ಕರಿಮೆಣಸು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು fixing doi from hijacked website, see here
ಚು v2.04 - lint
೪೧ ನೇ ಸಾಲು:
ಒಂದು ಕಾಂಡದಲ್ಲಿ ಸುಮಾರು ೨೦ ರಿಂದ ೩೦ ಫಲ ಕೊಡುವ ಶೀರ್ಷಕಗಳಿರುತ್ತವೆ. ಶೀರ್ಷಕಗಳ ಮೂಲ ಕೆಂಪಗಿನ ಬಣ್ಣ ಬರಲಾರಂಭಿಸಿದಾಗಲಿಂದ ಹಣ್ಣಾಗುವ ಮೊದಲು ಕುಯಿಲು ಮಾಡಲಾಗುತ್ತದೆ, ಆದರೆ ಪೂರ್ತಿ ಬೆಳೆದ ಹಾಗೂ ಗಟ್ಟಿಯಾದ ಫಲವನ್ನು ಹಣ್ಣಾಗಲು ಬಿಟ್ಟರೆ ಅದು ತನ್ನ ತೀಕ್ಷ್ಣತೆಯನ್ನು ಕಳೆದುಕೊಂಡು , ನಂತರ ಉದುರಿ ಹೋಗಿ ಹಾಳಾಗುತ್ತದೆ. ಇವುಗಳನ್ನು ಸಂಗ್ರಹಿಸಿ ಶುಷ್ಕ ಬಿಸಿಲಿನಲ್ಲಿ ಒಣಗಿಸಿದಾಗ ಕಾಳುಮೆಣಸು ಸುಲಿದುಕೊಂಡು ಹೊರಬರುತ್ತವೆ.
 
 
<div style="clear:both"/>
==ಇತಿಹಾಸ==
[[ಭಾರತ|ಭಾರತದಲ್ಲಿ]] ಕರಿಮೆಣಸು ಸಾಂಬಾರ ಪದಾರ್ಥವಾಗಿ ಪುರಾತನ ಕಾಲದಿಂದಲೂ ಬಳಕೆಯಾಗುತ್ತಿದೆ. [[ಕೇರಳ|ಕೇರಳದ]] ಮಲಬಾರ್ ತೀರದಲ್ಲಿ ಇದರ ಕೃಷಿ ಮೊಟ್ಟಮೊದಲು ಪ್ರಾರಂಭವಾಗಿರಬೇಕು ಎಂಬ ಊಹೆಯಿದೆ. "ಕಪ್ಪು ಚಿನ್ನ" ಎಂದೇ ಹೆಸರಾಗಿದ್ದ ಮೆಣಸಿನಕಾಳು ಬಹಳ ಬೆಲೆಬಾಳುವ ವಾಣಿಜ್ಯ ಸಾಮಗ್ರಿಯಾಗಿತ್ತು. ಇದನ್ನು ಹಣದ ರೂಪದಲ್ಲಿ ಬಳಸಿದ್ದೂ ಇದೆ. ಸಹ್ಯಾದ್ರಿಯ ಮೆಣಸು ಬೆಳೆ ಪಶ್ಚಿಮ ಕರಾವಳಿಯ ಹಳೆಯ ರೇವುಪಟ್ಟಣಗಳಿಂದ ಜಗತ್ತಿನ ಮೂಲೆಮೂಲೆಗಳಿಗೆ ರಫ್ತಾಗುತ್ತಿತ್ತು. ಪ್ರಾಚೀನ ರೋಮನ್ನರಿಗೆ, ಗ್ರೀಕರಿಗೆ ಭಾರತದ ಮೆಣಸಿನ ರುಚಿ ಹತ್ತಿತ್ತು. ನೇರವಾಗಿ ಭಾರತದೊಂದಿಗೆ ವ್ಯಾಪಾರ ಬೆಳಸದವರಿಗೆ ಅರಬ್ಬಿ ವರ್ತಕರು ಭಾರತದ ಮೆಣಸನ್ನು ಕೈಮುಟ್ಟಿಸುತ್ತಿದ್ದರು. [[ವಿಜಯನಗರದ ಅರಸರು|ವಿಜಯನಗರದ ಅರಸರ]] ಕಾಲದಲ್ಲಿ [[ಅಮೇರಿಕಾ|ಅಮೇರಿಕೆಯ]] [[ಮೆಣಸಿನಕಾಯಿ]] [[ಭಾರತ|ಭಾರತದಲ್ಲಿ]] ಕಾಲಿಡುವ ಮುನ್ನ ಅಡುಗೆಯಲ್ಲಿ ಖಾರಕ್ಕಾಗಿ ಮೆಣಸು, [[ಹಿಪ್ಪಲಿ]] ("Piper Longum"), [[ಶುಂಠಿ]], [[ಜೀರಿಗೆ|ಜೀರಿಗೆಗಳ]] ಬಳಕೆಯಾಗುತ್ತಿತ್ತು. ಭಾರತಕ್ಕೆ ಮೆಣಿಸಿನಕಾಯಿಯನ್ನು ಪರಿಚಯಿಸಿದ ಐರೋಪ್ಯರು ಮೆಣಸನ್ನು ಕೊಂಡೊಯ್ದು [[ಮಡಗಾಸ್ಕರ್]] (ಆಫ್ರಿಕಾ ಖಂಡದ ಪೂರ್ವಕ್ಕಿರುವ ಒಂದು ದ್ವೀಪರಾಷ್ಟ್ರ), [[ಜಾವಾ ದ್ವೀಪ]], [[ಸುಮಾತ್ರ]], [[ಮಲೇಷಿಯಾ]] ಮುಂತಾದ ಆಗ್ನೇಯ [[ಏಷಿಯಾ|ಏಷಿಯಾದ]] ಪ್ರದೇಶಗಳಲ್ಲಿ ಬೆಳೆದು ತಾವುಗಳೆ [[ಚೀನಾ|ಚೀನಾದೊಂದಿಗೆ]] ವ್ಯಾಪಾರಕ್ಕೆ ತೊಡಗಿದರು<ref>ಡಾಲ್ಬಿ ಪುಟ. ೯೩</ref>.
ಕರಿಮೆಣಸಿನ ಪುರಾತನ ಇತಿಹಾಸ ಆಗಾಗ, ಒಣಗಿದ ಫಲವಾದ "ಪೈಪರ್ ಲೋಗಂ"ಗೆ ಹತ್ತಿರವಾದ [[ಹಿಪ್ಪಲಿಯ]] ಇತಿಹಾಸದೊಂದಿಗೆ ಸಂಬಂಧ ಹೊಂದಿರುತ್ತದೆ ಅಥವಾ ತಪ್ಪಾಗೆ ತಿಳಿಯಲ್ಪಡುತ್ತದೆ. ರೋಮನರಿಗೆ ಎರಡರ ಬಗ್ಗೆಯೂ ತಿಳಿದಿದ್ದು ಎರಡನ್ನೂ ಅವರು "ಪೈಪರ್" ಎಂದು ಕರೆಯುತ್ತಿದ್ದರು. ವಸ್ತುತಃ ಹೊಸ ಜಗತ್ತಿನ ಖಾರ ಮೆಣಸಿನ ಪ್ರಸಿದ್ಧಿಯ ಮುನ್ನ ಹಿಪ್ಪಲಿಯ ಖ್ಯಾತಿ ಪತನವಾಗಿರಲಿಲ್ಲ. ಒಣಗಿಸಿದಾಗ ಹಿಪ್ಪಲಿಯ ರುಚಿಗೆ ಹಾಗು ಆಕಾರಕ್ಕೆ ಹೊಂದುವ ಖಾರ ಮೆಣಸನ್ನು [[ಯೂರೋಪ್|ಯೂರೋಪಿನ]] ಅನೇಕ ಸ್ಥಳಗಳಲ್ಲಿ ಬೆಳೆಸುವುದು ಸುಲಭವಾಗಿತ್ತು.
"https://kn.wikipedia.org/wiki/ಕರಿಮೆಣಸು" ಇಂದ ಪಡೆಯಲ್ಪಟ್ಟಿದೆ