ವಿಕಿ ಲವ್ಸ್ ವಿಮೆನ್ ದಕ್ಷಿಣ ಏಷ್ಯಾ - ೨೦೨೧ ವು ವಿಕಿಪೀಡಿಯಾದಲ್ಲಿ ಲಿಂಗ ತಾರತಮ್ಯವನ್ನು ಹೋಗಲಾಡಿಸಲು ಮತ್ತು ದಕ್ಷಿಣ ಏಷ್ಯಾದ ಮಹಿಳೆಯರ ಜೀವನಚರಿತ್ರೆಗಳನ್ನು ರಚಿಸಲು ಲೇಖನ ಬರೆಯುವ ಸ್ಪರ್ಧೆಯಾಗಿದೆ. ಈ ವರ್ಷ ಈ ಯೋಜನೆ ಸಪ್ಟೆಂಬರ್ ೦೧, ೨೦೨೧ ರಂದು ಪ್ರಾರಂಭವಾಗಲಿದ್ದು, ಸಪ್ಟೆಂಬರ್ ೩೦, ೨೦೨೧ ಕ್ಕೆ ಕೊನೆಗೊಳ್ಳುತ್ತದೆ. ಈ ಯೋಜನೆಯ ಬಗ್ಗೆ ಮತ್ತು ಬಹುಮಾನಗಳ ಬಗ್ಗೆ ಇನ್ನಷ್ಟು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
ಸಪ್ಟೆಂಬರ್ ೦೧, ೨೦೨೧ ರಿಂದ ಸಪ್ಟೆಂಬರ್ ೩೦, ೨೦೨೧ ವರೆಗೆ
ಆನ್‌ಲೈನ್
ಈ ವರ್ಷ ವಿಕಿ ಲವ್ಸ್ ವಿಮೆನ್ ಯೋಜನೆಗಾಗಿ ವಿಕಿಪೀಡಿಯಾದಲ್ಲಿ ಮಹಿಳಾ ಸಬಲೀಕರಣ ಎಂಬ ವಿಷಯವನ್ನು ಹೊಂದಿದ್ದು, ಸ್ತ್ರೀವಾದ, ತಾಯ್ತನ, ಮಹಿಳಾ ಸಾಧಕರ ಪರಿಚಯ ಹಾಗೂ ಲಿಂಗ ತಾರತಮ್ಯ ಬಗೆಗಿನ ವಿಷಯಗಳನ್ನು ಒಳಗೊಂಡಿದೆ. ವಿಷಯಗಳನ್ನು ಈ ಪುಟದಲ್ಲಿ ನೋಡಬಹುದು.
- ಲೇಖನವನ್ನು ಸಪ್ಟೆಂಬರ್ ೦೧, ೨೦೨೧ ಮತ್ತು ಸಪ್ಟೆಂಬರ್ ೩೦, ೨೦೨೧ರ ನಡುವೆ ವಿಸ್ತರಿಸಬೇಕು ಅಥವಾ ರಚಿಸಬೇಕು.
- ಲೇಖನವನ್ನು ಯಂತ್ರಾನುವಾದ ಮಾಡಬಾರದು.
- ವಿಸ್ತರಿಸಿದ ಅಥವಾ ಹೊಸ ಲೇಖನದಲ್ಲಿ ಕನಿಷ್ಠ ೬೦೦೦ ಬೈಟ್‌ಗಳು ಇರಬೇಕು.
- ಲೇಖನದ ವಿಷಯವು ಮಹಿಳೆಯರು, ಸ್ತ್ರೀವಾದ ಮತ್ತು ಲಿಂಗ ತಾರತಮ್ಯಕ್ಕೆ ಸಂಬಂಧಿಸಿರಬೇಕು.
- ಯಾವುದೇ ಹಕ್ಕುಸ್ವಾಮ್ಯ ಉಲ್ಲಂಘನೆ ಮತ್ತು ಗಮನಾರ್ಹತೆಯ ಸಮಸ್ಯೆಗಳಿರಬಾರದು.
- ಲೇಖನವು ಸರಿಯಾದ ಉಲ್ಲೇಖಗಳನ್ನು ಹೊಂದಿರಬೇಕು.
- ಹೊಸದಾಗಿ ಬರೆದ ಲೇಖನವಾಗಿದ್ದಲ್ಲಿ [[ವರ್ಗ:ವಿಕಿ ಲವ್ಸ್ ವಿಮೆನ್ ದಕ್ಷಿಣ ಏಷ್ಯಾ ಸ್ಪರ್ಧೆಗೆ ಬರೆದ ಲೇಖನ]] ಎಂದು ಸೇರಿಸಬೇಕು.
- ವಿಸ್ತರಿಸಿದ ಲೇಖನವಾಗಿದ್ದಲ್ಲಿ [[ವರ್ಗ:ವಿಕಿ ಲವ್ಸ್ ವಿಮೆನ್ ದಕ್ಷಿಣ ಏಷ್ಯಾ ಸ್ಪರ್ಧೆಗೆ ವಿಸ್ತರಿಸಿದ ಲೇಖನ]] ಎಂದು ಸೇರಿಸಬೇಕು.
- ಲೇಖನವನ್ನು ಬರೆದ ನಂತರ ಇಲ್ಲಿ ಸಲ್ಲಿಸಬೇಕು.
ಬಹುಮಾನಗಳ ವಿವರ ಇಂತಿದೆ,
- ಭಾಗವಹಿಸಿದ ಪ್ರತೀ ಸಮುದಾಯದವರಿಗೆ ಮತ್ತು ತೀರ್ಪುಗಾರರಿಗೆ ಪ್ರಮಾಣಪತ್ರ
- ಕನಿಷ್ಟ ೪ ಲೇಖನಗಳನ್ನು ಬರೆದವರಿಗೆ ಬಾರ್ನ್‌ಸ್ಟಾರ್
- ಸ್ಥಳೀಯವಾಗಿ
- ಪ್ರಥಮ ಬಹುಮಾನ - ೧೨ ಡಾಲರ್
- ದ್ವಿತೀಯ ಬಹುಮಾನ - ೧೦ ಡಾಲರ್
- ತೃತೀಯ ಬಹುಮಾನ - ೦೮ ಡಾಲರ್
- ಅಂತರರಾಷ್ಟ್ರೀಯ ಮಟ್ಟದಲ್ಲಿ (ಉತ್ತಮ ಉಲ್ಲೇಖಗಳನ್ನು ಹೊಂದಿರುವ, ಸ್ಪರ್ಧೆಯ ವಿಷಯವನ್ನು ಒಳಗೊಂಡ ಅತ್ಯುತ್ತಮ ಲೇಖನವನ್ನು ಬರೆದ ಕೊಡುಗೆದಾರರಿಗೆ)
- ಪ್ರಥಮ ಬಹುಮಾನ - ೨೫೦ ಡಾಲರ್
- ದ್ವಿತೀಯ ಬಹುಮಾನ - ೧೫೦ ಡಾಲರ್
- ತೃತೀಯ ಬಹುಮಾನ -೧೦೦ ಡಾಲರ್
ಡಾ. ಯು. ಬಿ. ಪವನಜ
ಭಾಗವಹಿಸುವವರು ಸಹಿ ಮಾಡಿ. ಸಹಿ ಮಾಡಲು #--~~~~ ಎಂದು ಟೈಪ್ ಮಾಡಿ
- ಸಂಜನಾ ನಿಂಜೂರ್ (ಚರ್ಚೆ) ೦೬:೧೨, ೨೭ ಆಗಸ್ಟ್ ೨೦೨೧ (UTC)
- --Vishwanatha Badikana (ಚರ್ಚೆ) ೧೪:೫೧, ೨೭ ಆಗಸ್ಟ್ ೨೦೨೧ (UTC)
- --ವಿಕಾಸ್ ಹೆಗಡೆ/ Vikas Hegde (ಚರ್ಚೆ) ೦೫:೪೯, ೨೮ ಆಗಸ್ಟ್ ೨೦೨೧ (UTC)
- ಪ್ರಶಸ್ತಿ (ಚರ್ಚೆ) ೦೫:೫೭, ೬ ಸೆಪ್ಟೆಂಬರ್ ೨೦೨೧ (UTC)