ವಿಜಯ್ ಕಾಂತ್ ತಮಿಳು ಚಿತ್ರನಟ ಮತ್ತು ರಾಜಕಾರಣಿ. ಕ್ಯಾಪ್ಟನ್ ಎಂದೇ ಜನಪ್ರಿಯರಾದ ವಿಜಯ್ ಕಾಂತ್, ೪ ದಶಕಗಳ ಕಾಲ ತಮಿಳು ಚಿತ್ರರಂಗದಲ್ಲಿ ಮಿಂಚಿದ್ದರು.[]

ವಿಜಯ್ ಕಾಂತ್
ಮಗನ ಚಿತ್ರ ಧ್ವನಿ ಸುರುಳಿ ಬಿಡುಗಡೆಯಲ್ಲಿ ವಿಜಯ್ ಕಾಂತ್
Born
ನಾರಾಯಣನ್ ವಿಜಯರಾಜ್ ಅಳಗರ್ ಸಾಮಿ

Died
Occupation(s)ನಟ, ರಾಜಕಾರಣಿ
Spouseಪ್ರೇಮಲತಾ

ಕುಟುಂಬ

ಬದಲಾಯಿಸಿ

೨೫ ಆಗಸ್ಟ್ ೧೯೫೨ ರಲ್ಲಿ ಮಧುರೈಯಲ್ಲಿ ತೆಲುಗು ಮಾತನಾಡುವ ಮನೆಯಲ್ಲಿ ವಿಜಯರಾಜ್ ಅಳಗರ್ ಸಾಮಿ ಮತ್ತು ಅಂಡಾಳ್ ದಂಪತಿಗಳ ಮಗನಾಗಿ ಜನಿಸಿದರು. ಇವರ ಹುಟ್ಟುಹೆಸರು ನಾರಾಯಣನ್.೧೯೯೦ರಲ್ಲಿ ಪ್ರೇಮಲತಾರನ್ನು ವರಿಸಿದ ವಿಜಯ್ ಕಾಂತ್, ಇವರಿಗೆ ಇಬ್ಬರು ಗಂಡುಮಕ್ಕಳು. ಮಗ ಶಣ್ಮುಗಪಾಂಡ್ಯನ್ ಕೂಡ ತಮಿಳು ನಟ.

ಚಿತ್ರಜೀವನ

ಬದಲಾಯಿಸಿ

೧೯೭೯ರಲ್ಲಿ ಖಳನಟನಾಗಿ ತಮಿಳು ಚಿತ್ರರಂಗಕ್ಕೆ ಕಾಲಿಟ್ಟ ನಾರಾಯಣನ್, ತಮ್ಮ ತಂದೆಯ ಹೆಸರನ್ನು ಚಿರಸ್ಥಾಯಿ ಆಗಿಸಲು ತಮ್ಮ ಹೆಸರನ್ನು ವಿಜಯ್ ಕಾಂತ್ ಎಮ್ದು ಬದಲಿಸಿಕೊಂಡರು., ೨೦೧೫ರವರೆಗೆ ಕೇವಲ ತಮಿಳು ಚಿತ್ರಗಳಲ್ಲಿ ಮಾತ್ರವೇ ನಟಿಸಿದರು.೨೦೦೦ರಿಂದ ತಮ್ಮ ಮಿತ್ರ ಇಬ್ರಾಹಿಂ ರೌದರ್ ಜೊತೆಗೂಡಿ ಚಿತ್ರನಿರ್ಮಾಣ ಶುರು ಮಾಡಿದರು. ವಜ್ರೇಶ್ವರಿ ಸಂಸ್ಥೆಯಿಂದ ಪ್ರಭಾವಿತರಾಗಿದ್ದ ವಿಜಯ್ ಕಾಂತ್, ತಮ್ಮ ನಿರ್ಮಾಣದ ಚಿತ್ರಗಳಚಿತ್ರೀಕರಣದಲ್ಲಿ, ಚಿತ್ರನಟರು ಮತ್ತು ಕಾರ್ಮಿಕರೆಲ್ಲರಿಗೂ, ಒಂದೇ ಮಾದರಿ ಊಟ ನೀಡಿ, ತಮಿಳು ಚಿತ್ರರಂಗಲ್ಲೆ ಮಾದರಿ ಎನಿಸಿದರು.[]

೧೯೮೨ರವರೆಗೆ ಖಳನಟನಾಗಿ ನಟಿಸಿದ ವಿಜಯ್ ಕಾಂತ್, ೧೯೮೩ರಿಂದ ಕಡಿಮೆ ಬಜೆಟ್ ನ ಸಾಹಸ, ಭಾವನಾತ್ಮಕ ಪಾತ್ರಗಳಲ್ಲಿ ನಾಯಕನಾಗಿ ನಟಿಸತೊಡಗಿದರು.
೧೯೮೪ರಲ್ಲಿ ಇವರು ನಾಯಕನಾಗಿ ೧೮ ಚಿತ್ರಗಳು ತೆರೆ ಕಂಡದ್ದು ಇಂದಿಗೂ ಮುರಿಯದ ದಾಖಲೆ. ೧೯೮೫ರಲ್ಲಿ ತಮಿಳಿನ ಮೊದಲ ೩-ಡಿ ಚಿತ್ರದಲ್ಲಿ ನಟಿಸಿದ ವಿಜಯ್ ಕಾಂತ್, ನಿರ್ಮಾಪಕರಿಗೆ ಅನುಕೂಲವಾಗಲಿಕ್ಕೆ ಕಡಿಮೆ ಸಂಭಾವನೆ ಅಥವಾ ಚಿತ್ರಬಿಡುಗಡೆಯ ನಂತರ ಸಂಭಾವನೆ ಪಡೆಯಲು ಶುರು ಮಾಡಿದರು. ೮೦-೯೦ರ ದಶಕದಲ್ಲಿ ಕಮಲ್ ಹಾಸನ್ ಮತ್ತು ರಜನಿಕಾಂತ್ ರಿಗೆ ಸರಿಸಮನಾಗಿ ಪೈಪೋಟಿ ನೀಡಿದ ವಿಜಯ್ ಕಾಂತ್ ವರ್ಚಸ್ಸು, ೨೦೦೦ರಿಂದ ಕಡಿಮೆ ಆಯಿತು. ೨೦೦೦ರಿಂದ ಚಿತ್ರನಿರ್ಮಾಣ ಶುರು ಮಾಡಿದ ವಿಜಯ್ ಕಾಂತ್, ೨೦೧೫ರಲ್ಲಿ ತಮ್ಮ ಮಗ ಶಣ್ಮುಗಪಾಂಡ್ಯನ್ ರನ್ನು ನಾಯಕನಾಗಿ ಪರಿಚಯಿಸಲು, ಆತನ ೨ ಚಿತ್ರಗಳಲ್ಲಿ ಅತಿಥಿನತನಾಗಿ ನಟಿಸಿದರು.

ರಾಜಕಾರಣ

ಬದಲಾಯಿಸಿ

೨೦೦೫ರಲ್ಲಿ ದೇಸೀಯ ಮುರ್ಪೊಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಪಕ್ಷ ಸ್ಥಾಪೈಸಿದ ವಿಜಯ್ ಕಾಂತ್, ೨೦೦೬ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಯಾರಿಂದಲೂ ದೇಣಿಗೆ ಪಡೆಯದೆಯೇ, ರಾಜಧಾನಿ ಚೆನ್ನೈಯಿಂದ ದೂರದಲ್ಲಿ ಗೆಲ್ಲಲು ಕಷ್ಟವಾದ ಕ್ಷೇತ್ರ ಆರಿಸಿ, ತಮ್ಮ ಪಕ್ಷದ ಏಕಾಂಗಿ ಅಭ್ಯರ್ಥಿ ಆಗಿ ಗೆದ್ದರು. ಡಿಎಂಡಿಕೆ ೧೦% ಮತ ಗಳಿಸಿ, ೨೫ ಕ್ಷೇತ್ರಗಳಲ್ಲಿ ನಿರ್ಣಾಯಕ ಪಾತ್ರ ವಹಿಸಿತು.[] ೨೦೧೧ರಲ್ಲಿ ಚೋ ರಾಮಸ್ವಾಮಿ ಒತ್ತಾಸೆಯಿಂದ ಜಯಲಲಿತಾರ ಅಣ್ಣಾ ಡಿಎಂಕೆ ಜಿತೆ ಮೈತ್ರಿ ಮಾಡಿ, ಚುನಾವಣೆ ಎದುರಿಸಿ, ೨೯ ಸ್ಥಾನ ಗಳಿಸಿದರು. ಜಯಲಲಿತಾರ ಆಡಳಿತದ ವಿರುದ್ಧ ದನಿ ಎತ್ತಿದ ವಿಜಯ್ ಕಾಂತ್, ವಿರೋಧ ಪಕ್ಷದ ನಾಯಕನಾಗಿ ಗಮನ ಸೆಳೆದರು ೨೦೧೪ರಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು, ಅಣ್ಣಾ ಡಿಎಂಕೆ ವಿರುದ್ಧ ಸೆಣಸಿ, ಸೋಲು ಅನುಭವಿಸಿದರು. ೮ ಮಂದಿ ಡಿಎಂಡಿಕೆ ಶಾಸಕರು ರಾಜೀನಾಮೆ ಇತ್ತಾಗ, ವಿರೋಧ ಪಕ್ಷದ ನಾಯಕ ಕಳೆದುಕೊಂಡರು.
೨೦೧೬ರ ಚುನಾವಣೆಯಲ್ಲಿ ಠೇವಣಿ ಕಳೆದುಕೊಂಡ ವಿಜಯ್ ಕಾಂತ್, ಚಿತ್ರರಂಗ ಮತ್ತು ರಾಜಕಾರಣದಲ್ಲಿ ಹಿನ್ನಡೆ ಅನುಭವಿತೊಡಗಿದರು.

೨೮ ಡಿಸೆಂಬರ್ ೨೦೨೩ರಂದು ಚೆನೈ ಆಸ್ಪತ್ರೆಯೊಂದರಲ್ಲಿ ನ್ಯುಮೋನಿಯಾದಿಂದ ನಿಧನರಾದ ವಿಜಯ್ ಕಾಂತ್, ಅಂತಿಮ ಸಂಸ್ಕಾರ ಸರ್ಕಾರಿ ಗೌರವದೊಂದಿಗೆ ನಡೆಸಲಾಯಿತು.

ಪುರಸ್ಕಾರ

ಬದಲಾಯಿಸಿ

ಫಿಲಂಫೇರ್, ತಮಿಳುನಾಡು ರಾಜ್ಯ ಸರ್ಕಾರಿ ಪ್ರಶಸ್ತಿಗಳನ್ನು ಪಡೆದ ವಿಜಯ್ ಕಾಂತ್, ಪುರುಚ್ಚ್ಚಿ ಕಲೈಗ್ನಾರ್ ಎಂದೇ ಕರೆಯಲ್ಪಡುತ್ತಿದ್ಸರು.

ಜನಪ್ರಿಯತೆ

ಬದಲಾಯಿಸಿ

ಅತಿರಂಜಿತ ಆಕ್ಷನ್ ದೃಶ್ಯಗಳಲ್ಲಿ ಗುಂಡು ಬಿದ್ದರೂ ಏನೂ ಆಗದ, ವಿಲಕ್ಷಣ ಇಂಗ್ಲೀಷ್ ಸಂಭಾಷಣೆ ಮತ್ತು ಆಂಗಿಕ ಮ್ಯಾನರಿಸಂಗಳಿಂದ, ಸಾಮಾಜಿಕ ಜಾಲತಾಣಗಳಲ್ಲಿ, ವಿಜಯ್ ಕಾಂತ್ ಚಿತ್ರಗಳ ತುಣುಕುಗಳು, ಜನಪ್ರಿಯವಾಗಿವೆ. ವಿಜಯ್ ಕಾಂತ್ ರ ಮೆಮೆ ಮತ್ತು ಜಿಫ್ ಗಳು ಹಾಸ್ಯಕ್ಕೆ ಹೆಸರಾಗಿವೆ.

ಉಲ್ಲೇಖಗಳು

ಬದಲಾಯಿಸಿ