ವಾಮನ್ ರಾಜ್
ಮಂಗಳೂರಿನ ’ಬಂಗಾರ ಪಟ್ಲೇರ್' ಯೆಂದೇ ಹೆಸರುಮಾಡಿರುವ ರಂಗಭೂಮಿ ಕಲಾವಿದ, ವಾಮನ್ ರಾಜ್ ರವರು, 'ಕೋಟಿ ಚೆನ್ನಯ್ಯ'ಎಂಬ ತುಳು ಚಲನ ಚಿತ್ರದಲ್ಲಿ ಚೆನ್ನಯ್ಯನ ಪಾತ್ರ ಅಭಿನಯಿಸಿ, ಅಸಂಖ್ಯಾತ ತುಳು ಕನ್ನಡಿಗರ ಮನೆಮನೆಯಲ್ಲಿ ಪ್ರಸಿದ್ಧರಾಗಿದ್ದಾರೆ.
ಜನನ ಬಾಲ್ಯ,ಮತ್ತು ವೃತ್ತಿ
ಬದಲಾಯಿಸಿಮೂಲತಃ ಮಂಗಳೂರಿನ 'ಬಿಕರ್ನಕಟ್ಟೆ'ಯಲ್ಲಿ ಜನಿಸಿದ 'ವಾಮನ್ ರಾಜ್', ಚಲನಚಿತ್ರ ವಲಯದಲ್ಲಿ, 'ಮಾರಿ ಬಲೆ', 'ಬಂಗಾರ್ ಪಟ್ಲೇರ್' ನ 'ಪಟ್ಲೇರ್' ಪಾತ್ರದಲ್ಲಿ ಎಲ್ಲರ ಮೆಚ್ಚುಗೆ ಗಳಿಸಿದರು. ಕನ್ನಡದ 'ಮದರ್','ಕುದುರೆಮುಖ', ಮೊದಲಾದ ಚಿತ್ರಗಳಲ್ಲಿ ಪ್ರಮುಖ ಭೂಮಿಕೆಯಲ್ಲಿದ್ದರು. ತುಳು ಧಾರಾವಾಹಿ ’ಗುಡ್ಡೆದ ಭೂತ’ದಲ್ಲಿ ಪಾತ್ರವಹಿಸಿದ್ದಾರೆ. ಮರಾಠಿ ಭಾಷೆಯ ಕೆಲವಾರು ಚಲನಚಿತ್ರಗಳಲ್ಲೂ ಅಭಿನಯ ನೀಡಿದ್ದಾರೆ.
ರಂಗಭೂಮಿಯಲ್ಲಿನ ಕೊಡುಗೆ
ಬದಲಾಯಿಸಿಸಾವಿರಕ್ಕೂ ಅಧಿಕ ತುಳು, ಕನ್ನಡ, ಹಿಂದಿ, ಮರಾಠಿ,ನಾಟಕಗಳಲ್ಲಿ ಅಭಿನಯಿಸಿ ರಸಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮುಂಬೈನಗರದ ಸುಮಾರು ನಾಟಕ ನಿರ್ದೇಶಕರ ಬಳಿ ಅಬಿನಯಿಸಿ ಅವರ ಪ್ರೀತ್ಯಾದರಗಳಿಗೆ ಪಾತ್ರರಾಗಿದ್ದಾರೆ.
ಪ್ರಶಸ್ತಿ,ಪಾರಿತೋಷಕಗಳು
ಬದಲಾಯಿಸಿ- ಸನ್, ೨೦೦೩ ರಲ್ಲಿ, 'ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ'ಯ ಪ್ರಶಸ್ತಿ.
- ಹಲವಾರು ರಾಜ್ಯ ಹಾಗೂ ರಾಷ್ಟ್ರಮಟ್ಟದ ಪ್ರಶಸ್ತಿಗಳು.
ಮರಣ
ಬದಲಾಯಿಸಿ೭೨ ವರ್ಷ ಪ್ರಾಯದ,'ವಾಮನ್ ರಾಜ್', ಸನ್ ೨೦೧೧ ರ, ಮೇ ೨ ರಂದು ಮುಂಬೈನ ಉಪನಗರ ಅಂಧೇರಿಯಲ್ಲಿ ನಿಧನರಾಗಿದ್ದಾರೆ. ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.