ವಿದಾರಿ ಕಂದ
Pueraria tuberosa | |
---|---|
Scientific classification | |
ಸಾಮ್ರಾಜ್ಯ: | Plantae
|
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | Eudicots
|
(ಶ್ರೇಣಿಯಿಲ್ಲದ್ದು): | |
ಗಣ: | |
ಕುಟುಂಬ: | |
ಕುಲ: | |
ಪ್ರಜಾತಿ: | P. tuberosa
|
Binomial name | |
Pueraria tuberosa | |
Synonyms[೧] | |
|
ವಿದಾರಿ ಕಂದ(ನೆಲಗುಂಬಳ) ವು ಒಂದು ಗಿಡಮೂಲಿಕೆಯಾಗಿದೆ. ಗೆಣಸು(ಸ್ವೀಟ್ ಪೊಟಾಟೊ)ನ ಹಾಗೆ ಭೂಮಿಯಡಿಯಲ್ಲಿ ಆಗುವ ಗಡ್ಡೆ ಅಥವಾ ಬೇರು ಆಗಿದೆ. ಅದನ್ನು ಕನ್ನಡದಲ್ಲಿ `ನೆಲಗುಂಬಳ ಎಂದು ಕರೆಯಲಾಗುತ್ತದೆ. ಇದನ್ನು ಸಂಸ್ಕೃತದಲ್ಲಿ `ವಿದಾರಿ ಕಂದ' ಎಂದು ಹೆಸರಿಸಲಾಗಿದೆ. ಅದರ ಬೊಟೆನಿಕಲ್ ಹೆಸರು `ಪ್ಯುರಾರಿಯಾ ಟ್ಯುಬರೋಸಾ' ಎಂದಾಗಿದೆ. ಅದಕ್ಕೆ ಇನ್ನಿತರ ಹೆಸರುಗಳು ಇಂತಿವೆ: ಬಿಲೈಕಂದ, ಪಲ್ಲುಡ್ಕನ್, ಕಿಳಂಬು, ಭೂಮಿ ಕುಸುಮಾಂಡ, ಕಳ್ಳುಕಿಳಂಬು, ಕಟ್ಟುಕಚ್ಚಿಲ್ ಇತ್ಯಾದಿ. ಇದರ ಬಳ್ಳಿ ಗೆಣಸಿನ ಬಳ್ಳಿಯಂತೆ ಇದೆ. ಅದೇ ಬಣ್ಣದ ಹೂಗಳನ್ನು ಅರಳಿಸುತ್ತದೆ. ಮಳೆಗಾಲದ ಪ್ರಾರಂಭದಲ್ಲಿ ನೆಲದಲ್ಲಿ ತನ್ನಿಂದ ತಾನೆ ಹುಟ್ಟಿಕೊಳ್ಳುತ್ತದೆ.
ವಿದಾರಿ ಕಂದದ ಉಪಯೋಗಗಳು:
- ವಾತ ಪಿತ್ಥವನ್ನು ಶಮನಗೊಳಿಸುತ್ತದೆ.
- ವೀರ್ಯ ವೃದ್ಧಿ ಹಾಗೂ ಶಿಶ್ನ ನಿಮಿರ ದೌರ್ಬಲ್ಯಕ್ಕೆ ನಿವಾರಣೆಯಾಗಿ ಉಪಯೋಗಿಸಬಹುದು.
- ದೇಹಕ್ಕೆ ಮತ್ತು ಮನಸ್ಸಿಗೆ ಚೇತೋಹಾರಿ
- ಆರೋಗ್ಯವಂತ ವೀರ್ಯ ಸೃಷ್ಟಿಗೆ ಸಹಾಯಕ.
- ವೃದ್ಧಾಪ್ಯ ಪ್ರಕ್ರಿಯಯನ್ನು ನಿಧಾನಗೊಳಿಸುತ್ತದೆ.
- ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.
- ಕಫವನ್ನು ಕರಗಿಸಿ ಉಸಿರಾಟವನ್ನು ಸರಿಪಡಿಸಲು ಸಹಾಯಕಾರಿಯಾಗಿದೆ.
- ಇದರ ಪೌಡರ್ ಸೇವನೆಯಿಂದ ಒಣ ಚರ್ಮದಿಂದ ಬಿಡುಗಡೆಗೊಂಡು ಚರ್ಮ ಕಾಂತಿಯುಕ್ತವಾಗುತ್ತದೆ.
- ಬಾತುಕೊಂಡಲ್ಲಿ ಇದರ ಪೇಸ್ಟ್ ಉಪಯೋಗಿಸಿದರೆ ಬಾತು ಇಳಿಯುತ್ತದೆ.
- ಚಿಕ್ಕ ಮಕ್ಕಳಿಗೆ ಜೀರ್ಣ ಸಮಸ್ಯೆ ಇದ್ದಲ್ಲಿ ಇದರ ಸೇವನೆಯಿಂದ ನಿವಾರಣೆಯಾಗುತ್ತದೆ.
- ಹೆಂಗಸರಿಗೆ ಮುಟ್ಟಿನ ಸಮಸ್ಯೆ ಇದ್ದರೆ ಆರೋಗ್ಯವಂತ ರಜಸ್ವಲಕ್ಕೆ ಉಪಯೋಗಕಾರಿಯಾಗಿದೆ.
- ಬಾಳಂತಿಗೆ ಮೊಲೆಯಲ್ಲಿ ಹಾಲು ಕಡಿಮೆ ಇದ್ದಲ್ಲಿ ಇದರ ಸೇವನೆಯಿಂದ ಹಾಲು ಹೆಚ್ಚಾಗುತ್ತದೆ.
- ಸಾಮಾನ್ಯ ಟಾನಿಕ್ ಆಗಿಯೂ ಸೇವಿಸಬಹುದು.
- ರಕ್ತ ಸಮಸ್ಯೆ ಇದ್ದರೆ ಇದು ನಿವಾರಕವಾಗಿ ಉಪಯೋಗಕ್ಕೆ ಬರುತ್ತದೆ.
ಇದರ ಉತ್ಪಾದನೆಗಳು ಮಾರುಕಟ್ಟೆಯಲ್ಲಿ ಲಭ್ಯ.
ಉಲ್ಲೇಖಗಳು
ಬದಲಾಯಿಸಿ- ↑ "The Plant List: A Working List of All Plant Species". Archived from the original on 2022-06-08. Retrieved 2015-02-14.