ವಿಲಿಯಂ ವೈಮಾರ್ಕ್ ಜೇಕಬ್ಸ್‌

ವಿಲಿಯಂ ವೈಮಾರ್ಕ್ ಜೇಕಬ್ಸ್‌ (1863-1943). ಇಂಗ್ಲಿಷ್ ಸಣ್ಣ ಕಥೆಗಾರ.

ಹುಟ್ಟಿದ್ದು ವ್ಯಾಪಿಂಗ್‍ನಲ್ಲಿ. ಈತನ ತಂದೆ ಅಲ್ಲಿಯ ಬಂದರುಕಟ್ಟೆಯ ಮೇಲ್ವಿಚಾರಕನಾಗಿದ್ದ. 1883ರಿಂದ 1899ರವರೆಗೆ ಈತ ಅಂಚೆ ಕಚೇರಿಯಲ್ಲಿ ಉಳಿತಾಯ ನಿಧಿ ವಿಭಾಗದಲ್ಲಿ ಕೆಲಸ ಮಾಡಿದ.

ತಾನು ಕಂಡ ನಾವೆಗಳ ಮತ್ತು ನಾವಿಕರ ಕಥೆಗಳನ್ನು ಹಾಸ್ಯರಸ ಪ್ರಧಾನವಾಗಿ ಬರೆಯತೊಡಗಿದ. ಇವುಗಳಲ್ಲಿ ಹಲವು ಕಥೆಗಳು ಈತನ ಕಥೆಗಳಿಗೆ ಚಿತ್ರಗಳನ್ನು ಒದಗಿಸಿದ ವಿಲ್ ಓವನ್‍ನ ಜೊತೆಯಲ್ಲಿ ಕಾಲ್ನಡಿಗೆಯ ಪ್ರವಾಸಗಳನ್ನು ಕೈಗೊಂಡಾಗ ರಚಿತವಾದವು. ಮೆನಿ ಕಾರ್ಗೋಸ್ (1896); ದಿ ಸ್ಕಿಪರ್ಸ್ ವೂಯಿಂಗ್ (1897); ಸೀ ಅರ್ಚಿನ್ಸ್ (1898); ಎ ಮಾಸ್ಟರ್ ಆಫ್ ಕ್ರಾಫ್ಟ್ (1900); ಲೈಟ್ ಫ್ರೈಟ್ಸ್ (1901); ದಿ ಲೇಡಿ ಆಫ್ ದಿ ಬಾರ್ಜ್ (1902); ಆಡ್ ಕ್ರಾಫ್ಟ್ (1903); ಷಾರ್ಟ್ ಕ್ರೂಯಿಸಸ್ (1907) ಷಿಪ್ಸ್ ಕಂಪನಿ (1911); ನೈಟ್ ವಾಚಸ್ (1914); ಡೀಪ್ ವಾಟರ್ಸ್ (1919); ಸೀ ವಿಸ್ಪರ್ಸ್ (1926)-ಇವು ಈತನ ಕಥಾಸಂಕಲನಗಳು. ಒಂದೆರಡು ಭಯಾನಕ ಕಥೆಗಳೂ ಸೇರಿವೆ. ಇವುಗಳಲ್ಲಿ ದಿ ಮಂಕೀಸ್ ಪಾ ಪ್ರಸಿದ್ಧವಾದುದು. ಈತ ಅನೇಕ ನಾಟಕಗಳನ್ನೂ ಬರೆದಿದ್ದಾನೆ.