ಆಂಡ್ರೇ ಮೇರಿ ಆಂಪೇರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Orphan page, add template
ಚು Fixed typo ಉಲೇಖಗಳು -> ಉಲ್ಲೇಖಗಳು. General fixes enabled
೨೪ ನೇ ಸಾಲು:
| footnotes =
}}
'''ಆಂಪೇರ್''' - ಫ್ರಾನ್ಸಿನ ಪ್ರಖ್ಯಾತ ವಿಜ್ಞಾನಿ ಮತ್ತು ಭೌತಶಾಸ್ತ್ರಜ್ಞ
 
ಅವರು ೧೭೭೫ರ ಜನವರಿ ೨೨ರಂದು ಫ್ರಾನ್ಸಿನ ಲೆಯನ್ಸ್ ಹತ್ತಿರದ ಪೋಲ್‌ಮಿಯಾಕ್ಸ್‌ನಲ್ಲಿ ಶ್ರೀಮಂತ ವ್ಯಾಪಾರಿಯೊಬ್ಬನ ಮಗನಾಗಿ ಜನಿಸಿದರು. ಡೊಮೆನಿಕ್ ಅರಾಗೋ ಎಂಬ ವಿಜ್ಞಾನಿ ಮತ್ತು ಡೆನ್‌ಮಾರ್ಕಿನ ಭೌತವಿಜ್ಞಾನಿ ಹಾನ್ಸ್ ಕ್ರಿಶ್ಚಿಯನ್ ಓರ್‌ಸ್ಟೆಡ್‌ರವರುಗಳ ವಿದ್ಯುದಯಸ್ಕಾಂತ ಸಿದ್ದಾಂತ ಮತ್ತು ತತ್ವಗಳು ಆಂಪೇರರ ಮನಸ್ಸಿನಲ್ಲಿ ತರಂಗಗಳನ್ನೆಬ್ಬಿಸಿದ್ದವು.<ref>http://www-groups.dcs.st-and.ac.uk/~history/Biographies/Ampere.html</ref> ತತ್ಪರಿಣಾಮವಾಗಿ ಆಂಪೇರ್ ೧೮೨೦ರಲ್ಲಿಯೇ ವಿದ್ಯುದಯಸ್ಕಾಂತವನ್ನು ಕುರಿತಾದ ವಿವರವಾದ ಪ್ರಬಂಧಗಳನ್ನು ಮಂಡಿಸಿದರು. ವಿದ್ಯುದಯಸ್ಕಾಂತದ ಸ್ವಭಾವಗಳು ಸ್ಥಾಯೀ ವಿದ್ಯುತ್‌ಬಲ ಕ್ಷೇತ್ರದ (ಎಲೆಕ್ಟ್ರೋಸ್ಟಾಟಿಕ್ಸ್) ವ್ಯಾಪ್ತಿಗೆ ಬರುವುದಿಲ್ಲ. ಅವು ವಿದ್ಯುತ್‌ಬಲ ಕ್ರಿಯಾ ವಿಜ್ಞಾನದ (ಎಲೆಕ್ಟ್ರೋಡೈನಮಿಕ್ಸ್) ವ್ಯಾಪ್ತಿಗೆ ಬರುತ್ತದೆ ಎಂಬುದಾಗಿ ಆಂಪೇರ್ ಪ್ರತಿಪಾದಿಸಿದರು. ಎರಡು ತಂತಿಗಳಲ್ಲಿ ಹರಿಯುತ್ತಿರುವ ವಿದ್ಯುತ್ತಿನ ದಿಕ್ಕು ಒಂದೇ ಆಗಿದ್ದರೆ, ಆಗ ಆ ತಂತಿಗಳು ವಿಕರ್ಷಣೆಗೆ ಒಳಗಾಗುತ್ತವೆ. ಹಾಗೆಯೇ ವಿದ್ಯುತ್ ಪ್ರವಾಹದ ದಿಕ್ಕುಗಳು ವಿರುದ್ಧವಾಗಿದ್ದರೆ ಆ ತಂತಿಗಳು ಆಕರ್ಷಣೆಗೆ ಒಳಗಾಗುತ್ತವೆ. ಒಂದು ವಿದ್ಯುತ್ ತಂತಿಯನ್ನು ಸುರುಳಿಯಾಕಾರದಲ್ಲಿ ಸುತ್ತಿ ಅದರ ಮೂಲಕ ವಿದ್ಯುತ್ ಹರಿಸಿದಾಗ, ಅದು ಅಯಸ್ಕಾಂತ ದಂಡದಂತೆ (ಬಾರ್ ಮ್ಯಾಗ್ನೆಟ್) ವರ್ತಿಸುತ್ತದೆ. ಇಂತಹ ಅನೇಕ ಸಂಗತಿಗಳನ್ನು ಆಂಪೇರ್ ಕಂಡುಹಿಡಿದರು.<ref>http://www.juliantrubin.com/bigten/ampereexperiments.html</ref>
೩೧ ನೇ ಸಾಲು:
 
೧೮೦೨ರಲ್ಲಿ ಆಂಪೇರ್ ಸಂಭಾವ್ಯ ಸಿದ್ಧಾಂತದ (ಪ್ರಾಬಬಲಿಟಿ ಥಿಯರಿ) ಬಗ್ಗೆ ಬರೆದ ಪ್ರಬಂಧ ಉನ್ನತಮಟ್ಟದ್ದಾಗಿತ್ತು. ಆ ಪ್ರಬಂಧದ ಹೆಸರು ‘ಆಟಗಳ ಗಣಿತಸಿದ್ಧಾಂತದ ಬಗ್ಗೆ ಪರಿಗಣನೆ’. ಆಂಪೇರ್‌ರವರು ಮನೋವಿಜ್ಞಾನ, ತತ್ವಶಾಸ್ತ್ರ, ಭೌತವಿಜ್ಞಾನಗಳ ಬಗ್ಗೆ ಹೆಚ್ಚು ಆಸಕ್ತಿ ವಹಿಸಿದ್ದರೂ, ಅವರ ಒಲವು ಹೆಚ್ಚಾಗಿ ರಸಾಯನ ವಿಜ್ಞಾನದ ಕಡೆಗಿದ್ದಿತು. ಅವರು ಕ್ಲೋರೀನ್ ಮತ್ತು ಐಯೋಡೀನ್‌ಗಳ ಮೂಲಭೂತ ತತ್ವಗಳ ಬಗ್ಗೆ ಅಧ್ಯಯನ ನಡೆಸಿದ್ದಲ್ಲದೆ, ಮುಂದೆ [[ಡಿಮಿಟ್ರಿ ಮೆಂಡಲೀಫ್|ಮೆಂಡಲೀಫ್]] ಎಂಬ ವಿಜ್ಞಾನಿ ರಚಿಸಿದ ಆವರ್ತಕೋಷ್ಠಕಕ್ಕೆ (ಪಿರಿಯಾಡಿಕ್ ಟೇಬಲ್) ನಾಂದಿ ಹಾಡಿದರು. ೧೮೧೪ರಲ್ಲಿ ಅವಗೆಡ್ರೋ ಸಿದ್ಧಾಂತಗಳು ಮತ್ತು ಬಾಯ್ಲ್ ಪ್ರತಿಪಾದಿಸಿದ ನಿಯಮಗಳಿಗೆ ಕೂಡ ಆಂಪೇರ್ ತಳಹದಿ ಹಾಕಿದರು. [[ಗಣಿತ]] ಮತ್ತು ವಿಜ್ಞಾನಗಳ ಬೋಧನ ಕ್ಷೇತ್ರದಲ್ಲಿ ಉಪನ್ಯಾಸಕರಾಗಿ ಸಾಕಷ್ಟು ಸೇವೆ ಮಾಡಿದ ಆಂಪೇರ್ ೧೮೩೬ರ ಜೂನ್ ೧೦ರಂದು ಮಾರ್ಸೆಲ್‌ನಲ್ಲಿ ಪರೀಕ್ಷಣೆಯ ಪ್ರವಾಸದಲ್ಲಿದ್ದಾಗ ನ್ಯುಮೋನಿಯಾ ಜ್ವರಪೀಡಿತರಾಗಿ ಕೊನೆಯುಸಿರೆಳೆದರು.<ref>https://www.google.co.in/search?client=ubuntu&channel=fs&q=Andre-Marie+Ampere&ie=utf-8&oe=utf-8&gfe_rd=cr&ei=FYMZV8_uM4-AoAPgp4GQDA#channel=fs&q=Andre-Marie+Ampere+death</ref>
==ಉಲ್ಲೇಖಗಳು==
==ಉಲೇಖಗಳು==
{{reflist}}
 
[[ವರ್ಗ:ವಿಜ್ಞಾನಿಗಳು]]