ಸದಸ್ಯ:Maheshmmhshm/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
 
೧೪ ನೇ ಸಾಲು:
 
ಶ್ರೀ ಸಿದ್ಧಾರೂಢ ಸ್ವಾಮಿಗಳು (೧೮೩೭-೧೯೨೯) ಒಬ್ಬ ಹಿಂದೂ ದಾರ್ಶನಿಕ ಹಾಗು ಆಧುನಿಕ ಹಿಂದೂ ಗುರು ಪರಂಪರೆಯಲ್ಲಿ ಅದ್ವೈತ ವೇದಾಂತ ಪಂಥದಲ್ಲಿ ಪ್ರಮುಖರಾಗಿ ಗುರುತಿಸಿಕೊಳ್ಳುವರು. ಇವರ ಕಾರ್ಯ ಸ್ಥಾನವಾಗಿತ್ತು [[ಕರ್ನಾಟಕ]]ದ [[ಹುಬ್ಬಳ್ಳಿ]]. ಹುಬ್ಬಳ್ಳಿಯಲ್ಲಿ ಸಿದ್ಧಾರೂಢರ ಮಠವಿದ್ದು ಅದೊಂದು ಹಿಂದೂ ಪವಿತ್ರ ಸ್ಥಳ ಹಾಗು ಹುಬ್ಬಳ್ಳಿಯ ಪ್ರಮುಖ ಆಕ್ರ್ಷಣೆಗಳಲ್ಲೊಂದಾಗಿ ಗುರುತಿಸಿಕೊಂಡಿದೆ.
 
 
===ರಿಯಲ್ ಎಸ್ಟೇಟ್(ನಿಯಂತ್ರಣ ಹಾಗು ಅಭಿವೃದ್ಧಿ) ಕಾಯ್ದೆ ೨೦೧೬===
 
ಭಾರತದಲ್ಲಿ ಸ್ಥಿರಾಸ್ತಿಗಳ ಮೇಲೆ ಹಣ ಹೂಡುವವರ ಹಾಗು ಕೊಳ್ಳುವವರ ಹಿತಾಸಕ್ತಿ ಕಾಪಾಡುವುದಕ್ಕೋಸ್ಕರ [[ಸಂವಿಧಾನ]]ದ ಚೌಕಟ್ಟಿನಲ್ಲಿ ರಚನೆಯಾದ ಕಾಯ್ದೆಯೇ ಈ ರಿಯಲ್ ಎಸ್ಟೇಟ್ ರೇಗುಲೇಷನ್ ಕಾಯ್ದೆ. ಈ ಕಾಯಿದೆಯು ಪ್ರತೀ ರಾಜ್ಯದಲ್ಲೂ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರವನ್ನು ಹೊಂದಿ ಆ ಮೂಲಕ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ನಡೆಯುವ ವಹಿವಾಟುಗಳ ಮೇಲೆ ನಿಗಾ ಇಡುವುದು ಮಾತ್ರವಲ್ಲದೆ ಆ ಕ್ಷೇತ್ರಕ್ಕೆ ಸಂಬಂಧಪಟ್ಟ ವ್ಯಾಜ್ಯಗಳನ್ನು ಶೀಘ್ರವಾಗಿ ಪರಿಹರಿಸುವ ನ್ಯಾಯಿಕ ವ್ಯವಸ್ಥೆಯಾಗಿ ಕಾರ್ಯ ನಿರ್ವಹಿಸುತ್ತದೆ. ಮಾರ್ಚ್ ೧೦, ೨೦೧೬ ರಲ್ಲಿ ಈ ಕಾಯ್ದೆ [[ರಾಜ್ಯಸಭೆ]]ಯಲ್ಲಿ ಅನುಮೋದನೆ ಪಡೆದರೆ ಅದೇ ವರ್ಷದ ಮಾರ್ಚ್ ೧೫ ರಂದು [[ಲೋಕಸಭೆ]]ಯಲ್ಲಿ ಅನುಮೋದನೆ ಪಡೆಯಿತು. ಮುಂದೆ ಮೇ ೧,೨೦೧೬ ರಿಂದ ಜಮ್ಮು ಕಾಶ್ಮೀರ ಹೊರತು ಪಡಿಸಿ ಈ ಕಾಯ್ದೆ ಜಾರಿಯಾಯಿತು. ಈ ಕಾಯ್ದೆಯಡಿಯಲ್ಲಿ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ನಿಯಮಗಳನ್ನು ರೂಪಿಸಲು ಅವಕಾಶವಿದ್ದು ಆರು ತಿಂಗಳ ಕಾಲಾವಧಿಯೊಳಗೆ ಅವುಗಳನ್ನು ಜಾರಿಗೊಳಿಸಬೇಕಾಗಿದೆ.
 
==ಇತಿಹಾಸ==
ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ಮಸೂದೆಯನ್ನ [[ಯುಪಿಎ-೨]]ರ ಸರ್ಕಾರ ೨೦೧೩ರಲ್ಲಿ ಸಂಸತ್ತಿಗೆ ಪರಿಚಯಿಸಿತ್ತು. ಮುಂದೆ ಡಿಸೆಂಬರ್ ೨೦೧೫ ರಲ್ಲಿ ಭಾರತದ [[ಕೇಂದ್ರ ಸಚಿವ ಸಂಪುಟ]] ಆ ಮಸೂದೆಗೆ ೨೦ ತಿದ್ದುಪಡಿಗಳನ್ನು ರಾಜ್ಯಸಭಾ ಸಮಿತಿಯ ಸಲಹೆಯ ಮೇರೆಗೆ ಮಾಡಿತು. ಅದಕ್ಕೂ ಮುನ್ನ ಇದೇ ಮಸೂದೆಯನ್ನು ಆಯ್ಕೆ ಸಮಿತಿಯು ಅವಲೋಕಿಸಿ ತಮ್ಮ ನಿಲುವುಗಳ ಕುರಿತು ವಿಸ್ಮೃತ ವರದಿಯೊಂದನ್ನ ೨೦೧೫ ರ ಜುಲೈನಲ್ಲಿ ಸರ್ಕಾರಕ್ಕೆ ಸಲ್ಲಿಸಿತ್ತು. ಆದಾಗ್ಯೂ [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]], [[ಎಡರಂಗ]] ಹಾಗು [[ಎಐಡಿಎಂಕೆ]] ಪಕ್ಷಗಳು ಅಂತಿಮ ಮಸೂದೆಯ ಕುರಿತು ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸಿದವು. ಆದರೂ [[ಲೋಕಸಭೆ]] ಹಾಗು [[ರಾಜ್ಯಸಭೆ]]ಗಳಲ್ಲಿ ಮಸೂದೆ ಯಶಸ್ವಿಯಾಗಿ ಅಂಗೀಕಾರವಾಯಿತು.
 
==ನಿಬಂಧನೆಗಳು==
===ನೋಂದಣಿ===
೫೦೦ ಚದರ ಮೀಟರ್ ಅಥವಾ ಎಂಟು ಅಪಾರ್ಟ್ಮೆಂಟುಗಳನ್ನು ಮೀರಿ ಯಾವುದಾದರೂ ವಾಣಿಜ್ಯ ಸಂಬಂಧಿ ಅಥವಾ ಜನವಾಸ ಸಂಬಂಧಿ ಕಟ್ಟಡ ನಿರ್ಮಾಣ ಯೋಜನೆಗಳು ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದಲ್ಲಿ ನೋಂದಾಯಿಸಿಕೊಳ್ಳುವುದು ಅತ್ಯವಶ್ಯಕವಾಗಿರುತ್ತದೆ. ಕಾಯ್ದೆಯು ಜಾರಿಯಾದ ದಿನ ಯಾವ ಯೋಜನೆಗಳು ಪೂರ್ಣಗೊಂಡಿಲ್ಲವೋ ಅವುಗಳು ಮೂರು ತಿಂಗಳ ವಾಯಿದೆಯ ಒಳಗಾಗಿ ರೇರಾ ಪ್ರಾಧಿಕಾರದಲ್ಲಿ ನೋಂದಾಯಿಸಿಕೊಳ್ಳಬೇಕಾಗಿರುತ್ತದೆ. ರೇರಾ ನೋಂದಣಿಗಾಗಿ ಸಲ್ಲಿಸಿದ ಅರ್ಜಿಯನ್ನು ಸ್ವೀಕರಿಸಲು ಅಥವಾ ತಿರಸ್ಕರಿಸಲು ಪ್ರಾಧಿಕಾರಕ್ಕೆ ಇರುವ ಗರಿಷ್ಟ ಸಾಮ್ಯ ೩೦ ದಿನಗಳಾಗಿರುತ್ತವೆ. ಅರ್ಜಿ ಸ್ವೀಕೃತಿಗೊಂಡ ನಂತರ ಆ ಯೋಜನೆಯ ಅರ್ಜಿದಾರರಿಗೆ ನೋಂದಣಿ ಸಂಖ್ಯೆ, ಪಾಸ್ವರ್ಡ್ ಗಳನ್ನು ನೀಡಿ ಅವಶ್ಯ ಮಾಹಿತಿಗಳನ್ನು ಪ್ರಾಧಿಕಾರದ ಜಾಲ ತಾಣದ ಅರ್ಜಿಯಲ್ಲಿ ತುಂಬಬೇಕಾಗಿರುತ್ತದೆ. ಆ ಮೂಲಕ ನೋಂದಣಿ ಪ್ರಕ್ರಿಯೆ ಮುಗಿಸಲು ತಪ್ಪಿದವರಿಗೆ ಯೋಜನೆಯ ಒಟ್ಟು ಮೊತ್ತದ ಶೇ.೧೦ ರಷ್ಟನ್ನು ದಂಡವಾಗಿ ವಿಧಿಸಲಾಗುತ್ತದೆ ಅಥವಾ ಮೂರು ವರ್ಷಗಳ ಕಾಲಾವಧಿಗೆ ಕಾರಾಗೃಹ ಶಿಕ್ಷೆಗೆ ಗುರಿ ಮಾಡಲಾಗುತ್ತದೆ. ರಿಯಲ್ ಎಸ್ಟೇಟ್ ಏಜೆಂಟುಗಳು ಪ್ರಾಧಿಕಾರದಲ್ಲಿ ನೋಂದಾಯಿಸಿಕೊಳ್ಳುವುದು ಅವಶ್ಯವಾಗಿರುತ್ತದೆ. ಅಂತಹ ಏಜೆಂಟುಗಳಿಗೆ ಒಂದು ನೋಂದಣಿ ಸಂಖ್ಯೆಯನ್ನು ಆ ರಾಜ್ಯಕ್ಕೆ/[[ಕೇಂದ್ರಾಡಳಿತ ಪ್ರದೇಶ]]ಕ್ಕೆ ಸಂಬಂಧಪಟ್ಟಂತೆ ನೀಡಲಾಗುತ್ತದೆ. ಆ ನೋಂದಣಿ ಸಂಖ್ಯೆಯನ್ನು ಆತ ಮಧ್ಯಸ್ಥಿಕೆ ವಹಿಸುವ ಎಲ್ಲಾ ಖರೀದಿ/ಮಾರಾಟ ಪ್ರಕ್ರಿಯೆಗಳಲ್ಲೂ ನಮೂದಿಸುವುದು ಅವಶ್ಯವಾಗಿರುತ್ತದೆ.
 
===ಗ್ರಾಹಕರ ರಕ್ಷಣೆ===
ಯೋಜನೆಯ ಪೂರ್ಣ ಮೊತ್ತದ ಶೇ.೭೦ ರಷ್ಟನ್ನು ಬ್ಯಾಂಕುಗಳ ಮುಖಾಂತರವೇ ಸಂದಾಯ ಮಾಡಬೇಕಾಗಿದ್ದು ಈ ಕಾಯ್ದೆ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಹರಿದು ಬರುವ ಕಾಳ ಧನವನ್ನು ತಡೆಯಲು ಪ್ರಮುಖ ಮಾರ್ಗವಾಗಿದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ ಉಪಯೋಗವಾಗುವ ಒಂದು ಅಂಶವೆಂದರೆ ಬಿಲ್ಡರ್ ಗಳು ಕಟ್ಟಿದ ಕಟ್ಟಡವನ್ನು ಮಾರಾಟ ಮಾಡಬೇಕಾದ ಸಂಧರ್ಭದಲ್ಲಿ ದರ ನಿಗದಿಪಡಿಸುವಾಗ ಕಟ್ಟಡದೊಳಗಿನ ಕಾರ್ಪೆಟ್ ಹಾಸಬಲ್ಲ ಪ್ರದೇಶಕ್ಕೆ ಮಾತ್ರ ದರ ನಿಗದಿ ಮಾಡಬೇಕು. ಈ ಪ್ರದೇಶಗಳಲ್ಲಿ ಅಡುಗೆ ಮನೆ, ಶೌಚಾಲಯಗಳೂ ಸೇರಿಕೊಳ್ಳುತ್ತವೆ. ಇದರ ಹೊರತು ಇನ್ಯಾವುದೇ ಪ್ರದೇಶಗಳ ಮೇಲೆ ದರ ವಿಧಿಸುವಂತಿಲ್ಲ.
 
===ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ಮತ್ತು ನ್ಯಾಯಮಂಡಳಿ===
 
==ನಿಯಮಗಳು==
 
==ಆಕರಗಳು==
 
 
===ಪ್ರವಾಸಿ ಭಾರತೀಯ ದಿವಸ===