ವಿದ್ಯಾರ್ಥಿವೇತನ
ವಿದ್ಯಾರ್ಥಿವೇತನವು ಒಬ್ಬ ವಿದ್ಯಾರ್ಥಿಗೆ ತನ್ನ ಶಿಕ್ಷಣವನ್ನು ಮುಂದುವರಿಸಲು ನೀಡಲಾಗುವ ಆರ್ಥಿಕ ನೆರವಿನ ಬಹುಮಾನವಾಗಿರುತ್ತದೆ. ವಿದ್ಯಾರ್ಥಿವೇತನಗಳನ್ನು ವಿವಿಧ ಮಾನದಂಡಗಳನ್ನು ಆಧರಿಸಿ ನೀಡಲಾಗುತ್ತದೆ. ಇವು ಸಾಮಾನ್ಯವಾಗಿ ಆ ಬಹುಮಾನದ ದಾನಿ ಅಥವಾ ಸಂಸ್ಥಾಪಕನ ಮೌಲ್ಯಗಳು ಮತ್ತು ಉದ್ದೇಶಗಳನ್ನು ಪ್ರತಿಬಿಂಬಿಸುತ್ತವೆ. ವಿದ್ಯಾರ್ಥಿವೇತನವನ್ನು ವಿದ್ಯಾರ್ಥಿಯು ಮರಳಿ ಕೊಡಬೇಕಾಗಿರುವುದಿಲ್ಲ.[೧][೨]
ಪ್ರಕಾರಗಳು
ಬದಲಾಯಿಸಿಅತ್ಯಂತ ಸಾಮಾನ್ಯ ವಿದ್ಯಾರ್ಥಿವೇತನಗಳನ್ನು ಈ ಕೆಳಗಿನಂತೆ ವರ್ಗೀಕರಿಸಬಹುದು:
- ಅರ್ಹತೆ ಆಧಾರಿತ: ಈ ಬಹುಮಾನಗಳು ವಿದ್ಯಾರ್ಥಿಯ ಶೈಕ್ಷಣಿಕ, ಕಲಾತ್ಮಕ, ಕ್ರೀಡಾ ಅಥವಾ ಇತರ ಸಾಮರ್ಥ್ಯಗಳ ಮೇಲೆ ಆಧಾರಿತವಾಗಿರುತ್ತವೆ.
- ಅಗತ್ಯತೆ ಆಧಾರಿತ: ಖಾಸಗಿ ಅಗತ್ಯತೆ ಆಧಾರಿತ ಬಹುಮಾನಗಳು
- ವಿದ್ಯಾರ್ಥಿ ನಿರ್ದಿಷ್ಟ: ಇವನ್ನು ಪಡೆಯಲು ಅರ್ಜಿದಾರರು ಲಿಂಗ, ಜನಾಂಗ, ಧರ್ಮ, ಕುಟುಂಬ, ಮತ್ತು ವೈದ್ಯಕೀಯ ಚರಿತ್ರೆ, ಅಥವಾ ಅನೇಕ ಇತರ ವಿದ್ಯಾರ್ಥಿ ನಿರ್ದಿಷ್ಟ ಅಂಶಗಳನ್ನು ಆಧರಿಸಿ ಅರ್ಹತೆ ಹೊಂದಬೇಕು.
- ವೃತ್ತಿಜೀವನ ನಿರ್ದಿಷ್ಟ: ನಿರ್ದಿಷ್ಟ ಅಧ್ಯಯನ ಕ್ಷೇತ್ರದಲ್ಲಿ ತೊಡಗಲು ಯೋಜಿಸಿರುವ ವಿದ್ಯಾರ್ಥಿಗಳಿಗೆ ಕಾಲೇಜು ಅಥವಾ ವಿಶ್ವವಿದ್ಯಾಲಯವು ನೀಡುವ ವಿದ್ಯಾರ್ಥಿವೇತನ.
- ಕಾಲೇಜ್ ನಿರ್ದಿಷ್ಟ: ಅತ್ಯಂತ ಅರ್ಹ ಅರ್ಜೀದಾರರಿಗೆ ಪ್ರತ್ಯೇಕ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ನೀಡುವ ವೇತನ.
- ಕ್ರೀಡಾ ವಿದ್ಯಾರ್ಥಿವೇತನ: ಒಂದು ಕ್ರೀಡೆಯಲ್ಲಿ ಅಸಾಧಾರಣ ಕೌಶಲವನ್ನು ಹೊಂದಿದವರಿಗೆ ನೀಡಲಾಗುತ್ತದೆ.
- ಬ್ರ್ಯಾಂಡ್ ಸ್ಕಾಲರ್‌ಷಿಪ್: ಇವನ್ನು ಒಂದು ಬ್ರ್ಯಾಂಡ್ ಪ್ರಾಯೋಜಿಸುತ್ತದೆ.
- ಸೃಜನಾತ್ಮಕ ಸ್ಪರ್ಧೆಯ ವಿದ್ಯಾರ್ಥಿವೇತನ: ಸೃಜನಾತ್ಮಕ ಸಲ್ಲಿಕೆಯನ್ನು ಆಧರಿಸಿ ಇವನ್ನು ನೀಡಲಾಗುತ್ತದೆ.
ಉಲ್ಲೇಖಗಳು
ಬದಲಾಯಿಸಿ- ↑ Peterson, Kay (4 September 2008). "Financial Aid Glossary". fastweb. Retrieved 28 May 2012.
- ↑ "University Reform: Report of the Royal Commissioners On the State of the University and Colleges of Oxford". The Observer. 1952.