ವಿಚಾರಣೆ
ಕಾನೂನಿನಲ್ಲಿ, ವಿಚಾರಣೆ ಎಂದರೆ ಒಂದು ವಿವಾದದಲ್ಲಿ ಭಾಗಿಯಾಗಿರುವ ಪಕ್ಷಗಳು (ಸಾಕ್ಷ್ಯಾಧಾರದ ರೂಪದಲ್ಲಿ) ಮಾಹಿತಿಯನ್ನು ಪ್ರಸ್ತುತಪಡಿಸಲು ನ್ಯಾಯಮಂಡಳಿಯಲ್ಲಿ (ಹಕ್ಕುಗಳು ಅಥವಾ ವಿವಾದಗಳನ್ನು ನಿರ್ಣಯ ಮಾಡುವ ಪ್ರಾಧಿಕಾರವಿರುವ ವಿಧ್ಯುಕ್ತ ಸ್ಥಳ) ಒಟ್ಟಿಗೆ ಸೇರುವುದು. ನ್ಯಾಯಾಲಯವು ನ್ಯಾಯಮಂಡಳಿಯ ಒಂದು ರೂಪವಾಗಿದೆ.[೧] ಒಬ್ಬ ನ್ಯಾಯಾಧೀಶ, ನ್ಯಾಯದರ್ಶಿ ಮಂಡಲಿ, ಅಥವಾ ಗೊತ್ತುಪಡಿಸಿದ ಬೇರೆ ವಾಸ್ತವಾಂಶ ವಿಚಾರಣಾಧಿಕಾರಿಯ ಮುಂದೆ ನಡೆಯಬಹುದಾದ ನ್ಯಾಯಮಂಡಳಿಯು ಅವರ ವಿವಾದದ ತೀರ್ಮಾನವನ್ನು ನೆರವೇರಿಸುವ ಗುರಿಹೊಂದಿರುತ್ತದೆ.
ವಿಚಾರಣೆಯು ಸಮುದಾಯದ ಸದಸ್ಯರ ಗುಂಪಿನ ಎದುರು ನಡೆದಾಗ ಅದನ್ನು ನ್ಯಾಯದರ್ಶಿ ಮಂಡಲಿ ಎದುರಿನ ವಿಚಾರಣೆ ಎಂದು ಕರೆಯಲಾಗುತ್ತದೆ. ವಿಚಾರಣೆಯು ಸಂಪೂರ್ಣವಾಗಿ ಕೇವಲ ಒಬ್ಬ ನ್ಯಾಯಾಧೀಶನ ಎದುರು ನಡೆದಾಗ, ಅದನ್ನು ನ್ಯಾಯಪೀಠದ ಎದುರಿನ ವಿಚಾರಣೆ ಎಂದು ಕರೆಯಲಾಗುತ್ತದೆ.
ಉಲ್ಲೇಖಗಳು
ಬದಲಾಯಿಸಿ