'ವಿಖ್ರೋಲಿ ಮುಂಬಯಿನ ಉಪನಗರಿಗಳಲ್ಲೊಂದು. 'ಸೆಂಟ್ರಲ್ ರೈಲ್ವೆ,' ಯ ದಾರಿಯಲ್ಲಿ ಬರುತ್ತದೆ. ೧೯೪೭ ರ ಮೊದಲು ಈ ರೈಲ್ವೆ ನಿಲ್ದಾಣವನ್ನು ಕಟ್ಟಲಾಯಿತು. ಇಲ್ಲಿ ಗೋದ್ರೆಜ್ ಕಂಪೆನಿಯ ಭಾರಿ ಕಾಂಪ್ಲೆಕ್ಸ್ ಸ್ಥಾಪಿಸಲ್ಪಟ್ಟಿರುವುದರಿಂದ, ಕಾರ್ಖಾನೆಗೆ ಸಂಪರ್ಕ ಕಲ್ಪಿಸಲೆಂದೇ, ರೈಲ್ವೆ ನಿಲ್ದಾಣ ಅಸ್ತಿತ್ವಕ್ಕೆ ಬಂತು. ’ಕನ್ನಮ್ವಾರ್ ನಗರ್,’ ವಿಖ್ರೋಲಿಯ ಪೂರ್ವಕ್ಕಿದೆ.

ಮುಂಬಯಿ ಗೂಗಲ್ ಮ್ಯಾಪ್

ಗೃಹವಸತಿ ಕಾಲೋನಿ ಬದಲಾಯಿಸಿ

ಮಹಾರಾಷ್ಟ್ರ ಸರಕಾರದ ’ಮ್ಹಾಡಾ’, ಕಟ್ಟಡಗಳಿಗೆ ಹೆಸರುವಾಸಿಯಾಗಿದೆ. ಈ ವಸತಿಗೃಹಗಳು, ಅಲ್ಲಿನ ಮಾಜೀ-ಮೇಯರ್, ದತ್ತಾ ದಳವಿ ಯವರ ದೂರದೃಷ್ಟಿಯಿಂದ ಸಾಧ್ಯವಾಯಿತು. ಅವರು ಬೃಹನ್ಮುಂಬಯಿ-ಮಹಾನಗರಪಾಲಿಕೆಯಲ್ಲಿ, 'ವಿಖ್ರೋಲಿ,' ಯನ್ನು ಬಹಳಕಾಲ ಪ್ರತಿನಿಧಿಸಿದ್ದರು.

ವಿಖ್ರೋಲಿ ಟೆಲಿಫೋನ್ ಎಕ್ಸ್ ಛೇಂಜ್ ಬದಲಾಯಿಸಿ

ಘಾಟ್ಕೋಪಾರ್ ನಿಂದ, ಥಾಣೆಯವರೆಗಿನ ಭಾರೀ -ದೊಡ್ಡ ವಲಯಕ್ಕೆ ವಿಖ್ರೋಲಿ ಟೆಲಿಫೋನ್ ಎಕ್ಸ್ ಛೇಂಜ್ ಸಂಪರ್ಕ ಒದಗಿಸುತ್ತಿದೆ. ಥಾಣೆ ಕ್ರೀಕ್ ಮೇಲೆ ಒಂದು ಮೇಲ್ಸೇತುವೆಯ ನಿರ್ಮಾಣಕ್ಕೆ ಯೋಜನೆಯ ಥಾಣೆ ಬ್ರಿಡ್ಜ್ ನಿಂದ, ಕನಮ್ವಾರ್ ನಗರದಿಂದ ಈಸ್ಟರ್ನ್ ಎಕ್ಸ್ ಪ್ರೆಸ್ ಹೈವೇ ನವಿ-ಮುಂಬಯಿನ ಕೋಪರ್ ಖೈರಾನೆ ವರೆಗೆ. ಇದು ಮುಂಬಯಿ ಮತ್ತು ನವಿ-ಮುಂಬಯಿಗೆ ನಗರದ ಮೂರನೆಯ ಸೇತುವೆ ಸಂಪರ್ಕ ಕಲ್ಪಿಸಿದಂತಾಗುತ್ತದೆ. ವಿಖ್ರೋಲಿಯಿಂದ ಹೊರಡುವ ಜನಪ್ರಿಯ ಬಿ.ಇ.ಎಸ್.ಟಿ' ಬಸ್ ರೂಟ್ ಗಳು.

  • ೩೯೪, ಮತ್ತು ೩೯೭-'(ಕನ್ನಮ್ವಾರ್ ನಗರಕ್ಕೆ)'
  • ೩೫೩-(ವಡಾಲಕ್ಕೆ)
  • ೧೮೫-(ಜೋಗೇಶ್ವರಿಗೆ)
  • ೩೫೪ (ದಾದರ್ ಗೆ)
  • ೩೮೮ (ಪಾಯ್ಸರ್ ಡಿಪೋ)

ನಗರದ, ಅತಿ ಉದ್ದದ ಬಸ್-ರಸ್ತೆಗಳಲ್ಲೊಂದು ಬದಲಾಯಿಸಿ

೭ LTD, (ವಿಕ್ರೋಲಿ ಪಶ್ಚಿಮ)ದಿಂದ, ’ಬ್ಯಾಂಬೇ ರಿಕ್ಲಮೇಶನ್’, ನಗರದ ದಕ್ಷಿಣದ ತುದಿಯನ್ನು ಮುಟ್ಟುತ್ತದೆ.