ವಿಜಯನಗರದ ರಾಣಿ ಗಂಗಾಂಬಿಕೆ

ಜೀವನಚರಿತ್ರೆ

ಬದಲಾಯಿಸಿ

ಇವರು ಹದಿನಾಲ್ಕನೆಯ ಶತಮಾನದ ಕರ್ನಾಟಕದ ಚರಿತ್ರೆಯ ಪುಟಗಳಲ್ಲಿ ಕಾಣಿಸಿಕೊಳ್ಳುವ ಇನ್ನೊಬ್ಬ ಮಹಿಳೆ ವಿಜಯನಗರ ಸಮ್ರಾಜ್ಯವನ್ನು ಆಳಿದ ಸಂಗಮ ವಂಶದ ಸೊಸೆ 'ಗಂಗಾಂಬಿಕೆ'. ಬುಕ್ಕಣ್ಣೊಡೆಯನ ಮಗನಾದ ಕಂಪಣ್ಣನ ಮಡದಿ ಇವಳು. ಸಂಸ್ಕತ ಭಾಷೆಯಲ್ಲಿ ಮಧುರಾ ವಿಜಯಂ ಅಥವಾ ವೀರಕಂಪರಾಯ ಚರಿತಂ ಎಂಬ ಚಾರಿತ್ರಿಕ ಕಾವ್ಯ ಬರೆದ ಇವಳ ವ್ಯೆಯಕ್ತಿಕ ಬದುಕಿನ ಕುರಿತಾದ ಚಾರಿತ್ರಿಕವೆನ್ನಬಹುದಾದ ಯಾವುದೇ ಸ್ಫಷ್ಟ ದಾಖಲೆಗಳು ಲಭ್ಯವಿಲ್ಲದಿರುವುದು ಭಾರತೀಯ ಚರಿತ್ರೆಯ ವ್ಯಂಗ್ಯವೆಂದೇ ಹೇಳಬೇಕು. ಅವಳು ರಚಿಸಿದ ಕಾವ್ಯವನ್ನು ಅಧರಿಸಿ ಅವಳ ಕುರಿತದ ಮಹತ್ವದ ಅಂಶಗಳನ್ನು ಹೀಗೆ ಪಟ್ಟ ಮಾಡಬಹುದು.

ಮೊದಲನೆಯದಾಗಿ,'ಮಧುರಾ ವಿಜಯಂ' ಕಾವ್ಯ ಸಂಸ್ಕತ ಭಾಷೆಯಲ್ಲಿ ರಚಿತವದುದನ್ನು ಗಮನಿಸಿದರೆ ಗಂಗಾಂಬಿಕೆಯ ವಿದ್ದತ್ತಿನ ಬಗೆಗೆಗ ನಮಗೆಲ್ಲ ಹೆಮ್ಮೆ ಎನಿಸದೆ ಇರಲಾರದು. ಬಹುಪಾಲು ಕುರುಬ ಸಮುದಾಯದ ಮಹಿಳೆಯರು ಪ್ರಾದೇಶಿಕ ಭಾಷೆಯ ಲೋಕದಿಂದಲೇ ವಂಚಿವಾಗಿರುವಾಗ ಗಂಗಾಂಬಿಕೆ ಸಂಸ್ಕತದಲ್ಲಿ ರಚಿಸಿರುವುದು ಚರಿತ್ರೆಯಲ್ಲಿ ದಾಖಲಾಗಬೇಕಾದ ಸಂಗತಿಯಾಗಿದೆ.

ಎರಡನೆಯದಾಗಿ ಅವಳಿಗಿರುವ ಚರಿತ್ರೆಯ ಅಗಾಧವಾದ ಜ್ಞಾನ. ಗಂಗಾಂಬಿಕೆ ತನ್ನ ಸಮಕಾಲೀನ ಸಂದರ್ಭದ ಇಡೀ ದಕ್ಶಿಣ ಭಾರತದ ರಾಜಕೀಯ ಚರಿತ್ರೆಯನ್ನು ಆಳವಾಗಿ ಬಲ್ಲವಳಾಗಿದ್ದಳು. ತನ್ನ ಪತಿಯಾದ ವೀರ ಕಂಪಣನು ತುರುಕರಿಂದ ಮಧುರೈನ್ನು ವಶಪಡಿಸಿಕೊಂಡ ಚಾರಿತ್ರಿಕ ಸಂಗತಿಯನ್ನು ಈ ಕಾವ್ಯ ವಿವರಿಸುತ್ತಿದೆಯಾದ್ದರಿಂದ ಆ ಕಾಲಘಟ್ಟದ ಚರಿತ್ರೆ ನಿರ್ಮಾಣ ಮಾಡುವವರಿಗೆ ಈ ಕಾವ್ಯ ಬಹುದೊಡ್ಡ ಅಕರವಾಗಿ ನಿಲ್ಲುತ್ತದೆ.ತುರುಕರ ಆಳ್ವಿಕೆಯಲ್ಲಿ ದಕ್ಶಿಣ ಭಾರತದ ಧರ್ಮಗಳು,ಅದರಲ್ಲೂ ವಿಶೇಷವಾಗಿ ವೈದಿಕ ಧರ್ಮ ಹಾಗೂ ಜನಸಾಮಾನ್ಯರ ದೈನಂದಿನ ಬದುಕು ಎಷ್ಟು ಹೀನಾಯಾಗಿದ್ದವೆಂಬುದನ್ನು ಈ ಕಾವ್ಯದಲ್ಲಿ ಕಾಣಬಹುದು.

ಮೂರನೆಯದಾಗಿ,'ಮಧುರಾ ವಿಜಯಂ'ಪಠ್ಯವನ್ನೇ ಆಧರಿಸಿ ಹೇಳುವುದಾದರೆ ಅವಳು ಚೆಲುವೆಯಾಗಿದ್ದಳೆಂಬುದು ಸ್ಪಷ್ಟವಾಗಿ ತಿಳಿದು ಬರುತ್ತದೆ. ತಾನೇ ಬರೆದ ಕಾವ್ಯದಲ್ಲಿ ತಾನೇ ಒಂದು ಪಾತ್ರವಾಗಿ ಕಾಣಿಸಿಕೊಳ್ಳುತ್ತಾಳೆ. ಅಲ್ಲಿ ಅವಳಿಗೆ ಬಳಕೆಯಾದ ವಿಶೇಷಣಗಳು-ಲೋಚನಾ ನಂದಿನಿ,ಸರೋಜಮುಖಿ ಮತ್ತು ಕಮಲಮುಖಿ- ಅವಳ ಚಲುವಿಕೆಗೆ ಸಾಕ್ಷಿಯಾಗಿ ನಿಲ್ಲುತ್ತವೆ.[][]

ಉಲ್ಲೇಖಗಳು

ಬದಲಾಯಿಸಿ