ವಿಶಾಲ್ ಸಿಕ್ಕಾ, 'ಬೆಂಗಳೂರಿನ ಇನ್ಫೋಸಿಸ್ ಕಂಪೆನಿಯ ಸಿ.ಇ.ಒ' ಆಗಿ ೧ ಆಗಸ್ಟ್ ೨೦೧೪ [] ರಿಂದ ೧೮ ಆಗಸ್ಟ್ ೨೦೧೭ರವರೆಗಿನ ಅವಧಿಯಲ್ಲಿ ಇದ್ದವರು. ಹಲವಾರು ಹಿರಿಯ ಅಧಿಕಾರಿಗಳ ಸರಣಿ ರಾಜೀನಾಮೆ ಹಾಗೂ ನಿರಾಶಾದಾಯಿಕ ತ್ರೈಮಾಸಿಕ ಫಲಿತಾಂಶಗಳಿಂದ ದೇಶದ ಎರಡನೆಯ ಅತಿ ದೊಡ್ಡ ಸಾಫ್ಟ್ ವೇರ್ ರಫ್ತು ಕಂಪೆನಿ ಇನ್ಫೋಸಿಸ್ ಅವರನ್ನು ನೇಮಕ ಮಾಡಿತ್ತು.

ವಿಶಾಲ್ ಸಿಕ್ಕ
ಚಿತ್ರ:Vishal Sikka.jpg
Vishal Sikka at SAPPHIRE 2010 keynote.
Image by Gregor Wolf
ಜನನಟೆಂಪ್ಲೇಟು:ಹುಟ್ಟಿದ ತಾರೀಖು ಮತ್ತು ವಯಸ್ಸು
ಶಿಕ್ಷಣ ಸಂಸ್ಥೆಸ್ಟಾನ್ಫರ್ಡ್ ವಿಶ್ವವಿದ್ಯಾಲಯ (ಪಿ.ಎಚ್.ಡಿ.)[]
Syracuse University
ಬರೋಡದ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾಲಯ
ಉದ್ಯೋಗದಾತ(ರು)ಸ್ಯಾಪ್ ಎಜಿ ; ಸಿ.ಇ.ಒ. ಮತ್ತು ಎಂ.ಡಿ.(ಈಗ ಹುದ್ದೆ ಸಿಕ್ಕಿದೆ) ಇನ್ಫೋಸಿಸ್ ಲಿಮಿಟೆಡ್.
TitleMember of Executive Board, Technology and Innovation; Chief Technology Officer

ಜರ್ಮನಿ ಮೂಲದ ಬಹುರಾಷ್ಟ್ರೀಯ ಕಂಪೆನಿ ಸ್ಯಾಪ್ (SAP)ನಲ್ಲಿ ೧೨ ವರ್ಷ ಮುಖ್ಯ ತಾಂತ್ರಿಕ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಮೊಟ್ಟ ಮೊದಲ ಸಂಸ್ಥಾಪಕೇತರ ಸಿ.ಇ.ಒ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ, ವಿಶಾಲ್ ಸಿಕ್ಕಾರವರು, ಆಗಸ್ಟ್ ೧ ರಿಂದ ಅಧಿಕಾರದ ಚುಕ್ಕಾಣಿಯನ್ನು ಕೈಗೆ ತೆಗೆದುಕೊಳ್ಳುತ್ತಾರೆ. ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಮಹತ್ವದ ನಿರ್ಣಯವನ್ನು ವಿಶಾಲ್ ಸಿಕ್ಕ ಒಂದು ಸವಾಲಿನ ತರಹ ತೆಗೆದುಕೊಂಡಿದ್ದಾರೆ. ಓದುವ ಬರೆಯುವ ಕಲಿಯುವ ಅಭ್ಯಾಸವನ್ನು ನಿರಂತರವಾಗಿ ತಮ್ಮ ವೃತ್ತಿಜೀವನದಲ್ಲಿ ಅಳವಡಿಸಿಕೊಂಡಿರುವ ಸಿಕ್ಕ ಜಾಗತಿಕ ಸಾಫ್ಟ್ವೇರ್ ವಲಯದಲ್ಲಿನ ಅತ್ಯಂತ ಮೇಧಾವಿಗಳಲ್ಲೊಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ. ಸಾಫ್ಟ್ವೇರ್ ಸೇವೆಗಳ ಮಾರುಕಟ್ಟೆ ವಿಸ್ತರಣೆಗೆ ಸಂಬಂಧಿಸಿದಂತೆ ಸಿಕ್ಕಾರವರ ತಾಂತ್ರಿಕ ಜ್ಞಾನ ಅಸಾಧಾರಣವಾದದ್ದು. ಕ್ಲೌಡ್ ಕಂಪ್ಯೂಟಿಂಗ್ ತಂತ್ರಜ್ಞಾನವನ್ನು ಆಧರಿಸಿದ ಅವರ ಯೋಜನೆಗಳು ಉದ್ಯಮದ ಚಿತ್ರವನ್ನು ಬದಲಾಯಿಸುವ ದಿಶೆಯಲ್ಲಿ ಕೆಲಸಮಾಡುತ್ತಿವೆ.

ಜನನ/ವಿದ್ಯಾಭ್ಯಾಸ ಹಾಗೂ ವೃತ್ತಿಜೀವನ

ಬದಲಾಯಿಸಿ
  • ಮಧ್ಯಪ್ರದೇಶದ 'ಶಾಜಾಪುರ'ದಲ್ಲಿ ವಿಶಾಲ್ ಸಿಕ್ಕಾ,೧೯೬೭ ರ ಜೂನ್ ೧ ರಂದು ಜನಿಸಿದರು. ವಿಶಾಲ್ ಅವರ, ತಂದೆ ಭಾರತೀಯ ರೈಲ್ವೆ ಸೇವೆಯಲ್ಲಿ ಇಂಜಿನಿಯರ್. ತಾಯಿ ಶಿಕ್ಷಕಿ. ಪಂಜಾಬ್ ಮೂಲದ ಈ ಪರಿವಾರ, ವಿಶಾಲ್ ಕೇವಲ ೬ ವರ್ಷದ ಬಾಲಕನಾಗಿದ್ದಾಗಲೇ, ಅವರ ಕುಟುಂಬ ಗುಜರಾತಿನ ಬರೋಡ ನಗರಕ್ಕೆ ಬಂದು ನೆಲೆಸಿದರು.
  • ಬರೋಡದ ರೋಸರಿ ಹೈಸ್ಕೂಲಿನಲ್ಲಿ ಪ್ರಾಥಮಿಕ ಶಿಕ್ಷಣ ಪ್ರಾರಂಭವಾಯಿತು. ಬರೋಡದ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಇಂಜಿನಿಯರಿಂಗ್ ನಲ್ಲಿ ಪದವಿ ಪ್ರವೇಶ ಸಿಕ್ಕಿತು ಆದರೆ ಅರ್ಧದಲ್ಲೇ ವಿದ್ಯಾಭ್ಯಾಸವನ್ನು ನಿಲ್ಲಿಸಬೇಕಾಯಿತು. 'ನ್ಯೂಯಾರ್ಕ್ ನ ಸೈರಾಕಸ್ ವಿಶ್ವವಿದ್ಯಾಲಯ'ದಲ್ಲಿ 'ಕಂಪ್ಯೂಟರ್ ಸೈನ್ಸ್' ನಲ್ಲಿ ಸ್ಥಾನ ದೊರೆಯಿತು. ಹಾಗಾಗಿ ಅಲ್ಲಿ ಹೋಗಿ, ಪದವಿ ಹಾಗೂ ಸ್ನಾತಕೋತ್ತರ ಪದವಿಗಳಿಸಿದರು. ಕಂಪ್ಯೂಟರ್ ಸೈನ್ಸ್ ಗೆ ಸಂಬಂಧಿಸಿದ ಅತಿ ಕಠಿಣ 'ಕೃತಕ ಬುದ್ಧಿಮತ್ತೆ', ಎಂಬ ವಿಷಯದಲ್ಲಿ 'ಸ್ಟ್ಯಾನ್ ಫರ್ಡ್' ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಗಳಿಸಿದರು.[] ೨೦೦೨ ರಲ್ಲಿ 'ಸ್ಯಾಪ್ ಕಂಪೆನಿ' ಸೇರಿದರು. ಇದಕ್ಕೆ ಮೊದಲು
  • 'ಐಬ್ರೇನ್' ಕಂಪೆನಿ,
  • 'ಬೋಧಾ ಡಾಟ್ ಕಾಂ,' ಎಂಬ ಎರಡು 'ಸ್ಟಾರ್ಟ್ ಅಪ್ ಕಂಪೆನಿ'ಗಳನ್ನು ಪ್ರಾರಂಭಿಸಿ ಕೆಲಕಾಲ ನಡೆಸಿದ್ದರು.
  • 'ಐಬ್ರೇನ್' ನಂತರ, 'ಪ್ಯಾಟರ್ನ್ ಆರ್. ಎಕ್ಸ್ ಕಂ' ಗಳು ಸ್ವಂತವಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದವು.
  • 'ಬೋಧಾ ಡಾಟ್ ಕಾಂ ಕಂ' ಯನ್ನು 'ಪೆರಿಗ್ರೀನ್ ಸಿಸ್ಟಮ್ಸ್' ಎಂಬ ಹೆಸರಿನ ಕಂಪೆನಿ, ಸ್ವಾಧೀನ ಪಡಿಸಿಕೊಂಡಿತು.

ಮಾರುಕಟ್ಟೆಯಲ್ಲಿ ತೀವ್ರಸ್ಪರ್ಧೆ ಇತ್ತು

ಬದಲಾಯಿಸಿ

ಸ್ಯಾಪ್ ಕಂ; ಒರಾಕಲ್ ಕಂ, ಮೊದಲಾದವುಗಳಿಂದ ತೀವ್ರ ಸ್ಪರ್ಧೆ ಎದುರಿಸುತ್ತಿದ್ದ ದಿನಗಳು. ಸಾಫ಼್ಟ್ವೇರ್ ಸೇವೆಗಳ ನಿರ್ವಹಣೆಗೆ ಸಂಬಂಧಿಸಿದಂತೆ ಸುಧಾರಿತ ತಂತ್ರಜ್ಞಾನ ಅಭಿವೃದ್ಧಿಪಡಿಸದಿದ್ದರೆ ಮಾರುಕಟ್ಟೆಯಲ್ಲಿ ನೆಲೆನಿಲ್ಲಲೂ ಕಷ್ಟಕರವಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಂತಹ ಸಂದಿಘ್ದ, ಹಾಗೂ ಸವಾಲಿನ ಪರಿಸ್ಥಿತಿಯಲ್ಲಿ 'ವಿಶಾಲ್ ಸಿಕ್ಕ' ಅತಿ ಕಡಿಮೆ ವೆಚ್ಚದಲ್ಲಿ ಬೃಹತ್ ಪ್ರಮಾಣದ 'ದತ್ತಾಂಶ ನಿರ್ವಹಣೆ' ಮಾಡಬಹುದಾದ 'ಇನ್ ಮೆಮೊರಿ ಡಾಟಾಬೇಸ್ ಮ್ಯಾನೇಜ್ಮೆಂಟ್ ಸಿಸ್ಟೆಮ್' ನ್ನು ಅಭಿವೃದ್ಧಿಪಡಿಸಿದರು.

ಸಿಕ್ಕಾರವರು ಸಿ.ಟಿ.ಓ. ಆಗಿ ನೇಮಿಸಲ್ಪಟ್ಟರು

ಬದಲಾಯಿಸಿ

ಹೀಗೆ ಅಭಿವೃದ್ಧಿಪಡಿಸಿದ ತಂತ್ರಜ್ಞಾನ 'ಸ್ಯಾಪ್ ನ ಸಾಫ್ಟ್ ವೇರ್ ಉದ್ಯಮದ ನಕ್ಷೆ'ಯನ್ನೇ ಬದಲಿಸಿತು.[] ಸ್ಯಾಪ್ ಸಿಕ್ಕಾರನ್ನು ತನ್ನ ಮೊದಲನೆಯ ಪ್ರಮುಖ ತಾಂತ್ರಿಕ ಅಧಿಕಾರಿಯನ್ನಾಗಿ ನೇಮಿಸಿತು. (CTO) ಸಿ.ಇ.ಒ. ಅಧಿಕಾರಿಯ ತಕ್ಷಣದ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಾನೆ. ಹೀಗೆ ೫ ವರ್ಷ ತಾಂತ್ರಿಕ ವಿಭಾಗದ ಮುಖ್ಯಸ್ಥರಾಗಿ ಸ್ವತಂತ್ರವಾಗಿ ಕಾರ್ಯನಿರ್ವಹಿಸಿ ಯಶಸ್ವಿಯಾದರು. ವೈಯಕ್ತಿಕ ಕಾರಣಗಳಿಗಾಗಿ ಕಂಪೆನಿಯಿಂದ ಸುಮಾರು ೬ ತಿಂಗಳು ಹೊರಬಂದರು.[]

ಎನ್.ಆರ್.ಎನ್. ಪುನಃ ನೇಮಕಗೊಂಡರು

ಬದಲಾಯಿಸಿ

೨೦೧೩ ರ್ ಜೂನ್ ನಲ್ಲಿ ಎನ್ ಆರ್ ನಾರಾಯಣಮೂರ್ತಿ, ಇನ್ಫೋಸಿಸ್ ನ ಅಧ್ಯಕ್ಷರಾಗಿ ಮತ್ತೊಮ್ಮೆ ನೇಮಕಗೊಂಡ ಬಳಿಕ, ಒಟ್ಟು ೧೧ ಜನ ಉನ್ನತ ಮಟ್ಟದ ಅಧಿಕಾರಿಗಳು ಕಂ ತೊರೆದು ಹೋಗಿದ್ದಾರೆ. ಅಶೋಕ್ ವೆಮೂರಿ ವಿ.ಬಾಲಕೃಷ್ಣನ್, ಬಿ.ಜಿ. ಶ್ರೀನಿವಾಸನ್, ಸಂಸ್ಥೆಯ್ ಸಿ.ಇ.ಒ ಹುದ್ದೆಗೆ ಎಲ್ಲ ಅರ್ಹತೆಗಳನ್ನು ಹೊಂದಿದ್ದರು. ಟಿ.ಸಿ.ಎಸ್, ಎಚ್. ಸಿ. ಎಲ್ ಮತ್ತಿತರ ಕಂ.ಗಳು ಅಧಿಕಲಾಭಗಳಿಸುತ್ತಿದ್ದಾಗ ಇಂತಹ ವಹಿವಾಟಿನಲ್ಲಿ ಹಿಂದಿನ ಜಾಗದಲ್ಲಿದ್ದ ಇನ್ಫೋಸಿಸ್ ಕಂಪೆನಿಯನ್ನು ಪುನಃಚೇತನ ಗೊಳಿಸಲು ಎನ್. ಆರ್. ಎನ್. ಅವರನ್ನು ವಾಪಸ್ ಕರೆತರಲು ಶೇರ್ ಹೋಲ್ಡರ್ ಜನ ಆಶಿಸಿದ್ದರು. ಮೂರ್ತಿಯವರು ಬಂದಮೇಲೆ ಕೆಲವು ಆಂತರಿಕ ಬದಲಾವಣೆ ತರಲಾಯಿತು.

ಹೊರಗಡೆಯಿಂದ ಸಿ.ಇ.ಒ ಒಬ್ಬರ ನೇಮಕಾತಿ

ಬದಲಾಯಿಸಿ

'ಇನ್ಫೋಸಿಸ್ ಕಂಪೆನಿಯ ಶೇರ್ ದಾರರು' ಸ್ವಂತ್ರ ಸಿ.ಇ.ಒ ಒಬ್ಬರನ್ನು ನೇಮಿಸಲು ಒತ್ತಡ ತಂದರು.[] ಸಿಕ್ಕಾರವರು ತಮ್ಮ ಸ್ವಂತ ನಿರ್ಣಯಗಳನ್ನು ತೆಗೆದುಕೊಂಡು ನಡೆಸಲು ಅನುಕೂಲವಾಗುವಂತೆ ಹಲವು ಮಾರ್ಪಾಡುಗಳನ್ನು ಕಂಪೆನಿಯಲ್ಲಿ ತರಲಾಗಿದೆ.[] ಕಂಪೆನಿಯಲ್ಲಿ ದುಡಿಯುತ್ತಿದ್ದ ಒಟ್ಟು ೧೨ ಜನರಿಗೆ ಹೆಚ್ಚುವರಿ ಜವಾಬ್ದಾರಿಗಳನ್ನು ನೀಡಿ ಕಾರ್ಯನಿರ್ವಾಹಕ ಉಪಾಧ್ಯಕ್ಷರ ಹುದ್ದೆಗೆ ಬಡ್ತಿ ನೀಡಲಾಗಿದೆ.

ಉಲ್ಲೇಖಗಳು

ಬದಲಾಯಿಸಿ
  1. Genesereth, Michael. "Ph.D. Graduates, Stanford University, Dept. of Computer Science". Retrieved 10 ಜನವರಿ 2012.
  2. "Bloomberg BusinessWeek | Executive Profile: Vishal Sikka". BusinessWeek. 12 ಫೆಬ್ರವರಿ 2013. Retrieved 12 ಫೆಬ್ರವರಿ 2013.
  3. "Infosys names Vishal Sikka as first external CEO in turnaround bid". Archived from the original on 17 ಜೂನ್ 2014. Retrieved 18 ಜೂನ್ 2014.
  4. 'ವಿಶಾಲ್‌ ಸಿಕ್ಕ ಕತೆ: ಜರ್ಮನ್‌ ಕಂಪನಿಯಿಂದ ಇನ್ಫೋಸಿಸ್‌ಗೆ, ಉದಯವಾಣಿ ಪತ್ರಿಕೆ'ಜೂನ್, ೧೮, ಬುಧವಾರ,೨೦೧೪
  5. Vishal Sikka’s exit from SAP shocks analysts
  6. 5 things to know about Infosys CEO Vishal Sikka .business-standard., Friday, June 20, 2014ಸಿಕ್ಕ ಅವರ ಬಗ್ಗೆ ೫ ವಿಷಯಗಳನ್ನು ತಿಳಿಯಿರಿ
  7. "nfosys CEO-designate Vishal Sikka bets on alliances with Oracle, SAP, IBM". Archived from the original on 18 ಜೂನ್ 2014. Retrieved 18 ಜೂನ್ 2014.
  8. Vishal Sikka to head Infosys June 12, 2014, Hindu news paper