ಬೆಂಗಳೂರು ಗಲಭೆ , ೨೦೨೦: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
( ಯಾವುದೇ ವ್ಯತ್ಯಾಸವಿಲ್ಲ )

೨೦:೨೮, ೧೨ ಆಗಸ್ಟ್ ೨೦೨೦ ನಂತೆ ಪರಿಷ್ಕರಣೆ

ಆಗಸ್ಟ್ ೧೧, ೨೦೨೦ ರ ರಾತ್ರಿ, ಕರ್ನಾಟಕ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹಿಂಸಾತ್ಮಕ ಗಲಭೆಗಳು ನಡೆದವು. 100 ಕ್ಕೂ ಹೆಚ್ಚು ಮುಸ್ಲಿಂ ಜನಸಮೂಹ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಶಾಸಕ, ಅಖಂಡ ಶ್ರೀವಾಸ ಮೂರ್ತಿ ಅವರ ನಿವಾಸಕ್ಕೆ ಬೆಂಕಿ ಹಚ್ಚಿ ದಾಳಿ ನಡೆಸಿದ್ದಾರೆ[೯]. ನಂತರ ಅದೇ ಜನಸಮೂಹವು ಡಿ.ಜೆ ಹಳ್ಳಿ ಪೊಲೀಸ್ ಠಾಣೆಯ ಮೇಲೆಯೂ ದಾಳಿಯನ್ನು ಮಾಡಿತು ಮತ್ತು ಅಲ್ಲಿ ನಿಲ್ಲಿಸಲಾಗಿದ್ದ ವಾಹನಗಳನ್ನು ಸುಟ್ಟುಹಾಕಲಾಯಿತು. ಶಾಸಕರ ಸಂಬಂಧಿಯೊಬ್ಬರು, ಪ್ರವಾದಿ ಮುಹಮ್ಮದ್ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿದ್ದರಿಂದ, ಜನಸಮೂಹ ಪ್ರತಿಭಟನೆಗೆ ಇಳಿಯಿತು ಎನ್ನಲಾಗಿದೆ. ಸುಮಾರು 3 ಗಂಟೆಗಳ ಕಾಲ ನಡೆದ ಗಲಭೆ ಮುಂದುವರೆಯಿತು[೧೦]. ಯಾವಾಗ ಇದು ನಿಯಂತ್ರಣಕ್ಕೆ ಬರಲಿಲ್ಲವೋ, ಪೋಲೀಸರು ಗಾಳಿಯಲ್ಲಿ ಗುಂಡನ್ನು ಹಾರಿಸಿದ್ದಾರೆ. ಆದರೂ ಕದಲದ ಜನರಿಂದ ಬೇಸತ್ತ ಪೋಲೀಸ್ ಪಡೆ, ಗೋಲಿಬಾರ್ ಶುರು ಹಚ್ಚಿದರು. ಇದರಿಂದಾಗಿ ಮೂವರು ಸಾವನ್ನಪ್ಪಿದರು[೧೧] ಮತ್ತು ಹಲವರಿಗೆ ಗಾಯಗಳಾಗಿವೆ. ಗಲಭೆಕೋರರು ನಡೆಸಿದ ದಾಳಿಯಲ್ಲಿ ಸುಮಾರು 60 ಪೊಲೀಸ್ ಸಿಬ್ಬಂದಿಗಳಿಗೆ ಗಾಯಗಳಾಗಿವೆ[೧೨] ಎಂದು ವರದಿಯಾಗಿದೆ.

೨೦೨೦ ಬೆಂಗಳೂರು ಗಲಭೆ
(ಮೇಲೆ) ಸುಟ್ಟು ಹೋಗಿರುವ ಗಾಡಿ , (ಕೆಳಗೆ) ಪಾರ್ಕಿಂಗ್‌ನಲ್ಲಿದ್ದ ನಾಗರಿಕ ವಾಹನಗಳು ಸುಟ್ಟುಹೋಗಿರುವುದು [೧]
ದಿನಾಂಕ೧೧ ಆಗಸ್ಟ್‌, ೨೦೨೦ [೨]
ಸ್ಥಳಬೆಂಗಳೂರು , ಭಾರತ
13°01′28″N 77°36′04″E / 13.0245453°N 77.6010688°E / 13.0245453; 77.6010688
ಕಾರಣಗಳುಫೇಸ್‌ ಬುಕ್‌ ನಲ್ಲಿ ಪ್ರವಾದಿ ಮಹಮ್ಮದ ವಿರುದ್ಧ ಅವಹೇಳನಕಾರಿ ಹೇಳಿಕೆ [೩]
ಗುರಿಗಳುಕಾಂಗ್ರೆಸ್‌ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಯವರ ಮನೆ ಮೇಲೆ ದಾಳಿ
ವಿಧಾನಗಳು
  • ಗಲಭೆ
  • ಬೆಂಕಿ ಹಚ್ಚುವುದು
  • ಕಲ್ಲು ತೋರಾಟ ಮತ್ತು ಪೋಲೀಸರ ಮೇಲೆ ಹಲ್ಲೆ
Casualties
ಸಾವು(ಗಳು)[೫]
ಗಾಯಗಳು೬೦ ಪೋಲೀಸ್‌ ಸಿಬ್ಬಂದಿಗಳು ಮತ್ತು ಹಲವು ಗಲಭೆಕೋರರು [೪]
ಬಂಧನ(ಗಳು)೧೪೦+ [೬]
Damages
All damages
  • ಪೋಲೀಸ್‌ ಆಯುಕ್ತರ‌ ೨ ಟೊಯೊಟಾ ಇನ್ನೋವಾ ಸೇರಿದಂತೆ ೧೦ ಗಾಡಿಗಳು[೭]
  • 250+ ವಾಹನಗಳು ಸುಟ್ಟುಹೋಗಿವೆ [೮]

ಹಿನ್ನೆಲೆ

ಕಾಯ್ದಿರಿಸಿದ ವಿಧಾನಸಭಾ ಕ್ಷೇತ್ರದ, ಕಾಂಗ್ರೆಸ್ ಶಾಸಕರೊಬ್ಬರ ಸಂಬಂಧಿಯೊಬ್ಬರು ಆಗಸ್ಟ್ ೧೧, ೨೦೨೦ ರ ಸಂಜೆ ಫೇಸ್‌ಬುಕ್ ಪೋಸ್ಟ್ ಈ ಎಲ್ಲಾ ಗಲಭೆಗೆ ಮೂಲ ಕಾರಣವಾಗಿದೆ. ನವೀನ್ ಹೆಸರಿನ ಸಂಬಂಧಿ, ಫೇಸ್‌ಬುಕ್ ನಲ್ಲಿ ಪ್ರವಾದಿ ಮುಹಮ್ಮದ್ ಅವರ ವಿರುದ್ಧ ಪೋಸ್ಟ್ ಒಂದನ್ನು ಹಂಚಿದ್ದರು. ಇದಕ್ಕೆ ಮಹಮ್ಮದ್ ಅನುಯಾಯಿಗಳಿಂದ ತೀವೃ ವಿರೋಧ ವ್ಯಕ್ತವಾಯಿತು. ರಾತ್ರಿ ಸುಮಾರು ೮-೯ ಗಂಟೆಯ ಹೊತ್ತಿಗೆ, ಬೆಂಗಳೂರಿನ ಕಾವಲ್ ಬೈರಸಂದ್ರದಲ್ಲಿರುವ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರ ಮನೆಯ ಹೊರಗೆ ದೊಡ್ಡ ಜನಸಮೂಹವೇ ಜಮಾಯಿಸಿತ್ತು. ಅಲ್ಲಿ "ಫೇಸ್‌ಬುಕ್ ನ ಅವಹೇಳನಕಾರಿ ಹೇಳಿಕೆಯ" ವಿರುದ್ಧ ಇವರು ಗರ್ಜಿಸಲು ಪ್ರಾರಂಭಿಸಿದರು. ಶ್ರೀನಿವಾಸ ಮೂರ್ತಿಯ ಸೋದರಳಿಯನೆಂದು ಹೇಳಲಾಗುವ ನವೀನ್‌ನನ್ನು ಬಂಧಿಸುವಂತೆ ಒತ್ತಾಯಿಸಿ ಜನಸಮೂಹ ಅಲ್ಲಿ ಅಕ್ಕಪಕ್ಕದಲ್ಲಿ ಸಿಕ್ಕ ವಸ್ತುಗಳಿಗೆ ಬೆಂಕಿ ಹಚ್ಚಲು ಪ್ರಾರಂಭಿಸಿದರು. ನೆರೆದಿದ್ದ ಜನರು, ಈ ವಿಧ್ವಂಸಕ ಕೃತ್ಯವನ್ನು ಪ್ರಾರಂಭಿಸಿದಾಗ, ಶಾಸಕರು ಮನೆಯಲ್ಲಿ ಇರಲಿಲ್ಲ. ಪ್ರತಿಭಟನಾಕಾರರು ಮನೆಯ ಮೇಲೆ ಕಲ್ಲುಗಳಿಂದ ದಾಳಿ ನಡೆಸಲು ಪ್ರಾರಂಭಿಸಿದರು[೧೩]. ಶಾಸಕರ ಮನೆಯ ಹೊರಗೆ ನಿಲ್ಲಿಸಿದ್ದ ಕಾರುಗಳಿಗೂ ಅಪಾರ ಹಾನಿ ಮಾಡಿದರು.

ಇದೇ ವೇಳೆ, ಮತ್ತೊಂದು ಗುಂಪು, ಪೊಲೀಸ್ ಠಾಣೆಗೆ ತೆರಳಿ ಶಾಸಕರ ಸೋದರಳಿಯ ವಿರುದ್ಧ ಎಫ್‌ಐಆರ್ ದಾಖಲಿಸಲು ಹೋದರು. ಆದರೆ ಪೊಲೀಸರು ಎಫ್‌ಐಆರ್ ಬರೆಯಲು ನಿರಾಕರಿಸಿದಾಗ, ಅವರು ನೇರವಾಗಿ ಡಿಜೆ ಹಳ್ಳಿ ಪೊಲೀಸ್ ಠಾಣೆಯ ಮೇಲೆ ಹಿಂಸಾತ್ಮಕವಾಗಿ ದಾಳಿ ನಡೆಸಿದಲ್ಲದೆ, ಅಲ್ಲಿದ್ದ ವಾಹನಗಳನ್ನು ಮತ್ತು ಇತರ ಪೀಠೋಪಕರಣಗಳನ್ನು ಧ್ವಂಸಗೊಳಿಸಿದರು[೧೪]. ಗಲಭೆಯಲ್ಲಿ ಕೆಲವರು, ಮೊಲೊಟೊವ್ ಕಾಕ್ಟೈಲ್ ಅನ್ನು ಸಹ ಬಳಸಿದರು. ಪರಿಸ್ಥಿತಿಯು ನಿಯಂತ್ರಣಕ್ಕೆ ಬಾರದಾಗ, ಪೊಲೀಸರು ಮೊದಲು ಗಾಳಿಯಲ್ಲಿ ಗುಂಡು ಹಾರಿಸಿದರು. ಬಳಿಕ ನಡೆದ ಗೋಲಿಬಾರ್ ನಲ್ಲಿ ಮೂವರು ಪ್ರತಿಭಟನಾಕಾರರ ಬಲಿಯಾಗಿದೆ. ಗಲಭೆಯಲ್ಲಿ 60 ಪೊಲೀಸರು ಗಾಯಗೊಂಡಿದ್ದಾರೆ ಎಂದು ಪೊಲೀಸರು ವರದಿ ಮಾಡಿದ್ದಾರೆ.

ಜನಸಮೂಹದ ಹಲವು ಸದಸ್ಯರು, ಇಸ್ಲಾಮಿಕ್ ಮೂಲಭೂತವಾದಿ ಸಂಘಟನೆಯಾದ ಪಿಎಫ್‌ಐನ ರಾಜಕೀಯ ದಳ ಎಸ್‌ಡಿಪಿಐನ ಬೆಂಬಲಿಗರು ಎಂದು ಆರೋಪಿಸಲಾಗಿದೆ. ಆದರೆ, ಎಸ್.ಡಿ.ಪಿ.ಐ ನ ಅಧ್ಯಕ್ಷರು ಈ ಆರೋಪವನ್ನು ತಳ್ಳಿಹಾಕಿದ್ದು, ಪೋಲೀಸರ ನಿರ್ಲಕ್ಷ್ಯವೇ ಗಲಭೆಗೆ ಮೂಲ ಕಾರಣ ಎಂದಿದ್ದಾರೆ.[೧೫]

ಪೊಲೀಸ್ ಕ್ರಮ

ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಗಲಭೆಕೋರರು ಜಮಾಯಿಸಿದ್ದರಿಂದ, ಹೆಚ್ಚುವರಿ ಪೋಲೀಸ್ ಪಡೆಗಳನ್ನು ನಿಯೋಜಿಸಲು ಆದೇಶಿಸಿಸಲಾಯಿತು. ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ನೇತೃತ್ವದ ಪೊಲೀಸರಿಗೆ ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿಯ ಕಿರಿದಾದ ಬೀದಿಗಳಲ್ಲಿ ಸಂಚರಿಸುವುದು ಕಷ್ಟಕರವಾಗಿತ್ತು. ಹಿರಿಯ ಅಧಿಕಾರಿಗಳು ಮತ್ತು ಪೊಲೀಸ್ ಉಪ ಆಯುಕ್ತ (ಪೂರ್ವ) ಎಸ್‌ಡಿ ಶರಣಪ್ಪ ಅವರು ಜನಸಮೂಹವನ್ನು ನಿಯಂತ್ರಿಸಲು ಪ್ರಯತ್ನಿಸಿದರೂ ವಿಫಲರಾದರು. ನಂತರ, ಪೊಲೀಸರು ಲಾಠಿಚಾರ್ಜ್ ಮೊರೆ ಹೋದರು ಮತ್ತು ಜನಸಮೂಹವನ್ನು ಚದುರಿಸಲು ಅಶ್ರುವಾಯು ನಿಯೋಜಿಸಲಾಯಿತು. ಪೊಲೀಸ್ ಕಮಿಷನರ್ ಕಮಲ್ ಪಂತ್ ಅವರ ಆದೇಶದ ಮೇರೆಗೆ, ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದರು.[೧೬] ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ಭಾರಿ ಪೊಲೀಸ್ ನಿಯೋಜನೆಯ ಪರಿಣಾಮ, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಯಿತು. ಬೆಂಗಳೂರು ಪೂರ್ವ-ವಿಭಾಗಕ್ಕೆ ಸೇರಿದ ಕನಿಷ್ಠ 150 ಪೋಲೀಸ್ ಸಿಬ್ಬಂದಿಯನ್ನು ತಡರಾತ್ರಿಯೇ ನಿಯೋಜಿಸಲಾಯಿತು.

ಬೆಂಗಳೂರಿನ ಜಂಟಿ ಪೊಲೀಸ್ ಆಯುಕ್ತ (ಅಪರಾಧ) ಸಂದೀಪ್ ಪಾಟೀಲ್ ಅವರ ಪ್ರಕಾರ ಗಲಭೆಗೆ ಸಂಬಂಧಿಸಿದಂತೆ, ಇದುವರೆಗೆ ಪೊಲೀಸರು 1೪೦ ಮಂದಿಯನ್ನು ಬಂಧಿಸಲಾಗಿದೆ. ಗಲಭೆಗೆ ಸಂಬಂಧಿಸಿದಂತೆ ಸ್ಥಳೀಯ ಎಸ್‌ಡಿಪಿಐ ನಾಯಕನನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರತಿಕ್ರಿಯೆ

ಇದರಲ್ಲಿ ಭಾಗಿಯಾದ ಗಲಭೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕರ್ನಾಟಕ ರಾಜ್ಯ ಸಿಎಂ ಬಿ.ಎಸ್.ಯಡಿಯುರಪ್ಪ ಆದೇಶಿಸಿದ್ದಾರೆ.[೧೭] ಯಾರು ಸರ್ಕಾರಿ ಮತ್ತು ಖಾಸಗಿ ಆಸ್ತಿಯನ್ನು ಹಾನಿಪಡಿಸಿದ್ದಾರೋ, ಅವರಿಂದಲೇ ನಾಶವನ್ನು ಭರಿಸುತ್ತೇವೆ ಎಂದು ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ ಹೇಳಿದ್ದಾರೆ.[೧೮]

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ[೧೯] ಮತ್ತು ಕಾಂಗ್ರೆಸ್ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್ ಸೇರಿದಂತೆ ಕಾಂಗ್ರೆಸ್ ನಾಯಕರು ಈ ಗಲಭೆಯು ಸಂಘಟಿತ ಜನಸಮೂಹ ಎಂಬುವುದನ್ನು ಅಲ್ಲಗೆಳೆದಿದ್ದಾರೆ. ಪ್ರಮುಖವಾಗಿ, ಸಾಮಾಜಿಕ ಮಾಧ್ಯಮದಲ್ಲಿ ಹಾಕಲಾಗಿದ್ದ ಅವಹೇಳನಕಾರಿ ಪೋಸ್ಟ್ ಒಂದನ್ನು ಮಾತ್ರ ವಿರೋಧಿಸಿದ್ದಾರೆ. ಆದರೆ, ರಾಜ್ಯ ಸರ್ಕಾರ ಮತ್ತು ಪೋಲೀಸರು ಗಲಭೆಗಯು ಯೋಜಿತ ಮತ್ತು ಸಂಘಟಿತವೆಂದು ಹೇಳಿದೆ[೨೦].

ಸೋದರಳಿಯ, ತನ್ನ ಫೇಸ್‌ಬುಕ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದು ಹೇಳಿಕೊಂಡಿದ್ದಾನೆ. ಶಾಸಕ, ಆಗಸ್ಟ್ 11 ಸಂಜೆ ವಿಡಿಯೋ ಸಂದೇಶದ ಮೂಲಕ ಶಾಂತಿ ಕೋರಿದ್ದಾರೆ.

ಉಲ್ಲೇಖಗಳು

  1. "Bengaluru Violence Photos: Violence breaks out in Pulakeshinagar over post shared by Congress MLA's nephew". Bangalore Mirror (in ಇಂಗ್ಲಿಷ್). 2020-08-12. Retrieved 2020-08-12.
  2. "Bengaluru: CCTV footage of mob outside Congress MLA's house accessed; 'violence continued for over 3 hours'". www.timesnownews.com (in ಇಂಗ್ಲಿಷ್). Retrieved 2020-08-12.
  3. Swamy, Rohini (2020-08-12). "Post about Prophet Muhammad triggers riots in Bengaluru, 3 killed as police opens fire". ThePrint (in ಅಮೆರಿಕನ್ ಇಂಗ್ಲಿಷ್). Retrieved 2020-08-12.
  4. Bharadwaj, Aditya (2020-08-12). "Three killed, 5 injured in police firing as Islamist riots over FB post in Bengaluru". The Hindu (in Indian English). ISSN 0971-751X. Retrieved 2020-08-12.
  5. "3 die after violence erupts in Bengaluru over Facebook post". Hindustan Times (in ಇಂಗ್ಲಿಷ್). 2020-08-12. Retrieved 2020-08-12.
  6. https://vijaykarnataka.com/news/bengaluru-city/bengaluru-violence-curfew-imposed-in-dj-halli-and-kg-halli/articleshow/77502435.cms
  7. Aug 12, TNN / Updated:; 2020; Ist, 10:32. "Bangalore news: Mob attacks Bangalore MLA Akhanda Srinivasmurthy house; cops fire, two dead | Bengaluru News - Times of India". The Times of India (in ಇಂಗ್ಲಿಷ್). Retrieved 2020-08-12. {{cite web}}: |last2= has numeric name (help)CS1 maint: extra punctuation (link) CS1 maint: numeric names: authors list (link)
  8. "https://twitter.com/ani/status/1293419736588574721". Twitter (in ಇಂಗ್ಲಿಷ್). Retrieved 2020-08-12. {{cite web}}: External link in |title= (help)
  9. https://publictv.in/pulikeshi-nagar-congress-mla-akhanda-srinivas-murthy-house-vandalised-by-mob-bengaluru
  10. https://www.timesnownews.com/bengaluru/article/bengaluru-cctv-footage-of-mob-outside-congress-mla-s-house-accessed-violence-continued-for-over-3-hours/635743
  11. https://www.tribuneindia.com/news/nation/mob-attacks-bengaluru-mlas-house-over-relatives-fb-post-3-dead-in-police-firing-125502
  12. https://vijaykarnataka.com/news/karnataka/midnight-high-drama-police-and-protesters-clash-in-kg-halli-bengaluru/articleshow/77493367.cms
  13. https://zeenews.india.com/kannada/karnataka/restrictions-under-section-144-of-crpc-imposed-in-bengaluru-curfew-imposed-in-dj-halli-kg-halli-30454
  14. https://vijaykarnataka.com/news/bengaluru-city/mob-attacks-on-police-in-dg-halli-police-station-over-controversial-fb-post/articleshow/77492141.cms
  15. https://suddivani.com/%e0%b2%ac%e0%b3%86%e0%b2%82%e0%b2%97%e0%b2%b3%e0%b3%82%e0%b2%b0%e0%b2%bf%e0%b2%a8%e0%b2%b2%e0%b3%8d%e0%b2%b2%e0%b2%bf-%e0%b2%a8%e0%b2%a1%e0%b3%86%e0%b2%a6-%e0%b2%97%e0%b2%b2%e0%b2%ad%e0%b3%86/
  16. http://m.varthabharati.in/article/2020_08_12/254723
  17. https://vijaykarnataka.com/news/bengaluru-city/bengaluru-violence-cm-bs-yediyurappa-gives-free-hand-to-police-for-controlling-situation/articleshow/77493645.cms
  18. https://publictv.in/bengaluru-basavaraj-bommai-investigation-bengaluru-riots-police
  19. https://suddivani.com/hindu-muslims-maintain-peace/
  20. https://www.prajavani.net/karnataka-news/bengaluru-riots-congress-bjp-jds-statement-politics-appeasement-752811.html