ವಿಕಿಪೀಡಿಯ:ಉದ್ದ ಪ್ರಾಥಮಿಕ ಮೂಲಗಳ ಸಂಪೂರ್ಣ ಪಠ್ಯ ಸೇರಿಸಬೇಡಿ
ಈ ಪುಟವು ಕನ್ನಡ ವಿಕಿಪೀಡಿಯದ ವಿಷಯ ಮಾರ್ಗಸೂಚಿಯನ್ನು ದಾಖಲಿಸುತ್ತದೆ. ವಿನಾಯಿತಿಗಳು ಅನ್ವಯಿಸಬಹುದಾದರೂ ಸಂಪಾದಕರು ಸಾಮಾನ್ಯವಾಗಿ ಇದನ್ನು ಅನುಸರಿಸಬೇಕು. ಈ ಪುಟದ ಸಂಪಾದನೆಗಳು ಒಮ್ಮತವನ್ನು ಪ್ರತಿಬಿಂಬಿಸಬೇಕು. ಸಂದೇಹವಿದ್ದಲ್ಲಿ, ಈ ಮಾರ್ಗಸೂಚಿಯ ಚರ್ಚೆ ಪುಟದಲ್ಲಿ ಮೊದಲು ಚರ್ಚಿಸಿ.
|
ಈ ಪುಟದ ಕುರಿತು ಸಂಕ್ಷಿಪ್ತ ವಿವರಣೆ: ಪಠ್ಯ ಅಥವಾ ಕೃತಿಗಳು ಬಹಳ ಉದ್ದವಾಗಿದ್ದರೆ ಅಥವಾ ಹಕ್ಕುಸ್ವಾಮ್ಯವನ್ನು ಹೊಂದಿದ್ದರೆ ವಿಕಿಪೀಡಿಯಾದಲ್ಲಿ ಅವುಗಳನ್ನು ಸೇರಿಸಬೇಡಿ. |
ವಿಕಿಪೀಡಿಯಾ ಸಾರ್ವಜನಿಕ ಡೊಮೇನ್ ಅಥವಾ ಇತರ ಪ್ರಾಥಮಿಕ ಮೂಲ ವಸ್ತುಗಳ ನಕಲು ಅಲ್ಲ . ವಿಕಿಪೀಡಿಯ ಲೇಖನಗಳಲ್ಲಿ, ಚರ್ಚಿಸಲಾಗುವ ಯಾವುದೇ ಮೂಲ ಪಠ್ಯಗಳ ಉಲ್ಲೇಖಗಳು ಚರ್ಚೆಗೆ ಸಂಬಂಧಿಸಿದ್ದಾಗಿರಬೇಕು ಮತ್ತು ಸೂಕ್ತ ಪದ ಮಿತಿಯನ್ನು ಹೊಂದಿರಬೇಕು.
- ಹಕ್ಕುಸ್ವಾಮ್ಯ ಅಲ್ಲದೇ ಇದ್ದಲ್ಲಿ, ಚಿಕ್ಕ ಪಠ್ಯಗಳನ್ನು ಅಂದರೆ ಸಣ್ಣ ಭಾಷಣಗಳು, ಸಣ್ಣ ಕವಿತೆಗಳು , ಸಣ್ಣ ಹಾಡುಗಳು (ಹೆಚ್ಚಿನ ರಾಷ್ಟ್ರಗೀತೆಗಳು ) ಮತ್ತು ಇತರೆ ಸಣ್ಣ ಗಾತ್ರದ ಮೂಲಗಳನ್ನು ಪೂರ್ಣವಾಗಿ ಲೇಖನದಲ್ಲಿ ಸೇರಿಸಬಹುದು. ಉದ್ದವಾದ ಪಠ್ಯಗಳನ್ನು ಸಂಕ್ಷಿಪ್ತವಾಗಿ ಬರೆಯಬೇಕು.
- ಕೃತಿಯು ಹಕ್ಕುಸ್ವಾಮ್ಯದಲ್ಲಿದ್ದರೆ, ಉಲ್ಲೇಖಿಸಿದ ಪಠ್ಯದಲ್ಲಿ ಪದಗಳನ್ನು ಮಿತಿಯಾಗಿ ಬಳಸಿ, ಅದನ್ನು ವಿಕಿಸೋರ್ಸ್‌ನಲ್ಲಿ ಇರಿಸಬೇಡಿ. ಈಲ್ಲಿಂದ ಪಠ್ಯಗಳನ್ನು ಹಾಕುತ್ತೀರೋ ಆ ಮೂಲದಲ್ಲಿನ ಅಥವಾ ವೆಬ್‌ಸೈಟ್‌ನಲ್ಲಿನ ಲಿಂಕ್ ಹಂಚುವ ಹಕ್ಕು ಇದ್ದರೆ ಮಾತ್ರ ಅದನ್ನು ಸೇರಿಸಿ. ಉದಾಹರಣೆಗೆ, ಬ್ಯಾಂಡ್‌ನ ಅಧಿಕೃತ ಸೈಟ್ ಅವರ ಒಂದು ಹಾಡಿನ ಸಾಹಿತ್ಯ ಅಥವಾ ವೀಡಿಯೊಗಳನ್ನು ಒಳಗೊಂಡಿರಬಹುದು; ಇವುಗಳನ್ನು ಲಿಂಕ್ ಮಾಡಬಹುದು, ಆದರೆ ನಾವು ಯು-ಟ್ಯೂಬ್ ನಲ್ಲಿನ ಅವರ ವೀಡಿಯೊದ ಅನಧಿಕೃತ ಪ್ರತಿಗೆ ಅಥವಾ ಅವರ ಸಾಹಿತ್ಯದ ಹಕ್ಕುಸ್ವಾಮ್ಯವನ್ನು ಉಲ್ಲಂಘಿಸುವ ಸೈಟ್‌ಗೆ ಲಿಂಕ್ ಮಾಡಬಾರದು.
ಹಕ್ಕುಸ್ವಾಮ್ಯದ ಪ್ರಾಥಮಿಕ ಮೂಲಗಳ ನ್ಯಾಯೋಚಿತ ಬಳಕೆ
ಬದಲಾಯಿಸಿನ್ಯಾಯೋಚಿತ ಬಳಕೆಯು (ಫೇರ್ ಯೂಸ್) ಹಕ್ಕುಸ್ವಾಮ್ಯವನ್ನು ಒಳಗೊಂಡಿರುವ ಸಣ್ಣ ಪಠ್ಯಗಳು ಲೇಖನಕ್ಕೆ ಅವಶ್ಯಕವಾದಾಗ ಅವನ್ನು ಸೇರಿಸಲು ಅನುಮತಿಸುತ್ತದೆ. ಉದಾಹರಣೆಗೆ, ನಾವು ಚಲನಚಿತ್ರದ ಕುರಿತಾಗಿ ಬರೆದ ಲೇಖನದಲ್ಲಿ ಚಲನಚಿತ್ರ ವಿಮರ್ಶೆಯಿಂದ ಒಂದು ಅಥವಾ ಎರಡು ವಾಕ್ಯವನ್ನು ಉಲ್ಲೇಖಿಸಬಹುದು ಅಥವಾ ಅದರ ಶೈಲಿಯನ್ನು ವಿವರಿಸಲು ಆಧುನಿಕ ಕವಿತೆಯ ಸಣ್ಣ ಭಾಗವನ್ನು ಉಲ್ಲೇಖಿಸಬಹುದು. ಅಂತಹ ಎಲ್ಲಾ ಸಂದರ್ಭಗಳಲ್ಲಿ, ನಾವು ಉಲ್ಲೇಖಿಸುವ ಪಠ್ಯದ ಕತೃಗಳನ್ನೂ ಮತ್ತು ಮೂಲ ಲೇಖಕರನ್ನೂ ಉಲ್ಲೇಖಿಸಲು ಮರೆಯಬಾರದು, ಅದು ಎಲ್ಲಿ ಪ್ರಕಟವಾಗಿದೆ ಎಂಬುದನ್ನು ತಿಳಿಸಲೂ ಮರೆಯಬಾರದು.
ಟ್ರಾನ್ಸ್‌ವಿಕಿಯಿಂದ ವಿಕಿಸೋರ್ಸ್‌ಗೆ : ಪರವಾನಗಿ ಮತ್ತು ಹಕ್ಕುಸ್ವಾಮ್ಯ
ಬದಲಾಯಿಸಿವಿಕಿಪೀಡಿಯಾದಿಂದ ವಿಕಿಸೋರ್ಸ್‌ಗೆ ಪಠ್ಯವನ್ನು ಸೇರಿಸುವಾಗ ಆ ಕೃತಿಯು ಹಕ್ಕುಸ್ವಾಮ್ಯದಿಂದ ಮುಕ್ತವಾಗಿದೆಯೇ ಅಥವಾ ಸೂಕ್ತವಾಗಿ ಪರವಾನಗಿ ಪಡೆದಿದೆಯೇ ಎಂದು ಖಚಿತಪಡಿಸಿಕೊಳ್ಳಿ.
ಉದಾಹರಣೆಗೆ, " ದ ಇಂಟರ್‌ನ್ಯಾಷನಲ್ " ನ ಹಳೆಯ ಸಾಹಿತ್ಯವು ಸಾರ್ವಜನಿಕ ಡೊಮೇನ್ ಅನ್ನು ಪ್ರವೇಶಿಸಿದೆ, ಆದರೆ ಬಿಲ್ಲಿ ಬ್ರಾಗ್ ಅವರ ಅದರ ಆಧುನಿಕ ಆವೃತ್ತಿಯು ಇನ್ನೂ ಹಕ್ಕುಸ್ವಾಮ್ಯವನ್ನು ಹೊಂದಿದೆ, ಆದ್ದರಿಂದ ಅದರ ಉಲ್ಲೇಖಗಳು ಚಿಕ್ಕದಾಗಿರಬೇಕು ಮತ್ತು ಅದನ್ನು ಉಲ್ಲೇಖಿಸುವಾಗ ಬಿಲ್ಲಿ ಬ್ರಾಗ್ ಅವರ ಹೆಸರನ್ನೂ ಉಲ್ಲೇಖಿಸಬೇಕು. ಬ್ರಾಗ್‌ರಿಂದ ಸೂಕ್ತವಾದ ಪರವಾನಗಿ ಪಡೆಯದ ಹೊರತು ಅದನ್ನು ವಿಕಿಸೋರ್ಸ್‌ನಲ್ಲಿ ಸೇರಿಸುವಂತಿಲ್ಲ.