಅಲಂಕರಣ (ಗುಹೆ 17). ಗಾಂಧರ್ವ ದಂಪತಿಗಳ ಪ್ರಣಯ (ಗುಹೆ 1). 4 ದೇಹಗಳಿಗೆ ಒಂದೇ ಶಿರಸ್ಸುಳ್ಳ ಜಿಂಕೆಗಳು (ಗುಹೆ 1). ಹೋರಿಗಳ ಗುದ್ದಾಟ (ಗುಹೆ 1). ಅಂತರಿಕ್ಷದಲ್ಲಿ ಸಂಚರಿಸುವ ಸ್ವರ್ಗೀಯರು (ಗುಹೆ 17). ಒಂಟಿಯಾಗೋ ಒಟ್ಟಾರಿಯೋ ಇರುವ ಜಾತಕ ಕಥೆಗಳನ್ನು ವರ್ಣಿಸುವ ಮಾನುಷ ರೂಪಗಳು - ಮುಂತಾದವು ಸೇರಿರುತ್ತವೆ. ಬುದ್ಧ ಜೀವನದ ದೃಶ್ಯಗಳ ಪೈಕಿ ಬೋಧಿಸತ್ವ ಪದ್ಮಪಾಣಿ (ಗುಹೆ 1). ಗೌತಮನ ಜನನ (ಗುಹೆ 2). ಮಹಾಜನಕ ಜಾತಕಕ್ಕೆ ಸೇರಿದ ಅಂತಃಪುರ ಪ್ರವೇಶದಲ್ಲಿನ ಭಿಕ್ಕು (ಗುಹೆ 1), ಕಂಬದ ಮೇಲಿನ ಬುದ್ಧ(ಗುಹೆ 10), ಛಾದಂತ ಜಾತಕ (ಗುಹೆ 10, 17), ಅಂತಃಪುರ ದೃಶ್ಯ, ನರ್ತಕಿಯರು (ಗುಹೆ 1), ವೃತ್ತಾಕಾರವಾದ ರಂಗಮಂಟಪ (ಗುಹೆ 16), ಮಹಾಸರ್ಪಜಾತಕ (ಗುಹೆ 1)--ಇವು ಅತ್ಯುತ್ಕøಷ್ಟವಾದವು. ಇವು ವಿಶ್ವವಿಖ್ಯಾತವಾದ ಲಿಯೊನಾರ್ಡೋ-ದ-ವಿನ್ಜಿಯ ಮೋನಲಿಸ, ಕಡೆಯ ಔತಣ (ಲಾಸ್ಟ್ ಸಪ್ಪರ್) ಎಂಬ ಎರಡು ಚಿತ್ರಗಳನ್ನು ಮೀರಿಸುವಂತಿವೆ. ಈ ಬೋಧಿಸತ್ವ ಪದ್ಮಪಾಣಿ (ಗುಹೆ 1), ಭಿಕ್ಷಾಟನಕ್ಕೆ ಹೊರಟ ಬುದ್ಧ, ಅವನ ಹೆಂಡತಿ, ಮಗು (ಗುಹೆ 17), 9, 10ನೆಯ ಗುಹೆಗಳ ಚಿತ್ರಗಳು--ಇವು ವಾಕಾಟಕ ರಾಜರ ಪೋಷಣೆಯಲ್ಲೂ 16, 17ನೆಯ ಗುಹೆಗಳ ಚಿತ್ರಗಳು ಕ್ರಿ.ಶ. 626-628 ರಲ್ಲೂ ಚಿತ್ರಿಸಲಾದವೆಂದು ಪಾರಸಿಕ ಖುಸ್ರು ಕಳುಹಿಸಿದ ರಾಯಭಾರದ ದೃಶ್ಯ ಸೂಚಿಸುತ್ತದೆ (ಗುಹೆ 1). ಈಗ ಉಳಿದಿರುವ ಚಿತ್ರಗಳಿಂದ ಛಾದಂತ ಜಾತಕ 10,17ನೆಯ ಗುಹೆಗಳಲ್ಲೂ ಬ್ರಾಹ್ಮಣ, ವಿದುರ, ಸಿಬಿ, ಶಂಖಪಾಲಿ, ಕ್ಷಾಂತಿವಾದ ಜಾತಕಗಳು 2ನೆಯ ಗುಹೆಯಲ್ಲೂ ಹಸ್ತಿ, ಛಾದಂತದ ಉತ್ತರಭಾಗ, ಉನ್ಮಗ್ಗ ಮುಂತಾದ ಜಾತಕಗಳು, ಅಶ್ವಘೋಷನ, ಸೌಂದರಾನಂದದ ಜೊತೆಯಲ್ಲಿ 16ನೆಯ ಗುಹೆಯಲ್ಲೂ ರೂರೂ, ಮಹಾಕಪಿ, ಶಶಕ, ಮಾತೃಪೋಷಕ, ಸಿಬಿ, ವಿಶ್ವಂತರ, ನಾಲಗಿರಿ, ಹಂಸ, ಯುವರಾಜ, ಮಹಾನಾಗ ಮುಂತಾದವು 17ನೆಯ ಗುಹೆಯಲ್ಲೂ ಮಾರನ ಪರೀಕ್ಷೆ, ಮಹಾಜಿನಕ, ಛಾಂಪೇಯ, ಸಿಬಿ, ಮಹಾನಾಗ ಪಂಚಿಕ ಮುಂತಾದವು 1ನೆಯ ಗುಹೆಯಲ್ಲೂ ಮತ್ಸ್ಯ, ಮಹೇಶ, ಸಿಬಿ, ನಿಕ್ರೋಧ, ಶರಭಂಗ, ವೆಸ್ಸಾಂತರ, ಸೂತಸೋಮ ಮಾತೃಪೋಷಕ, ಮೈತ್ರಿಬಲ, ವಲಹಸ್ಸಾ ಮುಂತಾದವು 2ನೆಯ ಗುಹೆಯಲ್ಲೂ ಕೆಟ್ಟಿರುವ ಗುಹೆಗಳಲ್ಲೂ ಅತ್ಯಂತ ಭಕ್ತಿ, ಶ್ರದ್ಧೆಗಳಿಂದ ಚಿತ್ರಿತವಾಗಿದೆ. ಕೆಲವು ಜಾತಕ ಚಿತ್ರಗಳ ರಚನೆ ಆರ್ಯದೇವನ ಜಾತಕಮಾಲೆಯ ವಿವರಗಳನ್ನು ಅನುಸರಿಸಿವೆ. ಅಲ್ಲದೆ ಕೆಲವು ಚಿತ್ರಗಳ ಮೇಲೆ ಜಾತಕಮಾಲೆಯ ನುಡಿಗಳು ಬರೆಯಲ್ಪಟ್ಟಿವೆ. ಉದಾಹರಣೆಗೆ--ಹೆಣ್ಣುಉದಾಹರಣೆಗೆ—ಹೆಣ್ಣು ಹುಲಿಗೆ ಬೋಧಿಸತ್ವ ಗೌತಮನ ದೇಹಾರ್ಪಣದ ಚಿತ್ರ.
ಸಮಕಾಲೀನ ಚರಿತ್ರಾತ್ಮಕ ದೃಶ್ಯಗಳಲ್ಲಿ ಮುಖ್ಯವಾದವು: ಇಮ್ಮಡಿ ಪುಲಿಕೇಶಿ ರಾಜನು ತನ್ನ ದರ್ಬಾರಿನಲ್ಲಿ ಪಾರಸಿಕ ರಾಜ ಖಸ್ರುವಿನ ರಾಯಭಾರಿಯನ್ನು ಸ್ವಾಗತಿಸುವುದು (ಗುಹೆ 1). ಇದರಲ್ಲಿ ಖುಸ್ರು, ಅವನ ರಾಣಿಯರ ಚಿತ್ರಗಳಿವೆ. ಅಶೋಕನ ಮಗನಾದ ವಿಜಯನ ಸಿಂಹಳವಿಜಯ (ಗುಹೆ 17) ವೆಂಬುದರಲ್ಲಿ ನರ್ತಕಿಯರ ಬೃಂದ ಅತಿ ಮನೋಹರವಾಗಿದೆ.
ಕಣ್ಣು ಕೋರೈಸುವಂಥ ಬಣ್ಣಗಳು, ನೈಜವಲ್ಲದ ಭಂಗಿಗಳು, ಪ್ರವೃತ್ತಿಗಳು, ಅಜಂತದ ಚಿತ್ರರಚನೆಗೆ ಅತಿ ದೂರವಾದವು. ಆತ್ಮಸಂತೋಷ
ಸಂಘಸುಧಾರಣೆ ಜ್ಞಾನಾಭಿವೃದ್ಧಿ--ಇವೇಜ್ಞಾನಾಭಿವೃದ್ಧಿ—ಇವೇ ಆ ಎಲ್ಲ ಚಿತ್ರಗಳ ಪರಮೋದ್ದೇಶ. ಆಧ್ಯಾತ್ಮಿಕ ಶಾಂತಿಯಲ್ಲದೆ ಮನೋವಿಕಾರಗಳ ಚಿತ್ರಣ ಅಲ್ಲೆಲ್ಲೂ ಕಂಡುಬರುವುದಿಲ್ಲ. ಪ್ರಕೃತಿಯಲ್ಲಿನ ಖಗ, ಮೃಗ, ಜಲ, ತರು, ಪತ್ರ, ಪುಷ್ಪಾದಿಗಳನ್ನು ಅನುಕರಿಸಿರುವುದರಿಂದ ಕೃತಿಗಳು ಶೋಭಾಯಮಾನವಾಗಿವೆ. ಅತ್ಯುತ್ತಮವಾದ ಮಾನುಷಸೌಂದರ್ಯಕ್ಕೆ ಅವು ಸಂಕೇತಗಳಾಗಿವೆ. ಉದಾಹರಣೆಗೆ ಭೋಧಿಸತ್ತ್ವ ಪದ್ಮಪಾಣಿ (ಗುಹೆ 1), ಹಸ್ತದಲ್ಲಿ ದಳದಳವಾಗಿ ವಿಕಸಿಸುತ್ತಿರುವ ಕಮಲ ಪ್ರಪಂಚದ ಸೃಷ್ಟಿಗೆ ಸಂಕೇತವಾಗಿದೆ. ಸುಂದರ ಯುವತಿಯ ಪಾದ, ಕಣ್ಣು, ಬೆರಳು ಮುಖಲಾಲಿತ್ಯ ಅಂಗಚ್ಛಾಯೆ--ಮುಂತಾದವುಅಂಗಚ್ಛಾಯೆ—ಮುಂತಾದವು ಅವಳ ಸೌಂದರ್ಯಕ್ಕೆ ಸಂಕೇತಗಳಾಗಿವೆ. ಭಗವದ್ಗೀತೆಯ ಪದ್ಮಪತ್ರ ಮಿವಾಂಭಸ ಎಂಬ ನುಡಿಗಳು ಕಮಲದ ನಿರ್ಲಿಪ್ತತೆಯನ್ನೂ, ಅಶ್ಲೇಷಿತ ಜೀವನವನ್ನೂ ಸೂಚಿಸುತ್ತವೆ. ಕೊಳಲನ್ನೂದುವ ಬೆರಳುಗಳ ವಿನ್ಯಾಸ, ಕೊಳಲಿನ ಸ್ವರದಂತೆ ಅತಿಮಧುರವಾಗಿದೆ. (ಗುಹೆ 1, 17). ಸಾಂಸಾರಿಕ ವಿಷಯಗಳಿಂದ ಮಲಿನವಾಗದಂಥ ಜೀವಿತವನ್ನು ಕಮಲಪುಷ್ಪ ಸೂಚಿಸಿದರೆ, ಮಾಲಿನ್ಯರಹಿತವಾಗಿ ಮನೋಹರವಾದ ಭಂಗಿಗಳಲ್ಲಿ ಕ್ರೀಡಿಸುವ, ಹಂಸ ಮುಂತಾದ ಜಲಪಕ್ಷಿಗಳು (ಗುಹೆ 2, 17) ಮಾನವನ ಜೀವನ್ಮುಕ್ತಿಯ ಆನಂದವನ್ನು ಸಾರುತ್ತವೆ. ಇಂಥ ದೃಶ್ಯಗಳೆಲ್ಲ ಮಾನವನ ದೈವಿಕ ಪ್ರವೃತ್ತಿಯನ್ನು ಮುದ್ರಿಸಿಟ್ಟಂತೆ ತೋರುತ್ತವೆ.
ಅಜಂತದ ಶಿಲ್ಪ, ಚಿತ್ರರಚನೆಗಳು ದಕ್ಷಿಣ ಹಿಂದೂಸ್ಥಾನದ್ದೆಂದು ನಿಸ್ಸಂಶಯವಾಗಿ ಹೇಳಬಹುದು. ಇಂಥ ವಿಶಾಲದೃಷ್ಟಿ, ಆಧ್ಯಾತ್ಮಿಕ ವಿಜ್ಞಾನ, ಲಲಿತಕಲೆಗಳಲ್ಲಿನ ಕೌಶಲ, ಹಿಂದೂದೇಶದ ಮತ್ತಾವ ಭಾಗದಲ್ಲೂ ಕಂಡುಬರುವುದಿಲ್ಲ. ಕಲೆಗಾರರ ದೃಷ್ಟಿಯಲ್ಲಿ ಚಿಕ್ಕದು. ದೊಡ್ಡದು ಅನ್ನುವ ಭಾವನೆ ಇರಲಿಲ್ಲ. ಕ್ರಿಮಿಕೀಟಗಳಿಂದ ಹಿಡಿದು ಘನದೇವತೆಗಳವರೆಗೆ ಎಲ್ಲವೂ ಸಮಾನತೆಯನ್ನು ಹೊಂದಿದ್ದವು. ಅವರ ಕಣ್ಣಿಗೆ ಆನಂದದಾಯಕವಾದ ಪರಮೇಶ್ವರನ ಮಾಧುರ್ಯ ಸೃಷ್ಟ್ಯಾದ್ಯಂತ ಸುತ್ತುವರಿದು ಸಕಲ ಚರಾಚರವಸ್ತುಗಳಲ್ಲಿ ತುಂಬಿ ತುಳುಕಿ ತಾಂಡವವಾಡುತಲಿತ್ತು. ಬುದ್ಧನಿಗೆ ಮತ್ತು ಬೌದ್ಧಮತಕ್ಕೆ ಸಂಬಂಧಿಸಿದವಾದರೂ ಆ ಶಿಲ್ಪದಲ್ಲಿ ಚಿತ್ರಗಳಲ್ಲಿ ಸಾರ್ವಕಾಲಿಕ ಮೌಲ್ಯವನ್ನುಳ್ಳ ಧರ್ಮ ಮತ್ತು ಕಲೆ ಪ್ರತಿಬಿಂಬಿತವಾಗಿವೆ.
ಚಿತ್ರಗಳಲ್ಲಿನ ಸ್ತ್ರೀಯರೆಲ್ಲ ಯುವತಿಯರು. ಆನಂದದಿಂದ ಪ್ರಪುಲ್ಲಿತವಾದ ನೇತ್ರ, ವದನಗಳನ್ನು ಪಡೆದಿದ್ದರೂ ಭಂಗಿಗಳ ನಿರೂಪಣೆ ಅತ್ಯಂತ ರಸಯುತವಾಗಿದ್ದರೂ ನೋಡುವವರಿಗೆ ಕಾಮುಕ ಭಾವನೆಗಳನ್ನು, ಮನೋವಿಕಾರಗಳನ್ನು ಅವು ಉಂಟು ಮಾಡುವುದಿಲ್ಲ. ಅವರೆಲ್ಲರೂ ಸ್ತ್ರೀ ಜಾತಿಗೆ ಸೇರಿದ ಪರಮ ಪತಿವ್ರತೆಯರು. ಚಲನವಲನಗಳಲ್ಲಿ ಮಾತೃಭಾವನೆ ವಿನಾ ಇತರ ಭಾವನೆಗಳನ್ನು ಅವರು ಪ್ರಕಟಿಸುವುದಿಲ್ಲ. (ನರ್ತಕಿ, ಗುಹೆ 2; ನರ್ತಕಿಯರು, ಗುಹೆ 1, 17: ಅಲಂಕರಣೆ, ಗುಹೆ 17; ಕಪ್ಪು ಛಾಯದ ಯುವರಾಣಿ, ಗುಹೆ 1; ದಂಪತಿಗಳು, ಗುಹೆ 17). ತಮ್ಮ ನೃತ್ಯಭಂಗಿಗಳೆಲ್ಲ ಅವರು ಆತ್ಮಸಂಯಮವನ್ನು, ದೈವಿಕ ಕ್ರಮದ ಜೀವಾಳವನ್ನು ಪ್ರಚುರಮಾಡುತ್ತಲಿದ್ದಾರೆ.
೬೫ ನೇ ಸಾಲು:
ಅಜಂತದಲ್ಲಿನ ಚಿತ್ರಗಳನ್ನು ಕೊರೆದಿರುವ ಗೋಡೆಗಳ ರಚನಾತ್ಮಕ ಕುತೂಹಲಕಾರಿಯಾಗಿದೆ. ಕಲ್ಲಿನ ಗೋಡೆಯನ್ನು ಸಂತ್ರಾಸು ಕೆಲಸದಿಂದ ಸಮಪಡಿಸಲಾಗಿದೆ. ಮರಳು, ಧಾತುಮಿಶ್ರಿತ ಮಣ್ಣು, ಬತ್ತದ ಹುಲ್ಲು ಹೊಟ್ಟು ಅಥವಾ ತೌಡು, ಪಾಚಿ, ಕಪ್ಪೆಚಿಪ್ಪು ಮುಂತಾದುವನ್ನು ಬೆಲ್ಲದ ನೀರಿನಲ್ಲಿ ಆರು ತಿಂಗಳು ಕೊಳೆಸಿ ನುಣ್ಣಗೆ ಮಾಡಿದ ಗಾರೆಯನ್ನು ಗೋಡೆಗೆ ಗಿಲಾವು ಮಾಡಲಾಗಿದೆ. ಅದರ ಹಸಿ ಆರುವುದರೊಳಗೆ ಧಾತುರಾಗದ ಕಡ್ಡಿಗಳಿಂದ ಸ್ಥೂಲ ಚಿತ್ರಗಳನ್ನು ಗುರುತು ಮಾಡಿಕೊಂಡು ಅನಂತರ ಬಣ್ಣ ಹಾಕಲಾಗಿದೆ. ಈ ಕ್ರಮವನ್ನು ಫ್ರೆಸ್ಕೊ ಬುವಾನೊ ಎಂದು ಕರೆಯುತ್ತಾರೆ. ಹಿನ್ನೆಲೆ ಒಣಗಿದ ಮೇಲೆ ಚಿತ್ರ ಬರೆದರೆ, ಕೆತ್ತಿದರೆ ಅವು ಹೆಚ್ಚು ಕಾಲ ನಿಲ್ಲವು. ಈ ವಿಧಾನವನ್ನು ಫ್ರೆಸ್ಕೊ ಸೆಕ್ಕೊ ಎನ್ನುತ್ತಾರೆ. ಫ್ರೆಸ್ಕೊ ಬುವಾನೊ ವಿಧಾನದಲ್ಲಿ ರಚಿತವಾದ ಅಜಂತ ಚಿತ್ರಗಳು 2,000 ವರ್ಷಗಳಾದರೂ ಇನ್ನೂ ಉಳಿದು ಬಂದಿವೆ. ಆದರೆ ಎರಡನೆಯ ವಿಧಾನದಂತೆ ಬರೆಯಲ್ಪಟ್ಟ ಲೇಪಾಕ್ಷಿ ಚಿತ್ರಗಳು ಈ 400 ವರ್ಷಗಳಲ್ಲಿ ಕೆಟ್ಟಿವೆ.
ಫ್ರೆಸ್ಕೊ ಬುವಾನೊ ವಿಧಾನವನ್ನು ಇಟಲಿ ದೇಶ ಭಾರತೀಯರಿಂದ ಕಲಿತು ಬಳಸಿಕೊಂಡು ಪಾಂಪೇಯ ಮ್ಯೂರಲ್‍ಗಳನ್ನು ನಿರ್ಮಿಸಿದೆ. ಭಾರತೀಯರಿಗೆ ಯಥಾ ದೃಷ್ಟಿ ನಿರೂಪಣೆ, ಬೆಳಕು ನೆರಳುಗಳ ವಿನ್ಯಾಸ ಗೊತ್ತಿರಲಿಲ್ಲವೆನ್ನುವುದು ಸುಳ್ಳು. ಬೋಧಿಸತ್ವ ಪದ್ಮಪಾಣಿ, ಅಭಿಷೇಕ ದೃಶ್ಯ, ಕಪ್ಪುಛಾಯದ ಯುವರಾಣಿ (ಗುಹೆ 1), ಅಪ್ಸರೆ (ಗುಹೆ 2); ಗುಂಡಾದ ರಂಗಮಂಟಪ (ಗುಹೆ 16); ಬುದ್ಧ, ಅವನ ಹೆಂಡತಿ ಮತ್ತು ಮಗ, ಅಂತಃಪುರದ ಪ್ರವೇಶದಲ್ಲಿನ ಭಿಕ್ಕು (ಗುಹೆ 17) ಮುಂತಾದವು ಈ ಅಭಿಪ್ರಾಯವನ್ನು ಪುಷ್ಟೀಕರಿಸುತ್ತವೆ.
 
 
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಜಂತ}}
{{ಭಾರತದ ವಿಶ್ವ ಪರಂಪರೆಯ ತಾಣಗಳು}}
 
[[Category:ಇತಿಹಾಸ]] [[Category:ಐತಿಹಾಸಿಕ ಸ್ಥಳಗಳು]] [[Category:ಪ್ರವಾಸೋದ್ಯಮ]] [[Category:ವಿಶ್ವ ಪರಂಪರೆಯ ತಾಣಗಳು]]
{{clear}}
 
[[ವರ್ಗ:ಇತಿಹಾಸ]]
[[ವರ್ಗ:ಐತಿಹಾಸಿಕ ಸ್ಥಳಗಳು]]
[[ವರ್ಗ:ಪ್ರವಾಸೋದ್ಯಮ]]
[[ವರ್ಗ:ವಿಶ್ವ ಪರಂಪರೆಯ ತಾಣಗಳು]]
[[ವರ್ಗ:ಪ್ರವಾಸಿ ತಾಣಗಳು]]
<br clear="both">
"https://kn.wikipedia.org/wiki/ಅಜಂತಾ" ಇಂದ ಪಡೆಯಲ್ಪಟ್ಟಿದೆ