ವಿಕಿಪೀಡಿಯ:೫೦೦೦ ಲೇಖನಗಳತ್ತ...

ವಿಕಿಪೀಡಿಯ ೧೦,೦೦೦ ಲೇಖನಗಳತ್ತ ಭರದಿಂದ ಸಾಗುತ್ತಿದೆ!!!

ವಿಕಿಪೀಡಿಯ ನವಂಬರ್ ೨ರಂದು ೯,೫೪೪ ಲೇಖನಗಳನ್ನು ತಲುಪಿದೆ. ಬನ್ನಿ ೧೦,೦೦೦ ಲೇಖನಗಳ ಮಟ್ಟವನ್ನು ತಲುಪಲು ಎಲ್ಲರೂ ಸಹಕರಿಸೋಣ.

ಹೊಸ ಲೇಖನವನ್ನು ಪ್ರಾರಂಭಿಸುವುದು ಹೇಗೆ?

ಬದಲಾಯಿಸಿ

ಯಾವುದಾದರೂ ವಿಷಯದ ಬಗ್ಗೆ ನಿಮಗೆ ಸ್ವಂತ ಜ್ಞಾನವಿದ್ದರೆ ಅಥವ ನಿಮ್ಮ ಬಳಿ ಆ ವಿಷಯದ ಬಗ್ಗೆ ಮಾಹಿತಿಯ ಮೂಲವೊಂದಿದ್ದರೆ ಅದರ ಬಗ್ಗೆ ಹೊಸ ಲೇಖನವನ್ನು ನೀವು ಪ್ರಾರಂಭಿಸಬಹುದು. ಯಾವುದಾದರೂ ವಿಷಯದ ಬಗ್ಗೆ ತಮಗೆ ಆಸಕ್ತಿಯಿದ್ದರೆ, ಅದರ ಬಗ್ಗೆ ಮಾಹಿತಿಯನ್ನು ಅಂತರಜಾಲದಲ್ಲಿ (ಉದಾ.: ಇತರ ಭಾಷೆಯ ವಿಕಿಪೀಡಿಯಗಳಲ್ಲಿ) ಹುಡುಕಿ ಆ ಮಾಹಿತಿಯನ್ನು ಕನ್ನಡಕ್ಕೆ ಅನುವಾದಿಸಬಹುದು ಕೂಡ.

ಲೇಖನ ಪ್ರಾರಂಭಿಸುವ ಮುನ್ನ....

ಬದಲಾಯಿಸಿ
  • ಹೊಸ ಲೇಖನವನ್ನು ಪ್ರಾರಂಭ ಮಾಡುವ ಮುನ್ನ ಆ ವಿಷಯದ ಬಗ್ಗೆ ಈಗಾಗಲೇ ವಿಕಿಪೀಡಿಯದಲ್ಲಿ ಲೇಖನ ಇಲ್ಲವೆಂಬುದನ್ನು ಖಾತರಿ ಪಡಿಸಿಕೊಳ್ಳಿ. ವಿಕಿಪೀಡಿಯದ ಹುಡುಕು ವ್ಯವಸ್ಥೆ (ನಿಮ್ಮ ಎಡಕ್ಕಿರುವ ಮೆನು, ಸೈಡ್ ಬಾರ್ ನೋಡಿ) ಬಳಸಿ ನೀವು ಪ್ರಾರಂಭಿಸಬೇಕೆಂದಿರುವ ಲೇಖನ ವಿಷಯವನ್ನು ಹುಡುಕಿ ನೋಡಿ.
  • ಹುಡುಕುವಾಗ ಕನ್ನಡವಲ್ಲದ ಶಬ್ದಗಳ (ಪ್ರಮುಖವಾಗಿ ನಾಮಪದಗಳ) ಎಲ್ಲ ಬಳಕೆಗಳನ್ನೂ ಸರ್ಚ್ ಮಾಡಿ ನೋಡಿ. ಉದಾಹರಣೆಗೆ ನಾಗಲ್ಯಾಂಡ್ ಮತ್ತು ನಾಗಲ್ಯಂಡ್.

ಹೊಸ ಲೇಖನವನ್ನು ಪ್ರಾರಂಭಿಸುವುದು

ಬದಲಾಯಿಸಿ
  • ವಿಧಾನ ೧: ಹೊಸ ಲೇಖನ ಪ್ರಾರಂಭ ಮಾಡಲು ಶೀರ್ಷಿಕೆಯನ್ನು ನಿಮ್ಮ ಬ್ರೌಸರಿನ ಅಡ್ರೆಸ್ ಬಾರಿನಲ್ಲಿ ಟೈಪಿಸಿ. ಉದಾಹರಣೆಗೆ, ಕೋಗಿಲೆ ಎಂಬ ಲೇಖನ ಸೇರಿಸಬೇಕಿದ್ದರೆ http://kn.wikipedia.org/wiki/ಕೋಗಿಲೆ ಎಂದು ನಿಮ್ಮ ಬ್ರೌಸರಿನ ಅಡ್ರೆಸ್ ಬಾರಿನಲ್ಲಿ ಟೈಪಿಸಿ. ಆ ವಿಷಯದ ಬಗ್ಗೆ ಲೇಖನ ಈಗಾಗಲೇ ಇಲ್ಲದಿದ್ದಲ್ಲಿ ಸೂಕ್ತ ಸಂದೇಶವನ್ನು ವಿಕಿಪೀಡಿಯ ನಿಮಗೆ ನೀಡುವುದು. ಅದನ್ನನುಸರಿಸಿ ('ಅಥವಾ "ಸಂಪಾದಿಸಿ" ಬಟನ್ ಕ್ಲಿಕ್ ಮಾಡಿ')‌ ನೀವು ಹೊಸ ಲೇಖನವೊಂದನ್ನು ಪ್ರಾರಂಭಿಸಬಹುದು.
  • ವಿಧಾನ ೨: 'ಹುಡುಕು' (search) ಬಾಕ್ಸ್ ಒಳಗೆ ನೀವು ಪ್ರಾರಂಭಿಸಬೇಕೆಂದಿರುವ ಲೇಖನದ ಹೆಸರನ್ನು ಟೈಪ್ ಮಾಡಿ 'ಹೋಗು' (Go) ಬಟನ್ ಅನ್ನು ಒತ್ತಿ. ಈಗಾಗಲೇ ಆ ಲೇಖನ ಇದ್ದರೆ, ನಿಮ್ಮನ್ನು ಆ ಲೇಖನಕ್ಕೆ ಕೊಂಡೊಯ್ಯುತ್ತದೆ. ಇಲ್ಲದಿದ್ದಲ್ಲಿ, "There is no page titled "<<ಲೇಖನದ ಹೆಸರು>>". You can create this page." ಎಂಬ ಸಂದೇಶ ಬರುತ್ತದೆ. ಸಂದೇಶದೊಂದಿಗೆ ಬಂದಿರುವ ಕೆಂಪಗಿನ ಕೊಂಡಿಯ ಮೇಲೆ ಕ್ಲಿಕ್ ಮಾಡಿ, ಹೊಸ ಲೇಖನವನ್ನು ಪ್ರಾರಂಭಿಸುವ ಪುಟಕ್ಕೆ ಹೋಗಬಹುದು.

ಯಾವ ವಿಷಯಗಳ ಬಗ್ಗೆ ಬರೆಯುವುದು ಎಂದು ತೋಚುತ್ತಿಲ್ಲವೇ?

ಬದಲಾಯಿಸಿ
  • ವಿಶ್ವಕೋಶಗಳಲ್ಲಿ ಇರಬೇಕಾಗಿರುವ ಅಗತ್ಯ ಲೇಖನಗಳ ಪಟ್ಟಿಯೊಂದು ಈ ಪುಟದಲ್ಲಿದೆ. ಈ ಪಟ್ಟಿಯಲ್ಲಿನ ಲೇಖನವೊಂದನ್ನು ಆಂಗ್ಲ ವಿಕಿಪೀಡಿಯದಿಂದ [೧] ಅನುವಾದ ಮಾಡಿ.
  • ಪ್ರಪಂಚದ ಹಲವಾರು ದೇಶಗಳ ಬಗ್ಗೆ ಲೇಖನಗಳು ಇನ್ನೂ ತಯಾರಾಗಿಲ್ಲ. ಆಫ್ರಿಕಾ, ಏಷ್ಯಾ, ಯುರೋಪ್ - ಈ ಪುಟಗಳಲ್ಲಿ ದೇಶಗಳ ಹೆಸರುಗಳಿವೆ. ಯಾವುದಾದರೂ ದೇಶದ ಬಗ್ಗೆ ಲೇಖನವನ್ನು ಪ್ರಾರಂಭಿಸಿ.
  • ವರ್ಷದ ಪ್ರತಿಯೊಂದು ದಿನದ ಬಗ್ಗೆ ಲೇಖನವೊಂದನ್ನು ತಯಾರಿಸಬಹುದು. ಈಗಾಗಲೆ ಇರುವ ಲೇಖನಗಳ ಪಟ್ಟಿ ವರ್ಗ:ದಿನಗಳು ಎಂಬಲ್ಲಿ ಇದೆ. ಪಟ್ಟಿಯಲ್ಲಿ ಇರದ ದಿನಗಳ ಬಗ್ಗೆ ಲೇಖನ ಪ್ರಾರಂಭಿಸಬಹುದು.