ವಿಧಿ (ಹಣೆಬರಹ) ಘಟನೆಗಳ ಪೂರ್ವನಿರ್ಧರಿತ ಪಥ.[] ಅದನ್ನು ಸಾಮಾನ್ಯವಾಗಿ ಅಥವಾ ಒಬ್ಬ ವ್ಯಕ್ತಿಯ ಪೂರ್ವನಿರ್ಧರಿತ ಭವಿಷ್ಯ ಎಂದು ಭಾವಿಸಬಹುದು.

ಸಾಂಪ್ರದಾಯಿಕ ಬಳಕೆಯು ಹಣೆಬರಹವನ್ನು ಘಟನೆಗಳ ಪಥವನ್ನು ಪೂರ್ವನಿರ್ಧರಿಸುವ ಮತ್ತು ನಿಯಮಿಸುವ ಶಕ್ತಿ ಅಥವಾ ಸಾಧನತ್ವ ಎಂದು ವ್ಯಾಖ್ಯಾನಿಸುತ್ತದೆ. ಹಣೆಬರಹವು ಘಟನೆಗಳನ್ನು ಆದೇಶಿತ ಅಥವಾ ಅನಿವಾರ್ಯ ಮತ್ತು ತಡೆಯಲಾಗದ ಎಂದು ವ್ಯಾಖ್ಯಾನಿಸುತ್ತದೆ. ಇದು ಬ್ರಹ್ಮಾಂಡಕ್ಕೆ, ಮತ್ತು ಕೆಲವು ಕಲ್ಪನೆಗಳಲ್ಲಿ ಕಾಸ್ಮಾಸ್‍ಗೆ ನಿರ್ದಿಷ್ಟ ನೈಸರ್ಗಿಕ ಕ್ರಮ ಇದೆ ಎಂಬ ನಂಬಿಕೆಯ ಮೇಲೆ ಆಧಾರಿತವಾದ ಒಂದು ಪರಿಕಲ್ಪನೆಯಾಗಿದೆ. ಶಾಸ್ತ್ರೀಯ ಮತ್ತು ಐರೋಪ್ಯ ಪುರಾಣ ಮೂರ್ತೀಕರಿಸಲಾದ "ಹಣೆಬರಹ ನೂಲುಗಾರರನ್ನು" ಹೊಂದಿದೆ. ಅವರು ದಾರಗಳ ಅತೀಂದ್ರಿಯ ನೂಲುವಿಕೆ ಮೂಲಕ ವಿಶ್ವದ ಘಟನೆಗಳನ್ನು ನಿರ್ಧರಿಸುತ್ತಾರೆ. ಈ ನೂಲುವಿಕೆ ವೈಯಕ್ತಿಕ ಮಾನವ ಹಣೆಬರಹವನ್ನು ಪ್ರತಿನಿಧಿಸುತ್ತದೆ. ಹಣೆಬರಹವನ್ನು ಹಲವುವೇಳೆ ದೇವಪ್ರೇರಿತ ಎಂದು ಭಾವಿಸಲಾಗುತ್ತದೆ.

ವಿಧಿ ಮತ್ತು ಹಣೆಬರಹಗಳ ಪರಿಕಲ್ಪನೆಗಳ ಮೇಲೆ ಜೀವನದೃಷ್ಟಿ ಗ್ರೀಕ್ ಪಾಂಡಿತ್ಯದ ಅವಧಿಯಿಂದ ಅಸ್ತಿತ್ವದಲ್ಲಿದೆ. ಮಾನವ ನಿರ್ಧಾರಗಳು ಮತ್ತು ಕ್ರಿಯೆಗಳು ಅಂತಿಮವಾಗಿ ದೇವರಿಂದ ರೂಪಿಸಲ್ಪಟ್ಟ ಒಂದು ದೈವಿಕ ಯೋಜನೆಯ ಪ್ರಕಾರ ನಡೆಯುತ್ತವೆ ಎಂದು ಸ್ಟೋಯಿಕರು ನಂಬಿದ್ದರು. ಸೈದ್ಧಾಂತಿಕವಾಗಿ ಮಾನವರು ಸ್ವತಂತ್ರ ಮನಸ್ಸನ್ನು ಹೊಂದಿದ್ದಾರಾದರೂ, ಅವರ ಆತ್ಮಗಳು ಮತ್ತು ಅವರು ಇರುವ ಸಂದರ್ಭಗಳು ಎಲ್ಲವೂ ಹಣೆಬರಹದ ಜಾಗತಿಕ ಜಾಲದ ಭಾಗ ಎಂದು ಅವರು ಪ್ರತಿಪಾದಿಸಿದರು.

ಎಪಿಕ್ಯೂರಿಯನ್ನರು ಈ ದೈವಿಕ ಹಣೆಬರಹದ ಅಸ್ತಿತ್ವವನ್ನು ಅಲ್ಲಗಳೆದು ಸ್ಟೋಯಿಕರ ನಂಬಿಕೆಗಳಿಗೆ ಸವಾಲೊಡ್ಡಿದರು. ಮಾನವರ ಕ್ರಿಯೆಗಳು ವಿವೇಕಯುಕ್ತವಾಗಿರುವವರೆಗೆ ಸ್ವಯಂಪ್ರೇರಿತ ಎಂದು ಅವರು ನಂಬಿದ್ದರು.

ಉಲ್ಲೇಖಗಳು

ಬದಲಾಯಿಸಿ
  1. Lisa Raphals (4 October 2003). Philosophy East and West (Volume 53 ed.). University of Hawai'i Press. pp. 537–574.
"https://kn.wikipedia.org/w/index.php?title=ವಿಧಿ&oldid=755459" ಇಂದ ಪಡೆಯಲ್ಪಟ್ಟಿದೆ