ಚಂದ್ರಶೇಖರ ಕಂಬಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: Reverted ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ Android app edit
ಚು Reverted edits by Dukolty (talk) to last revision by 2409:4071:2102:A96F:0:0:8F3:D0A4
೧೯ ನೇ ಸಾಲು:
==ಜನನ, ವಿದ್ಯಾಭ್ಯಾಸ==
 
ಡಾ. ಚಂದ್ರಶೇಖರ ಕಂಬಾರ (ಜನನ - ಜನವರಿ ೨, ೧೯೩೭) [[ಬೆಳಗಾವಿ ಜಿಲ್ಲೆ]] ಘೋಡಿಗೇರಿ ಗ್ರಾಮದಲ್ಲಿ ಬಸವಣ್ಣೆಪ್ಪ ಕಂಬಾರ ಹಾಗೂ ಚೆನ್ನಮ್ಮ ದಂಪತಿಯ ಪುತ್ರನಾಗಿ ಜನಿಸಿದರು. ಗೋಕಾಕ್ ನ ಮುನ್ಸಿಪಲ್ ಪ್ರೌಢಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣ ಪಡೆದರು. ಬಳಿಕ ಬೆಳಗಾವಿ ಲಿಂಗರಾಜ ಕಾಲೇಜಿನಲ್ಲಿ ಬಿಎ ಪದವಿ, ೧೯೬೨ರಲ್ಲಿ 'ಕರ್ನಾಟಕ ವಿವಿ'ಯಿಂದ ಎಂ.ಎ ಪದವಿ ಹಾಗೂ ಪಿ.ಎಚ್.ಡಿ.ಪದವಿ ಪಡೆದಿದ್ದಾರೆ.
[[File:Jokumaraswamy-calcutta.jpg|thumb|ಕಲ್ಕತ್ತದಲ್ಲಿ ನಡೆದ ಜೋಕುಮಾರಸ್ವಾಮಿ ಪ್ರದರ್ಶನದ ಪಾತ್ರ ಬಳಗದಲ್ಲಿ ಕಂಬಾರರೂ ಇದ್ದಾರೆ]]
 
==ವೃತ್ತಿಜೀವನ==
 
*ಕಂಬಾರರು ಯುವಕರಾಗಿದ್ದಾಗ [[ಧಾರವಾಡ]]ದ ಕವಿ ಸಮ್ಮೇಳನದಲ್ಲಿ ಕವಿತೆಯೊಂದನ್ನು ಓದಿದ್ದರಂತೆ, ಖ್ಯಾತ ಕವಿಗಳೊಬ್ಬರು ಕಂಬಾರರ ಕವಿತೆ ಅಲ್ಲಿ ಓದಿದ ಎಲ್ಲ ಕವಿಗಳಿಗಿಂತ ಭಿನ್ನವಾಗಿದ್ದದ್ದು ಎಲ್ಲರ ಗಮನಕ್ಕೆ ಬಂದಿದ್ದರೂ, ಅದ್ಯಕ್ಷರು ಕಂಬಾರರ ಬಗ್ಗೆ ಕುಹಕದ ಮಾತು ಹೇಳಿದ್ದರು. "ಕಬ್ಬಿಣ ಕಾಸುವವರೂ ಈಗ ಕಾವ್ಯ ಬರೆಯುತ್ತಿದ್ದಾರೆ " ಎಂಬ ಅಧ್ಯಕ್ಷರ ಮಾತು ಕಂಬಾರರ ಸ್ವಾಭಿಮಾನವನ್ನೇ ಬಡಿದೆಬ್ಬಿಸಿತು.  
*ಅಂದೇ ಕಂಬಾರ ಕಾವ್ಯವನ್ನು ಪಳಗಿಸಿಕೊಳ್ಳಲು ನಿರ್ಧರಿಸಿದರಂತೆ. ಜಾನಪದ ಸೊಗಡನ್ನು ತಮ್ಮ ಬರವಣಿಗೆಯಲ್ಲಿ ಮೈದಾಳಿಸಿಕೊಂಡು ಬಂದಿರುವ ಚಂದ್ರಶೇಖರ ಕಂಬಾರರು ಹಲವು ಪ್ರತಿಭೆಗಳ ಸಂಗಮ. [[ಕವಿ]], [[ನಾಟಕ|ನಾಟಕಕಾರ]], ಸಂಗೀತ ನಿರ್ದೇಶಕ, [[ಚಲನಚಿತ್ರ ನಿರ್ದೇಶಕ]], [[ಅಧ್ಯಾಪಕ]], ಜಾನಪದ ತಜ್ಞ, ೨೦೦೪-೨೦೧೦ರವರೆಗೆ [[ಕಾಂಗ್ರೆಸ್ ಪಕ್ಷ]]ದಿಂದ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿದ್ದರು ಇತ್ಯಾದಿ.
*ಕಂಬಾರರು ಸ್ನಾತಕೋತ್ತರ ಶಿಕ್ಷಣದ ನಂತರ ಅವರ ಸಾಹಿತ್ಯದ ಗುರು ಎಂದೇ ಗುರುತಿಸಲ್ಪಟ್ಟ ಶ್ರೀ ಗೋಪಾಲಕೃಷ್ಣ ಅಡಿಗರು ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಸಾಗರದ [http://www.lbcollegesagara.in/ ಲಾಲ್ ಬಹದೂರ್ ಕಲಾ, ವಿಜ್ಞಾನ ಮತ್ತು ಎಸ್ ಬಿ ಸೊಲಬಣ್ಣ ಶೆಟ್ಟಿ ವಾಣಿಜ್ಯ  ಮಹಾವಿದ್ಯಾಲಯದಲ್ಲಿ] ಎರಡು ವರ್ಷಗಳ ಕಾಲ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.
*೨೦೧೯ ನೇ ಸಾಲಿನ ವಿದ್ಯಾಕಾಶಿ ಧಾರವಾಡದಲ್ಲಿ ನಡೆದ ೮೪ ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.
 
==ಕವಿ/ನಾಟಕಕಾರ==
"https://kn.wikipedia.org/wiki/ಚಂದ್ರಶೇಖರ_ಕಂಬಾರ" ಇಂದ ಪಡೆಯಲ್ಪಟ್ಟಿದೆ