ವಿಕಿಪೀಡಿಯ:ವಿಶೇಷ ಬರಹ/ಸಂಚಿಕೆ - ೫
ಕ್ರಿಸ್ಮಸ್ ಕ್ರೈಸ್ತ ಕ್ಯಾಲೆಂಡರ್‌ನ ಒಂದು ಸಾಂಪ್ರದಾಯಿಕ ರಜಾ ದಿನ. ಪ್ರತಿ ವರ್ಷದ ಡಿಸೆಂಬರ್ ತಿಂಗಳ ಇಪ್ಪತ್ತೈದನೇ ದಿನದಂದು ಯೇಸು ಕ್ರಿಸ್ತನ ಹುಟ್ಟುಹಬ್ಬವಾಗಿ ಇದನ್ನು ಆಚರಿಸಲಾಗುತ್ತದೆ. ಕ್ರಿಸ್ಮಸ್ ಹಬ್ಬದ ಹಿ೦ದಿನ ದಿನವನ್ನು ಕ್ರಿಸ್ಮಸ್ ಈವ್ ಎ೦ಬ ಹೆಸರಿನಲ್ಲಿ ಆಚರಿಸಲಾಗುತ್ತದೆ. ಕ್ರಿಸ್ಮಸ್ ನ ಆಚರಣೆಯಲ್ಲಿ ಮುಖ್ಯವಾಗಿ ಕ್ರಿಸ್ಮಸ್ ವೃಕ್ಷವನ್ನು ಮನೆಯಲ್ಲಿಡುವುದು, ಮಿಸಲ್‍ಟೋ ಮೊದಲಾದ ಮರಗಳ ಎಲೆಗಳ ತೋರಣ ಕಟ್ಟುವುದು, ಉಡುಗೊರೆಗಳನ್ನು ಕೊಡುವುದು ಮೊದಲಾದವನ್ನು ಕಾಣಬಹುದು.