ವಿಧವೆ ಎಂದರೆ ಗಂಡನನ್ನು ಕಳೆದುಕೊಂಡಿರುವ (ಮರಣ ಹೊಂದಿರುವ) ಮಹಿಳೆ. ವಿಧುರನೆಂದರೆ ಹೆಂಡತಿಯನ್ನು ಕಳೆದುಕೊಂಡಿರುವ ಪುರುಷ. ತಮ್ಮ ಜೀವನಸಂಗಾತಿಯನ್ನು ಕಳೆದುಕೊಂಡಿರುವ ಸ್ಥಿತಿಯನ್ನು ವೈಧವ್ಯ ಎಂದು ಕರೆಯಲಾಗುತ್ತದೆ. ವಿಶ್ವದಾದ್ಯಂತ ವಿಧವೆಯರು ಮತ್ತು ವಿಧುರರನ್ನು ನಡೆಸಿಕೊಳ್ಳುವ ರೀತಿ ಬದಲಾಗುತ್ತದೆ.

ಆರ್ಥಿಕ ಸ್ಥಾನಮಾನ ಬದಲಾಯಿಸಿ

ಗಂಡನು ಏಕಮಾತ್ರ ಸಂಸಾರ ನಿರ್ವಾಹಕನಾಗಿರುವ ಸಮಾಜಗಳಲ್ಲಿ, ಅವನ ಮರಣವು ಅವನ ಕುಟುಂಬವನ್ನು ನಿರ್ಗತಿಕವಾಗಿಸಬಹುದು. ಸಾಮಾನ್ಯವಾಗಿ ಮಹಿಳೆಯರು ಪುರುಷರಿಗಿಂತ ಹೆಚ್ಚು ಬಾಳುವ, ಜೊತೆಗೆ ಅನೇಕ ಸಮಾಜಗಳಲ್ಲಿ, ಪುರುಷರು ತಮಗಿಂತ ಕಡಿಮೆ ವಯಸ್ಸಿನ ಮಹಿಳೆಯರನ್ನು ವಿವಾಹವಾಗುವ ಪ್ರವೃತ್ತಿಯು ಇದನ್ನು ಹೆಚ್ಚಿಸಬಹುದು. ಕೆಲವು ಪುರುಷ ಪ್ರಧಾನ ಸಮಾಜಗಳಲ್ಲಿ, ವಿಧವೆಯರು ಆರ್ಥಿಕ ಸ್ವಾತಂತ್ರ್ಯವನ್ನು ಕಾಪಾಡಿಕೊಂಡಿರಬಹುದು.

೧೯ನೇ ಶತಮಾನದ ಬ್ರಿಟನ್‍ನಲ್ಲಿ, ಅನೇಕ ಸಮಾಜಗಳಿಗಿಂತ ವಿಧವೆಯರಿಗೆ ಅವರ ಸಾಮಾಜಿಕ ಸ್ಥಾನಮಾನ ಬದಲಾಗುವ ಹೆಚ್ಚಿನ ಅವಕಾಶವಿತ್ತು. ಸಮಾಜಾರ್ಥಿಕವಾಗಿ ಏರುವ ಸಾಮರ್ಥ್ಯದ ಜೊತೆಗೆ, ತಮ್ಮ ಸಮಾಜದಲ್ಲಿ ವಿವಾಹಿತ ಸ್ತ್ರೀಯರಿಗಿಂತ ವಿಧವೆಯರು ಸಾಂಪ್ರದಾಯಿಕ ಲೈಂಗಿಕ ವರ್ತನೆಗೆ ಸವಾಲೊಡ್ಡುವ ಹೆಚ್ಚಿನ ಸಾಧ್ಯತೆಯಿತ್ತು.[೧]

ಉಲ್ಲೇಖಗಳು ಬದಲಾಯಿಸಿ

  1. Behrendt, Stephen C. "Women without Men: Barbara Hofland and the Economics of Widowhood." Eighteenth Century Fiction 17.3 (2005): 481-508. Academic Search Complete. EBSCO. Web. 14 Sept. 2010.
"https://kn.wikipedia.org/w/index.php?title=ವಿಧವೆ&oldid=1095381" ಇಂದ ಪಡೆಯಲ್ಪಟ್ಟಿದೆ