ನಾಗಾಭರಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೮ ನೇ ಸಾಲು:
==ಬಾಲ್ಯ ಮತ್ತು ಆರಂಭಿಕ ಜೀವನ==
ಮೈಸೂರು ಜಿಲ್ಲೆಯ ತಲಕಾಡಿನಲ್ಲಿ ಎ ಶ್ರೀನಿವಾಸಯ್ಯ ಮತ್ತು ರುದ್ರಮ್ಮ ಅವರ ಐದು ಗಂಡುಮಕ್ಕಳಲ್ಲಿ ಎರಡನೆಯವರಾಗಿ ನಾಗಾಭರಣರವರು ೧೯೫೩ರ ಜನವರಿ ೨೩ರಂದು ಜನಿಸಿದರು. ಅವರ ಇಬ್ಬರೂ ತಾತಂದಿರಾದ ಮದ್ದಳೆ ಗಿರಿಗೌಡ ಮತ್ತು ತಿಪ್ಪೆಗೌಡ ರೈತಾಪಿ ಜನಗಳಾಗಿದ್ದರೂ ಯಕ್ಷಗಾನದಲ್ಲಿ ಪರಿಣತಿ ಹೊಂದಿದ್ದರು. ಅವರ ತಂದೆ ಶ್ರೀನಿವಾಸಯ್ಯ ಬೆಂಗಳೂರಿನ ಕೃಷಿ ಇಲಾಖೆಯಲ್ಲಿ ಡೆಪ್ಯುಟಿ ಡೈರೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ನಾಗಾಭರಣರವರು ಆಂಗ್ಲ ಮತ್ತು ಕನ್ನಡ ಸಾಹಿತ್ಯದಲ್ಲಿ ಅಪಾರ ಆಸಕ್ತಿಯುಳ್ಳವರಾಗಿದ್ದು ವಿಜ್ಞಾನ ಮತ್ತು ಕಾನೂನು ವಿಷಯದಲ್ಲಿ ಪದವೀಧರರೂ ಆಗಿದ್ದಾರೆ.ತಲಕಾಡಿನಲ್ಲಿ ಪ್ರಾಥಮಿಕ ಶಿಕ್ಷಣದ ನಂತರ ನಾಗಾಭರಣ ಅವರ ಮುಂದಿನ ಶಿಕ್ಷಣ ಬೆಂಗಳೂರಿನಲ್ಲಿ ನಡೆಯಿತು. ಕಾಲೇಜು ದಿನಗಳಲ್ಲಿದ್ದಾಗಲೆ ನಾಗಾಭರಣ ಅವರು ಖ್ಯಾತ ನಾಟಕರಚನೆಕಾರ ಮತ್ತು ರಂಗತಜ್ಞ ಶ್ರೀರಂಗ ಅವರ ಸಂಪರ್ಕದ ಪ್ರಭಾವಕ್ಕೆ ಒಳಗಾದರು. ವಿದ್ಯಾರ್ಥಿಯಾಗಿದ್ದಾಗಲೇ ನಾಗಾಭರಣರವರು ಏವಂ ಇಂದ್ರಜಿತ್ ಮತ್ತು ಶೋಕ ಚಕ್ರ ನಾಟಕಗಳನ್ನುನಿರ್ದೇಶಿಸಿದರು. ಬೆಂಗಳೂರಿನ ಹವ್ಯಾಸಿ ನಾಟಕ ತಂಡಗಳಲ್ಲಿ ತೊಡಗಿಕೊಂಡು, ಪ್ರಾರಂಭದ ಹಂತದಲ್ಲಿ ರಂಗ ತಂತ್ರಜ್ಞರಾಗಿ ಹಿನ್ನೆಲೆಯಲ್ಲಿ ಕೆಲಸವನ್ನು ಮಾಡಿ ಕ್ರಮೇಣ ನಟ, ಗಾಯಕ ಮತ್ತು ನಿರ್ದೇಶಕರಾದರು. ನಾಗಿಣಿಯವರು ನಾಗಾಭರಣರವರ ಪತ್ನಿ.
 
 
==ವಯಕ್ತಿಕ ಜೀವನ==
ರಂಗಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ನಾಗಿಣಿ ಅವರ ಪರಿಚಯವಾಯಿತು. ನಂತರದಲ್ಲಿ ಅವರು ೧೦, ಡಿಸೆಂಬರ್ ೧೯೭೯ರಂದು ನಾಗಿಣಿಯವರನ್ನು ವಿವಾಹವಾದರು.
 
== ವೃತ್ತಿಜೀವನ ==
"https://kn.wikipedia.org/wiki/ನಾಗಾಭರಣ" ಇಂದ ಪಡೆಯಲ್ಪಟ್ಟಿದೆ