ವಿಕಿಪೀಡಿಯ:ಮಂಗಳೂರು ಫೋಟೋ ನಡಿಗೆಯ ವರದಿ

ಇದು ಮಂಗಳೂರು ಫೋಟೋ ನಡಿಗೆಯ ವರದಿ. ವಿಕಿಪೀಡಿಯದಲ್ಲಿ ಮಂಗಳೂರು ಸುತ್ತಮುತ್ತಲಿನ ಪ್ರದೇಶಗಳ ಬಗ್ಗೆ ಮಾಹಿತಿ ಮತ್ತು ಛಾಯಾಚಿತ್ರಗಳು ಕಡಿಮೆ ಇದ್ದ ಕಾರಣ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಬಗ್ಗೆ ತಮ್ಮ ಸಲಹೆ ಸೂಚನೆಗಳನ್ನು ಮುಕ್ತವಾಗಿ ಹಂಚಿಕೊಳ್ಲಬಹುದು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಾಗೂ ಸಹಕರಿಸಿದವರಿಗೆ ತುಂಬಾ ಧನ್ಯವಾದಗಳು.

ಫೋಟೋ ನಡಿಗೆ

ಬದಲಾಯಿಸಿ

ದಿನಾಂಕ ೨೧ರ ಆಗಸ್ಟ್ ೨೦೧೬ರಂದು ಮಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಒಂದು ದಿನದ ಫೋಟೋ ನಡಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಮೊದಲಿಗೆ ನಾವು ಮುಂಜಾನೆ ಘಂಟೆ ೮:೦೦ಕ್ಕೆ ಮಂಗಳಾದೇವಿ ದೇವಸ್ಥಾನದಿಂದ ನಮ್ಮ ಕಾರ್ಯಕ್ರಮವನ್ನು ಆರಂಭಿಸಿದೆವು. ಅಲ್ಲಿ ನಮಗೆ ವಿಕಿಪೀಡಿಯದ ಸಂಪಾದಕರೇ ಆದ ರೋಹಿತ್ ಉಪಾಧ್ಯಾಯ ಅವರ ಸಹಾಯದಿಂದ ದೇವಸ್ಥಾನದ ಒಳಗಡೆಯ ಛಾಯಾಚಿತ್ರಗಳನ್ನು ತೆಗೆಯಲು ಸಹಾಯವಾಯಿತು. ಅಲ್ಲಿನ ಅರ್ಚಕರು ದೇವಸ್ಥಾನದ ಎಲ್ಲಾ ಮಾಹಿತಿಗಳನ್ನು ನೀಡಿದರು. ತದನಂತರ ಅಲ್ಲಿಯೇ ಪಕ್ಕದಲ್ಲಿರುವ ರಾಮಕೃಷ್ಣ ಆಶ್ರಮಕ್ಕೆ ಭೇಟಿ ನೀಡಿ ಅಲ್ಲಿಯ ಮಾಹಿತಿಗಳು ಅಲ್ಲದೇ ಕರ್ನಾಟಕ ರಾಜ್ಯದಲ್ಲಿರುವ ಇತರ ರಾಮಕೃಷ್ಣ ಆಶ್ರಮಗಳ ಬಗ್ಗೆಯೂ ಮಾಹಿತಿ ಕಲೆ ಹಾಕಿದೆವು. ನಂತರ ಬೆಳಗ್ಗಿನ ಉಪಹಾರವನ್ನು ಮುಗಿಸಿಕೊಂಡು ನಗರದಿಂದ ಸುಮಾರು ೧೦ ಕಿ.ಮೀಗಳಷ್ಟು ದೂರದಲ್ಲಿರುವ ಅಡ್ಯಾರು ಜಲಪಾತದತ್ತ ಪ್ರಯಾಣ ಬೆಳೆಸಿದೆವು. ಅಲ್ಲಿ ಚಿತ್ರಗಳನ್ನು ತೆಗೆದುಕೊಂಡು ಪವಿತ್ರ ಬೆಟ್ಟಕ್ಕೆ (Holly hill) ಪ್ರಯಾಣ ಬೆಳೆಸಿದೆವು. ಅಲ್ಲಿ ಸ್ಥಳದ ನಿರ್ವಾಹಕರು ಇಲ್ಲದ ಕಾರಣ ನಮ್ಮನ್ನು ಸಂಜೆ ೫:೩೦ರ ನಂತರ ಬರಲು ಸೂಚಿಸಿದರು. ಅಲ್ಲಿಂದ ನಾವು ಮಂಗಳೂರು ಹಳೆ ಬಂದರಿನ ಝೀನತ್ ಮಸೀದಿಗೆ ಪ್ರಯಾಣ ಬೆಳೆಸಿದೆವು. ಅದು ಮಧ್ಯಾಹ್ನ ಸಮಯವಾದುದರಿಂದ ನಮಾಝ್ ಸಮಯವಾಗಿತ್ತು. ಆದುದರಿಂದ ಅಲ್ಲಿಗೆ ಮುಂಬರುವ ಯಾವುದಾದರೊಂದು ದಿನ ಹೋಗುವುದೆಂದು ತೀರ್ಮಾನಿಸಿ ಅದಕ್ಕೂ ಅವರ ಒಪ್ಪಿಗೆ ಪಡೆದುಕೊಂಡೆವು. ನಂತರ ಊಟ ಮುಗಿಸಿ ಸಂತ ಅಲೋಷಿಯಸ್ ಚಾಪೆಲ್ ಕಡೆಗೆ ಪ್ರಯಾಣ ಬೆಳೆಸಿದೆವು. ಅಲ್ಲಿ ನಿರ್ವಾಹಕರಿಲ್ಲದೆ ಕೊಂಚ ವಿಳಂಬವಾಯಿತು. ಆ ಸಮಯದಲ್ಲಿ ಸಂತ ಅಲೋಷಿಯಸ್ ಕಾಲೇಜಿನ ಪ್ರತಿಯೊಂದು ಛಾಯಾಚಿತ್ರಗಳನ್ನು ತೆಗೆದುಕೊಂಡೆವು. ಚಾಪೆಲ್‍ನಲ್ಲಿ ಸುಮಾರು ಒಂದು ಘಂಟೆಗಳ ಕಾಲ ಸಮಯ ಕಳೆದೆವು. ಇದು ನಮ್ಮ ಫೋಟೋ ಸಡಿಗೆಯ ಮುಖ್ಯ ಉದ್ದೇಶವಾಗಿತ್ತು. ಅಲ್ಲಿಂದ ಪುನಃ ಪವಿತ್ರ ಬೆಟ್ಟದ ಕಡೆಗೆ ಚಲಿಸಿ ಅಲ್ಲಿಯ ಛಾಯಾಚಿತ್ರ ಮತ್ತು ಮಾಗಿತಿಗಳನ್ನು ಕಲೆ ಹಾಕಿದೆವು. ನಂತರ ಸುಲ್ತಾನ್ ಬತ್ತೇರಿ ಕಡೆ ಪ್ರಯಾಣ ಬೆಳೆಸಿ ಸ್ಥಳೀಯರಿಂದ ಮಾಹಿತಿ ಪಡೆದು ದೋಣಿಯಲ್ಲಿ ತಣ್ಣೀರು ಬಾವಿ ಕಡಲತೀರಕ್ಕೆ ಪ್ರಯಾಣ ಬೆಳೆಸಿದೆವು. ಅಲ್ಲಿ ಮಾಹಿತಿ ತಿಳಿದುಕೊಂಡು ಮುಂದಿನ ಒಂದು ವಾರದ ಸಂಪಾದನೋತ್ಸವದ ಬಗ್ಗೆ ಚರ್ಚಿಸಿ ಫೋಟೋ ನಡಿಗೆಯನ್ನು ಕೊನೆಗೊಳಿಸಿದೆವು. ಈ ಫೋಟೋ ನಡಿಗೆಯನ್ನು ತುಂಬಾ ದಿನಗಳ ಹಿಂದೆಯೇ ಯೋಚಿಸಿದ್ದರಿಂದ ವಿನಯ್ ಅವರು ಸಮ್ಮಿಲನ ಶೆಟ್ಟಿ ಚಿಟ್ಟೆ ಪಾರ್ಕ್,ಬೆಳುವಾಯಿಗೆ ಹೋಗಿ ಅಲ್ಲಿನ ಮಾಹಿತಿ ಮತ್ತು ಫೋಟೋಗಳನ್ನು ಸಂಗ್ರಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಒಟ್ಟು ೬ ಜನ ಭಾಗವಹಿಸಿದ್ದರು.

ಸಂಪಾದನೋತ್ಸವ

ಬದಲಾಯಿಸಿ

ಪೋಟೋ ನಡಿಗೆಯ ನಂತರ ಲೇಖನಗಳನ್ನು ಸೇರಿಸುವ ಅಂಗವಾಗಿ ಸಂಪಾದನೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಅದರಲ್ಲಿ ಸಂಪಾದನೋತ್ಸವದ ಅವಧಿಯಲ್ಲಿ ಅನೇಕ ಸ್ಥಳಗಳ ಬಗ್ಗೆ ಲೇಖನ ಸೇರಿಸಲಾಗಿದೆ. ಕೆಲವು ಸ್ಥಳಗಳ ಬಗ್ಗೆ ಲೇಖನ ಸೇರಿಸಲು ವಿದ್ಯಾರ್ಥಿಗಳಿಗೆ ಪರೀಕ್ಷೆ ಇದ್ದ ಕಾರಣ ಸಾಧ್ಯವಾಗಲಿಲ್ಲ. ಇದನ್ನು ಮುಂದಿನ ದಿನಗಳಲ್ಲಿ ಸೇರಿಸಲಾಗುವುದು. ಈ ಸಂಪಾದನೋತ್ಸವದ ಅವಧಿಯಲ್ಲಿ ಒಟ್ಟು ೧೦ ಲೇಖನಗಳನ್ನು ಸೇರಿಸಲಾಗಿದೆ. ಇವುಗಳಿಂದ ಸುಮಾರು ೧೨೫೩೭೮.೦೦ ಬೈಟ್‍ಗಳಷ್ಟು ಮಾಹಿತಿ ಸೇರ್ಪಡೆಯಾಗಿದೆ. ಒಟ್ಟು ೯೦-೧೦೦ ಫೋಟೋಗಳನ್ನೂ ಕಾಮನ್ಸ್‌ಗೆ ಸೇರಿಸಲಾಗಿದೆ. ಇದಲ್ಲದೇ ನಾವು ಇತರ ಭಾಷೆಯ ವಿಕಿಪೀಡಿಗರಲ್ಲಿ ಮಂಗಳೂರಿನ ಬಗ್ಗೆ ಮಾಹಿತಿ ಸೇರಿಸಲು ಕೋರಿಕೊಂಡಾಗ ಅವರು ಸಂತೋಷದಿಂದಲೇ ಒಪ್ಪಿಕೊಂಡಿದ್ದಾರೆ. ಸಂಪಾದನೋತ್ಸವದ ಅವಧಿಯಲ್ಲಿ ರಚನೆಯಾದ ಲೇಖನಗಳ ಮಾಹಿತಿಗಾಗಿ ಇಲ್ಲಿ ಭೇಡಿನೀಡಿ.

ಛಾಯಾಚಿತ್ರಗಳು

ಬದಲಾಯಿಸಿ