ವಸಂತಸೇನಾ (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ

"ವಸಂತ ಸೇನಾ(ಮೃಚ್ಛಕಟಿಕ)" ೧೯೪೧ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರವಾಗಿದೆ. ಪ್ರಗತಿ ಪಿಕ್ಚರ್ಸ್‌ ಲಾಂಛನದಲ್ಲಿ ತಯಾರಾದ ಈ ಚಿತ್ರವು ಕನ್ನಡದ ವಾಕ್ಚಿತ್ರಗಳ ಸಾಲಿನಲ್ಲಿ ಒಂಬತ್ತನೇಯದಾಗಿದೆ.[]

ವಸಂತಸೇನಾ (ಚಲನಚಿತ್ರ)
ವಸಂತಸೇನಾ
ನಿರ್ದೇಶನರಾಮಯ್ಯಾರ್ ಸಿರೂರ್
ನಿರ್ಮಾಪಕಮೇಯಪ್ಪ ಚೆಟ್ಟಿಯಾರ್
ಚಿತ್ರಕಥೆಆರ್.‌ ನಾಗೇಂದ್ರ ರಾವ್
ಕಥೆಶೂದ್ರಕ ಕವಿಯ ಸಂಸ್ಕೃತ ನಾಟಕ "ಮೃಚ್ಛಕಟಿಕಾ" ಆಧಾರಿತ.
ಸಂಭಾಷಣೆಆರ್.‌ ನಾಗೇಂದ್ರ ರಾವ್
ಪಾತ್ರವರ್ಗಸುಬ್ಬಯ್ಯ ನಾಯ್ಡು ಲಕ್ಷ್ಮಿಬಾಯಿ ನಾಗೇಂದ್ರರಾವ್, ಕಮಲಾಬಾಯಿ, ಪಿ.ಕಾಳಿಂಗರಾವ್, ಪದ್ಮಾದೇವಿ
ಸಂಗೀತಪಿ.ಕಾಳಿಂಗರಾಯ
ಛಾಯಾಗ್ರಹಣಡಿ.ಎಸ್.ಕೊಟ್ನಿಸ್
ಬಿಡುಗಡೆಯಾಗಿದ್ದು೧೯೪೧
ಚಿತ್ರ ನಿರ್ಮಾಣ ಸಂಸ್ಥೆಪ್ರಗತಿ ಪಿಕ್ಚರ್ಸ್
ಸಾಹಿತ್ಯವಿದ್ವಾನ್‌ ಗಮಕಿ ರಾಮಕೃಷ್ಣ ಶಾಸ್ತ್ರಿಗಳು, ನಾಗೇಂದ್ರ ರಾವ್
ಹಿನ್ನೆಲೆ ಗಾಯನಕಾಳಿಂಗ ರಾವ್‌, ಆರ್‌ ನಾಗೇಂದ್ರ ರಾವ್‌, ಲಕ್ಷ್ಮಿ ಬಾಯಿ,ಕಮಲಾಬಾಯಿ, ಸುಬ್ಬಯ್ಯ ನಾಯ್ಡು, ಎಸ್.ಕೆ ಪದ್ಮಾ ದೇವಿ
ಇತರೆ ಮಾಹಿತಿಪಿ.ಕಾಳಿಂಗರಾವ್ ಸಂಗೀತ ನಿರ್ದೇಶನದ ಮೊದಲ ಕನ್ನಡ ಚಲನಚಿತ್ರ.(೧೯೨೯ರಲ್ಲಿ ವಸಂತಸೇನಾ ಹೆಸರಿನ ಮೂಕಿ ಚಿತ್ರವೊಂದು ತಯಾರಾಗಿತ್ತು.ಈ ಚಿತ್ರದಲ್ಲಿ ಟಿ ಪಿ ಕೈಲಾಸಂ ನಟಿಸಿದ್ದರು)


ಕಥಾ ಸಾರಾಂಶ

ಬದಲಾಯಿಸಿ

ವಸಂತ ಸೇನೆಯೆಂಬ ಗಣಿಕೆಯನ್ನು ರಾಜನ ಭಾವಮೈದುನ ಶಕಾರ ಎಂಬುವನು ಕಪಟದಿಂದ ಬಲೆಗೆ ಹಾಕಿಕೊಳ್ಳಲು ಯತ್ನಿಸುವನು. ಚಾರುದತ್ತ ಎಂಬಬ ಯುವಕನು ವಸಂತಸೇನೆಯನ್ನು ರಕ್ಷಿಸುತ್ತಾನೆ. ವಸಂತಸೇನೆ ಮತ್ತು ಚಾರುದತ್ತನ ನಡುವೆ ಪ್ರೇಮಾಂಕುರವಾಗುವುದು. ಇದರಿಂದ ಕೋಪಗೊಂಡ ಶಕಾರ ಅವಳನ್ನು ಮುಚ್ಚಿಟ್ಟು, ಚಾರುದತ್ತನು ವಸಂತಸೇನೆಯನ್ನು ಕೊಲೆ ಮಾಡಿದನೆಂದು ಸುದ್ದಿ ಹಬ್ಬಿಸುವನು. ಚಾರುದತ್ತನಿಗೆ ಮರಣ ದಂಡನೆ ವಿಧಿಸಲಾಗುವುದು. ಆದರೆ ವಸಂತಸೇನೆಯು ಸರಿಯಾದ ವೇಳೆಗೆ ಬಂದು ಘಟನೆ ವಿವರಿಸುವಳು. ಶಕಾರನ ಮೋಸ ಬಯಲಿಗೆ ಬಂದು ಅವನೀಗೇ ಶಿಕ್ಷೆಯಾಗುವುದು. ವಸಂತಸೇನೆ ಮತ್ತು ಚಾರುದತ್ತ ಒಂದಾಗುವರು.

ವಿಶೇಷತೆ

ಬದಲಾಯಿಸಿ

ಮೊದಲೇ ಹಾಡುಗಳನ್ನು ಧ್ವನಿ ಮುದ್ರಿಸಿಕೊಂಡು ಅಳವಡಿಸುವ ತಂತ್ರಜ್ಞಾನ ಈ ಚಿತ್ರದಿಂದ ಪ್ರಾರಂಭವಾಯಿತು. ಕಪ್ಪು ಬಿಳುಪು ಚಿತ್ರದ ಕೆಲ ಭಾಗಗಳನ್ನು ಕೈಯಿಂದಲೇ ಪೈಂಟ್‌ ಮಾಡಿ ವರ್ಣಮಯ ಮಾಡಲಾಗಿತ್ತು. []

ನಿರ್ಮಾಣ ಮತ್ತು ಬಿಡುಗಡೆ

ಬದಲಾಯಿಸಿ

೧೬,೫೬೧ ಅಡಿ ಉದ್ದ ಹಾಗೂ ೧೬೫ ನಿಮಿಷಗಳ ಅವಧಿಯ ಈ ಚಲನಚಿತ್ರವನ್ನು ಅಡ್ಮಿರಾಲಿಟಿ ಹೌಸ್‌,ಮದರಾಸು ಹಾಗೂ ಸರಸ್ವತಿ ಸಿನಿ ಫಿಲಂ ಲ್ಯಾಬ್‌ (ಲಿ) ಸ್ಟೂಡಿಯೋಗಳಲ್ಲಿ ಚಿತ್ರಿಸಲಾಯಿತು.

ಪಾತ್ರ ವರ್ಗ

ಬದಲಾಯಿಸಿ
  • ಸುಬ್ಬಯ್ಯ ನಾಯ್ಡು (ಚಾರುದತ್ತ)
  • ಲಕ್ಷ್ಮಿ ಬಾಯಿ (ವಸಂತಸೇನಾ)
  • ಆರ್.‌ ನಾಗೇಂದ್ರ ರಾವ್‌ (ಶಕಾರ)
  • ಪಿ. ಕಾಳಿಂಗ ರಾವ್‌ (ಜೈನ ಸನ್ಯಾಸಿ)
  • ಕಮಲಾ ಬಾಯಿ
  • ಎಸ.ಕೆ.ಪದ್ಮಾ ದೇವಿ (ಮದನಿಕೆ)
  • ಕೆ.ಮೂರ್ತಿ ರಾವ್‌
  • ಜಿ.ವಿ.ಕೃಷ್ಣಮೂರ್ತಿ ರಾವ್‌ (ಮೈತ್ರೇಯ)
  • ಕೃಷ್ಣಪ್ಪ (ಪಾಲಕ)
  • ಎಚ್.ಎಸ್‌ ಕೃಷ್ಣಸ್ವಾಮಿ (ಆರ್ಯ)
  • ಬಿ.ಎನ್‌ ಸುಬ್ಬಯ್ಯ (ಸರ್ವಾಲಿಕ)
  • ಬಿ.ದಾಸಪ್ಪ (ವಿಟ)
  • ಟಿ.ರಾಮಕೃಷ್ಣ ರಾವ್‌ (ಚೇತ)
  • ಎಂ.ಎಸ್.‌ ಮಾಧವ ರಾವ್‌ (ಕುಂಬೆಲ್ಲಕ)
  • ಬಿ.ಎನ್.ಕೃಷ್ಣಮೂರ್ತಿ (ವರ್ಧಮಾನಕ)
  • ಟಿ.ವಿ.ಯೋಗೇಶ್ವರ್‌ (ನ್ಯಾಯಾಧೀಶ)
  • ಬೇಬಿ ವಿನೋದ
  • ಸುಂದರಮ್ಮ (ತಾಯಿ)
  • ಸರೋಜಮ್ಮ (ರಾಧಾನಿಕೆ)
  • ಚಂದ್ರಮ್ಮ (ಧೂತ ದೇವಿ)
  • ಜಿ.ಆರ್‌. ಸ್ಯಾಂಡೋ (ಕೋತ್ವಾಲ)

ಉಲ್ಲೇಖ

ಬದಲಾಯಿಸಿ
  1. "History: Vasantasena based on a Sanskrit play". chitraloka.com. 12 August 2013. Archived from the original on 16 September 2013. Retrieved 5 October 2013.
  2. Movie Songs. chiloka.com