ವಿದುಷಿ. ಉಷಾ ದಾತಾರ್

ಉಷಾ ದಾತಾರ್, ಭಾರತಿಯ ಪರಂಪರೆಯ ಭರತನಾಟ್ಯಂ, ಮೋಹಿನಿ ಆಟ್ಟಂ, ಕುಚಿಪುಡಿ ಮತ್ತು ಕಥಕ್ಕಳಿ ನಾಟ್ಯ ಶೈಲಿಗಳಲ್ಲಿ ಪರಿಣತಿಗಳಿಸಿ ವಿಶಿಷ್ಟ ಕೊಡುಗೆಯನ್ನು ನೀಡುವ ಮೂಲಕ, ಕರ್ನಾಟಕ ನೃತ್ಯ ಕ್ಷೇತ್ರಕ್ಕೆ ಮೆರುಗು ನೀಡಿದವರಲ್ಲಿ ಪ್ರಮುಖರು. ಅವರು, ಸುಮಾರು ೨೫ ವರ್ಷಗಳಿಂದ ಒಂದು ಸಾವಿರಕ್ಕೂ ಹೆಚ್ಚು ನೃತ್ಯ ಪ್ರದರ್ಶನಗಳನ್ನು ನೀಡಿದ್ದಾರೆ. ಇವರ ನಾಟ್ಯ ಪ್ರದರ್ಶನ, ಇಂಡೋ-ಚೈನಾ ಯುದ್ಧದ ಸಮಯದಲ್ಲಿ 'ನೇಫಾ ಗಡಿ ಪ್ರದೇಶ'ದ ಯೋಧರ ಮನರಂಜನೆಗಾಗಿ ನೀಡಿದ ನೃತ್ಯಗಳು, ಪ್ರಸಿದ್ಧವಾದವುಗಳು. ದಾತಾರ್ ರವರ ಸಾಧನೆಗಳಲ್ಲಿ ಮತ್ತೊಂದು ಸಂಗತಿಯೆಂದರೆ, 'ದೇವಾಲಯದ ನೃತ್ಯದ ಪುನರ್ಚೇತನ', ಅತ್ಯುತ್ತಮ ಸಾಧನೆಗಳಲ್ಲಿ ಒಂದಾಗಿದೆ. ದೇಶ-ವಿದೇಶಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟು,, ಎಲ್ಲರ ಅಭಿನಂದನೆಗೆ ಪಾತ್ರರಾಗಿದ್ದಾರೆ.

ಬಾಲ್ಯ.,ವಿದ್ಯಾಭ್ಯಾಸ, ಹಾಗೂ ಸಾಧನೆ ಬದಲಾಯಿಸಿ

ಉಷಾ, ಅರಸಿಕೆರೆಯಲ್ಲಿ ಜನಿಸಿದರು. ತಮ್ಮ ೭ ವರ್ಷ ವಯಸ್ಸಿನ ಬಾಲೆಯಾದಾಗಲೇ ನೃತ್ಯದ ಬಗ್ಗೆ ಒಲವು ಹೊಂದಿದ್ದರು. ಅವರ ಮೊದಲ ಗುರು, ಅವರ ತಾಯಿ, 'ಸ್ನೇಹ ಪ್ರಭಾ'. ನಂತರ 'ಕೇರಳ ಕಲಾ ಮಂಡಲಂ' ನಲ್ಲಿ ವಿದ್ಯಾರ್ಥಿವೇತನ ಗಳಿಸಿ, ೫ ವಷಗಳ ಕಾಲ 'ಗುರುಕುಲ ಪದ್ಧತಿ'ಯಲ್ಲಿ ಶಿಕ್ಷಣ ಪಡೆದರು. ೯ ನೆಯ ವಯಸ್ಸಿನಲ್ಲಿ ಮೋಹಿನಿ ಆಟ್ಟ್ಸ್ಂ, ಮತ್ತು ಭರತ ನಾಟ್ಯಂ ನಲ್ಲಿ ಪರಿಣತಿ ಪಡೆದರು. ೧೯೭೩ ರಲ್ಲಿ 'ಆಂಧ್ರ ಅಕ್ಯಾಡೆಮಿ'ಯ ಆಶ್ರಯದಲ್ಲಿ 'ಕುಚಿಪುಡಿ ನೃತ್ಯಾಭ್ಯಾಸ, 'ದೇವಾಲಯ ನೃತ್ಯ', ಸಾತ್ವಿಕ ಅಭಿನಯದ ಶಿಕ್ಷಣ ದೊರೆಯಿತು. ಬಳಿಕ ಡಾ. ಕೆ. ವೆಂಕಟಲಕ್ಷಮ್ಮ,ಮತ್ತು ಜೇಜಮ್ಮ ನವರ ಬಳಿ, ಮೈಸೂರು ಶೈಲಿಯ ನೃತ್ಯವನ್ನು ಅಭ್ಯಾಸ ಮಾಡಿದರು. ಅವರ ಗುರುಗಳು :

  • ಡಾ. ನಟರಾಜ ರಾಮಕೃಷ್ಣ ಸಾತ್ವಿಕ ಅಭಿನಯದ ಹಲವು ವಿಧಗಳನ್ನು ಹೇಳಿಕೊಟ್ಟರು.
  • ಭರತನಾಟ್ಯದ ಗುರುಗಳು, ಶ್ರೀಮತಿ ಅಲಮೇಲು, ಶ್ರೀ ಕಣ್ಣನ್ ಮರಾರ್, ಮತ್ತು ಶ್ರಿ. ಪ್ರೊ. ಭಾಸ್ಕರ್, ಬಲ್ಲಿ ವೆಂಕಟರತ್ನಂ, ಸ್ಯಾರಿಡೇ ಮಾಣಿಕ್ಯಂ,
  • ಮೋಹಿನಿ ಆಟ್ಟಂ, ಶ್ರೀಮತಿ ಪದ್ಮಶ್ರೀ ಚಿನ್ನಮ್ಮು ಅಮ್ಮು,
  • 'ಸಿಂಹನಂದಿನಿ' ಮುಂತಾದ ವಿಶೇಷ ಕುಚಿಪುಡಿ ನೃತ್ಯ ಪ್ರಕಾರಗಳಲ್ಲಿ, 'ಬರೋಡದ ದರ್ಪಣ ಕಲಾ ಶಾಲೆಯ ಗುರು', ಸಿ.ಆರ್.ಆಚಾರ್ಯ ರವರಿಂದ ತರಬೇತಿ.
  • 'ಪೂತನ ಮೋಕ್ಷಂ' ಕಥಕ್ಕಳಿ ಶೈಲಿಯಲ್ಲಿ ಶ್ರೀ ನೀಲಕಂಠನ್,

ಸಾಧನೆಗಳು ಬದಲಾಯಿಸಿ

'ಕಾಡು ಕುದುರೆ', 'ಮಾಡಿ ಮಾಡಿದವರು' ಮುಂತಾದ ಕನ್ನಡ ಚಲನ ಚಿತ್ರಗಳಿಗೆ ನೃತ್ಯ ನಿದೇಶನ ನೀಡಿದರು. ನಾಟ್ಯ ವಿಶಾರದೆ, 'ವೈಜಯಂತಿ ಮಾಲಾ'ರವರು 'ಮೋಹಿನಿ ಆಟ್ಟಂ' ನೃತ್ಯವನ್ನು ದಾತಾರ್ ರಿಂದ ಕಲಿತಿದ್ದಾರೆ. ದಾತಾರ್ ನಿರ್ದೇಶಿಸಿದ ನೃತ್ಯ ರೂಪಕಗಳು ದೇವಾಲಯ ನೃತ್ಯಗಳು, ದೂರದರ್ಶನದಲ್ಲಿ ಬಿತ್ತರಗೊಂಡು, ದೇಶದಾದ್ಯಂತ ಜನಮನ್ನಣೆಯನ್ನು ಗಳಿಸಿವೆ.

ಗೌರವ, ಪ್ರಶಸ್ತಿಗಳು ಬದಲಾಯಿಸಿ

  • ಕರ್ನಾಟಕ ಸರ್ಕಾರದ ಸಂಸ್ಕೃತಿ ಇಲಾಖೆಯವರು ಸಿದ್ಧಪಡಿಸಿದ 'ಕಥಕ್ಕಳಿ ಪಠ್ಯ ಪುಸ್ತಕ ಸಮಿತಿಯ ಅಧ್ಯಕ್ಷೆ'ಯಾಗಿ ಸೇವೆ ಸಲ್ಲಿಸಿದ್ದಾರೆ.
  • ಕರ್ನಾಟಕ ರಾಜ್ಯ ನೃತ್ಯ ಪರೀಕ್ಷಾ ಮಂಡಳಿಗೆ ಮಾರ್ಗದರ್ಶಕರಾಗಿ, ದುಡಿದಿದ್ದಾರೆ.
  • ಬೆಂಗಳೂರು ವಿಶ್ವವಿದ್ಯಾಲಯದ ನಾಟಕ ಹಾಗು ನೃತ್ಯ ವಿಭಾಗದಲ್ಲಿ 'ರೀಡರ್' ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
  • ಒಡಿಸ್ಸಿ ನೃತ್ಯ ಶೈಲಿಯಲ್ಲಿ ಪರಿಣತಿ ಹೊಡಿದ 'ಉಷಾ ದಾತಾರ್' 'ಯೋಗ ಕೆಂದ್ರದ ಪ್ರಾಧ್ಯಾಪಕಿ'ಯಾಗಿ ದುಡಿಯುತ್ತಿದ್ದಾರೆ.
  • ೧೯೮೨-೮೪ ರ ಸಾಲಿನ ಕರ್ನಾಟಕ ಸರ್ಕಾರದ ಸಂಗೀತ ನೃತ್ಯ ಅಕ್ಯಾಡೆಮಿಯ ಸದಸ್ಯೆಯಾಗಿ ನೇಮಕಗೊಂಡಿದ್ದರು.
  • ಸೆನ್ಸಾರ್ ಮಂಡಳಿಯ ಸದಸ್ಯೆಯಾಗಿ ಕೆಲಸ ನಿರ್ವಹಿಸಿದ್ದಾರೆ.
  • ೧೯೯೪-೯೫ ರ ಸಾಲಿನ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ಪ್ರದಾನಮಾಡುವ, “ಕರ್ನಾಟಕ ಕಲಾ ತಿಲಕ” ಬಿರುದು ಮತ್ತುಪ್ರಶಸ್ತಿಗೆ ಪಾತ್ರರಾಗಿದ್ದಾರೆ.