ಮಾನವ ವರ್ತನೆಯಲ್ಲಿ, ವಿಧೇಯತೆಯು ಒಂದು ರೀತಿಯ ಸಾಮಾಜಿಕ ಪ್ರಭಾವವಾಗಿರುತ್ತದೆ. ವಿಧೇಯನಾಗಿರುವ ವ್ಯಕ್ತಿಯು ಒಬ್ಬ ಅಧಿಕಾರಯುತ ವ್ಯಕ್ತಿಯ ಸುಸ್ಪಷ್ಟ ಸೂಚನೆಗಳು ಅಥವಾ ಆದೇಶಗಳನ್ನು ಒಪ್ಪಿಕೊಳ್ಳುತ್ತಾನೆ.[೧] ಸಾಮಾನ್ಯವಾಗಿ ವಿಧೇಯತೆಯನ್ನು ಅನುಸರಣೆ ಮತ್ತು ಅನುರೂಪತೆಗಳಿಂದ ವ್ಯತ್ಯಾಸ ಮಾಡಲಾಗುತ್ತದೆ. ಅನುಸರಣೆಯು ಸಮಾನಸ್ಕಂಧರಿಂದ ಪ್ರಭಾವಿತವಾಗಿ ಬರುವ ವರ್ತನೆ. ಅನುರೂಪತೆಯು ಬಹುಮತದ ವರ್ತನೆಯನ್ನು ಸರಿಗಟ್ಟುವ ಉದ್ದೇಶ ಹೊಂದಿದ ವರ್ತನೆ. ಸಂದರ್ಭವನ್ನು ಅವಲಂಬಿಸಿ, ವಿಧೇಯತೆಯನ್ನು ನೈತಿಕ, ಅನೈತಿಕ ಅಥವಾ ನಿರ್ನೈತಿಕವಾಗಿ ಕಾಣಬಹುದು.

ನ್ಯಾಯಯುತ ಅಧಿಕಾರವುಳ್ಳವರೆಂದು ಗ್ರಹಿಸಲಾದ ವ್ಯಕ್ತಿಗಳ ಉಪಸ್ಥಿತಿಯಲ್ಲಿ ಮನುಷ್ಯರು ವಿಧೇಯರಾಗಿರುತ್ತಾರೆಂದು ತೋರಿಸಲಾಗಿದೆ, ೧೯೬೦ ರ ದಶಕದಲ್ಲಿ ಮಿಲ್‍ಗ್ರಮ್ ಪ್ರಯೋಗವು ಹೀಗೆ ತೋರಿಸಿಕೊಟ್ಟಿತು. ನಾಜ಼ಿಗಳು ಸಾಮಾನ್ಯ ಜನರನ್ನು ಹೋಲೋಕಾಸ್ಟ್‌ನ ಸಮೂಹ ಹತ್ಯೆಗಳಲ್ಲಿ ಹೇಗೆ ಭಾಗವಹಿಸುವಂತೆ ಮಾಡಿದರು ಎಂಬುದನ್ನು ಕಂಡುಕೊಳ್ಳಲು ಸ್ಟ್ಯಾನ್ಲಿ ಮಿಲ್‍ಗ್ರಮ್ ಇದನ್ನು ಮಾಡಿದನು.

ಉಲ್ಲೇಖಗಳು ಬದಲಾಯಿಸಿ

  1. Colman, Andrew (2009). A Dictionary of Psychology. Oxford New York: Oxford University Press. ISBN 978-0199534067.
"https://kn.wikipedia.org/w/index.php?title=ವಿಧೇಯತೆ&oldid=953939" ಇಂದ ಪಡೆಯಲ್ಪಟ್ಟಿದೆ