ವಿಶಾಲ್ ಸಿಕ್ಕಾ (ಪಂಜಾಬಿ : ਵਿਸ਼ਾਲ ਸਿੱਕਾ), ಇನ್ಫೋಸಿಸ್ ಸಂಸ್ಥೆಯ ಸಿಇಒ ಆಗಿ ಆಗಸ್ಟ್ ೧,೨೦೧೪ರಂದು ಅಧಿಕಾರ ವಹಿಸಿಕೊಂಡರು. ಇನ್ಫೋಸಿಸ್ ಗೆ ಸೇರ್ಪಡೆಗೊಳ್ಳುವ ಮೊದಲು, ಡಾ ಸಿಕ್ಕಾ ಜಾಗತಿಕವಾಗಿ ಎಸ್.ಏ.ಪಿ ಸಂಸ್ಥೆಯ ಉತ್ಪನ್ನಗಳು ಮತ್ತು ಹೊಸತನದ ಮುಖ್ಯಸ್ಥರಾಗಿದ್ದರು. ೨೦೦೨-೧೪ರವರೆಗೆ ೧೨ ವರ್ಷ ಜರ್ಮನಿಯ ಎಸ್.ಏ.ಪಿ ಸಂಸ್ಥೆಯಲ್ಲಿ ಹಲವು ಪದವಿಗಳಲ್ಲಿ ದುಡಿದರು. ೨೦೦೭ರಲ್ಲಿ ಎಸ್.ಏ.ಪಿ ಮುಖ್ಯ ತಂತ್ರಜ್‌ಆನ ಅಧಿಕಾರಿಯಾದರು. ಎಸ್.ಏ.ಪಿ ಯ ಹಾನಾ ಉತ್ಪನ್ನದ ಬೆಳವಣಿಗೆ ಮತ್ತು ವ್ಯಾಪಕತೆಗೆ ಕಾರಣೀಭೂತರಾದರು. ಬರೋಡದಲ್ಲಿ ಎಂಜಿನಿಯರಿಂಗ್ ಪದವಿಗೆ ಸೇರಿದ್ದರೂ, ಅಮೇರಿಕೆಯ ಸಿರಾಕ್ಯೂಸ್ ವಿಶ್ವವಿದ್ಯಾಲಯದಲ್ಲಿ ಸ್ಥಾನ ದೊರೆತ ಕಾರಣ, ಸಿರಾಕ್ಯೂಸ್ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಎಂಜಿನಿಯರಿಂಗ್, ಸ್ಟಾನ್ ಫ಼ರ್ಡ್ ವಿಶ್ವವಿದ್ಯಾಲಯದಲ್ಲಿ ೧೯೯೬ರಲ್ಲಿ ಡಾಕ್ಟರೇಟ್ ಪಡೆದರು. ‍ಕ್ಸೆರಾಕ್ಸ್ ಪಾರ್ಕ್, ಐ-ಬ್ರೇನ್, ಬೋಧಾ.ಕಾಮ್ ಮತ್ತು ಪೆರಿಗ್ರೇನ್ ಸಿಸ್ಟಂಸ್ ನಲ್ಲಿ ಕಾರ್ಯ ನಿರ್ವಹಿಸಿ ೨೦೦೨ರಲ್ಲಿ ಜರ್ಮನಿಯ ಎಸ್.ಏ.ಪಿ ಸೇರಿದರು. ೨೦೧೪ರಲ್ಲಿ ವೈಯಕ್ತಿಕ ಕಾರಣಗಳಿಂದ ಎಸ್.ಏ.ಪಿ ಯಿಂದ ಹೊರನಡೆದರು.