ವಿಪತ್ತು ವ್ಯಾಪಕ ಮಾನವ, ಸಾಮಗ್ರಿ, ಆರ್ಥಿಕ ಅಥವಾ ಪಾರಿಸರಿಕ ನಷ್ಟ ಮತ್ತು ಪರಿಣಾಮಗಳನ್ನು ಒಳಗೊಂಡ ಒಂದು ಸಮುದಾಯ ಅಥವಾ ಸಮಾಜದ ಕಾರ್ಯಚಟುವಟಿಕೆಗೆ ಗಂಭೀರ ಅಡೆತಡೆ. ಆದ ನಷ್ಟವು ತನ್ನ ಸ್ವಂತ ಸಂಪನ್ಮೂಲಗಳನ್ನು ಬಳಸಿ ನಿಭಾಯಿಸುವ ಬಾಧಿತ ಸಮುದಾಯ ಅಥವಾ ಸಮಾಜದ ಸಾಮರ್ಥ್ಯವನ್ನು ಮೀರುತ್ತದೆ.

೧೯೦೬ರ ಸ್ಯಾನ್ ಫ಼್ರ್ಯಾನ್ಸಿಸ್ಕೊ ಭೂಕಂಪದ ಅವಶೇಷಗಳು

ಸಮಕಾಲೀನ ಶೈಕ್ಷಣಿಕ ಸಮುದಾಯದಲ್ಲಿ, ವಿಪತ್ತುಗಳನ್ನು ಅಸಮಂಜಸವಾಗಿ ನಿರ್ವಹಿಸಲಾದ ಅಪಾಯದ ಪರಿಣಾಮವೆಂದು ಕಾಣಲಾಗುತ್ತದೆ. ಈ ಅಪಾಯಗಳು ಸಂಭವಗಳು ಮತ್ತು ಈಡಾಗುವಿಕೆ ಎರಡರ ಸಂಯೋಜನೆಯ ಫಲವಾಗಿವೆ. ಕಡಿಮೆ ಈಡಾಗುವಿಕೆಯ ಪ್ರದೇಶಗಳಲ್ಲಿ ಸಂಭವಿಸುವ ಅಪಾಯಗಳು, ಉದಾಹರಣೆಗೆ ನಿರ್ಜನ ಪ್ರದೇಶಗಳಲ್ಲಿ, ಎಂದಿಗೂ ವಿಪತ್ತುಗಳಾಗುವುದಿಲ್ಲ.[]

ಅಭಿವೃದ್ಧಿಶೀಲ ದೇಶಗಳು ವಿಪತ್ತು ಸಂಭವಿಸಿದಾಗ ಅತ್ಯಧಿಕ ವೆಚ್ಚಗಳನ್ನು ಅನುಭವಿಸುತ್ತವೆ – ಅಪಾಯಗಳಿಂದ ಉಂಟಾಗುವ ಎಲ್ಲ ಸಾವುಗಳಲ್ಲಿ ಶೇಕಡ ೯೫ ಕ್ಕಿಂತ ಹೆಚ್ಚು ಅಭಿವೃದ್ಧಿಶೀಲ ದೇಶಗಳಲ್ಲಿ ಆಗುತ್ತವೆ, ಮತ್ತು ಅಭಿವೃದ್ಧಿಶೀಲ ದೇಶಗಳಲ್ಲಿ ಪ್ರಾಕೃತಿಕ ಅಪಾಯಗಳಿಂದ ಉಂಟಾದ ನಷ್ಟಗಳು ಕೈಗಾರೀಕೃತ ದೇಶಗಳಿಗಿಂತ ೨೦ ಪಟ್ಟು ಹೆಚ್ಚಾಗಿವೆ (ಜಿಡಿಪಿಯ ಶೇಕಡಾವಾರು).

ಸಂಶೋಧಕರು ಶತಮಾನಕ್ಕಿಂತ ಹೆಚ್ಚು ಕಾಲದಿಂದ ವಿಪತ್ತುಗಳನ್ನು ಅಧ್ಯಯನ ಮಾಡುತ್ತಿದ್ದಾರೆ, ಮತ್ತು ವಿಪತ್ತು ಸಂಶೋಧನೆಯನ್ನು ನಲವತ್ತು ವರ್ಷಗಳಿಗಿಂತ ಹೆಚ್ಚು ಕಾಲದಿಂದ. ಎಲ್ಲ ವಿಪತ್ತುಗಳು ಮಾನವ ರಚಿತವೆಂದು ಕಾಣಬಹುದೆಂದು ಅಧ್ಯಯನಗಳು ವಾದಿಸಿದಾಗ ಅವು ಒಂದು ಸಾಮಾನ್ಯ ಅಭಿಪ್ರಾಯವನ್ನು ಪ್ರಕಟಗೊಳಿಸುತ್ತವೆ. ಅವುಗಳ ವಾದವೇನೆಂದರೆ ಅಪಾಯದ ಸಂಭವಕ್ಕೆ ಮುಂಚಿನ ಮಾನವ ಕ್ರಿಯೆಗಳು ಅಪಾಯವು ವಿಪತ್ತಾಗಿ ಬೆಳೆಯುವುದನ್ನು ತಡೆಗಟ್ಟಬಹುದು. ಹಾಗಾಗಿ, ಎಲ್ಲ ವಿಪತ್ತುಗಳು ಸೂಕ್ತ ವಿಪತ್ತು ನಿರ್ವಹಣಾ ಕ್ರಮಗಳನ್ನು ಪರಿಚಯಿಸುವ ಮಾನವ ವೈಫಲ್ಯದ ಪರಿಣಾಮವಾಗಿವೆ. ಅಪಾಯಗಳನ್ನು ವಾಡಿಕೆಯಂತೆ ನೈಸರ್ಗಿಕ ಅಥವಾ ಮಾನವ ನಿರ್ಮಿತ ಎಂದು ವಿಭಜಿಸಲಾಗುತ್ತದೆ, ಆದರೆ ಏಕ ಮೂಲ ಕಾರಣವಿರದ ಸಂಕೀರ್ಣ ವಿಪತ್ತುಗಳು ಅಭಿವೃದ್ಧಿಶೀಲ ದೇಶಗಳಲ್ಲಿ ಹೆಚ್ಚು ಸಾಮಾನ್ಯವಾಗಿವೆ. ಒಂದು ನಿರ್ದಿಷ್ಟ ವಿಪತ್ತು ಪರಿಣಾಮವನ್ನು ಹೆಚ್ಚಿಸುವ ದ್ವಿತೀಯ ವಿಪತ್ತನ್ನು ಉತ್ಪತ್ತಿ ಮಾಡಬಹುದು. ಒಂದು ಉತ್ಕೃಷ್ಟ ಉದಾಹರಣೆಯೆಂದರೆ ಭೂಕಂಪವು ಸುನಾಮಿಯನ್ನು ಉಂಟುಮಾಡುತ್ತದೆ, ಪರಿಣಾಮವಾಗಿ ಕರಾವಳಿ ಪ್ರವಾಹ ಆಗುತ್ತದೆ.

ಉಲ್ಲೇಖಗಳು

ಬದಲಾಯಿಸಿ
  1. Quarantelli E.L. (editor) "Where We Have Been and Where We Might Go", What is a Disaster?: A Dozen Perspectives on the Question, London, Routledge, 1 edition 1998, pp.146-159
"https://kn.wikipedia.org/w/index.php?title=ವಿಪತ್ತು&oldid=778097" ಇಂದ ಪಡೆಯಲ್ಪಟ್ಟಿದೆ