"ಗೊಡಚಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಷಢಕ್ಷರದೇವ ವೀರಭದ್ರ ರಚಿತ ಕಾವ್ಯ ಸೇರಿಸಿದೆ
(ಜಾತ್ರೆಯ ಬಗ್ಗೆ ಮಾಹಿತಿ)
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಚು (ಷಢಕ್ಷರದೇವ ವೀರಭದ್ರ ರಚಿತ ಕಾವ್ಯ ಸೇರಿಸಿದೆ)
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
[[ವರ್ಗ:ಬೆಳಗಾವಿ ಜಿಲ್ಲೆ]]
[[ವರ್ಗ:ರಾಮದುರ್ಗ ತಾಲ್ಲೂಕು]]
[[ರಾಮದುರ್ಗ]] ತಾಲೂಕಿನ ಗೊಡಚಿ ಗ್ರಾಮದ ಗೊಡಚಿ ವೀರಭದ್ರೇಶ್ವರ ದೇವಾಲಯ ಜಾತ್ರೆಯು (ಅಕ್ಟೋಬರ್ - ನವೆಂಬರ್ ) ತಿಂಗಳಲ್ಲಿ ಜರುಗುತ್ತದೆ. ಶ್ರೀಕ್ಷೇತ್ರ ಗೊಡಚಿ ಶ್ರೀ ವೀರಭದ್ರೇಶ್ವರ ದೇವಸ್ಥಾನವು "ಉತ್ತರ ಕರ್ನಾಟಕದ [[ಧರ್ಮಸ್ಥಳ]]"ವೆಂದೇ ಪ್ರಖ್ಯಾತಿಯಾದ ರಾಮದುರ್ಗ ತಾಲೂಕಿನ ಪುಣ್ಯಕ್ಷೇತ್ರವಾಗಿದೆ. ಗೊಡಚಿ ಕ್ಷೇತ್ರದಲ್ಲಿ ಶ್ರೀವೀರಭದ್ರೇಶ್ವರ ದೇವಸ್ಥಾನ, ಮುದಿ ವೀರಭದ್ರೇಶ್ವರ ದೇವಸ್ಥಾನ, ಶ್ರೀ ಭದ್ರಕಾಳಿ ಮಾತೆಯ ದೇವಸ್ಥಾನ ಮತ್ತು ವೀರಶೈವ ಮಠ ಮುಂತಾದ ದೇವಸ್ಥಾನಗಳಿವೆ. ವೀರಭದ್ರೇಶ್ವರ ಜಾತ್ರೆಯು ಪ್ರತಿ ವರ್ಷ ಹೊಸ್ತಿಲ ಹುಣ್ಣಿಮೆಯಂದು ಆಚರಿಸುತ್ತಾರೆ. ಈ ಜಾತ್ರೆಯು ರಾಮದುರ್ಗ ತಾಲೂಕಿನ ಅತಿ ಹೆಚ್ಚು ಭಕ್ತಾದಿಗಳು-ಜನ ಸಾಮಾನ್ಯರೆಲ್ಲರೂ ಒಂದಾಗಿ  ಸೇರಿ ಆಚರಿಸುವ  ಜಾತ್ರೆಯಾಗಿದೆ. ಈ ಜಾತ್ರೆಯಲ್ಲಿ ಬಳವಲು ಕಾಯಿ, ಬಾರಿ ಹಣ್ಣನ್ನು ಅತಿ ಹೆಚ್ಚಾಗಿ ಮಾರುವುದರಿಂದ "ಬಳವಲುಕಾಯಿ ಜಾತ್ರೆ" ಎಂತಲೂ ಕರೆಯುತ್ತಾರೆ. ಪ್ರತಿ ವರ್ಷ ಜಾತ್ರೆಯು ೫ ದಿನಗಳವರೆಗೆ ನಡೆಯುತ್ತದೆ, ಜಾತ್ರೆಯಲ್ಲಿ ಪ್ರಸಿದ್ಧ ಸಾಮಾಜಿಕ-ಜಾನಪದ ನಾಟಕ ಕಂಪನಿಗಳು ಹೆಸರುವಾಸಿಯಾಗಿವೆ. ೫ನೆಯ ದಿನ ಲಕ್ಷ ದೀಪೋತ್ಸವ ನಡೆಯುತ್ತದೆ. {{stub}}
 
ಸಕ್ಷ ಮದಕ್ಷ ಶಿಕ್ಷಣ ವಿಚಕ್ಷಣ ಸುಕ್ಷಣ ಲಕ್ಷಣೇಕ್ಷಣಾ |
 
ರಕ್ಷಿತ ಲಕ್ಷಿತೇಶ್ವರ ಮುಮುಕ್ಷು ಜಿತಾಕ್ಷ ಮಹೋಕ್ಷ ಲಕ್ಷ ||
 
ಫಾಲಾಕ್ಷ ತರಕ್ಷು ರಾಕ್ಷಸ ವಿಪಕ್ಷ ವಳಕ್ಷ ಸರಕ್ಷ ದೇಹಮೋ |
 
ಹಕ್ಷಯ ದಕ್ಷ ರಕ್ಷಿ ಪುದದೋಕ್ಷ ಜಪಕ್ಷ ಶಿವಾಕ್ಷಿ ಸಂಭವಾ ||
 
- ಷಢಕ್ಷರದೇವ (ರಾಜಶೇಖರ ವಿಳಾಸ)
 
[[ಷಡಕ್ಷರದೇವ]] ಬರೆದ  '''ರಾಜಶೇಖರ ವಿಳಾಸ''' ಕಾವ್ಯದಲ್ಲಿ ಶ್ರೀ ವೀರಭದ್ರದೇವರ ಕುರಿತು ಸ್ತುತಿಸಿದ ಈ ಪದ್ಯ ವಿಶೇಷತೆಯನ್ನೊಳಗೊಂಡಿದೆ ಅದು ಏನೆಂದರೆ, ಶ್ರೀ ವೀರಭದ್ರದೇವನು ವೀರರಸದ ಅಧಿದೇವನು. ಆತನ ವರ್ಣನೆಯನ್ನು ಈ ಪದ್ಯದಲ್ಲಿ ೨೫ ಬಾರಿ ಕ್ಷ ಕಾರವನ್ನು ಬಳಸಿ ಬರೆದಿದ್ದಾನೆ. ಈ ಪದ್ಯ ಓದುಗರಿಗೆ-ಭಕ್ತರಿಗೆ ವೀರಭದ್ರದೇವನ ಕೆಚ್ಚು, ವೀರತ್ವಗಳ ನೆನಪು ತಂದು ಕೊಡುವಂಥದ್ದಾಗಿದೆ.{{stub}}
೩೩

edits

"https://kn.wikipedia.org/wiki/ವಿಶೇಷ:MobileDiff/1014487" ಇಂದ ಪಡೆಯಲ್ಪಟ್ಟಿದೆ