ಥಿಯೋಡರ್ ಮಾಮ್ಸನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
(~~~~)
 
No edit summary
೧ ನೇ ಸಾಲು:
 
ಥಿಯೊಡೋರ್ ಮಾಮ್ ಸನ್ (Christian Mathias Theodore Mommsen)
೧೯೦೨
 
ಎರಡನೆಯ ನೋಬೆಲ್ ಸಾಹಿತ್ಯ-ಪ್ರಶಸ್ತಿ ವಿಜೇತ
(೧೮೧೭-೧೯೦೩)
==ನೋಬೆಲ್ ಪಾರಿತೋಷಕದ ಆಯೋಜನೆಯಾದಾಗ, 'ಎರಡನೆಯ ನೋಬೆಲ್ ಸಾಹಿತ್ಯ-ಪ್ರಶಸ್ತಿ ವಿಜೇತ,' ನೆಂಬ ಹೆಗ್ಗಳಿಕೆ ಈತನಿಗೆ==
 
ಜರ್ಮನಿಯ ವಿದ್ವಾಂಸರು. ಅವರ 'ರೋಮನ್ ಹಿಸ್ಟೊರಿ,' ಎಂಬ ಕೃತಿಗೆ ನೋಬೆಲ್ ಬಹುಮಾನ ದೊರೆತಿದೆ. ಶುದ್ಧ ಸಾಹಿತ್ಯ ಪ್ರಕಾರದ್ದಲ್ಲದ ಕೃತಿಗಳನ್ನು ಮಾತ್ರ ಬರೆದು ನೋಬೆಲ್ ಪ್ರಶಸ್ತಿಗೆದ್ದ ಕೆಲವೇ ವಿದ್ವಾಂಸರಲ್ಲಿ ಒಬ್ಬರು.
ತಂದೆ ಒಬ್ಬ ಬಡ-ಲೂಥರನ್-ಪಾದ್ರಿ. ಬಡತನದಿಂದ ರವರ ಓದು ಮನೆಯಲ್ಲಿ ಮಾತ್ರ ಸೀಮಿತವಾಗಿತ್ತು. ಅವರು ಕೆಲವು ಅಪ್ರಸಿದ್ಧ ವಿದ್ಯಾಸಂಸ್ಥೆಗಳಲ್ಲಿ ಪ್ರವೇಶ ಪಡೆಯಬೇಕಾಯಿತು. ಗ್ರೀಕ್ ಮತ್ತು ಲ್ಯಾಟಿನ್ ಭಾಷೆಗಳಲ್ಲಿ ಪಾಂಡಿತ್ಯಪಡೆದನಂತರ ಅವರು ರೋಮನ್ 'ನ್ಯಾಯ ಶಾಸ್ತ್ರ' ದ ಬಗೆಗೆ ಸಂಶೋಧನೆ ನಡೆಸಿದರು. ಫ್ರಾನ್ಸ್ ಮತ್ತು ಇಟಲಿಗಳಿಗೆ ಹೋಗಿ ಮಹತ್ವದ ಹಸ್ತಪ್ರತಿಗಳ ಅಧ್ಯಯನ ನಡೆಸಿದರು. ೧೮೪೮ ರಲ್ಲಿ 'ಲೀಫ್ ಝಿಗ್ ' ವಿಶ್ವವಿದ್ಯಾಲಯದಲ್ಲಿ ಕಾನೂನು ಶಾಸ್ತ್ರದ ಪ್ರೊಫೆಸರ್ ಆದರು. ಮುಂದೆ ಜ್ಯೂರಿಚ್, ಬ್ರೆಸ್ಲೋ, ಬರ್ಲಿನ್, ವಿಶ್ವವಿದ್ಯಾಲಯದಲ್ಲೂ, ಬರ್ಲಿನ್ ಅಕ್ಯಾಡಮಿ ಆಫ್ ಸೈನ್ಸ್ ನಲ್ಲಿಯೂ ಪ್ರೊಫೆಸರ್ ಆಗಿ ದುಡಿದರು.
==೧,೫೦೦ ಕ್ಕೂ ಹೆಚ್ಚು ಗ್ರಂಥ ರಚನಾಕಾರ, ಥಿಯೋಡರ್ ಮಾಮ್ ಸನ್ ಸದಾ ಸಾಹಿತ್ಯಚಿಂತಕ, ಹಾಗೂ ಸಾಹಿತ್ಯಪ್ರೇಮಿ==
 
'ರೋಮನ್ ಹಿಸ್ಟೊರಿ,' (Romische Geschiclate) ಎಂಬ ಮೂರು ಸಂಪುಟಗಳ ಕೃತಿಗಾಗಿ 'ನೋಬೆಲ್ ಬಹುಮಾನ' ಪಡೆದರೂ ಅವರ ಅಗಾಧ ವಿದ್ವತ್ತಿನ ಫಲವಾಗಿ ಸೃಶ್ಟಿಯಾದ ನೂರಾರು ಇತರ ಕೃತಿಗಳೂ ಬಹಳ ಮಹತ್ವದ್ದಾಗಿವೆಯೆಂದು ಹೇಳಲಾಗಿದೆ. ಅವರು ಸುಮಾರು ೧, ೫೦೦ ಕ್ಕಿಂತ ಹೆಚ್ಚು ಕೃತಿಗಳನ್ನು ಬರೆದಿದ್ದರೆಂದು ದಾಖಲೆಗಳು ತಿಳಿಸುತ್ತವೆ. ಈಗಿನ 'ಜರ್ಮನ ಸಿವಿಲ್ ಕೋಡ್' ರಚನೆಗೆ ಅವರ ಪುಸ್ತಕಗಳು ಬಹಳ ನೆರವಾಗಿವೆ. ಅವರು 'ಬರ್ಲಿನ್ ಅಕ್ಯಾಡಮಿ' ಯಲ್ಲಿ ಇರಿಸಿರುವ ರೋಮನ್ ಶಾಸನಗಳ ಸಂಗ್ರಹವೇ ದೊಡ್ಡ ಕೊಡುಗೆ ಎಂದು ವಿದ್ವಾಂಸರು ಹೇಳುತ್ತಾರೆ. ಬೆಳಿಗ್ಯೆ ನಸುಕಿನಲ್ಲೇ ಎದ್ದು, ತಮ್ಮ ಗ್ರಂಥಾಲಯದಲ್ಲಿ ಕುಳಿತು ಕೆಲಸ ಆರಂಭಿಸುತ್ತಿದ್ದರು. ದಾರಿಯಲ್ಲಿ ನಡೆಯುವಾಗಲೂ ಪುಸ್ತಕ ಓದುತ್ತಾ ಹೋಗುತ್ತಿದ್ದರಂತೆ.
 
 
"https://kn.wikipedia.org/wiki/ಥಿಯೋಡರ್_ಮಾಮ್ಸನ್" ಇಂದ ಪಡೆಯಲ್ಪಟ್ಟಿದೆ