ವಿಕಿಪೀಡಿಯ:ಯೋಜನೆ/ಕ್ರೈಸ್ಟ್ ವಿಶ್ವವಿದ್ಯಾಲಯ ವಿಕಿಪೀಡಿಯ ಶಿಕ್ಷಣ ಯೋಜನೆ-೨೦೧೪

ಈ ಪುಟವು ಕ್ರೈಸ್ಟ್ ವಿಶ್ವವಿದ್ಯಾಲಯ ವಿಕಿಪೀಡಿಯ ಶಿಕ್ಷಣ ಯೋಜನೆ ಬಗ್ಗೆ ಇದೆ.

ಕ್ರೈಸ್ಟ್ ವಿಶ್ವವಿದ್ಯಾಲಯ

ಬದಲಾಯಿಸಿ

ಕ್ರೈಸ್ಟ್ ವಿಶ್ವವಿದ್ಯಾಲಯವು ಒಂದು ಖಾಸಗಿ ವಿಶ್ವವಿದ್ಯಾಲಯವಾಗಿದೆ. ಮೊದಲು ಕ್ರೈಸ್ಟ್ ಕಾಲೇಜು ಎಂದು ಪ್ರಸಿದ್ಧವಾಗಿದ್ದ ಈ ಖಾಸಗಿ ಶೈಕ್ಷಣಿಕ ಸಂಸ್ಥೆಯು ೨೦೦೮ರಲ್ಲಿ ವಿಶ್ವವಿದ್ಯಾಲಯವೆಂದು ಮಾನ್ಯತೆ ಗಳಿಸಿತು. ಇಲ್ಲಿ ಹಲವು ವಿಭಾಗಗಳಲ್ಲಿ ಸ್ನಾತಕ (ಡಿಗ್ರಿ), ಸ್ನಾತಕೋತ್ತರ (ಪೋಸ್ಟ್ ಗ್ರಾಜುವೇಟ್), ಎಂಫಿಲ್, ಪಿಎಚ್ ಡಿ ಇತ್ಯಾದಿ ಕೋರ್ಸುಗಳು ನಡೆಯುತ್ತಿವೆ.

ಕ್ರೈಸ್ಟ್ ವಿಶ್ವವಿದ್ಯಾಲಯ ವಿಕಿಪೀಡಿಯ/ವಿಕಿಸೋರ್ಸ್ ಶಿಕ್ಷಣ ಯೋಜನೆ-೨೦೧೪

ಬದಲಾಯಿಸಿ

ಈ ಯೋಜನೆಯಲ್ಲಿ ಸ್ನಾತಕ ವಿದ್ಯಾರ್ಥಿಗಳು, ಅಂದರೆ ಬಿ.ಎ, ಬಿ.ಎಸ್ ಸಿ., ಬಿಕಾಂ, ಇತ್ಯಾದಿ ಡಿಗ್ರಿಗೋಸ್ಕರ ಓದುತ್ತಿರುವ ವಿದ್ಯಾರ್ಥಿಗಳು ಕನ್ನಡ ವಿಕಿಸೋರ್ಸ್‍ನಲ್ಲಿ ಲೇಖನ ಬರೆಯುವ ಅಸೈನ್‌ಮೆಂಟ್ ಮಾಡುತ್ತಾರೆ. ಕನ್ನಡ ಭಾಷೆಯನ್ನು ಎರಡನೆಯ ಭಾಷೆಯಾಗಿ ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳು ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ ಪರಿವರ್ತನೆ ಯೋಜನೆಯಿಂದ ತಮಗಿಷ್ಟವಾದ ಪುಟವನ್ನು ಕನ್ನಡ ವಿಕಿಸೋರ್ಸ್‍ನಲ್ಲಿ ಲೇಖನವಾಗಿಸುತ್ತಾರೆ.