ವಿಕಿಪೀಡಿಯ:ವಿಕಿಮೀಡಿಯ ಭಾರತ ವಾರ್ತಾಪತ್ರ

ಈ ಪುಟದಲ್ಲಿ ವಿಕಿಮೀಡಿಯ ಯೋಜನೆಗಳಾದ ವಿಕಿಪೀಡಿಯ, ವಿಕ್ಷನರಿ, ವಿಕಿ ಕೋಟ್, ವಿಕಿ ಸೋರ್ಸ್ ಮತ್ತು ವಿಕಿ ಬುಕ್ಸ್ ಯೋಜನೆಗಳ ಬಗ್ಗೆ ವಿಷಯಗಳನ್ನು ಸೇರಿಸಬಹುದು.

ಚಟುವಟಿಕೆಗಳು

ಬದಲಾಯಿಸಿ
  • ಡಿಸೆಂಬರ್ ೨೦೧೦ರಲ್ಲಿ ಕನ್ನಡ ವಿಕಿಪೀಡಿಯ ಸಭೆ ನಡೆಸಲಾಯಿತು. ಇದರಲ್ಲಿ ಸುಮಾರು ೩೦ ಜನರು ಭಾಗವಹಿಸಿದ್ದರು.
  • ಜನವರಿ ೯, ೨೦೧೧ರಂದು ಬೆಂಗಳೂರು ವಿಕಿಪೀಡಿಯವನ್ನು ಇಷ್ಟಪಡುತ್ತದೆ (Bangalore loves Wikipedia) ಹೆಸರಿನಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಿಂದ ಸ್ವಾತಂತ್ರ್ಯ ಉದ್ಯಾನದವರೆಗಿನ ವಿವಿಧ ಸ್ಥಳಗಳ ಚಿತ್ರಗಳನ್ನು ಸೆರೆಹಿಡಿದು ವಿಕಿಮೀಡಿಯ ಕಣಜವಾದ ಕಾಮನ್ಸ್‌ಗೆ ಸೇರಿಸುವ ಕೆಲಸವನ್ನು ಮಾಡಲಾಯಿತು.
  • ಜನವರಿ ೧೫, ೨೦೧೧ರಂದು ಬೆಂಗಳೂರಿನಲ್ಲಿ ವಿಕಿಪೀಡಿಯದ ದಶವಾರ್ಷಿಕೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಕನ್ನಡ ಭಾಷೆಯಲ್ಲಿರುವ ವಿಕಿಮೀಡಿಯ ಯೋಜನೆಗಳ ಕುರಿತು ಕೂಡ ಚರ್ಚೆ ನಡೆಯಿತು.
  • ಜನವರಿ ೧೬, ೨೦೧೧ರಂದು ಮೈಸೂರಿನಲ್ಲಿ ವಿಕಿಪೀಡಿಯದ ದಶವಾರ್ಷಿಕೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.
  • ಫೆಬ್ರುವರಿ ೫, ೨೦೧೧ರಂದು ಬೆಂಗಳೂರು ವಿಕಿಪೀಡಿಯವನ್ನು ಇಷ್ಟಪಡುತ್ತದೆ (Bangalore loves Wikipedia) ಹೆಸರಿನಲ್ಲಿ ಬೆಂಗಳೂರಿನ ಬಸವನಗುಡಿಯ ವಿವಿಧ ಸ್ಥಳಗಳ ಚಿತ್ರಗಳನ್ನು ಸೆರೆಹಿಡಿದು ವಿಕಿಮೀಡಿಯ ಕಣಜವಾದ ಕಾಮನ್ಸ್‌ಗೆ ಸೇರಿಸುವ ಕೆಲಸವನ್ನು ಮಾಡಲಾಯಿತು.

ವಿಕಿಪೀಡಿಯ

ಬದಲಾಯಿಸಿ
  • ಡಿಸೆಂಬರ್ ೨೦೧೦ರಲ್ಲಿ ಕನ್ನಡದಲ್ಲಿ ನೇರವಾಗಿ ಬರೆಯುವ ಸೌಲಭ್ಯವನ್ನು ಉತ್ತಮಪಡಿಸಲಾಯಿತು.
  • ಕನ್ನಡ ವಿಕಿಪೀಡಿಯವನ್ನು ಸಂಪೂರ್ಣ ಕನ್ನಡ ಲಿಪಿಯಲ್ಲಿ ಕಾಣುವಂತೆ ಮಾಡಲು, ಸಂಖ್ಯಾ ಪಟ್ಟಿಗಳಲ್ಲಿ (ordered list) ಕನ್ನಡ ಬರುವಂತೆ CSS ಬದಲಾಯಿಸಲಾಯಿತು (ಸದ್ಯಕ್ಕೆ ಇದು ಮೊಜಿಲ್ಲಾ ಫೈರ್‌ಫಾಕ್ಸ್‌ನಲ್ಲಿ ಮಾತ್ರ ಲಭ್ಯವಿದೆ). ಹೀಗೆ ಬದಲಾವಣೆ ಹೊಂದಿರುವ ಪ್ರಥಮ ಭಾರತೀಯ ಭಾಷೆ ಕನ್ನಡ.
  • ಕನ್ನಡ ವಿಕಿಪೀಡಿಯವು ಜನವರಿ ೧೫ ರಂದು ೧೦,೦೦೦ ಲೇಖನಗಳ ಗಡಿ ದಾಟಿತು.

ವಿಕ್ಷನರಿ

ಬದಲಾಯಿಸಿ
  • ಕನ್ನಡ ವಿಕ್ಷನರಿಯು ಜುಲೈ ೧೯, ೨೦೧೧ರಂದು ಒಂದು ಲಕ್ಷ ಪದಗಳ ಗಡಿಯನ್ನು ದಾಟಿತು. ಒಂದು ಲಕ್ಷಕ್ಕೂ ಹೆಚ್ಚಿನ ಪದಗಳನ್ನು ಹೊಂದಿರುವ ವಿಕ್ಷನರಿಗಳಲ್ಲಿ ಕನ್ನಡವು ಜಗತ್ತಿನ ೨೨ನೆಯ ಮತ್ತು ಭಾರತೀಯ ಭಾಷೆಗಳಲ್ಲಿ ತಮಿಳಿನ ನಂತರದ ಸ್ಥಾನದಲ್ಲಿದೆ.

ವಿಕಿಕೋಟ್

ಬದಲಾಯಿಸಿ
  • ವಿಕಿಕೋಟ್‌ನಲ್ಲಿ ನೇರವಾಗಿ ಕನ್ನಡದಲ್ಲಿ ಬರೆಯುವ ಸೌಲಭ್ಯ ಒದಗಿಸಲಾಗಿದೆ.
  • ವಿಕಿಕೋಟ್‌ನಲ್ಲಿ ಹೆಚ್ಚಿನ ಚಟುವಟಿಕೆಗಳು ನಡೆದಿಲ್ಲವಾದರೂ ಹಲವು ಉತ್ತರ ಕನ್ನಡ ಗಾದೆಗಳು ಮತ್ತು ಕೆಲವು ಪ್ರಸಿದ್ಧ ಕವಿಗಳ, ಚಲನಚಿತ್ರಗಳ ಉಕ್ತಿಗಳನ್ನು ಸೇರಿಸಲಾಗಿದೆ.

ವಿಕಿಸೋರ್ಸ್

ಬದಲಾಯಿಸಿ
  • ವಿಕಿಸೋರ್ಸ್‌ನಲ್ಲಿ ಹೆಚ್ಚಿನ ಚಟುವಟಿಕೆಗಳು ನಡೆದಿಲ್ಲವಾದರೂ ಭಗವದ್ಗೀತೆಯ ಹಲವು ಅಧ್ಯಾಯಗಳನ್ನು ವಿಕಿಪೀಡಿಯದಿಂದ ವಿಕಿಸೋರ್ಸ್‌ಗೆ ಸ್ಥಳಾಂತರಿಸಲಾಗಿದೆ.

ವಿಕಿ ಬುಕ್ಸ್

ಬದಲಾಯಿಸಿ
  • ವಿಕಿಬುಕ್ಸ್‌ನಲ್ಲಿ ಯಾವುದೇ ಚಟುವಟಿಕೆ ನಡೆದಿಲ್ಲ. ಕನ್ನಡದಲ್ಲಿರುವ ಅನೇಕ ಪುಸ್ತಕಗಳನ್ನು ಇಲ್ಲಿಗೆ ಸೇರಿಸುವ ಕೆಲಸ ನಡೆಯಬೇಕಿದೆ.

ಇತರೆ ಚಟುವಟಿಕೆಗಳು

ಬದಲಾಯಿಸಿ
  • ವಿಕಿಮೀಡಿಯ ಮೊಬೈಲ್ ಇಂಟರ್‌ಫೇಸ್ ಮತ್ತು ವಿಕಿರೀಡರ್ಗೆ ಬೇಕಾದ ಕನ್ನಡ ಅನುವಾದಗಳು ಸಂಪೂರ್ಣಗೊಂಡಿವೆ.

ಹಿಂದಿನ ಸಂಪುಟಗಳು

ಬದಲಾಯಿಸಿ