ಯಳಗೋಡು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
 
೧ ನೇ ಸಾಲು:
{{ಉಲ್ಲೇಖ}}
 
{{Wikify}}
 
ಯಳಗೋಡು ಚಿತ್ರದುರ್ಗ ತಾಲ್ಲೂಕಿನ ಭರಮಸಾಗರ ಹೋಬಳಿಗೆ ಸೇರಿದ ಒಂದು ಗ್ರಾಮವಾಗಿದೆ. ಚಿತ್ರದುರ್ಗದಿಂದ ಜಗಳೂರಿಗೆ ಬಿದರಕೆರೆಯ ಮೇಲಿನಿಂದ ಹಾದು ಹೋಗುವ ಮಾರ್ಗದಲ್ಲಿ ಮುದ್ದಾಪುರದ ಸಮೀಪ ಈ ಗ್ರಾಮ ಬರುತ್ತದೆ. ಈ ಊರು ತನ್ನದೇ ಆದ ಐತಿಹಾಸಿಕ ಹಿನ್ನಲೆಯನ್ನು ಹೊಂದಿದೆ. ಕೃಷಿ ಪ್ರಧಾನವಾದ ಈ ಊರಿನಲ್ಲಿ ಎಲ್ಲಾ ಜನಾಂಗದ ಜನರೂ ಶಾಂತಿ ಸೌಹಾರ್ದತೆಯಿಂದ ಬಾಳುತ್ತಿದ್ದಾರೆ. ಈ ಊರಿನಲ್ಲಿ ಅನೇಕ ದೆವಾಲಯಗಳಿವೆ . ಪ್ರಾಚೀನವಾದ ಒಂದು ಕೆರೆಯೂ ಇದೆ. ಇಲ್ಲಿ ಪ್ರಸಿದ್ಧ ಭೋಗೇಶ್ವರನ ದೇವಾಲಯವಿದೆ. ದೇವಾಲಯದ ಬಳಿ ವೀರಗಲ್ಲೊಂದಿದೆ. ಒಂದು ಶಾಸನದ ಪ್ರಕಾರ ಕ್ರಿ ಶ 1090 ನೇ ವ್ಯಯ ಸಂವತ್ಸರದಲ್ಲಿ ಚೈತ್ರ ಶುದ್ಧ ಪಾಡ್ಯದ ಸೋಮವಾರದಂದು ಉತ್ತರಾಯಣ ಸಂಕ್ರಮಣದ ನಿಮಿತ್ತ ಮಲ್ಲಿಕಾರ್ಜುನ ಪಂಡಿತ ದೇವರಿಗೆ(ಭೋಗೇಶ್ವರ ದೇವರಿಗೆ) ದೇವರ ನೈವೇದ್ಯಕ್ಕೆ ದಾನ ಮಾಡಿದ ಬಗ್ಗೆ ಉಲ್ಲೇಖವಿದೆ.
 
"https://kn.wikipedia.org/wiki/ಯಳಗೋಡು" ಇಂದ ಪಡೆಯಲ್ಪಟ್ಟಿದೆ