'ಅಡಿಗಾಸ್,' ಹೋಟೆಲ್ ಉದ್ಯಮದಲ್ಲಿ ಮತ್ತೊಂದು ವಿಶಿಷ್ಠಹೆಸರು. ದಕ್ಷಿಣ ಕನ್ನಡದ ಮನೆಮಾತಾದ ಅಡುಗೆ ಕಲೆಯಲ್ಲಿ ನಿಷ್ಣಾತರಾಗಿ ದೇಶದಲ್ಲಿ ಅತ್ಯುತ್ತಮ ಶುಚಿರುಚಿಯಾದ ಊಟೋಪಹಾರಗಳಿಗೆ ಹೆಸರಾಂತ ಊಟದ ಹೋಟೆಲ್ ಒಡೆಯರಲ್ಲಿ ಆಡಿಗಾಸ್ ಎಂಬ ಹೆಸರು ಅತಿ ಮುಖ್ಯವಾಗಿ ಕೇಳಿಬರುತ್ತಿದೆ. ಗ್ರಾಹಕರಿಗೆ ಶುಚಿ-ರುಚಿಯಾದ ಊಟತಿಂಡಿಗಳನ್ನು ಯೋಗ್ಯಬೆಲೆಯಲ್ಲಿ ದೊರಕಿಸುವುದು ಒಂದು ಆದ್ಯತೆಯಾದರೆ, ಅವನ್ನು ಆಸಕ್ತರ ಮನೆಗಳಿಗೆ ಮನೆಗಳಿಗೆ ತಲುಪಿಸಿವ ಕಾರ್ಯವನ್ನೂ ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ. ಈ ಅಡುಗೆ ಪದ್ಧತಿಯ ಹೋಟೆಲ್ ಮಾಲೀಕ, ರುವಾರಿ ವಾಸುದೇವ ಅಡಿಗರು, 'ಬಿ.ಇ. ಎಲೆಕ್ಟ್ರಾನಿಕಸ್ ಪದವೀಧರ'ರು. ಅವರ ತಂದೆಯವರು ಬೆಂಗಳೂರಿನ, 'ಶಂಕರಪುರಂ ನಲ್ಲಿ ಬ್ರಾಹ್ಮಣರ ಕಾಫಿ ಬಾರ್' ವೊಂದನ್ನು ನಡೆಸುತ್ತಿದ್ದರು. 'ವಾಸುದೇವ ಅಡಿಗರು' ಸನ್, ೧೯೮೪ ರಲ್ಲಿ, ತಮ್ಮ ಪದವಿಯ ಬಳಿಕ, ವಿದೇಶಕ್ಕೆ ಹೋಗಿ 'ಎಮ್.ಎಸ್'.ಮಾಡುವ ಕನಸು ಕಾಣುತ್ತಿದ್ದರು. ಆದರೆ ಅವರಿಗೆ 'ವಿಸಾ' ದೊರೆಯಲಿಲ್ಲ. ಹಾಗಾಗಿ ಅವರು ಬೆಂಗಳೂರಿನಲ್ಲೇ ಸಣ್ಣ ಪುಟ್ಟ ಕಂಪೆನಿಗಳಲ್ಲಿ ಕೆಲಸಮಾಡುತ್ತಿದ್ದರು. ತಮ್ಮ 'ಪಾರಿವಾರಿಕ ಬಿಝಿನೆಸ್' ಆದ 'ಹೋಟೆಲ್ ಉದ್ಯಮ'ವನ್ನು ಮುಂದುವರೆಸಿಕೊಂಡು ಹೋಗುವ ಬಗ್ಗೆ ತೀವ್ರವಾಗಿ ಅಲೋಚಿಸಿ, ಅದರಲ್ಲಿ ಯಶಸ್ಸುಕಂಡರು.

ನಗರದ ಪ್ರಥಮ ಅಡಿಗಾಸ್ ರೆಸ್ಟೊರೆಂಟ್ ಬದಲಾಯಿಸಿ

೧೯೯೩ ಯಲ್ಲಿ ಬೆಂಗಳೂರು ನಗರದ ಬಸವನಗುಡಿಯಲ್ಲಿ 'ಅಡಿಗಾ ಹೋಟೆಲ್' ತೆರೆದರು. ಜಯನಗರ ೪ ನೆಯ ಬ್ಲಾಕ್, ೫ ನೆಯ ಬ್ಲಾಕ್ 'ಬನ್ನೇರುಘಟ್ಟ'ದಲ್ಲಿಯೂ ಮತ್ತು ೮ ನೆಯ ಬ್ಲಾಕ್ ನಲ್ಲಿಯೂ ’ಅಡಿಗ ಫುಡ್ ಲೈನ್’ ಶಾಖೆಗಳನ್ನು ತೆರೆದರು. ಉತ್ತರ ಭಾರತ, ದಕ್ಷಿಣಭಾರತ, ಮತ್ತು ಎಲ್ಲಾ ರೀತಿಯ ಊಟ, ಅಡುಗೆ, ತಿಂಡಿ-ತಿನಸುಗಳ ಒಂದು ದೊಡ್ಡ ಪಟ್ಟಿಯನ್ನು ಪರಿಚಯಿಸಿದರು. ೧೮ ಬಗೆಯ 'ರೈಸ್ ಭಾತ್' ದಿನದಲ್ಲಿ ಎರಡು ಐಟಮ್ ಗಳು ಇರುವಂತೆ, ದೋಸೆಗಳ ಪಟ್ಟಿ ಹೀಗಿದೆ. ಈ ರೀತಿ ೧೯ ತರಾವರಿ ದೋಸೆಗಳ ಪಟ್ಟಿ.

  • ಈರುಳ್ಳಿ ದೋಸೆ,
  • ರಾಗಿ
  • ಬಾಳೆಕಾಯಿ ದೋಸೆ,
  • ಸೌತೆಕಾಯಿ,
  • ಕ್ಯಾರೆಟ್,
  • ಮೆಂತೆ
  • ಪುದೀನ,
  • ಸಬ್ಬಸಿಗೆ
  • ಕೊತ್ತಮರಿ,
  • ಕರಿಬೇವು
  • ಪಾಲಕ್, ಸೊಪ್ಪಿನ ದೋಸೆ
  • ಕೊಬ್ಬರಿ ದೋಸೆ,

ಬಗೆಬಗೆಯ ಐಸ್ ಕ್ರೀಂಗಳು ಬದಲಾಯಿಸಿ

ಹನಿಮೂನ್, ಟೈಟಾನಿಕ್, ಡಬ್ಲ್ ಟ್ರಿಪಲ್ ಸಂಡೆ, ಅನಾಮಿಕ ವೆಂಬ ಐಸ್ ಕ್ರೀಮ್, ೧೭ ಬಗೆಯಲ್ಲಿ ಲಭ್ಯವಿದೆ. ಅಡಿಗಾಸ್ ಶುದ್ಧ ಸಸ್ಯಾಹಾರಿ ಉಪಹಾರ ಗೃಹವಾಗಿದೆ. ಇಲ್ಲಿ ಹಣ್ಣಿನರಸಗಳು, ಹಾಗೂ ಐಸ್ ಕ್ರೀಂಗಳೂ ದೊರೆಯುತ್ತವೆ. 'ಅಡಿಗಾಸ್ ಹೋಟೆಲ್ ಶ್ರೇಣಿ', ಶಿಸ್ತು ಸಮಯ ಪ್ರಜ್ಞೆ, ಶುಚಿ, ವ್ಯಾಪಾರಿಮನೋಭವನೆಯೇ ಆದ್ಯತೆ ಕೊಡದೆ, ಗ್ರಾಹಕರ ಬಯಕೆಗಳಿಗೆ ಸ್ಪಂದಿಸುವ ಸೂಕ್ಷ್ಮ ಸಾಮಾಜಿಕ ಕಳಕಳಿಯ ಆದರ್ಶ ವನ್ನಿಟ್ಟುಕೊಂಡು,ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಪೈಪೋಟಿಗೆ ದನಿಕೊಡುತ್ತಾ, ತನ್ನದೇ ಆದ ಸ್ಥಾನವನ್ನು ಕಾಪಾಡಿಕೊಂಡು ಜನಪ್ರಿಯತೆಯ ಶಿಖರದಲ್ಲಿದೆ.

ಯುವಜನರ ಮತ್ತು ಹಿರಿಯ ನಾಗರಿಕರ ಆಹಾರದ ಆದ್ಯತೆಗಳಿಗೆ ಸ್ಪಂದನೆ ಬದಲಾಯಿಸಿ

ಹಿಂದಿನ ಪೀಳಿಗೆಯ ಜನರ ಮತ್ತು ಇಂದಿನ ಯುವವರ್ಗದ ಆಶೋತ್ತರಗಳನ್ನು ಸ್ಪಷ್ಟವಾಗಿ ಅರಿತು ಅವರವರ ಆಹಾರಗಳ ಆದ್ಯತೆಗಳಿಗೆ ಒತ್ತು ನೀಡುತ್ತಿದೆ. 'ಸಾಫ್ಟ್ ವೇರ್ ಉದ್ದಿಮೆ', 'ಮದುವೆ', 'ಮುಂಜಿ, ಸಮಾರಂಭ,' 'ಸಭೆ', 'ಮಂತ್ರಿ ಮಹೋದಯರ ಪಾರ್ಟಿ', 'ಸುಖ-ದುಖದ ಸಮಾರಂಭಗಳು' ಮುಂತಾದವುಗಳಿಗೆ ಅಡುಗೆಯ ಪೂರೈಕೆ ಅತಿ ಅಗತ್ಯವಾಗಿದೆ. ಇದಲ್ಲದೆ, ಕೆಲಸಕ್ಕೆ ಹೋಗುತ್ತಿರುವ ಹೆಣ್ಣುಮಕ್ಕಳು, ಮತ್ತು ವೃದ್ಧ ಹಿರಿಯನಾಗರಿಕರಿಕರಿಗಾಗಿ, ಊಟತಿಂಡಿಯ ಪ್ಯಾಕೆಟ್ ಗಳನ್ನು ಆವರವರ ಮನೆಯ ಬಾಗಿಲುಗಳಿಗೆ ಮುಟ್ಟಿಸುವ ಕಾರ್ಯ ಭರದಿಂದ ಮುಂದುವರೆದಿದೆ. ಅಡಿಗಾಸ್ ಸಂಸ್ಥೆ ಯುವಕರಿಗೆ, ಮತ್ತು ಅಡುಗೆ ಕಲೆಯನ್ನು ಬಲ್ಲವರಿಗೆ, ಉದ್ಯೋಗಾವಕಾಶಗಳನ್ನು ಕಲ್ಪಿಸಿದೆ.

ಗ್ರಾಹಕರ ಬೇಡಿಕೆಗಳನ್ನು ಮುಟ್ಟಲು ಹೊಸ-ಅಡುಗೆ ಕೇಂದ್ರದ ತೆರೆಯುವಿಕೆ ಬದಲಾಯಿಸಿ

ಊಟ, ಉಪಹಾರಗಳ ಅತಿ ಹೆಚ್ಚಿನ ಬೇಡಿಕೆಗಳನ್ನು ಸಮರ್ಥವಾಗಿ ನಿಯಂತ್ರಿಸಲು ಹೊಸ ಅಡುಗೆ ಕೇಂದ್ರಗಳ ಸ್ಥಾಪನೆಯ ಕಾರ್ಯ ಭರದಿಂದ ಸಾಗಿದೆ. ಸದ್ಯಕ್ಕೆ, 'ಬೆಂಗಳೂರಿನ, ಜೆ.ಪಿ.ನಗರ' ನಲ್ಲಿ ’ಮೂಕಾಂಬಿಕಾ ಇನ್ಸ್ ಪ್ರೈವೇಟ್ ಲಿಮಿಟೆಡ್,' ಎಂಬ 'ಪ್ರತ್ಯೆಕ ಅಡುಗೆ ಕೇಂದ್ರ'ವನ್ನು ತೆರೆದಿರುತ್ತಾರೆ.

'ಬೆಂಗಳೂರಿನಲ್ಲಿ ಅಡಿಗಾಸ್ ರೆಸ್ಟೋರೆಂಟ್ ನ ಶಾಖೆಗಳು' ಬದಲಾಯಿಸಿ

  • 'ವಾಸುದೇವ ಅಡಿಗಾಸ್ ಫಾಸ್ಟ್ ಫುಡ್ಸ್', ಜಯನಗರದ ೪ ನೆಯ ಬ್ಲಾಕ್ ನಲ್ಲಿ,
  • 'ವಾಸುದೇವ ಅಡಿಗಾಸ್ ಫಾಸ್ಟ್ ಫುಡ್ಸ್', ಪಾರ್ಕ್ ವ್ಯೂ, ೫ ನೆಯ ಬ್ಲಾಕ್ ನಲ್ಲಿ,
  • 'ವಾಸುದೇವ ಅಡಿಗಾಸ್ ಫಾಸ್ಟ್ ಫುಡ್ಸ್', ಜಯನಗರದ ೮ ನೆಯ ಬ್ಲಾಕ್ ನಲ್ಲಿ,
  • 'ವಾಸುದೇವ ಅಡಿಗಾಸ್ ಫಾಸ್ಟ್ ಫುಡ್ಸ್', ಡೆಲಿಕೆಸಿ, ಡಿಕನ್ಸ್ ರೋಡ್ ನಲ್ಲಿ,
  • 'ವಾಸುದೇವ ಅಡಿಗಾಸ್ ಫಾಸ್ಟ್ ಫುಡ್ಸ್', ಮೆಜೆಸ್ಟಿಕ್, ಕೆಂಪೇಗೌಡ ರಸ್ತೆ ಯಲ್ಲಿ,
  • 'ವಾಸುದೇವ ಅಡಿಗಾಸ್ ಫಾಸ್ಟ್ ಫುಡ್ಸ್', ಬನ್ನೇರ್ ಘಟ್ಟ,

ಬಾಹ್ಯ ಸಂಪರ್ಕಗಳು ಬದಲಾಯಿಸಿ